-->

ನಮ್ಮ ಜೀವನದಲ್ಲಿ ಗುರುಗಳ ಮಹತ್ವ - Importance of Guru in our life

 "ಭಾರತ ದೇಶದ ವೈಶಿಷ್ಟ್ಯ ಎಂದರೆ ಗುರು-ಶಿಷ್ಯ ಪರಂಪರೆ !"

೧. *ಗುರುಗಳ ಮಹತ್ವ ಮತ್ತು "ಗುರು" ಈ ಶಬ್ದದ ಅರ್ಥ*

ನಮ್ಮ ದೇಶದ ವೈಶಿಷ್ಟ್ಯ ಎಂದರೆ ಗುರು-ಶಿಷ್ಯ ಪರಂಪರೆ. ಗುರುಗಳೇ ನಮ್ಮನ್ನು ಅಜ್ಞಾನದಿಂದ ಹೊರಗೆ ತೆಗೆಯುತ್ತಾರೆ. ಶಿಕ್ಷಕರು ನಮ್ಮ ಗುರುಗಳೇ ಆಗಿದ್ದಾರೆ. ಅದಕ್ಕೆ ನಾವು ಗುರುಪೂರ್ಣಿಮೆಯ ದಿನದಂದು "ಗುರು ವಂದನೆ" ಯನ್ನು ಆಚರಿಸಿ ಅವರ ಚರಣಕ್ಕೆ ಕೃತಜ್ಞತೆಯನ್ನು ವ್ಯಕ್ತ ಮಾಡಬೇಕು. ಪ್ರಥಮವಾಗಿ "ಗುರು" ಈ ಶಬ್ದದ ಅರ್ಥವನ್ನು ತಿಳಿದುಕೊಳ್ಳೊಣ.




"ಗು" ಅಂದರೆ ಅಂಧಃಕಾರ ಮತ್ತು "ರು" ಅಂದರೆ ದೂರವಾಗಿಸುವುದು. ಗುರುಗಳು ನಮ್ಮ ಜೀವನದಲ್ಲಿನ ವಿಕಾರಗಳ ಅಜ್ಞಾನವನ್ನು ದೂರ ಮಾಡಿ, ಜೀವನವನ್ನು ಆನಂದದಿಂದ ಹೇಗೆ ಬದುಕಬೇಕು ಎಂದು ನಮಗೆ ಕಲಿಸುತ್ತಾರೆ.

೨. *ಮನುಷ್ಯನ ಜೀವನದಲ್ಲಿ ಬರುವ ಮೂರು ಗುರುಗಳು* !

೨ಅ. ನಮ್ಮ ಮೇಲೆ ವಿಧ ವಿಧವಾದ ಸಂಸ್ಕಾರ ಮಾಡಿ ನಮ್ಮನ್ನು ಸಮಾಜದೊಂದಿಗೆ ಏಕರೂಪವಾಗಲು ಕಲಿಸುವ *ತಾಯಿ-ತಂದೆ* ಇವರು ನಮ್ಮ *ಮೊದಲನೆಯ ಗುರು*! : ಬಾಲ್ಯದಲ್ಲಿ ತಾಯಿ-ತಂದೆಯರು ನಮಗೆ ಪ್ರತಿಯೊಂದು ವಿಷಯ ಕಲಿಸುತ್ತಾರೆ. ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ, ಇದರ ಅರಿವು ಮಾಡಿಸಿ ಕೊಡುತ್ತಾರೆ. ಹಾಗೆಯೇ ಒಳ್ಳೆಯ ಅಭ್ಯಾಸಗಳನ್ನು ಕಲಿಸಿಕೊಡುತ್ತಾರೆ, ಉದಾ.

೧. ಬೆಳಿಗ್ಗೆ ಬೇಗನೆ ಏಳಬೇಕು. ಭೂಮಾತೆಗೆ ವಂದನೆ ಮಾಡಬೇಕು. "ಕರಾಗ್ರೆ ವಸತೇ ಲಕ್ಷ್ಮಿ" ಈ ಶ್ಲೋಕವನ್ನು ಹೇಳಬೇಕು.

೨. ಹಿರಿಯರಿಗೆ ನಮಸ್ಕಾರ ಏಕೆ ಮತ್ತು ಹೇಗೆ ಮಾಡಬೇಕು..?

೩. ಸಾಯಂಕಾಲ "ಶುಭಂ ಕರೊತಿ" ಪಠಿಸಬೇಕು, ದೀಪ ಹಚ್ಚಬೇಕು; ಕಾರಣ ದೀಪವು ಅಂಧಃಕಾರವನ್ನು ನಷ್ಟ ಮಾಡುತ್ತದೆ.

