-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

Sandalwood Kannada updates

Sandalwood updates

ಘೋಸ್ಟ್: ಒಂದೇ ಟ್ರ್ಯಾಕ್‌ನಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಸಾಹಿತ್ಯ; ಸಿನಿಪ್ರಿಯರ ಮೆಚ್ಚುಗೆ

ಘೋಸ್ಟ್ ಚಿತ್ರದ ಒರಿಜಿನಲ್ ಗ್ಯಾಂಗ್‌ಸ್ಟರ್ ಮ್ಯೂಸಿಕ್ (OGM) ಶೀರ್ಷಿಕೆಯ ಮೊದಲ ಟ್ರ್ಯಾಕ್ ಅನ್ನು ಸೆ. 23ರಂದು ಬಿಡುಗಡೆ ಮಾಡಲಾಗಿದ್ದು, ಇದು ಟ್ರೆಂಡಿಂಗ್ ಆಗಿದೆ. ಒಜಿಎಂ ಬಹುಭಾಷಾ ಟ್ರ್ಯಾಕ್ ಆಗಿದ್ದು, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿನ ಸಾಹಿತ್ಯವನ್ನು ಒಂದೇ ಟ್ರ್ಯಾಕ್‌ನಲ್ಲಿ ಸಂಯೋಜಿಸಲಾಗಿದೆ. ನಿರ್ದೇಶಕ ಶ್ರೀನಿ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಶಿವರಾಜಕುಮಾರ್ ಅವರ ಮುಂಬರುವ ಚಿತ್ರ 'ಘೋಸ್ಟ್' ಚಿತ್ರಕ್ಕೆ ಅಂದುಕೊಂಡಂತೆ ಕೆಲಸ ಮಾಡಿ ಮುಗಿಸಿದ್ದಾರೆ. ಒರಿಜಿನಲ್ ಗ್ಯಾಂಗ್‌ಸ್ಟರ್ ಮ್ಯೂಸಿಕ್ (OGM) ಶೀರ್ಷಿಕೆಯ ಮೊದಲ ಟ್ರ್ಯಾಕ್ ಅನ್ನು ಸೆಪ್ಟೆಂಬರ್ 23ರಂದು ಬಿಡುಗಡೆ ಮಾಡಲಾಗಿದ್ದು, ಇದು ಟ್ರೆಂಡಿಂಗ್ ಆಗಿದೆ. ಒಜಿಎಂ ಬಹುಭಾಷಾ ಟ್ರ್ಯಾಕ್ ಆಗಿದ್ದು, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿನ ಸಾಹಿತ್ಯವನ್ನು ಒಂದೇ ಟ್ರ್ಯಾಕ್‌ನಲ್ಲಿ ಸಂಯೋಜಿಸಲಾಗಿದೆ. 'ನಾವು ಈ ಹಿಂದೆ ಸ್ಥಳೀಯ ಆಡುಭಾಷೆಗೆ ಆದ್ಯತೆ ನೀಡಿ, ಆಯಾ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದ್ದೇವೆ. ಆದರೆ, ಘೋಸ್ಟ್‌ ಸಿನಿಮಾದಲ್ಲಿ ನಾವು ಕೆಲವು ಭಾಷೆಗಳ ಸಾಹಿತ್ಯದ ಮಿಶ್ರಣದೊಂದಿಗೆ ಹಾಡೊಂದನ್ನು ಸಂಯೋಜಿಸಿದ್ದೇವೆ. ಅದನ್ನು ಎಲ್ಲಾ ಭಾಷೆಗಳಲ್ಲೂ ಒಂದೇ ಹಾಡಾಗಿ ಬಿಡುಗಡೆ ಮಾಡಿದ್ದೇವೆ. ಅದನ್ನು ಸಾರ್ವತ್ರಿಕ ಟ್ರ್ಯಾಕ್ ಆಗಿ ಮಾಡಿದ್ದೇವೆ' ಎಂದು ವಿವರಿಸುತ್ತಾರೆ ನಿರ್ದೇಶಕ ಶ್ರೀನಿ.  'ನಾವು ಬಹು ಭಾಷೆಗಳಲ್ಲಿ ಡಬ್ ಮಾಡಿದ ಹಾಡುಗಳನ್ನು ಬಿಡುಗಡೆ ಮಾಡುವಾಗ, ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯದಲ್ಲಿನ ವ್ಯತ್ಯಾಸಗಳಿಂದ ಅವು ಕೆಲವೊಮ್ಮೆ ಉತ್ತಮವಾಗಿ ಮೂಡಿಬರುವುದಿಲ್ಲ. ಒಂದು ಸಾರ್ವತ್ರಿಕ ಹಾಡನ್ನು ರಚಿಸುವ ಮೂಲಕ, ಎಲ್ಲಾ ದಕ್ಷಿಣ ಭಾರತದ ಭಾಷೆಗಳನ್ನು ಒಂದೆಡೆ ಸೇರಿಸಲಾಗಿದೆ ಮತ್ತು ಆಯಾ ಭಾಷೆಗಳಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲಾಗಿದೆ' ಎಂದು ಹೇಳಿದರು. ಇದನ್ನೂ ಓದಿ: 'ಘೋಸ್ಟ್' ಡಿಜಿಟಲ್ ಹಕ್ಕು ಪೆನ್ ಸ್ಟುಡಿಯೊ ಪಾಲು; ಭಾರಿ ಮೊತ್ತಕ್ಕೆ ಮಾರಾಟ! ಚಿರಂಜೀವಿ ಕನ್ನಡದಲ್ಲಿ ಸಾಹಿತ್ಯ ಬರೆದಿದ್ದರೆ, ರಾಜೇಶ್ ಮಲಯಾಳಂನಲ್ಲಿ ಬರೆದಿದ್ದಾರೆ ಮತ್ತು ಎಂಜಿ ಚೇತನ್ ತಮಿಳು ಮತ್ತು ತೆಲುಗು ಆವೃತ್ತಿಗಳನ್ನು ನೋಡಿಕೊಂಡಿದ್ದಾರೆ. ಗಾಯಕರಾದ ಐಶ್ವರ್ಯಾ ರಂಗರಾಜನ್ ಮತ್ತು ಜಿತಿನ್ ರಾಜ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಇದು ದೃಶ್ಯಗಳು ಮತ್ತು ಪಾತ್ರಗಳೊಂದಿಗೆ ಸಿಂಕ್ ಮಾಡುವ ಮೂಲಕ ಸಿನಿಮೀಯ ಅನುಭವವನ್ನು ಹೆಚ್ಚಿಸುತ್ತದೆ. ಇದು ಉಳಿದ ಟ್ರ್ಯಾಕ್‌ಗಳಿಗೂ ಇರುತ್ತದೆ ಎಂದು ಶ್ರೀನಿ ಹೇಳುತ್ತಾರೆ. ಸದ್ಯ, ವಿವಿಧ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಶಿವರಾಜಕುಮಾರ್, ಘೋಸ್ಟ್‌ ಸಿನಿಮಾದ ತಮ್ಮ ಭಾಗಗಳಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಾದ ಬಹುಭಾಷಾ ಥ್ರಿಲ್ಲರ್ ಅನ್ನು ಡ್ಯುಯಾಲಜಿ ಎಂದು ಹೇಳಲಾಗಿದೆ. ಮೊದಲ ಭಾಗವು ಅಕ್ಟೋಬರ್ 19 ರಂದು ಬಿಡುಗಡೆಯಾಗುತ್ತದೆ. ಚಿತ್ರತಂಡ ಸೆಪ್ಟೆಂಬರ್ 30 ರಂದು ಟ್ರೇಲರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ನಂತರ ದಸರಾ ಹಬ್ಬದ ಸಮಯದಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಇದನ್ನೂ ನೋಡಿ: ಶಿವಣ್ಣ ಅಭಿನಯದ ಘೋಸ್ಟ್: ಓಜಿಎಂ ವಿಡಿಯೋ ಸಾಂಗ್ ಘೋಸ್ಟ್ ಸಿನಿಮಾದಲ್ಲಿ ಶಿವರಾಜಕುಮಾರ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ನಟ ಜಯರಾಮ್ ಅವರು ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಘೋಸ್ಟ್ ಚಿತ್ರಕ್ಕೆ ಛಾಯಾಗ್ರಹಣವನ್ನು ಮಹೇಂದ್ರ ಸಿಂಹ ನಿರ್ವಹಿಸಿದ್ದಾರೆ. ಘೋಸ್ಟ್: ಒಂದೇ ಟ್ರ್ಯಾಕ್‌ನಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಸಾಹಿತ್ಯ; ಸಿನಿಪ್ರಿಯರ ಮೆಚ್ಚುಗೆ

