State news updates
ರಾಜ್ಯದಲ್ಲಿ ಪ್ರತಿಷ್ಟಿತ ರಕ್ಷಾ ವಿಶ್ವ ವಿದ್ಯಾಲಯದ ಸ್ಥಾಪನೆ, ಒಡಂಬಡಿಕೆಗೆ ಸಹಿ
ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯದ ಕರ್ನಾಟಕ ಅಧ್ಯಯನ ಕೇಂದ್ರವನ್ನು ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲು ಕರ್ನಾಟಕ ಸರಕಾರ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿವೆ. ಬೆಂಗಳೂರು: ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯದ ಕರ್ನಾಟಕ ಅಧ್ಯಯನ ಕೇಂದ್ರವನ್ನು ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲು ಕರ್ನಾಟಕ ಸರಕಾರ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿವೆ. ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ, ಗೃಹ ಸಚಿವಆರಗ ಜ್ಞಾನೇಂದ್ರ ರವರ ಉಪಸ್ಥಿತಿಯಲ್ಲಿ, ವಿಶ್ವ ವಿದ್ಯಾಲಯದ ಉಪಕುಲಪತಿ ಬಿಮಲ್ ಎನ್ ಪಟೇಲ್ ಹಾಗೂ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಈ ಮೂಲಕ ದಕ್ಷಿಣ ಭಾರತದಲ್ಲಿ, ರಕ್ಷಾ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರ ಹೊಂದಿದ ಮೂರನೇ ರಾಜ್ಯ ಕರ್ನಾಟಕವಾಗಿದೆ. ನಾಡಿನ ಯುವ ಜನತೆಗೆ ಭದ್ರತೆ ಹಾಗೂ ಪೊಲೀಸ್ ಸೇವೆಗಳ ಕ್ಷೇತ್ರದಲ್ಲಿ, ಅತ್ಯಾಧುನಿಕ ತರಭೇತಿ, ಶಿಕ್ಷಣ, ಸಂಶೋಧನೆ ಇತ್ಯಾದಿ ಚಟುವಟಿಕೆ ಹಮ್ಮಿಕೊಳ್ಳಲು ಹಾಗೂ ಈ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿದ್ದ "ಮಾನವ ಸಂಪನ್ಮೂಲ" ವನ್ನು ಸೃಜಿಸಲು ಈ ವಿಶ್ವವಿದ್ಯಾಲಯ ಮಹತ್ವದ ಕಾಣಿಕೆ ನೀಡಲಿದೆ ಎಂದು ಗೃಹ ಸಚಿವಆರಗ ಜ್ಞಾನೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ದಲ್ಲಿ ಸ್ಥಾಪಿತ ವಾಗಲಿರುವ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ ಎಂಟು ಎಕರೆ ಪ್ರದೇಶದಲ್ಲಿ ಪ್ರಸ್ತುತ, ಕೇಂದ್ರೀಯ ವಿದ್ಯಾಲಯ ದಲ್ಲಿರುವ ಸುಸಜ್ಜಿತ ಕಟ್ಟಡಗಳಲ್ಲಿ ರಕ್ಷಾ ವಿಶ್ವ ವಿದ್ಯಾಲಯದ ಪೀಠ ಕಾರ್ಯ ನಿರ್ವಹಿಸಲಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ, ಕಾರ್ಯಾರಂಭ ಮಾಡಲಿದೆ, ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ @AmitShah ಹಾಗೂ ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರೊಂದಿಗೆ ಪಾಲ್ಗೊಂಡ ಕಾರ್ಯಕ್ರಮದಲ್ಲಿ, ವಿಶ್ವವಿದ್ಯಾಲಯದ ಕುಲಪತಿ ಶ್ರೀ ಬಿಮಲ್ ಎನ್.ಪಟೇಲ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಜನೀಶ್ ಗೋಯಲ್ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.— Araga Jnanendra (@JnanendraAraga) March 24, 2023ರಾಜ್ಯದ ರಕ್ಷಾ ವಿಶ್ವ ವಿದ್ಯಾಲಯದ ಕೇಂದ್ರವು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಶಿಕ್ಷಣ, ಅಧ್ಯಯನ ಕೇಂದ್ರವಾಗಿ ಕಾರ್ಯವನ್ನು ನಿರ್ವಹಿಸುವಲ್ಲದೆ ಪೊಲೀಸ್ ಇಲಾಖೆಗೆ ವಿವಿಧ ಹುದ್ದೆಗಳಿಗೆ ಸೆರಾ ಬಯಸುವ ಅಭ್ಯರ್ಥಿಗಳಿಗೆ, ತರಭೇತಿ ಹಾಗೂ ಕೋಚಿಂಗ್ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸಲಿದೆ. ಶಿವಮೊಗ್ಗದ ರಕ್ಷಾ ವಿಶ್ವ ವಿದ್ಯಾಲಯದ ಕೇದ್ರವು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತಹ ವಿವಿಧ ವಿಷಯಗಳ ಶಿಕ್ಷಣ ಪ್ರದಾನಕ್ಕೆ ಸಂಬಂಧಿಸಿದಂತೆ, ವಿಶ್ವ ಮಟ್ಟದ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಹಾಗೂ ಇಂತಹ ಕೇಂದ್ರವು, ರಾಜ್ಯದ, ಶಿವಮೊಗ್ಗ ಜಿಲ್ಲೆಗೆ ಮಂಜೂರಾತಿ ನೀಡಿದ ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನದಿಂದ ರವಾನಿಸಲಾಗುತ್ತಿದೆ: ಗೃಹ ಸಚಿವ ಅಮಿತ್ ಶಾ
ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನದಿಂದ ರವಾನಿಸಲಾಗುತ್ತದೆ ಮತ್ತು ಇರಾನ್ ಮೂಲಕ ಶ್ರೀಲಂಕಾ ಮತ್ತು ಆಫ್ರಿಕಾಕ್ಕೆ ಹೋಗುವುದರಿಂದ ಸಾಗರದಲ್ಲಿ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. ಬೆಂಗಳೂರು: ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನದಿಂದ ರವಾನಿಸಲಾಗುತ್ತದೆ ಮತ್ತು ಇರಾನ್ ಮೂಲಕ ಶ್ರೀಲಂಕಾ ಮತ್ತು ಆಫ್ರಿಕಾಕ್ಕೆ ಹೋಗುವುದರಿಂದ ಸಾಗರದಲ್ಲಿ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಮಾದಕ ದ್ರವ್ಯ ನಿಯಂತ್ರಣವು ಕೇವಲ ಕೇಂದ್ರದ ಹೋರಾಟವಲ್ಲ. ಬದಲಿಗೆ, ರಾಜ್ಯಗಳು, ಸಮಾಜಗಳು ಮತ್ತು ನಾಗರಿಕರ ಹೋರಾಟವಾಗಿದೆ ಎಂದು ಅವರು ಹೇಳಿದರು.
ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 'ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತು ಪ್ರಾದೇಶಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ, ಕನಿಷ್ಠ 60-70 ಪ್ರತಿಶತದಷ್ಟು ಮಾದಕವಸ್ತು ಕಳ್ಳಸಾಗಣೆ ಸಮುದ್ರ ಮಾರ್ಗದ ಮೂಲಕ ನಡೆಯುತ್ತದೆ. ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ಯಾರನ್ನೂ ಉಳಿಸದಂತೆ ನಾವು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಿನ ವಿಧಾನವನ್ನು ಹೊಂದಿರಬೇಕು ಎಂದು ಹೇಳಿದರು.
ಮಾದಕ ದ್ರವ್ಯ ಸರಬರಾಜಿಗೆ ಸಂಬಂಧಿಸಿದಂತೆ ನಾವು ದೊಡ್ಡ ವ್ಯಕ್ತಿಯನ್ನು ಹಿಡಿದಾಗ, ನಾವು ಕೆಳಗಿನ ನೆಟ್ವರ್ಕ್ಗಳ ಸಂಪೂರ್ಣ ಸರಣಿಯನ್ನು ತನಿಖೆ ಮಾಡಬೇಕಾಗುತ್ತದೆ. ನಾವು ಮಾದಕ ವ್ಯಸನಿಯನ್ನು ಹಿಡಿದಾಗ, ಅವುಗಳನ್ನು ಸರಬರಾಜು ಮಾಡಿದವರ ಬಗ್ಗೆ ನಾವು ತನಿಖೆ ನಡೆಸಬೇಕಾಗುತ್ತದೆ. ಮಾದಕ ವ್ಯಸನವನ್ನು ನಿಯಂತ್ರಿಸದಿದ್ದರೆ ದೇಹದಲ್ಲಿ ವಾಸಿಯಾಗದ ಹುಣ್ಣಾಗುತ್ತದೆ ಎಂದು ಅವರು ಹೇಳಿದರು.
'ನಾವು ಮಾದಕ ವ್ಯಸನ ಮುಕ್ತ ಭಾರತ ಗುರಿ ಹೊಂದಿದ್ದೇವೆ. ನಾವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದ್ದೇವೆ ಮತ್ತು 2025ರಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿ ಹೊಂದಿದ್ದೇವೆ. ಈ ಗುರಿಗಳನ್ನು ಸಾಧಿಸಲು ಡ್ರಗ್ಸ್ ಮುಕ್ತ ಸಮಾಜವು ಅಡಿಪಾಯವಾಗಿದೆ. ಎಲ್ಲ ಸರ್ಕಾರಗಳು ಕೈಜೋಡಿಸಬೇಕು. ಡ್ರಗ್ಸ್ ಹಾವಳಿಯನ್ನು ನಿರ್ಮೂಲನೆ ಮಾಡುವುದನ್ನು ನಾವು ಜನರ ಹೋರಾಟವನ್ನಾಗಿ ಮಾಡಬೇಕಾಗಿದೆ' ಎಂದು ಶಾ ಹೇಳಿದರು.
ಕಂದಾಯ, ಸಮಾಜ ಕಲ್ಯಾಣ, ಶಿಕ್ಷಣ ಮತ್ತು ಸಂಸ್ಕೃತಿಯಂತಹ ಎಲ್ಲಾ ಸರ್ಕಾರಿ ಇಲಾಖೆಗಳು ಮಾದಕ ವಸ್ತುಗಳ ವಿರುದ್ಧದ ಅಭಿಯಾನದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು. ಮಾದಕ ದ್ರವ್ಯ ಪತ್ತೆ, ಜಾಲ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿಯು ಮಾದಕ ವಸ್ತುಗಳ ವಿರುದ್ಧದ ಹೋರಾಟದ ನಾಲ್ಕು ಆಧಾರಗಳಾಗಿವೆ ಎಂದು ಹೇಳಿದರು.
'ಅಪರಾಧಿಗಳ ಬಂಧನವನ್ನು ತುಂಬಾ ಲಘುವಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ನಾವು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ. ಮಾದಕವಸ್ತು ಪ್ರಕರಣಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬಾರದು. ನಾವು ಅದನ್ನು ಸೂಕ್ಷ್ಮವಾಗಿ ಎದುರಿಸಬೇಕು, ನಾವು ಮಾದಕ ದ್ರವ್ಯ ಪತ್ತೆ, ನೆಟ್ವರ್ಕ್ಗಳ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿ ಮೂಲಕ ಸಾಮೂಹಿಕವಾಗಿ ಹೋರಾಡಬೇಕು' ಎಂದು ಸಚಿವರು ಹೇಳಿದರು.