೪. ನಾವು ನಮ್ಮ ಗೆಳೆಯರನ್ನು ಭೇಟಿ ಆದಾಗ ನಮಸ್ಕಾರ ಮಾಡಬೇಕು; ಕಾರಣ ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೇವರಿದ್ದಾನೆ.

೫. ಹಾಗೆಯೇ ನಮ್ಮ ಮನೆಗೆ ಯಾರಾದರು ನೆಂಟರು ಬಂದರೆ, ಅವರನ್ನು ದೇವರ ಸಮಾನ ಎಂದು ತಿಳಿದು ಸ್ವಾಗತ ಮಾಡಬೇಕು. ಹೀಗೆ ಎಲ್ಲ ವಿಷಯಗಳನ್ನು ತಾಯಿ-ತಂದೆಯರು ನಮಗೆ ಹೇಳುತ್ತಾರೆ, ಅಂದರೆ ನಮ್ಮ ಮೊದಲನೆಯ ಗುರು ತಾಯಿ-ತಂದೆಯರು ಇದ್ದಾರೆ; ಅದಕ್ಕೆ ನಾವು ಅವರ ಆದರ ಮಾಡಬೇಕು. ಈಗ ಹೇಳಿ, ನಿಮ್ಮಲ್ಲಿ ಎಷ್ಟು ಮಕ್ಕಳು ತಮ್ಮ ತಾಯಿ-ತಂದೆಯವರಿಗೆ ನಮಸ್ಕಾರ ಮಾಡುತ್ತೀರಿ? ಇಂದೇ ನಾವು ನಿಶ್ಚಯ ಮಾಡೋಣ, "ತಾಯಿ-ತಂದೆಯವರಿಗೆ" ನಮಸ್ಕಾರ ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಕೃತಜ್ಞತೆ.

೨ಆ. ನಮಗೆ ಅನೇಕ ವಿಷಯಗಳನ್ನು ಕಲಿಸಿ ಸರ್ವಾಂಗೀಣ ಪ್ರಗತಿ ಮಾಡುವ *ಶಿಕ್ಷಕರು*, ಇವರೇ ನಮ್ಮ *ಎರಡನೆಯ ಗುರು*! : ನಿಜವಾಗಿ ನಾವು ಶಿಕ್ಷಕರ ದಿನಾಚರಣೆಯನ್ನು ಗುರುಪೂರ್ಣಿಮೆಯಂದು ಆಚರಿಸಿ ಆ ದಿವಸ ಅವರಿಗೆ ಭಾವಪೂರ್ಣ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು. ಗುರು ಅಂದರೆ ನಮ್ಮ ಶಿಕ್ಷಕರು ಮತ್ತು ಶಿಷ್ಯ ಅಂದರೆ ನಾವಿರುತ್ತೇವೆ; ಅದಕ್ಕೆ ನಾವು ಶಿಕ್ಷಕರ ದಿನವನ್ನು ಇದೇ ದಿನ ಆಚರಣೆ ಮಾಡಬೇಕು.

ಶಿಕ್ಷಕರು ನಮಗೆ ಅನೇಕ ವಿಷಯಗಳ ಬಗ್ಗೆ ಜ್ಞಾನ ನಿಡುತ್ತಾರೆ. ಅವರು ಇತಿಹಾಸ ಕಲಿಸುತ್ತಾರೆ, ಅದರಿಂದ ಅವರು ನಮ್ಮಲ್ಲಿನ ರಾಷ್ಟ್ರಾಭಿಮಾನವನ್ನು ಜಾಗೃತ ಮಾಡುತ್ತಾರೆ. ನಾವು ಸ್ವಂತಕ್ಕೋಸ್ಕರ ಬದುಕುವುದಕ್ಕಿಂತ, ರಾಷ್ಟ್ರಕ್ಕಾಗಿ ಬದುಕಬೇಕು ಎಂಬ ವ್ಯಾಪಕ ವಿಚಾರ ನಮಗೆ ಕೊಡುತ್ತಾರೆ. ಭಗತಸಿಂಗ, ರಾಜಗುರು, ಸುಖದೇವ ಇತ್ಯಾದಿ ಕ್ರಾಂತಿಕಾರರುರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದರು, ಆ ಪ್ರಕಾರ ನಾವು ತ್ಯಾಗಿಗಳು ಆಗಬೇಕು. "ತ್ಯಾಗ, ಇದು ನಮ್ಮ ಜೀವನದ ತಳಹದಿ", ಇದನ್ನು ನಮಗೆ ಶಿಕ್ಷಕರು ಹೇಳುತ್ತಾರೆ. ತ್ಯಾಗಿ ಮಕ್ಕಳೇ ರಾಷ್ಟ್ರದ ರಕ್ಷಣೆ ಮಾಡುತ್ತಾರೆ. ಇತಿಹಾಸದಿಂದ ನಮ್ಮ ಆದರ್ಶ ನಿರ್ಧಾರ ಆಗುತ್ತದೆ, ಉದಾ: ಛತ್ರಪತಿ ಶಿವಾಜಿ ಮಹಾರಾಜ, ಸ್ವಾ. ಸಾವರಕರ ಇವರೇ ನಮ್ಮ ನಿಜವಾದ ಆದರ್ಶ ಇದ್ದಾರೆ. ಅವರಂತೆ ನಾವು ತ್ಯಾಗಿಗಳು ಆಗಬೇಕು.

