-->

ಧರ್ಮದ ಹತ್ತು ಲಕ್ಷಣಗಳು Dharma 10 characteristics


1. ಧೃತಿ : ಎಲ್ಲಕ್ಕಿಂತ ಮೊದಲು ಧೈರ್ಯವಿರಬೇಕು. ಮನದಲ್ಲಿ ಮೂಡಿದ ಒಂದು ಒಳ್ಳೆಯ ಚಿಂತನೆಯನ್ನು ಕಾರ್ಯರೂಪಕ್ಕೆ ತರುವೆನೆಂಬ ಧೈರ್ಯ, ಆತ್ಮ ವಿಶ್ವಾಸವಿದ್ದರೆ ಮುಂದಿನದೆಲ್ಲಾ ಸುಲಭ. 


2. ಕ್ಷಮಾ : ನಿಂದೆ-ಸ್ತುತಿ, ಲಾಭ-ನಷ್ಟ, ಸುಖ-ದುಃಖ ಮೊದಲಾದ ದ್ವಂದ್ವಗಳಲ್ಲಿ ಸಹನೆಯನ್ನು ಕಾಪಾಡಿಕೊಳ್ಳುವ ಪರಿ. ಕಷ್ಟವಾದರೂ ಅಸಾಧ್ಯವೇನಲ್ಲ.
3. ದಮ : ಮನಸ್ಸು ಸದಾ ಧರ್ಮಮಾರ್ಗದಲ್ಲಿದಾಗ ಮಾತ್ರ ಅಧರ್ಮಾಚರಣೆಯನ್ನು ತಡೆಯಲು ಸಾಧ್ಯ. ಯಾವುದೇ ಕಾರಣಕ್ಕೂ ಅಧರ್ಮ ಮಾರ್ಗದಲ್ಲಿ ಹೋಗುವುದಿಲ್ಲವೆಂಬ ನಿರ್ಧಾರ. 


4. ಅಸ್ತೇಯ ; ಪರರ ಸ್ವತ್ತು ನನಗೆ ಮಣ್ಣಿನ ಹೆಂಟೆಯೆಂಬ ಭಾವ ಬಂದಾಗ ಅದನ್ನು ಕದಿಯುವ ಮನಸ್ಸು ಬರುವುದಿಲ್ಲ. ಪರರ ಸ್ವತ್ತಿಗೆ ಆಸೆಪದದಿರುವುದೇ ಶ್ರೀಮಂತಿಕೆ. 


5. ಶೌಚ : ರಾಗ ದ್ವೇಷ, ಪಕ್ಷಪಾತವನ್ನು ಮಾಡದಿರುವುದು ಒಳಗಿನ ಶೌಚ, ಸ್ನಾನ ಮಾಡುವುದು ಹೊರಗಿನ ಶೌಚ. ಎರಡೂ ಬೇಕು 


6. ಇಂದ್ರಿಯ ನಿಗ್ರಹ : ಇದೊಂದು ಮನುಷ್ಯನಿಗೆ ಸದಾ ಕಾಟಕೊಡುವ ವಿಚಾರ.ಧರ್ಮ ಮಾರ್ಗದಲ್ಲಿದ್ದಾಗ ಇಂದ್ರಿಯಗಳು ನಮಗೆ ಕಾಟಕೊಡಲಾರವು 


7.ಧೀಃ : ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯೋಗ, ಸಜ್ಜನರ ಸಹವಾಸ,ಶ್ರೇಷ್ಠಪದಾರ್ಥಗಳ ಸೇವನೆಯಿಂದ ಸಾಧ್ಯ. ಅದಕ್ಕೆ ವಿರುದ್ಧವಾದ ಮಾದಕದ್ರವ್ಯಗಳ ಸೇವನೆ,ಆಲಸ್ಯ, ದುಷ್ಟ ಸಂಗವು ಬುದ್ಧಿಯನ್ನು ನಾಶಮಾಡುತ್ತದೆ. ಇಂದಿನ ಕಾಲಕ್ಕೆ ದೂರದರ್ಶನ ಮತ್ತು ಅಂತರ್ಜಾಲದಲ್ಲಿ ಧೀಃ ಶಕ್ತಿಯನ್ನು ಹೆಚ್ಚಿಸಬಲ್ಲ ಕಾರ್ಯಕ್ರಮಗಳೂ ಇವೆ. ನಾಶಮಾಡುವ ಹೆಚ್ಚು ಕಾರ್ಯಕ್ರಮಗಳು ಇವೆ.ಆಯ್ಕೆ ನಮ್ಮದೇ. 


8. ವಿದ್ಯಾ : ಪೃಥಿವಿಯಿಂದ ಪರಮೇಶ್ವರನವರೆಗೂ ಸರಿಯಾದ ಅರಿವು ಮತ್ತು ಯಥೋಚಿತ ಉಪಯೋಗವೇ ವಿದ್ಯೆ. ಇದಕ್ಕೆ ವಿರುದ್ಧವಾದುದು ಅವಿದ್ಯೆ. 


9. ಸತ್ಯ : ಅಂತರಾತ್ಮನಲ್ಲಿರುವಂತೆ ಮನದಲ್ಲಿ,ಮನದಲ್ಲಿರುವಂತೆ ವಾಣಿಯಲ್ಲಿ, ವಾಣಿಯಂತೆ ಕೃತಿಯಲ್ಲಿ ವರ್ತಿಸುವುದೇ ಸತ್ಯ. 


10. ಅಕ್ರೋಧ : ನಮ್ಮ ಸಿಟ್ಟು ನಮ್ಮನ್ನೇ ನಾಶಮಾಡುತ್ತದೆ. ಆದ್ದರಿಂದ ಸಿಟ್ಟು ಮಾಡದಿರುವುದು ನಮಗೇ ಕ್ಷೇಮ.

 
ಧರ್ಮದ ಹತ್ತು ಲಕ್ಷಣಗಳು Dharma 10 characteristics

–>