ಎನ್ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್) ಕಾಯಿದೆಯಲ್ಲಿ ಬಲವಾದ ನಿಬಂಧನೆಗಳಿವೆ. ಆದರೆ, ನಾವು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ದಯವಿಟ್ಟು ಅದನ್ನು ಪರಿಶೀಲಿಸಿ ಮತ್ತು ಮಾದಕವಸ್ತು ವ್ಯಾಪಾರಿಗಳ ಎಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು ಈ ಕಾನೂನುಗಳನ್ನು ಬಳಸಿಕೊಂಡು ಎಷ್ಟು ಮಂದಿಯನ್ನು ಜೈಲಿಗೆ ಹಾಕಲಾಗಿದೆ ಎಂಬುದನ್ನು ಕಂಡುಕೊಳ್ಳಿ ಎಂದು ಅವರು ಹೇಳಿದರು.
ಹಿಂದುತ್ವ ವಿರೋಧಿ ಪೋಸ್ಟ್: ನಟ ಚೇತನ್'ಗೆ ಜಾಮೀನು ಮಂಜೂರು
ಹಿಂದುತ್ವದ ವಿರುದ್ಧ ಪೋಸ್ಟ್ ಮಾಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್'ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬೆಂಗಳೂರು: ಹಿಂದುತ್ವದ ವಿರುದ್ಧ ಪೋಸ್ಟ್ ಮಾಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್'ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ನಟ ಚೇತನ್ ಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ 32ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೆ ಲತಾ ಅವರು ಜಾಮೀನು ಭದ್ರತೆಯಾಗಿ ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಅಥವಾ ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ನೀಡಲು ಆದೇಶಿಸಿದರು. ಅಲ್ಲದೇ, ತನಿಖೆಗೆ ಸಹಕರಿಸುವಂತೆ ನಿರ್ದೇಶಿಸಿದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಸುನೀಲ್ ಕುಮಾರ್ ಗುನ್ನಾಪುರ ಅವರು “ಉರಿಗೌಡ ಮತ್ತು ನಂಜೇಗೌಡ ಎಂಬವವರು ಟಿಪ್ಪುವನ್ನು ಕೊಂದರು ಎಂಬುದನ್ನು ಬಿಜೆಪಿ ಮತ್ತು ಸಂಘ ಪರಿಹಾರ ಸೃಷ್ಟಿಸಿದ್ದು, ಚೇತನ್ ಅವರು ಇದು ಒಂದು ಸುಳ್ಳು ಎಂದು ಹೇಳಿದ್ದಾರೆ. ಇದಕ್ಕೆ ಇತಿಹಾಸದಲ್ಲಿ ಯಾವುದೇ ದಾಖಲೆ ಇಲ್ಲ ಎಂದು ಒಕ್ಕಲಿಗ ಸಮುದಾಯ ಸ್ವಾಮೀಜಿ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಸುಳ್ಳುಗಳನ್ನು ಪ್ರಶ್ನೆ ಮಾಡಬೇಕು. ಚೇತನ್ ಅವರು ಅದನ್ನು ಮಾಡಿದ್ದಾರೆ. ಒಕ್ಕಲಿಗರು ಮತ್ತು ಮುಸ್ಲಿಮ್ ಸಮುದಾಯದ ವಿರುದ್ಧ ವೈಷಮ್ಯ ಉಂಟು ಮಾಡುವ ಕೃತ್ಯವನ್ನು ಮಾಡಬಾರದು ಎಂದು ಚೇತನ್ ಹೇಳಿದ್ದಾರೆ. ಹೀಗಾಗಿ, ಐಪಿಸಿ ಸೆಕ್ಷನ್ 295 ಇಲ್ಲಿ ಅನ್ವಯಿಸುವುದಿಲ್ಲ.
ಇದನ್ನೂ ಓದಿ: ಹಿಂದುತ್ವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಪೋಸ್ಟ್: ನಟ ಚೇತನ್ ಅಹಿಂಸ ಗೆ 14 ದಿನ ನ್ಯಾಯಾಂಗ ಬಂಧನ
"1927ರಲ್ಲಿ ಮಾರ್ಚ್ 20ರಂದು ಬಾಬಾ ಸಾಹೇಬ್ ಮತ್ತು ಸಾವಿರಾರು ದಲಿತರು ಮಹಾಡ್ ನಗರದ ಚೌಡರ್ ಕೆರೆಯಲ್ಲಿ ನೀರು ಕುಡಿದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಅಸ್ಪೃಶ್ಯತೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಮೂಲಕ ದುರ್ಬಲ ವರ್ಗದವರ ಪರವಾಗಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಯಾರ ಬಗ್ಗೆಯೂ ಅವರು ಕೆಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಯಾವುದೇ ಕೃತ್ಯವನ್ನೂ ಚೇತನ್ ಅವರು ಎಸಗಿಲ್ಲ" ಎಂದು ವಾದಿಸಿದ್ದರು.
ಸರ್ಕಾರಿ ಅಭಿಯೋಜಕರು “ಚೇತನ್ ಪದೇಪದೇ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ವಿಭಿನ್ನ ಕೋಮುಗಳ ನಡುವೆ ದ್ವೇಷ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬಾರದು” ಎಂದು ಆಕ್ಷೇಪಿಸಿದ್ದರು.