ಅ.ವಿವಿಧ ವಿಷಯಗಳನ್ನು ನಿಸ್ವಾರ್ಥಿತನದಿಂದ ಕಲಿಸಿ ನಮ್ಮನ್ನು ಪ್ರಗತಿ ಪಥದಲ್ಲಿಕರೆದುಕೊಂಡು ಹೋಗುವ ನಮ್ಮ ಶಿಕ್ಷಕರು! : ಶಿಕ್ಷಕರು ನಮಗೆ ಕನ್ನಡ ಭಾಷೆಯನ್ನು ಕಲಿಸುತ್ತಾರೆ, ಅದರಿಂದ ಅವರು ನಮ್ಮಲ್ಲಿ ಮಾತೃಭಾಷೆಯ ಅಭಿಮಾನ ಜಾಗೃತ ಮಾಡುತ್ತಾರೆ ಮತ್ತು ರಾಮಾಯಣ, ಮಹಾಭಾರತ ಇಂತಹ ಗ್ರಂಥಗಳ ಅಭ್ಯಾಸ ಮಾಡುವ ಆಸಕ್ತಿಯನ್ನು ನಿರ್ಮಾಣ ಮಾಡುತ್ತಾರೆ. ಅದರಿಂದ ಅವರು ನಮಗೆ ನಮ್ಮ ಸಂತರ ಪರಿಚಯ ಮಾಡಿಕೊಡುತ್ತಾರೆ ಮತ್ತು "ಅವರಂತೆ ನಾವು ನಿರ್ಮಾಣ ಆಗಬೇಕು", ಇದಕ್ಕೋಸ್ಕರ ಪ್ರಯತ್ನ ಮಾಡುತ್ತಾರೆ. ಹಾಗೆಯೆ ಅವರು ನಮಗೆ ಸಮಾಜ ಶಾಸ್ತ್ರ,ಅರ್ಥಶಾಸ್ತ್ರ, ಈ ತರಹದ ವಿಷಯಗಳನ್ನು ಕಲಿಸುತ್ತಾರೆ. ನಾವು ಯಾವ ಸಮಾಜದಲ್ಲಿ ಇರುತ್ತೇವೆಯೋ, ಆ ಸಮಾಜದ ಋಣ ನಮ್ಮ ಮೇಲೆ ಇರುತ್ತದೆ, ಇದರ ಅರಿವು ಶಿಕ್ಷಕರು ನಮಗೆ ಮಾಡಿಕೊಡುತ್ತಾರೆ. ಅರ್ಥಶಾಸ್ತ್ರದ ಯೋಗ್ಯಮಾರ್ಗದಿಂದ (ಧರ್ಮದಿಂದ ) ಹಣ ಗಳಿಸಬೇಕು ಮತ್ತು ಅಯೋಗ್ಯ ಮಾರ್ಗದಿಂದ (ಅಧರ್ಮದಿಂದ) ಹಣ ಗಳಿಸಬಾರದು, ಇದನ್ನು ಕಲಿಸುತ್ತಾರೆ. ಇಂದು, ಭ್ರಷ್ಟಾಚಾರವು ಸಂಪೂರ್ಣ ದೇಶವನ್ನು ವ್ಯಾಪಿಸಿದೆ. ಇದೆಲ್ಲವನ್ನು ನಾವು ಬದಲಿಸಬೇಕು ಎಂದು ಶಿಕ್ಷಕರಿಗೆ ಅನಿಸುತ್ತದೆ.