'ಬಾನದಾರಿಯಲ್ಲಿ' ಸಿನಿಮಾದ ಕಾದಂಬರಿ ಪಾತ್ರದಲ್ಲಿ ನಾನು ಕಳೆದು ಹೋಗಿದ್ದೆ: ರೀಷ್ಮಾ ನಾಣಯ್ಯ

ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೂಲಕ ತನ್ನ ಸಿನಿಮಾ ಪ್ರಯಾಣ ಆರಂಭಿಸಿದ ರೀಷ್ಮಾ ನಾಣಯ್ಯ, ಹಲವು ಸಿನಿಮಾಗಳ ಭಾಗವಾಗಿದ್ದಾರೆ. ಇತ್ತೀಚೆಗೆ ಉಪೇಂದ್ರ ಅವರ ಬಹು ನಿರೀಕ್ಷಿತ ನಿರ್ದೇಶನದ ಯು ಐ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೂಲಕ ತನ್ನ ಸಿನಿಮಾ ಪ್ರಯಾಣ ಆರಂಭಿಸಿದ ರೀಷ್ಮಾ ನಾಣಯ್ಯ, ಹಲವು ಸಿನಿಮಾಗಳ ಭಾಗವಾಗಿದ್ದಾರೆ.  ಇತ್ತೀಚೆಗೆ ಉಪೇಂದ್ರ ಅವರ ಬಹು ನಿರೀಕ್ಷಿತ ನಿರ್ದೇಶನದ ಯು ಐ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಧ್ರುವ ಸರ್ಜಾ ನಟನೆಯ ಕೆಡಿ ಮತ್ತು ವಾಮನ ಸಿನಿಮಾಗಳಲ್ಲಿ ನಟಸಿದ್ದು ರಿಲೀಸ್ ಆಗಲು ಸಿದ್ದವಾಗಿವೆ. ಸದ್ಯ ಪ್ರೀತಂ ಗುಬ್ಬಿ ನಿರ್ದೇಶನದ ಬಾನದಾರಿಯಲ್ಲಿ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಪರದೆ ಹಂಚಿಕೊಂಡಿದ್ದಾರೆ, ಸೆಪ್ಟಂಬರ್ 28 ರಂದು ಸಿನಿಮಾ ರಿಲೀಸ್ ಆಗಲಿದೆ. ನಾನು ಕೇವಲ 2 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದೇನೆ, ಆದರೆ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿರಿಸಿ ಉತ್ತಮ ಪಾತ್ರ ನೀಡುತ್ತಿದ್ದಾರೆ. ಪ್ರಸಿದ್ಧ ನಟರೊಂದಿಗೆ ನಾನು ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ, ನಾನು ಬ್ಲೆಸ್ಡ್ ಪರ್ಸನ್, ಇದರಿಂದ ನಾನು ಮತ್ತಷ್ಟು ಕಷ್ಟ ಪಟ್ಟು ಕೆಲಸ ಮಾಡಲು ಮೋಟಿವೇಟ್ ಮಾಡುತ್ತದೆ ಎಂದು ರೀಷ್ಮಾ ಹೇಳಿದ್ದಾರೆ. ಬಾನದಾರಿಯಲ್ಲಿ, ಸಿನಿಮಾದಲ್ಲಿ ಗಣೇಶ್ ಜೊತೆಗೆ ರುಕ್ಷ್ಮಿಣಿ ವಸಂತ್ ಕೂಡ ನಟಿಸಿದ್ದಾರೆ, ರೀಷ್ಮಾ ಕಾದಂಬರಿ ಪಾತ್ರದಲ್ಲಿ ನಟಿಸಿದ್ದಾರೆ. “ಇಂದಿನ ಯುವಕರಲ್ಲಿ ಬ್ಲಾಗಿಂಗ್ ಸಾಮಾನ್ಯ ಹವ್ಯಾಸವಾಗಿದೆ, ಆದರೆ ಅಂತಹ ಪಾತ್ರವನ್ನು ಚಲನಚಿತ್ರದಲ್ಲಿ ಚಿತ್ರಿಸುವುದು ವಿಶಿಷ್ಟವಾಗಿದೆ. ಇದನ್ನೂ ಓದಿ: ಗೋಲ್ಡನ್ ಸ್ಟಾರ್' ಗಣೇಶ್ ನಟನೆಯ 'ಬಾನದಾರಿಯಲ್ಲಿ' ಚಿತ್ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಪ್ರತಿ ಕ್ಷಣವನ್ನು ಸೆರೆ ಹಿಡಿಯುವುದು ಮತ್ತು ಅವುಗಳನ್ನು ನೆನೆಪುಗಳಾಗಿರಿಸಿಕೊಳ್ಳುವುದು ಚಿತ್ರದಲ್ಲಿ ನನ್ನ ಪಾತ್ರವಾಗಿದೆ. ಈ ಪಾತ್ರ ನನಗೆ ಅಸಂಖ್ಯಾತ ಸುಂದರ ನೆನಪುಗಳನ್ನು ಒದಗಿಸಿದೆ ಎಂದು ರೀಷ್ಮಾ ಅಭಿಪ್ರಾಯ ಪಟ್ಟಿದ್ದಾರೆ. ನಟ ಗಣೇಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ರೀಷ್ಮಾ, ಗಣೇಶ್ ನಮ್ಮ ಕುಟುಂಬದ ಫೇವರಿಟ್ ನಾಯಕ, ನಾನು ನನ್ನ ಕುಟುಂಬಸ್ಥರೊಂದಿಗೆ ಸೇರಿ ಅವರ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದೆ, ಕೆಲವು ಸಿನಿಮಾಗಳಲ್ಲಿ ಅವರ ನಟನೆ ನೋಡಿ ಎಮೋಷನ್ ಆಗಿದ್ದೆ, ಆದರೆ ಇಂದು ಅವರ ಜೊತೆ ನಟಿಸಿದ್ದೇನೆ, ಇದನ್ನು ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ರೀಷ್ಮಾ ತಿಳಿಸಿದ್ದಾರೆ. ಗಣೇಶ್ ನಂಬಲಾಗದಷ್ಟು ಪಾಸಿಟಿವ್ ವ್ಯಕ್ತಿ, ಅವರಿಗೆ ವಿಶಿಷ್ಟವಾದ ಮ್ಯಾನರಿಸಂಗಳಿವೆ. ‘ನಮಸ್ಕಾರ, ನಮಸ್ಕಾರ, ನಮಸ್ಕಾರ ಎಂಬ ಅವರ ಕಾಮಿಕ್ ಟೈಮ್ ಅದ್ಭುತ. ಅವರ ನಟನೆಯು ತುಂಬಾ ನೈಜವಾಗಿದೆ. ಬಾನದಾರಿಯಲ್ಲಿ ನೀವು ಗಣೇಶ್ ಅವರ ವಿಭಿನ್ನ ಮುಖ ನೋಡುತ್ತೀರಿ, ಅವರೊಂದಿಗೆ ಕೆಲಸ ಮಾಡಿರುವುದು ಸಂತೋಷವಾಗಿದೆ. ಗಣೇಶ್ ಅವರೊಂದಿಗೆ ತೆರೆ ಹಂಚಿಕೊಳ್ಳುವುದು ನಿಸ್ಸಂದೇಹವಾಗಿ ರೋಮಾಂಚನಕಾರಿಯಾದರೂ, ನಿರ್ದೇಶಕ ಪ್ರೀತಂ ಗುಬ್ಬಿ  ಭಾವನೆಗಳನ್ನು ಸುಂದರವಾಗಿ ಚಿತ್ರಿಸುವ ಸಾಮರ್ಥ್ಯವನ್ನು ರೀಷ್ಮಾ ಹೊಗಳಿದ್ದಾರೆ. ಇದನ್ನೂ ಓದಿ: ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಅಭಿನಯದ 'ಬಾನದಾರಿಯಲ್ಲಿ' ಬಿಡುಗಡೆಗೆ ಹೊಸ ದಿನಾಂಕ ಫಿಕ್ಸ್ ಚಿತ್ರದಲ್ಲಿ ಪ್ರೀತಂ ನನಗೆ ಕಾದಂಬರಿಯ ಪಾತ್ರ ನೀಡಿದರು, ಪಾತ್ರದ ಬಗ್ಗೆ ಕೇಳಿದ  ಕೂಡಲೇ ನಾನು ಆಕರ್ಷಿತಳಾದೆ.  ಕಾದಂಬರಿಯು ನಿಮ್ಮನ್ನು ನಗುವಂತೆ ಮಾಡುತ್ತದೆ ಮತ್ತು ಸವಾಲಿನ ಸಂದರ್ಭಗಳಲ್ಲಿಯೂ ಸಹ ಜೀವನವನ್ನು ಪೂರ್ಣವಾಗಿ ಬದುಕುವ ವ್ಯಕ್ತಿತ್ವ ಆ ಪಾತ್ರ ಮಾಡುವ ಮೂಲಕ ನನಗೆ ರಿಪ್ರೆಶ್ ಮೆಂಟ್ ಸಿಕ್ಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೀನ್ಯಾ, ನೈರೋಬಿ ಮತ್ತು ಮಸಾಯಿ ಮಾರಾ ಸೇರಿದಂತೆ ಆಫ್ರಿಕಾದ ಉಸಿರುಕಟ್ಟುವ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಅವಕಾಶವು ರೀಷ್ಮಾಗೆ ಅತ್ಯಂತ ರೋಮಾಂಚನಕಾರಿ ಕ್ಷಣಗಳಲ್ಲಿ ಒಂದಾಗಿದೆ. ಸಫಾರಿ ಅನುಭವವು ವಿಸ್ಮಯಕಾರಿಯಾಗಿತ್ತು. ಅಭಿಲಾಶ್ ಕಲಾತಿ ಅವರ ಅದ್ಭುತ ಕೆಲಸಕ್ಕಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಅವರು ಪ್ರತಿ ಶಾಟ್ ನ ಪ್ರತಿ ಫ್ರೇಮಿನಲ್ಲಿ ಪ್ರಾಣಿಗಳು, ಬೆಳಕು ಮತ್ತು ಇತರ ಅಂಶಗಳನ್ನು ಪರಿಗಣಿಸಿ, ಅದ್ಭುತವಾಗಿ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.  'ಬಾನದಾರಿಯಲ್ಲಿ' ಸಿನಿಮಾದ ಕಾದಂಬರಿ ಪಾತ್ರದಲ್ಲಿ ನಾನು ಕಳೆದು ಹೋಗಿದ್ದೆ: ರೀಷ್ಮಾ ನಾಣಯ್ಯ