ಬೆಂಗಳೂರಿನ ಶಿವಕುಮಾರ್ ಎಂಬವರು ನೀಡಿದ ದೂರಿನ ಅನ್ವಯ ಶೇಷಾದ್ರಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295ಎ ಮತ್ತು 505ಬಿ ಅಡಿ ಎಫ್ಐಆರ್ ದಾಖಲಿಸಿ, ಮಂಗಳವಾರ ಚೇತನ್ ಅವರನ್ನು ಬಂಧಿಸಲಾಗಿತ್ತು.
ಮಾದಕ ದ್ರವ್ಯ ವಿರುದ್ಧ ಹೋರಾಡಲು ತ್ರಿಸೂತ್ರ ಮಂಡನೆ: ಮಾದಕ ವಸ್ತು ಮತ್ತು ರಾಷ್ಟ್ರೀಯ ಭದ್ರತೆ ಸಮ್ಮೇಳನದಲ್ಲಿ ಅಮಿತ್ ಶಾ
ಮಾದಕ ವಸ್ತುಗಳ ಕಳ್ಳಸಾಗಣೆ, ಮಾರಾಟ, ಬಳಕೆ ವಿರುದ್ಧ ಹೋರಾಟದಲ್ಲಿ ಸುಧಾರಿತ ತಂತ್ರಜ್ಞಾನ ಬಳಸುವುದು ನಮ್ಮ ಮುಂದಿನ ಗುರಿಯಾಗಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ, ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರು: ಮಾದಕ ವಸ್ತುಗಳ ಕಳ್ಳಸಾಗಣೆ, ಮಾರಾಟ, ಬಳಕೆ ವಿರುದ್ಧ ಹೋರಾಟದಲ್ಲಿ ಸುಧಾರಿತ ತಂತ್ರಜ್ಞಾನ ಬಳಸುವುದು ನಮ್ಮ ಮುಂದಿನ ಗುರಿಯಾಗಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ, ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಗಾಂಜಾ, ಅಫೀಮು ಬೆಳೆಯುವ ಪ್ರದೇಶಗಳ ಗುರುತಿಸುವಿಕೆ ಮತ್ತು ನಿಯಂತ್ರಣಕ್ಕೆ ಡ್ರೋನ್, ಕೃತಕ ಬುದ್ದಿಮತ್ತೆ(AI) ಮತ್ತು ಉಪಗ್ರಹ ಮ್ಯಾಪಿಂಗ್ ಬಳಸಬೇಕು. ಮಾದಕ ದ್ರವ್ಯಗಳ ಪ್ರಕರಣಗಳನ್ನು ಅದರ ಮೂಲದಿಂದ ಅಂತಿಮ ಹಂತದವರೆಗೆ ಅದರ ಸಂಪೂರ್ಣ ಜಾಲವನ್ನು ಮಟ್ಟಹಾಕಲು ಸಂಪೂರ್ಣ ತನಿಖೆ ನಡೆಸಬೇಕು ಎಂದು ಹೇಳಿದ ಅಮಿತ್ ಶಾ ಅವರು ಮಾದಕ ದ್ರವ್ಯ ಜಾಲ ದಮನಕ್ಕೆ ತ್ರಿಸೂತ್ರವನ್ನು ಹೇಳಿದರು. ಗೃಹ ಸಚಿವಾಲಯವು ಸಾಂಸ್ಥಿಕ ರಚನೆ, ಸಬಲೀಕರಣ ಮತ್ತು ಎಲ್ಲಾ ಮಾದಕ ದ್ರವ್ಯ ಏಜೆನ್ಸಿಗಳ ಸಮನ್ವಯ ಬಲಪಡಿಸುವ 3 ಅಂಶಗಳ ಸೂತ್ರ ಅಳವಡಿಸಿಕೊಂಡಿದೆ. ಮಾದಕ ದ್ರವ್ಯಗಳನ್ನು ಹತ್ತಿಕ್ಕಲು ಸಮಗ್ರ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದರು. ಮಾದಕ ದ್ರವ್ಯ ಕಳ್ಳಸಾಗಣೆ ಸಮಸ್ಯೆಯು ಕೇಂದ್ರ ಅಥವಾ ರಾಜ್ಯದ ಸಮಸ್ಯೆಯಲ್ಲ, ರಾಷ್ಟ್ರೀಯ ಸಮಸ್ಯೆಯಾಗಿದೆ. ಅದನ್ನು ಎದುರಿಸುವ ಪ್ರಯತ್ನಗಳು ರಾಷ್ಟ್ರೀಯವಾಗಿರಬೇಕು ಮತ್ತು ಏಕೀಕೃತವಾಗಿರಬೇಕು. ಮಾದಕ ದ್ರವ್ಯಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲಾ ರಾಜ್ಯಗಳು ನಿಯಮಿತವಾಗಿ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ರಾಷ್ಟ್ರೀಯ ನಾರ್ಕೊಟಿಕ್ಸ್ ಸಮನ್ವಯ ಪೋರ್ಟಲ್ (NCORD) ಸಭೆ ಕರೆಯಬೇಕು ಎಂದು ಸೂಚಿಸಿದರು.
Union Home Minister @AmitShah is chairing the Regional Conference on Drug Trafficking & National Security for Southern States/UTs in Bengaluru. @santwana99 @CMofKarnataka @XpressBengaluru @KannadaPrabha @Cloudnirad @ramupatil_TNIE @mg_chetan @AshwiniMS_TNIE pic.twitter.com/33Z6FwXlmy — Nagaraja Gadekal (@gadekal2020) March 24, 2023

ಚುನಾವಣೆ ಪೂರ್ವ ಮತ್ತು ಚುನಾವಣಾ ನೀತಿ ಸಂಹಿತೆಗೆ ಸಿದ್ಧತೆ ಮಾಡಿಕೊಳ್ಳಿ: ಮುಖ್ಯ ಚುನಾವಣಾಧಿಕಾರಿ ಸೂಚನೆ
ಕರ್ನಾಟಕ ವಿಧಾನಸಭಾ 2023ಕ್ಕೆ ಇನ್ನೊಂದು ತಿಂಗಳು ಬಾಕಿಯಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿವೆ. ಪ್ರಚಾರ ಕಾರ್ಯವನ್ನು ಕೂಡ ಆರಂಭಿಸಿವೆ. ಬೆಂಗಳೂರು: ಕರ್ನಾಟಕ ವಿಧಾನಸಭಾ 2023ಕ್ಕೆ ಇನ್ನೊಂದು ತಿಂಗಳು ಬಾಕಿಯಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿವೆ. ಪ್ರಚಾರ ಕಾರ್ಯವನ್ನು ಕೂಡ ಆರಂಭಿಸಿವೆ.