ಆ. ಮಹಾನ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ದಿನ ಅಂದರೆ ಗುರುಪೂರ್ಣಿಮೆ! :ವಿದ್ಯಾರ್ಥಿ ಮಿತ್ರರೇ, ‘ಶಿಕ್ಷಕರು ನಮಗೆ ಜೀವನದಲ್ಲಿ ಅನೇಕ ಮೌಲ್ಯಗಳನ್ನು ಕಲಿಸುತ್ತಾರೆ, ಮತ್ತು ಅವುಗಳು ಕೃತಿಯಲ್ಲಿ ತರಬೇಕು ಎಂದು ಸಹಾಯ ಕೂಡ ಮಾಡುತ್ತಾರೆ. ಅದರ ಹಿಂದೆ, ನಾವೆಲ್ಲರು ಆದರ್ಶ ಜೀವನ ನಡೆಸಬೇಕು ಎಂಬ ಶುದ್ಧ ವಿಚಾರ ಇರುತ್ತದೆ’ ಎಂಬುದುನಿಮ್ಮೆಲ್ಲರಮನಸ್ಸಿಗೆಬಂದಿರಬಹುದು. ಕೆಲವು ಮಕ್ಕಳು ಶಿಕ್ಷಕರ ಚೇಷ್ಟೆ ಮಾಡುತ್ತಾರೆ, ಇದು ಪಾಪ ಇದೆ. ನಾವು ಈ ದಿನ ಅವರ ಕ್ಷಮೆ ಯಾಚಿಸಿ, ಅವರಿಗೆ ಇಂದು ಕೃತಜ್ಞತೆ ವ್ಯಕ್ತ ಮಾಡಬೇಕು.

೨ಇ.ಅಧ್ಯಾತ್ಮಿಕ ಗುರು

೨ಇಅ. ಅಧ್ಯಾತ್ಮಿಕ ಗುರುಗಳು ನಮಗೆ ಜೀವನದ ನಿಜವಾದ ಅರ್ಥವನ್ನು ತಿಳಿಸಿಕೊಡುತ್ತಾರೆ : ಇಲ್ಲಿಯ ತನಕ ಈ ಭೌತಿಕ ಜಗತ್ತಿನ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವ ಗುರುಗಳನ್ನು ನೋಡಿದೆವು. ಈಗ ನಾವು ಅಧ್ಯಾತ್ಮಿಕ ಗುರುಗಳು ಹೇಗೆ ಇರುತ್ತಾರೆ ಎಂಬುದನ್ನು ನೊಡೋಣ. *ಮೂರನೆಯ ಗುರು* ಅಂದರೆ *ಅಧ್ಯಾತ್ಮಿಕ ಗುರು*! ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಗುರುಗಳು ಬರುತ್ತಾರೆ. ಭಗವಾನ ಶ್ರೀ ಕೃಷ್ಣ-ಅರ್ಜುನ , ಶ್ರೀ ರಾಮಕೃಷ್ಣ ಪರಮಹಂಸ- ಸ್ವಾಮಿ ವಿವೇಕಾನಂದ, ಸಮರ್ಥ ರಾಮದಾಸ ಸ್ವಾಮಿ-ಶಿವಾಜಿ ಮಹಾರಾಜ ಹೀಗೆ ಗುರು-ಶಿಷ್ಯ ಪರಂಪರೆ ಇದು ನಮ್ಮ ದೇಶದ ವೈಶಿಷ್ಟ್ಯವಾಗಿದೆ.

ಅಧ್ಯಾತ್ಮಿಕ ಗುರುಗಳು ನಮಗೆ ನಮ್ಮ ನಿಜವಾದ ಪರಿಚಯ ಮಾಡಿ ಕೊಡುತ್ತಾರೆ. ನಮಗೆ ಅಜ್ಞಾನದಿಂದ ನಾನು ಒಬ್ಬ ವ್ಯಕ್ತಿ ಆಗಿದ್ದೇನೆ ಎಂದು ಅನಿಸುತ್ತದೆ; ಆದರೆ ನಿಜವಾಗಿ ನೋಡಿದರೆ ನಾವು ವ್ಯಕ್ತಿ ಆಗಿರದೆ ಆತ್ಮ ಆಗಿದ್ದೇವೆ, ಅಂದರೆ ದೇವರೇ ನಮ್ಮಲ್ಲಿ ಇದ್ದು ಪ್ರತಿಯೊಂದು ಕೃತಿ ಮಾಡುತ್ತಾರೆ; ಆದರೆ ಅಹಂಕಾರರೂಪಿ ಅಜ್ಞಾನದಿಂದ ನಮಗೆ ಪ್ರತಿಯೊಂದು ಕೃತಿಯನ್ನು ನಾವೇ ಮಾಡುತ್ತೇವೆ, ಎಂದು ಅನಿಸುತ್ತದೆ. ತಿಳಿದುಕೊಳ್ಳಿ, ಆತ್ಮವನ್ನು ನಮ್ಮಿಂದ ಬೇರೆ ಮಾಡಿದರೆ , ಆಗ ನಾವು ಏನಾದರು ಕೃತಿ ಮಾಡಬಹುದೇ? ಆಗ ದೇವರೇ ಎಲ್ಲ ಮಾಡುತ್ತಾರೆ, ಅವರು ಅನ್ನವನ್ನು ಜೀರ್ಣ ಮಾಡುತ್ತಾರೆ, ಅವರೇ ರಕ್ತ ನಿರ್ಮಾಣ ಮಾಡುತ್ತಾರೆ, ತೀವ್ರವಾಗಿ ಇದರ ಅರಿವನ್ನು ಗುರುಗಳು ನಮಗೆ ಮಾಡಿ ಕೊಡುತ್ತಾರೆ.