ನನ್ನ ಇನ್ನೊಂದು ಮುಖ ನೀನು ನೋಡಿಲ್ಲ: ಅಳಿಯನಿಂದ ದೂರ ಇರುವಂತೆ ಸ್ಟಾರ್ ನಟಿಗೆ ರಜನಿಕಾಂತ್ ಬೆದರಿಕೆ?

ರಜನಿಕಾಂತ್‌ ಹಾಗೂ ಧನುಷ್‌ ಮನೆಯವರು ಇಬ್ಬರನ್ನೂ ಒಂದು ಮಾಡಲು ಮತ್ತೆ ಪ್ರಯತ್ನಿಸುತ್ತಿದ್ದು ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಇದುವರೆಗೂ ಆ ಸಮಯ ಬಂದಿಲ್ಲ. ಆದರೆ ಇಬ್ಬರ ಡಿವೋರ್ಸ್‌ಗೆ ಕಾರಣ ಏನು ಎಂಬುದು ಇಂದಿಗೂ ಕಗ್ಗಂಟಾಗಿ ಉಳಿದಿದೆ. ಕಳೆದ ವರ್ಷ ಜನವರಿಯಲ್ಲಿ ರಜನಿಕಾಂತ್‌ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್‌ ತಾವು ಕಾನೂನಿನ ಮೂಲಕ ಬೇರಾಗುತ್ತಿರುವುದಾಗಿ ಅನೌನ್ಸ್‌ ಮಾಡಿದ್ದರು. 18 ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ಹೀಗೆ ಡಿವೋರ್ಸ್‌ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು. ರಜನಿಕಾಂತ್‌ ಹಾಗೂ ಧನುಷ್‌ ಮನೆಯವರು ಇಬ್ಬರನ್ನೂ ಒಂದು ಮಾಡಲು ಮತ್ತೆ ಪ್ರಯತ್ನಿಸುತ್ತಿದ್ದು ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಇದುವರೆಗೂ ಆ ಸಮಯ ಬಂದಿಲ್ಲ. ಆದರೆ ಇಬ್ಬರ ಡಿವೋರ್ಸ್‌ಗೆ ಕಾರಣ ಏನು ಎಂಬುದು ಇಂದಿಗೂ ಕಗ್ಗಂಟಾಗಿ ಉಳಿದಿದೆ. ಇದನ್ನೂ ಓದಿ: ಜೈಲರ್: ಶಿವಣ್ಣನ ಅಭಿನಯಕ್ಕೆ ಮನಸೋತ ಪರಭಾಷಿಕರು! ಹೊಸ ಅಭಿಮಾನಿ ಬಳಗ ಉದಯ ಧನುಷ್‌ ಹಾಗೂ ಐಶ್ವರ್ಯ ನಡುವೆ ಬೇರೆ ನಟಿ ಬಂದಿದ್ದೇ ಇದಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಮಿಳಿನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಚೆಯ್ಯಾರು ಬಾಲು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆ ನಟಿ ಯಾರು ಎಂಬುದನ್ನು ರಿವೀಲ್‌ ಮಾಡಿದ್ದಾರೆ. ಅಮಲಾ ಪೌಲ್‌ ಧನುಷ್​ ಮತ್ತು ಅಮಲಾ ನಡುವೆ ಆಪ್ತತೆ ಇರುವ ವಿಚಾರ ಧನುಷ್​ ಅವರ ಮಾವ ರಜನಿಕಾಂತ್​ಗೆ ತಿಳಿದಿತ್ತು. ಹೀಗಾಗಿ ಅಮಲಾ ಅವರ ಮನೆಗೆ ತೆರಳಿದ ರಜಿನಿಕಾಂತ್​, ಆಕೆಗೆ ವಾರ್ನಿಂಗ್​ ನೀಡಿದ್ದರು ಎಂದು ಸೆಯ್ಯಾರು ಬಾಲು ಮಾಹಿತಿ ನೀಡಿದ್ದರು. 'ಧನುಷ್ ಕುಟುಂಬಸ್ಥನಾಗಿದ್ದು, ಆತನಿಗೂ ಪತ್ನಿ ಮತ್ತು ಮಕ್ಕಳಿದ್ದಾರೆ. ಅತನೊಂದಿಗಿನ ಸಂಬಂಧ ಬಿಟ್ಟು ಬಿಡದಿದ್ದರೆ ನನ್ನ ಇನ್ನೊಂದು ಮುಖ ನೋಡಬೇಕಾಗುತ್ತದೆ' ಎಂದು ರಜನೀಕಾಂತ್‌ ಅಮಲಾಗೆ ಬೆದರಿಕೆ ಹಾಕಿದ್ದರಂತೆ. ಈ ಘಟನೆಯ ನಂತರ ಅಮಲಾಗೆ ತಮಿಳಿನಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಅವರು ಕೇರಳಕ್ಕೆ ಹೋಗಿದ್ದಾರೆ ಎಂದು ಸೆಯ್ಯಾರು ಬಾಲು ಹೇಳಿದ್ದಾರೆ. ಇದನ್ನೂ ಓದಿ: ಸುದೀಪ್, ದರ್ಶನ್, ಶಿವಣ್ಣ, ಯಶ್ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ತಮಿಳು ಚಿತ್ರ ವಿತರಿಸಿ 36 ಕೋಟಿ ರೂ. ಪಡೆದವರು ಕಾಣೋಲ್ವಾ? ವೇಳಯಿಲ್ಲ ಪಟ್ಟದಾರಿ ಸಿನಿಮಾ ಹಾಗೂ ಅದರ ಸೀಕ್ವೆಲ್‌ನಲ್ಲಿ ಧನುಷ್‌ ಹಾಗೂ ಅಮಲಾ ಪೌಲ್‌ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುವಾಗಿ ಇಬ್ಬರ ನಡುವೆ ಸ್ನೇಹ ಉಂಟಾಗಿ, ನಂತರ ಇನ್ನಷ್ಟು ಹತ್ತಿರವಾಗಿದ್ದರು. ಈ ವಿಚಾರ ರಜನಿಕಾಂತ್‌ಗೆ ಕೂಡಾ ತಿಳಿದಿತ್ತು. ನನ್ನ ಇನ್ನೊಂದು ಮುಖ ನೀನು ನೋಡಿಲ್ಲ: ಅಳಿಯನಿಂದ ದೂರ ಇರುವಂತೆ ಸ್ಟಾರ್ ನಟಿಗೆ ರಜನಿಕಾಂತ್ ಬೆದರಿಕೆ?

'ಮರೀಚಿ' ಫೈನಲ್ ಮಾಡುವುದಕ್ಕೂ ಮುನ್ನ 150 ಟೈಟಲ್ ಸೆಲೆಕ್ಟ್ ಮಾಡಿದ್ದೆವು: ನಿರ್ದೇಶಕ ಸಿಧ್ರುವ್

ನಿರ್ದೇಶಕ ಸಿಧ್ರುವ್ ವರ ಚೊಚ್ಚಲ ಚಿತ್ರ ಮರೀಚಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರವು ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದ್ದು, ಚಿತ್ರತಂಡ ಇತ್ತೀಚೆಗೆ ಟೀಸರ್ ಅನ್ನು ಬಿಡುಗಡೆ ಮಾಡಿತು. ನಿರ್ದೇಶಕ ಸಿಧ್ರುವ್ ವರ ಚೊಚ್ಚಲ ಚಿತ್ರ ಮರೀಚಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರವು ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದ್ದು, ಚಿತ್ರತಂಡ ಇತ್ತೀಚೆಗೆ ಟೀಸರ್ ಅನ್ನು ಬಿಡುಗಡೆ ಮಾಡಿತು. ಸಸ್ಪೆನ್ಸ್ ಥ್ರಿಲ್ಲಿರ್‌ ಕಥಾಹಂದರದ ಈ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದು, ನಟಿ ಸೋನು ಗೌಡ ಅವರು ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸಿಧ್ರುವ್ (ಸಿದ್ದು) ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ಸಂತೋಷ್‌ ಮಾಯಪ್ಪ ಅವರ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ಸಿಧ್ರುವ್'ಗೆ ಇದು ಚೊಚ್ಚಲ ಸಿನಿಮಾ. ‘ಋಷಿಯೊಬ್ಬರ ಹೆಸರು ಶೀರ್ಷಿಕೆಯಾಗಿ ಆಯ್ಕೆ ಮಾಡಬೇಕಿತ್ತು. ಅದಕ್ಕೆ ‘ಮರೀಚಿ’ ಆಯ್ಕೆ ಮಾಡಿದ್ದೇನೆ. ಮರೀಚಿ ಎಂದರೆ ಬ್ರಹ್ಮನ ಮಗ. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆಂದು ಸಿಧ್ರುವ್ ಹೇಳಿದ್ದಾರೆ. ಮರೀಚಿ ಅನ್ನೋದು ಬ್ರಹ್ಮ ದೇವನ ಮಗನ ಹೆಸರಾಗಿದೆ. ಗುಡ್ ಮತ್ತು ಬ್ಯಾಡ್ ಹೀಗೆ ಎರಡಕ್ಕೂ ಮರೀಚಿ ಇರ್ತಾನೆ ಅನ್ನುವ ನಂಬಿಕೆ ಕೂಡ ಇದೆ. ಆದರೆ ಈ ಒಂದು ಟೈಟಲ್ ಇಡೋ ಮೊದಲು ನಿರ್ದೇಶಕ ಸಿಧ್ರುವ್ ಹೆಚ್ಚು ಕಡಿಮೆ 150 ಟೈಟಲ್ ಸೆಲೆಕ್ಟ್ ಮಾಡಿದ್ದಾರೆ. ಕೊನೆಗೆ "ಋಷಿ" ಅನ್ನೋ ಟೈಟಲ್ ಇಡ್ಬೇಕು ಅಂತಲೇ ಫೈನಲ್ ಮಾಡಿದ್ದರು. ಅಷ್ಟರಲ್ಲಿಯೇ ಟಾಲಿವುಡ್‌ನಲ್ಲಿ ಋಷಿ ಹೆಸರಿನ ಸಿನಿಮಾ ಬರುವ ವಿಷಯ ತಿಳಿದಿತ್ತು. ಹಾಗಾಗಿಯೇ ಈ ಚಿತ್ರಕ್ಕೆ ಮರೀಚಿ ಎಂಜು ಟೈಟಲ್ ಅಂತಿಮಗೊಳಿಸಲಾಗಿತ್ತು ಎಂದರು. ಇದನ್ನೂ ಓದಿ: ಸುದೀಪ್, ದರ್ಶನ್, ಶಿವಣ್ಣ-ಯಶ್ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ: ತಮಿಳು ಚಿತ್ರ ವಿತರಿಸಿ 36 ಕೋಟಿ ರೂ. ಪಡೆದವರು ಕಾಣೋಲ್ವಾ? ಟ್ಯಾಗ್ ಲೈನ್ ಹೇಳುವಂತೆ ಗಾಡ್ ಫಾದರ್ ಆಫ್ ಗುಡ್ ಆ್ಯಂಡ್ ಬ್ಯಾಡ್ ಎನ್ನುವ ಹಾಗೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಕಥೆ ಎಣೆಯುವ ಮನಸ್ಸು ಇರುತ್ತದೆ. ನಮ್ಮಗೂ ಅದೇ ಬೇಕಿರುವುದು. ಮರೀಚಿ ಸಿನಿಮಾ ಒಂದು ಕ್ರೈಮ್ ಥ್ರಿಲ್ಲರ್. ಟೀಸರ್ ನೋಡಿದರೆ ಅದು ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುವ ಅವಕಾಶವನ್ನು ನಿರ್ದೇಶಕರು ಕೊಟ್ಟಿದ್ದಾರೆ. ಮರೀಚಿ ಸಿನಿಮಾದಲ್ಲಿ ತಾಂತ್ರಿಕ ವರ್ಗದವರನ್ನು ಎಷ್ಟು ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದರೋ ಅದೇ ರೀತಿ ತೆರೆಮೇಲೆ ಬರುವ ಕಲಾವಿದರನ್ನು ಅಷ್ಟೇ ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದಾರೆ. ಅದರಲ್ಲಿ ನಾನು ಒಬ್ಬ ಇದ್ದೇನೆ ಎಂದು ಹೇಳಲು ಖುಷಿಯಾಗುತ್ತದೆ ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ. ಮರೀಚಿ ಸ್ಟೋರಿ ಲೈನ್ ನನಗೆ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ಫಾರ್ಪಮೆನ್ಸ್ ಗೆ ತುಂಬಾ ಸ್ಕೋಪ್ ಇತ್ತು. ನನ್ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ. ಹ್ಯಾಪಿ ನ್ಯೂ ಇಯರ್ ನಲ್ಲಿ ಗಂಡ ಹೆಂಡತಿಯಾಗಿ ನಾನು ವಿಜಯ್ ಸರ್ ನಟಿಸಿದ್ದೇವು. ಇಲ್ಲಿಯೂ ಗಂಡ ಹೆಂಡತಿಯಾಗಿ ನಟಿಸಿದ್ದೇವೆ. ಎಮೋಷನಲ್ ಆಗಿ ಮರೀಚಿ ಸಿನಿಮಾ ಮೂಡಿಬಂದಿದೆ. ಸ್ಕ್ರೀನ್ ನಲ್ಲಿ ನಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ನೋಡಲು ನಾನು ಕೂಡ ಕಾತುರಳಾಗಿದ್ದೇನೆ ಎಂದರು. ಮರೀಚಿ ಲವ್  ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ. ಇದನ್ನೂ ಓದಿ: ಅದಿತಿ ಪ್ರಭುದೇವ ನಟನೆಯ ಅಲೆಕ್ಸಾ ಚಿತ್ರ ನವೆಂಬರ್ 3ಕ್ಕೆ ಬಿಡುಗಡೆ ಚಿತ್ರದಲ್ಲಿ ವಿಜಯ ರಾಘವೇಂದ್ರ ಜೋಡಿಯಾಗಿ ನಟಿ ಸೋನು ಗೌಡ ನಟಿಸಿದ್ದು. ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಎಸ್ ಎಸ್ ರೆಕ್ ಬ್ಯಾನರ್ ನಡಿ ನಿರ್ದೇಶಕ ಸಿಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸಿನಿಮಾವನ್ನು ನವೆಂಬರ್ ತಿಂಗಳಿನಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. 'ಮರೀಚಿ' ಫೈನಲ್ ಮಾಡುವುದಕ್ಕೂ ಮುನ್ನ 150 ಟೈಟಲ್ ಸೆಲೆಕ್ಟ್ ಮಾಡಿದ್ದೆವು: ನಿರ್ದೇಶಕ ಸಿಧ್ರುವ್