ಮೇ ತಿಂಗಳ ಎರಡನೇ ವಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ(Election Commission) ಪತ್ರದ ಮೂಲಕ ತುರ್ತು ಸೂಚನೆ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ(Code of Conduct) ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಪತ್ರದಲ್ಲಿ ಸಂದೇಶ ನೀಡಿದ್ದು, ಯಾವುದೇ ಕ್ಷಣಗಳಲ್ಲಿ ಚುನಾವಣೆ ಘೋಷಣೆಯಾಗಬಹುದು. ಹೀಗಾಗಿ ಚುನಾವಣಾ ನೀತಿ ಸಂಹಿತೆ ಪ್ರಕ್ರಿಯೆಗಳನ್ನು ಸಿದ್ದವಿಟ್ಟುಕೊಳ್ಳಿ ಎಂದು ಸೂಚಿಸಲಾಗಿದೆ.
ಇದೇ ಮಾರ್ಚ್ 27 ಅಥವಾ 28ರಂದು ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ, ನೀತಿ ಸಂಹಿತೆ ಜಾರಿಯ ಬಗ್ಗೆ ಪ್ರಕಟಿಸುವ ಸಾಧ್ಯತೆಯಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರು ನವದೆಹಲಿಯಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದ್ದು, ತಕ್ಷಣ ನೀತಿ ಸಂಹಿತೆ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ಭಟ್ಕಳ: ಮುಸ್ಲಿಂ ಅಭ್ಯರ್ಥಿಗಳ ಬೆಂಬಲಿಸದಿರಲು ತಂಝೀಮ್ ನಿರ್ಣಯ, ಮಹಿಳೆಯರಿಂದ ಪ್ರತಿಭಟನೆ
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸದೇ ಜಾತ್ಯತೀತ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಭಟ್ಕಳ ತಂಝೀಮ್ ನಿರ್ಣಯ ಕೈಗೊಂಡಿದೆ ಎಂದು ತಿಳಿದುಬಂದಿದೆ. ಭಟ್ಕಳ (ಉತ್ತರ ಕನ್ನಡ): ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸದೇ ಜಾತ್ಯತೀತ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಭಟ್ಕಳ ತಂಝೀಮ್ ನಿರ್ಣಯ ಕೈಗೊಂಡಿದೆ ಎಂದು ತಿಳಿದುಬಂದಿದೆ.
"ಸಮುದಾಯ ಸದಸ್ಯರ ಹಿತಾಸಕ್ತಿ ಮತ್ತು ಕೋಮುವಾದಿ ಶಕ್ತಿಗಳನ್ನು ದೂರವಿಡಲು" ಸಂಸ್ಥೆಯು ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
"ಮಾರ್ಚ್ 20 ರಂದು ಸಭೆ ನಡೆದಿದ್ದು, ಕಳೆದ ಎರಡು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಂಝೀಮ್ನ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ನೇತೃತ್ವದಲ್ಲಿ ಸಭೆ ನಡೆದಿರುವುದು ಕುತೂಹಲ ಮೂಡಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಮತಗಳಲ್ಲಿ ಯಾವುದೇ ರೀತಿಯ ವಿಭಜನೆಯಾಗದಂತೆ ನೋಡಿಕೊಳ್ಳಲು ಜಾತ್ಯಾತೀತ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಸಂಸ್ಥೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ತಂಝೀಮ್ ಸಂಸ್ಥೆಯ ಈ ನಿರ್ಧಾರವು ಆಮ್ ಆದ್ಮಿ ಪಕ್ಷ ಮತ್ತು ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಂತಹ ಪಕ್ಷಗಳಿಗೆ ಆಘಾತವನ್ನು ತಂದಿದೆ.
ಇದನ್ನೂ ಓದಿ: ತಾವೇ ತೋಡಿದ ಹಳ್ಳದಲ್ಲಿ ಇಂಥವರು ಬಿದ್ದಾಗ, ಅಯ್ಯೋ ಪಾಪ ಎಂದೆನಿಸುತ್ತಷ್ಟೆ: ಸಿಟಿ ರವಿಗೆ ಜೆಡಿಎಸ್ ಟಾಂಗ್
ಎಎಪಿ ಈಗಾಗಲೇ ಭಟ್ಕಳದಿಂದ ಮುಸ್ಲಿಂ ಅಭ್ಯರ್ಥಿಯನ್ನು ಘೋಷಿಸಿದ್ದು, ಎಸ್ಡಿಪಿಐ ಕೂಡ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿತ್ತು.
