"ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್|| "
ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣ ನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹು ದಾದ ದಿವ್ಯಮಂತ್ರವಾಗಿದೆ
 ಬೆಳಕಿನ ಪ್ರತೀಕವಾದ ಸೂರ್ಯದೇವ ನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ. ಒಟ್ಟು 24 ಅಕ್ಷರಗಳನ್ನು ಒಳಗೊಂಡಿ ರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದಲ್ಲಿರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ. ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ.ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿ ರೂಪನ ಭಕ್ತಿಯುತ ಪೂಜೆಗೆ ಇದು ನಾಂದಿಯಾಗಿರುತ್ತದೆ. ಮಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು ಗಾಯತ್ರಿ ಮಂತ್ರ ಎಂಬ ಪ್ರತೀತಿ ಇದೆ. ಇದರಲ್ಲಿರುವ ಸಂದೇಶ, ಈ ಮಂತ್ರಕ್ಕೆ ಬಳಸಿರುವ ಸ್ವರಗಳು, ಈ ಮಂತ್ರ ಪಠಿಸುವಾಗ ಆಗುವ ಧ್ವನಿಯ ಏರಿಳಿತ, ಶ್ವಾಸೋಚ್ಛ್ವಾಸದ ಮೇಲಾಗುವ ಪರಿಣಾಮ, ಕೊನೆಗೆ ಇದರಿಂದ ಮೆದುಳಿನ ಮೇಲೆ ಹಾಗೂ ದೇಹದ ಆರೋಗ್ಯದ ಮೇಲಾಗುವ ಪ್ರಭಾವವನ್ನು ಗಮನಿಸಿಯೇ ಇದಕ್ಕೆ ಪರಮ ಮಂತ್ರದ ಪಟ್ಟ ನೀಡಲಾಗಿದೆ. ವಿಶ್ವಾಮಿತ್ರ ರಚಿಸಿದ, ಋಗ್ವೇದದಲ್ಲಿ ಗಾಯತ್ರಿ ಎಂಬ ಛಂದಸ್ಸಿನಲ್ಲಿರುವ ಮಂತ್ರ ಇದಾಗಿರುವುದರಿಂದ ಇದಕ್ಕೆ ಗಾಯತ್ರಿ ಮಂತ್ರ ಎಂಬ ಹೆಸರು ರೂಢಿಯಲ್ಲಿದೆ. ‘ನಮ್ಮ ಬೌದ್ಧಿಕ ಶಕ್ತಿಯನ್ನು ಬೆಳಗು’ ಎಂದು ಸೂರ್ಯನನ್ನು ಪ್ರಾರ್ಥಿಸುವ ಮಂತ್ರವಿದು. ಹಾಗಾಗಿ ಇದಕ್ಕೆ ಸಾವಿತ್ರಿ ಅಥವಾ ಸವಿತೃ ಮಂತ್ರ ಎಂಬ ಹೆಸರೂ ಇದೆ.
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ  

 Facebook
Facebook Instagram
Instagram YouTube
YouTube Twitter
Twitter LinkedIn
LinkedIn WhatsApp
WhatsApp
Subscribe , Follow on