ಸುದೀಪ್, ದರ್ಶನ್, ಶಿವಣ್ಣ, ಯಶ್ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ತಮಿಳು ಚಿತ್ರ ವಿತರಿಸಿ 36 ಕೋಟಿ ರೂ. ಪಡೆದವರು ಕಾಣೋಲ್ವಾ?

ಕಾವೇರಿ ವಿಚಾರದಲ್ಲಿ ನಿಮ್ಮ ಕಣ್ಣಿಗೆ ನಾವು ನಾಲ್ಕು ಮಂದಿ ಮಾತ್ರ ಕಾಣುವುದಾ? ಬೇರೆ ಯಾರು ಕಾವುದಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ನಟ ದರ್ಶನ್​, ಕಲಾವಿದರ ಪರ ಬ್ಯಾಟ್​ ಬೀಸಿದ್ದಾರೆ. ಮೈಸೂರು: ಕಾವೇರಿ ವಿಚಾರದಲ್ಲಿ ನಿಮ್ಮ ಕಣ್ಣಿಗೆ ನಾವು ನಾಲ್ಕು ಮಂದಿ ಮಾತ್ರ ಕಾಣುವುದಾ? ಬೇರೆ ಯಾರು ಕಾವುದಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ನಟ ದರ್ಶನ್​, ಕಲಾವಿದರ ಪರ ಬ್ಯಾಟ್​ ಬೀಸಿದ್ದಾರೆ. ಬಂಡೂರು ಪಟ್ಟಣದಲ್ಲಿ ಗಂಗಾ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ತಳಿಯ ಗೋದಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾವೇರಿ ಹೋರಾಟ ಬಂದಾಗಲೆಲ್ಲಾ ದರ್ಶನ್, ಸುದೀಪ್, ಶಿವಣ್ಣ, ಯಶ್ ಮತ್ತೊಬ್ಬರು ಮಾತ್ರ ಕಾಣಿಸೋದಾ? ಎಂದು  ಬೇಸರ ವ್ಯಕ್ತಪಡಿಸಿದ್ದಾರೆ. ಕಾವೇರಿ ಚಳವಳಿಗೆ ಕನ್ನಡ ಚಿತ್ರರಂಗದ ಸ್ಟಾರ್​ಗಳು ಬರ್ತಿಲ್ಲ ಅನ್ನೋ ಆರೋಪಕ್ಕೆ ತಿರುಗೇಟು ನೀಡಿರುವ ದರ್ಶನ್, ಇತ್ತೀಚೆಗೆ ತಮಿಳು ಸಿನಿಮಾ ಒಂದು ಬಿಡುಗಡೆಯಾಯಿತು. ಆ ಸಿನಿಮಾವನ್ನು ಕನ್ನಡದ ವಿತರಕರೊಬ್ಬರು ಕರ್ನಾಟಕ‌ದಲ್ಲಿ ಹಂಚಿಕೆ ಮಾಡಲು ಬರೋಬ್ಬರಿ 6 ಕೋಟಿಗೆ ಖರೀದಿ ಮಾಡಿದ್ದರು. ಅದರಿಂದ ಅವರು ಸುಮಾರು 36 ರಿಂದ 37 ಕೋಟಿ ರೂಪಾಯಿ ಸಂಪಾದಿಸಿದರು. ಅಂದು ಕನ್ನಡದವರು ತಮಿಳು ಸಿನಿಮಾಗೆ 37 ಕೋಟಿ ರೂಪಾಯಿ ಕೊಂಡೊಯ್ಯಲು ಬಿಟ್ಟು ಈಗ, ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕಾವೇರಿ ಹೋರಾಟ: ನಟರಾದ ದರ್ಶನ್, ಸುದೀಪ್, ಶಿವರಾಜ್ ಕುಮಾರ್ ಹೇಳಿದ್ದು ಹೀಗೆ... ಕಾವೇರಿ ವಿವಾದ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್ ತಾರೆಯರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಕಾವೇರಿ ವಿವಾದದ ಬಗ್ಗೆ ಸೂಪರ್‌ಸ್ಟಾರ್‌ಗಳು ಯಾಕೆ ಧ್ವನಿ ಎತ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗಿತ್ತು. ಹೋರಾಟದಲ್ಲಿ ಭಾಗಿಯಾಗಿದ್ದ ದರ್ಶನ್ ಕಲಾವಿದರ ಬಗ್ಗೆ ಮಾತಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದಾರೆ. ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ." ಎಂದು ಪ್ರಶ್ನೆ ಮಾಡಿದ್ದಾರೆ. "ನೀವು ಕನ್ನಡ ಕಲಾವಿದರಿಗೆ ಕೊಟ್ಟರೆ ಮಾತ್ರ ಕನ್ನಡ ಕಲಾವಿದರು ಬರ್ತಾರೆ. ಅವರು ದೊಡ್ಡ ಕಲಾವಿದರು. ನಾನು ಇಲ್ಲ ಅಂತ ಹೇಳುವುದಿಲ್ಲ. ನಾನು ಅವರ ಬಗ್ಗೆ ಮಾತಾಡುತ್ತಿಲ್ಲ. ಕರ್ನಾಟಕದಿಂದ 35, 36 ಕೋಟಿ ಹೋಯ್ತು ಸ್ವಾಮಿ. ಯಾಕೆ ಅವರ ಬಾಯ್ ಬಂದ್ ಮಾಡಿಲ್ಲ." ಎಂದು ದರ್ಶನ್ ಸವಾಲೆಸೆದಿದ್ದಾರೆ ಸುದೀಪ್, ದರ್ಶನ್, ಶಿವಣ್ಣ, ಯಶ್ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ತಮಿಳು ಚಿತ್ರ ವಿತರಿಸಿ 36 ಕೋಟಿ ರೂ. ಪಡೆದವರು ಕಾಣೋಲ್ವಾ?