ಭಟ್ಕಳ-ಹೊನ್ನಾವರ ಕ್ಷೇತ್ರವು ಸುಮಾರು 50,000 ಮುಸ್ಲಿಮರು ಸೇರಿದಂತೆ 1.85 ಲಕ್ಷ ಜನಸಂಖ್ಯೆಯನ್ನು ಹೊಂದಿದೆ, ಇದರಲ್ಲಿ ನವ್ಯ ಮತ್ತು ದಕ್ಕಣಿ ಮುಸ್ಲಿಮರು ಸೇರಿದ್ದಾರೆ. ಸುಮಾರು 100 ಸಂಖ್ಯೆಯ ತಂಝೀಮ್ ಸದಸ್ಯರು ಆಯಾ ಪ್ರದೇಶದ ಮಸೀದಿಗಳಿಂದ ಚುನಾಯಿತರಾಗಿದ್ದಾರೆ. “ಸುಮಾರು 80 ಸದಸ್ಯರನ್ನು ಹೊಂದಿರುವ ಯಾವುದೇ ಮಸೀದಿಯು ತಂಝೀಮ್ನಲ್ಲಿ ಪ್ರಾತಿನಿಧ್ಯವನ್ನು ಹೊಂದಿರುತ್ತದೆ. ಹೆಚ್ಚು ಸದಸ್ಯರನ್ನು ಹೊಂದಿರುವ ಮಸೀದಿಗಳು ಒಂದಕ್ಕಿಂತ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿರುತ್ತದೆ ಎಂದು ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಇನಾಯತುಲ್ಲಾ ಗವಾಯಿ ವಿವರಿಸಿದರು.
ಏತನ್ಮಧ್ಯೆ, ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸದಿರುವ ನಿರ್ಧಾರವನ್ನು ವಿರೋಧಿಸಿ ಭಟ್ಕಳದಲ್ಲಿ ಮಹಿಳೆಯರು ಬುಧವಾರ ತಂಝೀಮ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ತಂಝೀಮ್ ತನ್ನ ನಿರ್ಧಾರವನ್ನು ಬದಲಾಯಿಸದಿದ್ದರೆ ಚುನಾವಣೆಯಲ್ಲಿ ನೋಟಾ ಆಯ್ಕೆ ಮಾಡುತ್ತೇವೆ ಎಂದು ಮಹಿಳೆಯರು ಹೇಳಿದ್ದಾರೆ. ತಂಝೀಮ್ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮಹಿಳೆಯರು ಘೋಷಣಾ ವಾಕ್ಯಗಳನ್ನು ಕೂಗಿದ್ದಾರೆ. ಅಲ್ಲದೆ, ನಿರ್ಣಯ ಹಿಂಪಡೆಯುವಂತೆ ತಂಝೀಮ್ ಸಂಸ್ಥೆಗೆ ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ.
ಕೆರೆಯ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲ: ನೀರಾವರಿ ಇಲಾಖೆಗೆ ರೂ.50 ಕೋಟಿ ದಂಡ ವಿಧಿಸಿದ ಎನ್ಜಿಟಿ!
ಕೆರೆಗಳಲ್ಲಿ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲವಾದ ರಾಜ್ಯ ನೀರಾವರಿ ಇಲಾಖೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ರೂ.50 ಕೋಟಿ ದಂಡ ವಿಧಿಸಿದೆ. ಬೆಂಗಳೂರು: ಕೆರೆಗಳಲ್ಲಿ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲವಾದ ರಾಜ್ಯ ನೀರಾವರಿ ಇಲಾಖೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ರೂ.50 ಕೋಟಿ ದಂಡ ವಿಧಿಸಿದೆ.
ಮಂಗಳೂರಿನ ಫಲ್ಗುಣಿ ನದಿಯ ಅದ್ಯಪಾಡಿ ಅಣೆಕಟ್ಟು ಮತ್ತು ಬಂಟ್ವಾಳದ ನೇತ್ರಾವತಿ ನದಿಯ ಶಂಬೂರು ಅಣೆಕಟ್ಟಿನ ಹಿನ್ನೀರಿನಿಂದ 14,51,680 ಮೆಟ್ರಿಕ್ ಟನ್ ಮರಳನ್ನು ತೆಗೆಯುವ ಪ್ರಕರಣದ ವಿಚಾರಣೆಯನ್ನು ಎನ್ಜಿಟಿ ನಡೆಸುತ್ತಿದೆ.
ವಾಣಿಜ್ಯ ಉದ್ದೇಶಕ್ಕಾಗಿ ಜಲಮೂಲಗಳಿಂದ ಮರಳು, ಹೂಳನ್ನು ತೆಗೆದರೆ, ಅದಕ್ಕೆ ಪರಿಸರದ ಅನುಮತಿ ಅಗತ್ಯವಿದೆ ಎಂದು ಹಲವು ಬಾರಿ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ: ಕರ್ನಾಟಕಕ್ಕೆ 2,900 ಕೋಟಿ ರೂ. ದಂಡ ವಿಧಿಸಿದ ಎನ್ಜಿಟಿ
ಇದೇ ವೇಳೆ ಮೇ 5, 2020 ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ ಮರಳು ನೀತಿಯನ್ನು ನ್ಯಾಯಮಂಡಳಿ ಗಮನಿಸಿತು.
ಪರಿಸರ ಸಚಿವಾಲಯದ ಸುಸ್ಥಿರ ಮರಳು ಗಣಿಗಾರಿಕೆ ಮಾರ್ಗಸೂಚಿಗಳು 2016, ಗಣಿಗಾರಿಕೆ ಕಾರ್ಯಾಚರಣೆಯ ಮೂಲಕ ಮರಳು ತೆಗೆಯುವುದನ್ನು ಒಳಗೊಂಡಿರುವ ಮರಳು-ಹೂಳೆತ್ತುವ ಕಾರ್ಯಗಳನ್ನು ವಿವರಿಸುತ್ತದೆ. ಹೂಳು ತೆಗೆದ ವಸ್ತುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದಾಗ ಪರಿಸರ ತೆರವು ಅಗತ್ಯ ಎಂದು ಎನ್ಜಿಟಿ ಪದೇ ಪದೇ ಆದೇಶ ನೀಡಿದ್ದರೂ, ಜಿಲ್ಲಾಧಿಕಾರಿಗಳ ಪ್ರಸ್ತುತ ಆದೇಶಗಳು ಸಂಪೂರ್ಣ ಉಲ್ಲಂಘನೆಯಾಗಿದೆ.
