-->
MENU 🏠 HOME 🔍 SEARCH ThinkBangalore 🔖 FOLLOW
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

Timepass - ಲೈಫ್ ಈಸ್ ಬ್ಯುಟಿಫುಲ್

 

*ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ..ಅದು ಉಪ್ಪನ್ನು ಹೀರ್ಕೊಳುತ್ತೆ.*
ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ ...ಸಾಲದ ಹೊರೆಯೇರಿದಾಗ ತೀರ್ಸೋಕೆ.

*ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್ಣೀರು ಬರಲ್ಲ.*
ದುಃಖದಿಂದ ಕಣ್ಣೀರು ಬಂದಾಗ ,ನೀರು ಕುಡಿದು ಜೋರಾಗಿ ನಕ್ಕರೆ ಕಣ್ಣೀರು ಕಾಣೋಲ್ಲ

*ಎಷ್ಟೊತ್ತಾದರೂ ಕುಕ್ಕರ್ ಕೂಗ್ತಾ ಇಲ್ಲ ಅಂದ್ರೆ ಒಳಗೆ ತಳ ಹಿಡೀತಿದೆ ಅಂತ ಅರ್ಥ*
ಏನ್ ಕೇಳಿದ್ರೂ ಹೆಂಡ್ತಿ ಮೌನವಾಗಿದಾಳೆ ಅಂದ್ರೆ ಒಳಗೆ ಉರೀತಿದೆ ಅಂತ ಅರ್ಥ.

*ಬೇಳೆ  ಬೇಯೋಕೆ ಚಿಟಿಕೆ ಅರಿಶಿನ,ಮಿಳ್ಳೆ ಎಣ್ಣೆ ಸಹಕಾರಿ.*
ಬದುಕು ಅಂದಗಾಣಿಸೋಕೆ ಹಿಡಿಯಷ್ಟು ಪ್ರೀತಿ ,ಮುಷ್ಟಿಯಷ್ಟು ಕಾಳಜಿ ಸಹಕಾರಿ.

*ಹಿಟ್ಟು ಚೆನ್ನಾಗಿ ನಾದಿದರೆ ಜೋಳದ ರೊಟ್ಟಿ  ಹರಿಯೋಲ್ಲ ಹೇಗೆ ತಟ್ಟಿದರೂ*
ಸಂಬಂಧಗಳೂ ಹಾಗೇನೆ ,  ನಾದಿ ಹದವಾಗಿದ್ದರೆ ತಟ್ಟಿದರೂ ,ಲಟ್ಟಿಸಿದರೂ, ಬಿಸಿಮೇಲೆ ಬೇಯಿಸಿದರೂ ಹರಿಯೋಲ್ಲ .

*ಅಲಸಂದೆ ,ಹುರುಳಿ, ಹೆಸರಿನಂತಹ ಕಾಳುಗಳನ್ನು ನೀರಿಗೆ ಹಾಕಿದಾಗ ಜೊಳ್ಳು ತೇಲುತ್ತದೆ*
ಗೆಳೆಯರೂ ಹಾಗೇ ಅಲ್ವಾ, ನಾವು ತಾಪತ್ರಯದ ನೀರಿಗೆ ಬಿದ್ದಾಗ ಜೊಳ್ಯಾರು ,ಗಟ್ಟಿ ಯಾರು ಅಂತ ಗೊತ್ತಾಗತ್ತೆ.

*ಕಾಫಿ ಬಟ್ಟಲು ಖಾಲಿಯಾಗಿ ಕೊನೇಲಿ ಉಳಿಯೋ ಕಾಫಿ ಬಸಿಯೋಕೆ ತುಂಬ ರುಚಿ*
ಗಳಿಸಿದ್ದ ಗೆಳೆತನ,ಪ್ರೀತಿ,  ಆಸ್ತಿ ನೂ  ಹಾಗೇ ಕಳ್ದೋಗುತ್ತೆ ಅನ್ನೋವಾಗ ನಂಟಿನ ಅಂಟು ಜಾಸ್ತಿಯಾಗುತ್ತೆ.

*ಅಗ್ಗಿಷ್ಟಿಕೇಲಿ ಅಡುಗೆ ಮಾಡೋವಾಗ ಪಾತ್ರೆ ತಳಕ್ಕೆ ಬೂದೀನೋ ಅಕ್ಕಿಹಿಟ್ಟೋ ಹಚ್ತೀವಿ ಪಾತ್ರೆ ಮಸಿ  ಹಿಡೀದಿರ್ಲಿ ಅಂತ*
ಅನವಶ್ಯಕ ನಿಂದನೆಗಳಿಗೂ ಹಾಗೇ, ನಿರ್ಲಕ್ಷ್ಯ ದ ಕೋಟಿಂಗ್ ಮಾಡಿಬಿಡಬೇಕು ..ನೋವು ಅಂಟೋಲ್ಲ, ಅಂಟಿದರೂ ಕೊಡವಿದರೆ ಉದುರಿಹೋಗುತ್ತೆ..