ಅದಿತಿ ಪ್ರಭುದೇವ ನಟನೆಯ ಅಲೆಕ್ಸಾ ಚಿತ್ರ ನವೆಂಬರ್ 3ಕ್ಕೆ ಬಿಡುಗಡೆ

ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ ‘ಅಲೆಕ್ಸಾ’ ಚಿತ್ರ ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ ‘ಅಲೆಕ್ಸಾ’ ಚಿತ್ರ ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಟೀಸರ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ತನಿಖಾಧಿಕಾರಿ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಪವನ್ ತೇಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಾರ್ಮಾಸುಟಿಕಲ್‌ ಮಾಫಿಯಾ ಬಗ್ಗೆ ಕಥಾಹಂದರವಿದೆ. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ ಎಂದು ಜೀವ ಅವರು ಹೇಳಿದ್ದಾರೆ. ಇದನ್ನೂ ಓದಿ: 'ಮರೀಚಿ' ಫೈನಲ್ ಮಾಡುವುದಕ್ಕೂ ಮುನ್ನ 150 ಟೈಟಲ್ ಸೆಲೆಕ್ಟ್ ಮಾಡಿದ್ದೆವು: ನಿರ್ದೇಶಕ ಸಿಧ್ರುವ್ ಪೊಲೀಸ್ ಅಧಿಕಾರಿಯಾಗುವ ನನ್ನ ನಿಜ ಜೀವನದ ಕನಸು ನನಸಾಗಲಿಲ್ಲ, ಆದರೆ. ನಿರ್ದೇಶಕರು ತನಿಖಾ ಅಧಿಕಾರಿಯ ಪಾತ್ರವನ್ನು ನೀಡಿದಾಗ ಬಹಳ ಸಂತೋಷವಾಯಿತು. ಬಹಳ ಉತ್ಸಾಹದಿಂದ ಒಪ್ಪಿಕೊಂಡೆ. ನನಗೂ ಆ್ಯಕ್ಷನ್‌ ಹೀರೋಯಿನ್‌ ಆಗಬೇಕೆಂಬ ಕನಸಿತ್ತು, ಅದು ಕೂಡ ಈ ಚಿತ್ರದ ಮೂಲಕ ನನಸಾಗಿದೆ ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ನಟಿ ಅದಿತಿ ಪ್ರಭುದೇವಾ ಅವರು ಹೇಳಿದ್ದಾರೆ. ಅದಿತಿ. ವಿ.ಚಂದ್ರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ನಟಿಸಿದ್ದಾರೆ. ರವಿವರ್ಮ ಹಾಗೂ ಮಾಸ್ ಮಾದ ಅವರು ಸಾಹಸ ಸಂಯೋಜನೆಯಲ್ಲಿ ಮಾಡಿದ್ದು, ಸತೀಶ್ ಬಿ  ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ  ಸಂಕಲನ ಅಲೆಕ್ಸಾ ಚಿತ್ರಕ್ಕಿದೆ. ಅದಿತಿ ಪ್ರಭುದೇವ ನಟನೆಯ ಅಲೆಕ್ಸಾ ಚಿತ್ರ ನವೆಂಬರ್ 3ಕ್ಕೆ ಬಿಡುಗಡೆ

ಆಕೆ ಜೊತೆ ರೊಮ್ಯಾನ್ಸ್ ಮಾಡಲಾರೆ, ಬೇರೆ ಹೀರೋಯಿನ್ ಇದ್ರೆ ನೋಡಿ: ಕರ್ನಾಟಕ ಮೂಲದ ನಟಿಯನ್ನು ತಿರಸ್ಕರಿಸಿದ ವಿಜಯ್ ಸೇತುಪತಿ!