ಇಐಎ ಅಧಿಸೂಚನೆ 2006 ಪ್ರಕಾರ ನಿರ್ವಹಣೆ ಮತ್ತು ವಿಪತ್ತು ನಿರ್ವಹಣೆಯ ಉದ್ದೇಶಕ್ಕಾಗಿ ಮಾತ್ರ ಅಣೆಕಟ್ಟುಗಳ ಹೂಳೆತ್ತುವಿಕೆ ಮತ್ತು ಮರಳು ತೆಗೆಯಲು ವಿನಾಯಿತಿ ಇದೆ. ಇಲ್ಲಿ ವಾಣಿಜ್ಯ ಉದ್ದೇಶಕ್ಕೆ ಮರಳು ಗಣಿಗಾರಿಕೆ ನಡೆಸಬಾರದು. ವಾಣಿಜ್ಯ ಉದ್ದೇಶಕ್ಕೆ ಮರಳು ಗಣಿಗಾರಿಕೆ ನಡೆಸಿದರೆ, ಅದಕ್ಕೆ ಪರಿಸರ ಅನುಮತಿ ಪಡೆಯಬೇಕು ಎಂದು ಹೇಳಿದೆ. ಅಲ್ಲದೆ, ಜಲ ಮೂಲಗಳಿಂದ ಹೂಳೆತ್ತುವುದು/ಮರಳು ತೆಗೆಯುವ ಮೊದಲು ಪರಿಸರ ಅನುಮತಿ ಪಡೆಯುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿದೆ ಆದೇಶಿಸಿತು.
ಎಸ್ಟಿ, ಎಸ್ಸಿ ಮೀಸಲಾತಿ ವಿಳಂಬ ಖಂಡಿಸಿ ರಾಜಭವನ ಚಲೋ: ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ವಶಕ್ಕೆ ಪಡೆದ ಪೊಲೀಸರು
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದರೂ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿಲ್ಲ ಎಂದು ಆರೋಪಿಸಿ ರಾಜಭವನ ಚಲೋ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದರೂ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿಲ್ಲ ಎಂದು ಆರೋಪಿಸಿ ರಾಜಭವನ ಚಲೋ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ತೆರಳಲು ಮುಂದಾದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಮಾರ್ಗದ ಮಧ್ಯೆಯೇ ತಡೆದರು.
ಇದನ್ನೂ ಓದಿ: ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕೊನೆಯ ಸಚಿವ ಸಂಪುಟ ಸಭೆ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಸಾಧ್ಯತೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಸೇರಿದಂತೆ ಹಲವಾರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಸದ್ಯ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಬಸ್ನಲ್ಲಿ ಕರೆದುಕೊಂಡು ಹೋಗಿದ್ದಾರೆ.
ವಶಕ್ಕೆ ಪಡೆಯುವುದಕ್ಕೆ ಮುನ್ನ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೋಸ ಮಾಡಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಅವರು ನಾವು ಪ್ರತಿಭಟನೆಗೆ ಮುಂದಾದ ಬಳಿ ಇವತ್ತು ಕಳುಹಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ಸಮೀಪ ನಾಲೆಡ್ಜ್ ಸಿಟಿ ನಿರ್ಮಿಸಲು ಸರ್ಕಾರ ಚಿಂತನೆ!
ಬೆಂಗಳೂರು ನಗರದ ಸಮೀಪ ಸುಮಾರು 2,000 ಎಕರೆಯಷ್ಟು ಬೃಹತ್ ಕ್ಯಾಂಪಸ್ ನಲ್ಲಿ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಎಲ್ಲಾ ಟಾಪ್ ವಿಶ್ವವಿದ್ಯಾಲಯಗಳೂ ಇರುವಂತಹ ನಾಲೆಡ್ಜ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಬೆಂಗಳೂರು: ಬೆಂಗಳೂರು ನಗರದ ಸಮೀಪ ಸುಮಾರು 2,000 ಎಕರೆಯಷ್ಟು ಬೃಹತ್ ಕ್ಯಾಂಪಸ್ ನಲ್ಲಿ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಎಲ್ಲಾ ಟಾಪ್ ವಿಶ್ವವಿದ್ಯಾಲಯಗಳೂ ಇರುವಂತಹ ನಾಲೆಡ್ಜ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ.
ಗುರುವಾರ ನೂತನ ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯ ಆವರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒಂದೇ ಪ್ರದೇಶದಲ್ಲಿ ಸ್ಥಾಪಿಸಲು ನಾಲೆಡ್ಜ್ ಸಿಟಿ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಇದನ್ನೂ ಓದಿ: ಡಾ.ಪುನೀತ್ರಾಜ್ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಚಾಲನೆ
ಈ ನಾಲೆಡ್ಜ್ ಸಿಟಿಯಲ್ಲಿ ದೇಶ ಹಾಗೂ ವಿದೇಶಗಳ ವಿವಿಗಳು ಇರಲಿವೆ. ಈ ಪ್ರದೇಶವನ್ನು ಬೆಂಗಳೂರು ಶಿಕ್ಷಣ ಜಿಲ್ಲೆಯಾಗಿ ಅಭಿವೃದ್ಧಿಪಡಿಸಲಾಗುವುದು. ಇದು ಯಶಸ್ವಿಯಾದರೆ, ಈ ಪರಿಕಲ್ಪನೆಯನ್ನು ರಾಜ್ಯದ ಉಳಿದ ಭಾಗಗಳಿಗೆ ವಿಸ್ತರಿಸಲಾಗುವುದು. ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಲು ಬೆಂಗಳೂರು ಸಮೀಪ ನಾಲೆಡ್ಜ್ ಸಿಟಿ ನಿರ್ಮಿಸಿಲುವುದು ನಮ್ಮ ಕನಸಾಗಿದೆ ಎಂದು ತಿಳಿಸಿದರು.