*ಸಾರು ಹುಳೀ ಕುದ್ಯೋವಾಗ  ಚೂರು ಬೆಲ್ಲ  ಹಾಕ್ತೀವಿ ಘಾಟು ಹೋಗೋಕೆ*
ದಾಂಪತ್ಯದಲ್ಲೂ ತುಸು ಸೈರಣೆ ಬೆರೆಸಿ ,ಕಲಹದ ಘಾಟು ತಡ್ಯೋಕೆ.

*ಹಾಲು ಒಡೆದರೆ ಸಂಸ್ಕರಿಸಿ ಖೋವಾನೋ ಪನೀರನ್ನೋ ಮಾಡಬಹುದು..*
ಸಂಬಂಧ ಒಡೆದರೆ ಹೀಗ್ಮಾಡೋಕಾಗೋಲ್ಲ...ಜೋಪಾನ 

*ಕಾದ ಎಣ್ಣೆಗೆ ಸಣ್ಣ ಹನಿ ನೀರು ಸಿಡಿದ್ರೂ ಚಟಪಟ ಚಟಪಟ ಅಂತ ಬೈಯುತ್ತೆ...*
ನೊಂದ ಮನಸ್ಸೂ ಹಾಗೇನೆ ಸಣ್ಣ ಸಣ್ಣ ಮಾತಿಗೆಲ್ಲ
ಸಿಡಿದೇಳತ್ತೆ.

*ಮಾಡಿಟ್ಟ ಅಡುಗೇಲಿ ಪದೇ ಪದೇ ಕೈಯಾಡಿಸ್ತಾ ಇದ್ರೆ ,ಬೇಗ ಹಳಸೋಗತ್ತೆ...*
ಹಳೇ ವಿಚಾರಗಳನ್ನು ಪದೇ ಪದೇ ಕೆದಕ್ತಾ ಇದ್ರೂ ಅಷ್ಟೇ, ಸಂಬಂಧ ಹಳಸುತ್ತೆ.

*ಫ್ರಿಡ್ಜಲ್ಲಿಟ್ಟ ಹಲಸಿನ ತೊಳೆ, ಅಲ್ಲಿರೋ ಎಲ್ಲ ವಸ್ತುವಿನೊಳಗೂ ತನ್ನ ಸುವಾಸನೆ ಸೇರಿಸಿಬಿಡುತ್ತೆ.*
 ಸಹೃದಯರೂ ಹಾಗೇ ಅಲ್ವಾ, ತಾವಿರೋ ತಾವಿನಲ್ಲೆಲ್ಲ ಸಜ್ಜನಿಕೆ  ಹರಡ್ತಾರೆ..

*ಸಿಹಿ ತಿಂಡಿ ಮಧುಮೇಹ ಹೆಚ್ಚು ಮಾಡುತ್ತೆ* *ಕಹಿ ಹಾಗಲ,ಮೆಂತ್ಯ, ಅಮೃತ ಬಳ್ಳಿ ಈ ರೋಗಕ್ಕೆ ಔಷಧಿಯಂತೆ* ಕೆಲವರ ಮಾತುಗಳೂ ಹಾಗೇನೇ,ಸಿಹಿಯಲ್ಲಿ ಕುಟಿಲ ,ಕಹಿಯಲ್ಲಿ ಕಾಳಜಿ. *ಮೊಸರನ್ನ ಉಪ್ಪಿನ ಕಾಯಿ , ಊಟ ಮುಗಿಸಿ ತಟ್ಟೆ ಬಳಿದು ಕೈ ಬೆರಳುಗಳನ್ನು ಸಂಕೋಚವಿಲ್ಲದೇ ನೆಕ್ಕಬೇಕು..* ಬದುಕನ್ನೂ ಹಾಗೇ ,ಸಣ್ಣ ಸಣ್ಣ ಖುಷಿ ಅನುಭವಿಸುತ್ತಾ ಬದುಕಬೇಕು. *ಲೈಫ್ ಈಸ್ ಬ್ಯುಟಿಫುಲ್ BUT ನಾವು ಹೇಗೆ ಸ್ವೀಕಾರ ಮಾಡ್ತೀವಿ ಅನ್ನೋದರ ಮೇಲೆ ಅವಲಂಬಿಸಿದೆ*
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ  
–>