ಕಾಲಿವುಡ್‌ನ ಸ್ಟಾರ್‌ ನಟ ವಿಜಯ್‌ ಸೇತುಪತಿ ಸದ್ಯ ಜವಾನ್‌ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸೌತ್‌ನಲ್ಲಿ ಹವಾ ಸೃಷ್ಟಿಸಿಕೊಂಡಿದ್ದ ಈ ನಟನೀಗ ಉತ್ತರ ಭಾರತದ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಕಾಲಿವುಡ್‌ನ ಸ್ಟಾರ್‌ ನಟ ವಿಜಯ್‌ ಸೇತುಪತಿ ಸದ್ಯ ಜವಾನ್‌ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸೌತ್‌ನಲ್ಲಿ ಹವಾ ಸೃಷ್ಟಿಸಿಕೊಂಡಿದ್ದ ಈ ನಟನೀಗ ಉತ್ತರ ಭಾರತದ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಹೀಗಿರುವಾಗಲೇ ಇದೇ ನಟ ತಮ್ಮ ಹೊಸ ಸಿನಿಮಾವೊಂದರ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನನ್ನ ಸಿನಿಮಾಕ್ಕೆ ಆ ನಟಿ ಬೇಡ ಎಂದಿದ್ದಾರೆ. ನಟ ವಿಜಯ್‌ ಸೇತುಪತಿ, ಕರ್ನಾಟಕ ಮೂಲದ ನಟಿಯ ಜತೆಗೆ ರೊಮ್ಯಾನ್ಸ್‌ ಮಾಡುವುದು ಅಸಾಧ್ಯ ಎಂದಿದ್ದಾರೆ. ಕೃತಿ ಶೆಟ್ಟಿ ತೆಲುಗಿನ ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ವಿಜಯ್​ ಸೇತುಪತಿ ಅವರು ನಾಯಕಿ ಕೃತಿ ಶೆಟ್ಟಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿಯ ನಟನೆಯನ್ನು ನೋಡಿ ಸೇತುಪತಿ ಮನಸಾರೆ ಹೊಗಳಿದ್ದರು. ಅಲ್ಲದೆ, ಕೃತಿಯೊಂದಿಗೆ ತಮಿಳು ಚಿತ್ರವೊಂದರಲ್ಲಿ ನಟಿಸಲು ನಿರಾಕರಿಸಿದ್ದಕ್ಕೆ ಕಾರಣ ನೀಡಿರುವ ವಿಡಿಯೋ ತುಣುಕು ವೈರಲ್​ ಆಗಿದೆ. ಇದು ಸೇತುಪತಿ ನಟನೆಯ “ಲಾಭಂ” ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರ ವಿಡಿಯೋ ತುಣುಕಾಗಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಬಯೋಪಿಕ್ 'ಲೀಡರ್ ರಾಮಯ್ಯ': ವಿಜಯ್ ಸೇತುಪತಿ ಡೇಟ್ಸ್ ಗಾಗಿ ಕಾಯುತ್ತಿದೆ ಚಿತ್ರತಂಡ! ವಿಡಿಯೋದಲ್ಲಿ ಮಾತನಾಡಿರುವ ಸೇತುಪತಿ, ನಾನು ಉಪ್ಪೇನಾ ಚಿತ್ರದಲ್ಲಿ ಕೃತಿಗೆ ತಂದೆಯಾಗಿ ಅಭಿನಯಿಸಿದ್ದೇನೆ ಎಂಬುದು ಚಿತ್ರತಂಡಕ್ಕೆ ಗೊತ್ತಿರಲಿಲ್ಲ. ನನ್ನ ಮಗಳೆಂದು ಭಾವಿಸಿದ ಮೇಲೆ ಅವಳೊಂದಿಗೆ ನಾನ್ಹೇಗೆ ರೊಮ್ಯಾನ್ಸ್​ ಮಾಡಲು ಸಾಧ್ಯ ಎಂದು ಹೇಳಿದ್ದಾಗಿ ತಿಳಿಸಿದೆ. ಉಪ್ಪೇನಾ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣದ ವೇಳೆ ನನ್ನನ್ನು ನಿನ್ನ ತಂದೆಯಂದೇ ಭಾವಿಸು. ನನ್ನ ಮಗನಿಗೆ ಸುಮಾರು 15 ವರ್ಷ. ಆತ ಕೃತಿಗಿಂತ ಸ್ವಲ ಚಿಕ್ಕವನು. ಕೃತಿಯನ್ನು ಕೂಡ ನಾನು ಮಗಳಂತೆ ಭಾವಿಸುತ್ತೇನೆ. ಆದ್ರೆ ತೆರೆಯ ಮೇಲೆ ನಾನು ಹೇಗೆ ಅವಳೊಂದಿಗೆ ರೊಮ್ಯಾನ್ಸ್​ ಮಾಡಲು ಸಾಧ್ಯ. ಹೀಗಾಗಿ ಚಿತ್ರದ ನಾಯಕಿಯಾಗಿ ಅವಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇನೆಂದು ಹೇಳಿದ್ದರು. ಆಕೆ ಜೊತೆ ರೊಮ್ಯಾನ್ಸ್ ಮಾಡಲಾರೆ, ಬೇರೆ ಹೀರೋಯಿನ್ ಇದ್ರೆ ನೋಡಿ: ಕರ್ನಾಟಕ ಮೂಲದ ನಟಿಯನ್ನು ತಿರಸ್ಕರಿಸಿದ ವಿಜಯ್ ಸೇತುಪತಿ!

ಮಲಯಾಳಂನ ಖ್ಯಾತ ಚಿತ್ರ ನಿರ್ದೇಶಕ ಕೆ ಜಿ ಜಾರ್ಜ್ ಕೊಚ್ಚಿಯಲ್ಲಿ ನಿಧನ

ಮಲಯಾಳಂನ ಹಿರಿಯ ನಿರ್ದೇಶಕ ಕೆ.ಜಿ.ಜಾರ್ಜ್ ಭಾನುವಾರ (77ವ) ನಿಧನರಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ಕೊಚ್ಚಿಯ ವೃದ್ಧಾಶ್ರಮದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.  ತಿರುವನಂತಪುರ: ಮಲಯಾಳಂನ ಹಿರಿಯ ನಿರ್ದೇಶಕ ಕೆ.ಜಿ.ಜಾರ್ಜ್ ಭಾನುವಾರ (77ವ) ನಿಧನರಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ಕೊಚ್ಚಿಯ ವೃದ್ಧಾಶ್ರಮದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.  ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೆ.ಜಿ.ಜಾರ್ಜ್ (ಗೀವರ್ಗೀಸ್ ಜಾರ್ಜ್ ಕುಲಕ್ಕಟಿಲ್) ಅವರು ಮೇ 24, 1946 ರಂದು ತಿರುವಲ್ಲಾದಲ್ಲಿ ಸ್ಯಾಮ್ಯುಯೆಲ್ ಮತ್ತು ಅನ್ನಮ್ಮ ಅವರ ಹಿರಿಯ ಮಗನಾಗಿ ಜನಿಸಿದರು. ಅವರು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತಮ್ಮ ಚಲನಚಿತ್ರ ನಿರ್ದೇಶನ ಕೋರ್ಸ್ ನ್ನು ಪೂರ್ಣಗೊಳಿಸಿದ್ದರು. ಖ್ಯಾತ ನಿರ್ದೇಶಕ ರಾಮು ಕಾರ್ಯತ್ ಅವರ ‘ಮಾಯಾ’ ಚಿತ್ರದಲ್ಲಿ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ಜಾರ್ಜ್ ಅವರು, ಸ್ವಪ್ನದನಂ (1975) ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಇದು ಮಲಯಾಳಂನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಹೆಣ್ಣಿನ ಮಾದರಿಯ ಟ್ರೋಫಿ ಪುರುಷರನ್ನು ಪ್ರಚೋದಿಸುತ್ತದೆ: ನಟ ಅಲೆನ್ಸಿಯರ್ ಹೇಳಿಕೆ; ತೀವ್ರ ಟೀಕೆಗೆ ಗುರಿ ಅವರ ಪ್ರಸಿದ್ಧ ಚಲನಚಿತ್ರಗಳೆಂದರೆ ಉಳ್ಕಡಲ್ (1979), ಮೇಳ (1980), ಯವನಿಕಾ (1982), ಲೇಖನುದೇ ಮರಣಂ ಒರು ಫ್ಲ್ಯಾಶ್‌ಬ್ಯಾಕ್ (1983), ಅದಮಿಂತೆ ವಾರಿಯೆಲ್ಲು (1983), ಪಂಚವಡಿ ಪಾಲಂ (1984), ಇರಕಲ್ (1986), ಮತ್ತು ಮತ್ತೋರಲ್ (1988) ), ಅವರ ವಿವಿಧ ಚಿತ್ರಗಳಿಗಾಗಿ ಅವರು 9 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಚಲನಚಿತ್ರಗಳು ವಿಡಂಬನಾತ್ಮಕ ಮತ್ತು ಸ್ತ್ರೀವಾದಿ ವಿಷಯಗಳಿಗಾಗಿ ಪ್ರಶಂಸಿಸಲ್ಪಟ್ಟಿವೆ. ಜಾರ್ಜ್ ಅವರು ಮಲಯಾಳಂ ಸಿನಿ ತಂತ್ರಜ್ಞರ ಸಂಘದ (MACTA) ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ ಮತ್ತು ಅದರ ಕಾರ್ಯಕಾರಿ ಸದಸ್ಯರಾಗಿದ್ದರು. ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು. ಮಲಯಾಳಂನ ಖ್ಯಾತ ಚಿತ್ರ ನಿರ್ದೇಶಕ ಕೆ ಜಿ ಜಾರ್ಜ್ ಕೊಚ್ಚಿಯಲ್ಲಿ ನಿಧನ

ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಸ್ಪರ್ಧಿ ಯಾರು ಗೊತ್ತೆ?