ಶೈಕ್ಷಣಿಕ ಜಿಲ್ಲೆ ರಚಿಸಲು ಹಲವು ವರ್ಷಗಳ ಹಿಂದೆಯೇ ಚಿಂತನೆ ನಡೆಸಲಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯು ಇದಕ್ಕೆ ಸಹಾಯ ಮಾಡಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರು ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯಮಶೀಲತೆಯ ನಡುವೆ ಅಂತರವಿದ್ದು, ಅದನ್ನು ಪರಿಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳು ಬದಲಾವಣೆಯತ್ತ ಸಾಗಲು ಇದು ಸಹಾಯ ಮಾಡುತ್ತದೆ, ವಿಶೇಷವಾಗಿ ವಿದೇಶಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಮ್ಮದೇ ಆದ ಕ್ಯಾಂಪಸ್ಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
'ಕಂಟ್ರೋಲ್ ರೂಮ್' ಸ್ಥಾಪಿಸಿ ಮತಕ್ಕಾಗಿ ಆಮಿಷ ಒಡ್ಡುವವರ ವಿರುದ್ಧ ಕ್ರಮಕ್ಕೆ ಚು.ಆಯೋಗ ಮುಂದು!
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ನಡುವಲ್ಲೇ ರಾಜಕೀಯ ನಾಯಕರು ಮತಕ್ಕಾಗಿ ಹಣ, ಉಡುಗೊರೆಯ ಆಮಿಷಗಳ ಒಡ್ಡುವಂತಹ ಬೆಳವಣಿಗೆಗಳು ಕಂಡು ಬರುತ್ತಿವೆ. ಇಂತಹ ಆಮಿಷಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದ್ದು, ದೂರುಗಳ ಸ್ವೀಕರಿಸಲು ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ನಡುವಲ್ಲೇ ರಾಜಕೀಯ ನಾಯಕರು ಮತಕ್ಕಾಗಿ ಹಣ, ಉಡುಗೊರೆಯ ಆಮಿಷಗಳ ಒಡ್ಡುವಂತಹ ಬೆಳವಣಿಗೆಗಳು ಕಂಡು ಬರುತ್ತಿವೆ. ಇಂತಹ ಆಮಿಷಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದ್ದು, ದೂರುಗಳ ಸ್ವೀಕರಿಸಲು ನಿಯಂತ್ರಣ ಕೊಠಡಿಯನ್ನು ತೆರೆದಿದೆ.
2023 ರ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ನಡವಳಿಕೆಯನ್ನು ಹಾಳುಮಾಡಲು ಬಳಸಲಾಗುವ ನಗದು, ಚಿನ್ನಾಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಸಾಗಣೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವ ಜವಾಬ್ದಾರಿಯನ್ನು ಐಟಿ ಇಲಾಖೆಯ ವಿಭಾಗಕ್ಕೆ ಭಾರತೀಯ ಚುನಾವಣಾ ಆಯೋಗಕ್ಕೆ ನೀಡಿದೆ.
ಇದನ್ನೂ ಓದಿ: ನಗರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಮುಂದು!
ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊತ್ತುಕೊಂಡಿರುವ ಐಟಿ ಇಲಾಖೆಯ ನಿಯಂತ್ರಣ ಕೊಠಡಿ ಮತದಾನ ದಿನಾಂಕದವರೆಗೆ 24*7ರಂತೆ ಕಾರ್ಯನಿರ್ವಹಿಸಲಿದೆ. ಯಾವುದೇ ವ್ಯಕ್ತಿ, ಪಕ್ಷ ಉಚಿತ ಉಡುಗೊರೆ, ನಗದು ನೀಡುತ್ತಿರುವುದು ಕಂಡು ಬಂದರೆ, ಟೋಲ್-ಫ್ರೀ ಫೋನ್ ಸಂಖ್ಯೆಗಳನ್ನು ಸಂಪರ್ಕಿಸುವ ಮೂಲಕ ಅಥವಾ ಇ-ಮೇಲ್ ಮೂಲಕ ದೂರುಗಳನ್ನು ನೀಡಬಹುದಾಗಿದೆ.
"ಮಾಹಿತಿ ಹಂಚಿಕೊಳ್ಳುವ ವ್ಯಕ್ತಿಗಳ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಎಲ್ಲಾ ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಮತ್ತು ನೈಜ ಮಾಹಿತಿಯನ್ನು ಹಂಚಿಕೊಳ್ಳುವಂತೆ ವಿನಂತಿಸಲಾಗಿದೆ" ಎಂದು ಐಟಿ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೂರು ನೀಡುವವರು ಟೋಲ್ ಫ್ರೀ ಸಂಖ್ಯೆ 1800-425 -2115/ 080-22861126, ಫ್ಯಾಕ್ಸ್ ಸಂಖ್ಯೆ 080-22866916, ಮೊಬೈಲ್ ಸಂಖ್ಯೆಗಳು 8277422825/ 8277413614, ಇ-ಮೇಲ್ cleankarnatakaelection@incometax.gov.in ಮೂಲಕ ದೂರು ನೀಡಬಹುದು
Credits : K.Prabha
Subscribe , Follow on