೨ಇಆ. ಆನಂದದಿಂದ ಇರಲು ಒಂದು ಸರಳ ಮಾರ್ಗ : ಅಂದರೆ ನಮ್ಮಿಂದ ಆಗುವ ತಪ್ಪುಗಳ ಆಳಕ್ಕೆ ಹೋಗಿ ಅದರ ಹಿಂದಿರುವ ದೋಷಗಳನ್ನು ಹುಡುಕಿಅದನ್ನು ಹೋಗಲಾಡಿಸಲು ಪ್ರಯತ್ನ ಮಾಡುವುದು. ಅಹಂಕಾರದಿಂದ ವ್ಯಕ್ತಿ ತನ್ನನ್ನು ದೇವರಿಂದ ಬೇರೆ ತಿಳಿದುಕೊಳ್ಳುತ್ತಾನೆ ಮತ್ತು ಜೀವನದಲ್ಲಿ ಸತತವಾಗಿ ದುಃಖಿ ಆಗಿರುತ್ತಾನೆ. ಆಗ ನಮ್ಮ ಜೀವನದಲ್ಲಿ ಒಬ್ಬರು ಅಧ್ಯಾತ್ಮಿಕ ಗುರುಗಳು ಬರಬೇಕು, ಅಂದರೆ ನಾವು ನಮ್ಮ ಜೀವನಕ್ಕೆ ಪ್ರಾರ್ಥನೆ, ಕೃತಜ್ಞತೆ ಮತ್ತು ನಾಮಜಪ ಇವುಗಳ ಸಾಂಗತ್ಯ ಕೊಡಬೇಕು. ನಾವು ಯಾವುದೇ ಕೆಲಸ ಕೈಯಲ್ಲಿ ತೆಗೆದುಕೊಂಡರೆ, ಪ್ರಥಮವಾಗಿ ಕೃತಜ್ಞತೆ ವ್ಯಕ್ತ ಮಾಡಬೇಕು . ಹಾಗೆಯೇ ಆ ಕೃತಿ ಒಳ್ಳೆಯದಾಗಬೇಕು ಎಂದು ಪ್ರಾರ್ಥನೆ ಮಾಡಬೇಕು. ನಮ್ಮ ಮೇಲೆ ಗುರುಗಳ ಕೃಪೆಯಾಗಬೇಕು; ಎಂದು ಪ್ರತಿದಿನ ನಮ್ಮ ಕಡೆಯಿಂದ ಆಗುವ ತಪ್ಪುಗಳನ್ನು ನೋಂದಾಯಿಸಬೇಕು ಮತ್ತು ಅದರ ಹಿಂದಿರುವ ದೋಷಗಳನ್ನು ಹುಡುಕಬೇಕು. ಇದರಿಂದ ನಮ್ಮ ದೋಷಗಳು ಬೇಗನೆ ಹೋಗುತ್ತವೆ ಮತ್ತು ನಮ್ಮಲ್ಲಿ ದೇವರ ಗುಣಗಳು ಬರುತ್ತವೆ ಹಾಗು ನಾವು ಆನಂದದಿಂದ ಬದುಕುವುವೆವು.

ಈಗ ನಾವು ದೇವರ ಚರಣಗಳಿಗೆ ಕೃತಜ್ಞತೆ ವ್ಯಕ್ತ ಮಾಡೋಣ ಮತ್ತು ನಮಗೆ ತಿಳಿದ ಎಲ್ಲಾ ಅಂಶಗಳು ನಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಆಗಲಿ, ಎಂದು ಪ್ರಾರ್ಥನೆ ಮಾಡೋಣ.                                          - 

- ಆಧಾರ ಸನಾತನ ಸಂಸ್ಥೆ

–>