ಅಕ್ಟೋಬರ್ 8ರಿಂದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ​ಬಾಸ್ ಸೀಸನ್ 10 ಪ್ರಾರಂಭವಾಗುತ್ತಿದೆ. ಆದರೆ ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿರುವುದಿಲ್ಲ. ಬೆಂಗಳೂರು: ಅಕ್ಟೋಬರ್ 8ರಿಂದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ​ಬಾಸ್ ಸೀಸನ್ 10 ಪ್ರಾರಂಭವಾಗುತ್ತಿದೆ. ಆದರೆ ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿರುವುದಿಲ್ಲ. ಈ ಬಾರಿಯ ಬಿಗ್ ​ಬಾಸ್​ ಸೀಸನ್ 10 ಹಲವು ವಿಶೇಷತೆಗಳಿಂದ ಕೂಡಿರಲಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ತನ್ನ ಕಲ್ಮಶ ರಹಿತ ಅಭಿನಯ ಮತ್ತು ಮನಸ್ಸಿನಿಂದ ಎಲ್ಲರ ಮನಗೆದ್ದ 777 ಚಾರ್ಲಿ ಸಿನಿಮಾದ ‘ಚಾರ್ಲಿ’ ಈ ಬಾರಿ ಬಿಗ್’ಬಾಸ್ ಮನೆಗೆ ಎಂಟ್ರಿ ಕೊಡ್ತಿದೆ. ಇದನ್ನೂ ಓದಿ: ಬಿಗ್‌ ಬಾಸ್‌ ಕನ್ನಡ 10ನೇ ಸೀಸನ್‌ ಆರಂಭಕ್ಕೆ ಡೇಟ್ ಫಿಕ್ಸ್! ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯೇ ಸ್ಪಷ್ಟ ಮಾಹತಿ ನೀಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. “ಬೆಸ್ಟ್ ರೇಟೆಡ್ ಚಲನಚಿತ್ರ 777 ಚಾರ್ಲಿ ಸಿನಿಮಾದ ‘ಚಾರ್ಲಿ’ ಈ ಬಾರಿಯ ಬಿಗ್ ಬಾಸ್ ಸೀಸನ್ 10ರ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಅಭಿನಂದನೆಗಳು ಚಾರ್ಲಿ” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ.  

ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಸ್ಪರ್ಧಿ ಯಾರು ಗೊತ್ತೆ?

ಫಿಲ್ಮ್ ಚೇಂಬರ್ ಚುನಾವಣೆ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ಎನ್.ಎಮ್. ಸುರೇಶ್ ಆಯ್ಕೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು (ಶನಿವಾರ) ನಡೆದ ಚುನಾವಣೆಯಲ್ಲಿ 2023ನೇ ಸಾಲಿಗೆ ಅಧ್ಯಕ್ಷರಾಗಿ ನಿರ್ಮಾಪಕ, ವಿತರಕ ಎನ್.ಎಮ್. ಸುರೇಶ್ ಆಯ್ಕೆಯಾಗಿದ್ದಾರೆ. ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು (ಶನಿವಾರ) ನಡೆದ ಚುನಾವಣೆಯಲ್ಲಿ 2023ನೇ ಸಾಲಿಗೆ ಅಧ್ಯಕ್ಷರಾಗಿ ನಿರ್ಮಾಪಕ, ವಿತರಕ ಎನ್.ಎಮ್. ಸುರೇಶ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎನ್.ಎಮ್‌.ಸುರೇಶ್, ಮಾರ್ಸ್ ಸುರೇಶ್, ಶಿಲ್ಪಾ ಶ್ರೀನಿವಾಸ್ ಮತ್ತು ಎ.ಗಣೇಶ್ ಆಯ್ಕೆ ಬಯಸಿದ್ದರು. ಕೊನೆಗೂ ಅಧ್ಯಕ್ಷ ಸ್ಥಾನದ ಗೆಲುವು ಎನ್.ಎಮ್‌. ಸುರೇಶ್ ಅವರ ಪಾಲಾಗಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಫಿಲಂ ಚೇಂಬರ್‌ ಅಧ್ಯಕ್ಷರಾಗಿ ನಿರ್ಮಾಪಕ ಎನ್.ಎಮ್.ಸುರೇಶ್ ಗೆಲುವು ಸಾಧಿಸಿದ್ದಾರೆ.   ಶಿಲ್ಪ ಶ್ರೀನಿವಾಸ್ 217, ಗಣೇಶ್ 204, ಸುರೇಶ್ ಎಮ್.ಎನ್ 337, ವಿ.ಹೆಚ್.ಸುರೇಶ್ 181 ಮತಗಳನ್ನು ಪಡೆದಿದ್ದಾರೆ. 120 ವೋಟ್ ಗಳಿಂದ ಎನ್.ಎಮ್ .ಸುರೇಶ್ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ 307 ವೋಟ್ ನಿಂದ ಗೆದ್ದಿದ್ದಾರೆ. ವಿತರಕರ ವಲಯದಿಂದ ವೆಂಕಟೇಶ್.ಜಿ, ಪ್ರದರ್ಶಕರ ವಲಯದಿಂದ ನರಸಿಂಹುಲು ಗೆಲುವು ದಾಖಲಿಸಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನಿಮಾ ದಿನ ಆಚರಣೆ; ಅಂದು ಟಿಕೆಟ್ ಬೆಲೆ 99 ರೂ. ಗೌರವ ಕಾರ್ಯದರ್ಶಿ ನಿರ್ಮಾಪಕ ವಲಯ ಭಾ.ಮಾ.ಗಿರೀಶ್, ವಿತರಕರ ವಲಯದಿಂದ ಕರಿಸುಬ್ಬು, ಪ್ರದರ್ಶಕರ ವಲಯದಿಂದ ಸುಂದರ ರಾಜು ಗೆಲುವು ಸಾಧಿಸಿದ್ದಾರೆ. ಖಜಾಂಚಿಯಾಗಿ‌ ಗೆಲುವು ಪಡೆದ ಜಯಸಿಂಹ‌ ಮುಸುರಿ ಸಾಧಿಸಿದ್ದಾರೆ. ಬೆಳಗ್ಗೆ 65ನೇ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಚುನಾವಣೆ ಮತ್ತು ಈವರೆಗೂ ವಾಣಿಜ್ಯ ಮಂಡಳಿ ನಡೆದುಕೊಂಡು ಬಂದ ಹಾದಿಯ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಿತು. ಒಟ್ಟು ಮತಗಳು ಸಂಖ್ಯೆ 1,599. ಚಲಾವಣೆ ಆದ ಮತಗಳು ಸಂಖ್ಯೆ 967 ಆಗಿದ್ದವು.   ಫಿಲ್ಮ್ ಚೇಂಬರ್ ಚುನಾವಣೆ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ಎನ್.ಎಮ್. ಸುರೇಶ್ ಆಯ್ಕೆ

Credits : K.Prabha

–>