-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

Our words are our friends , enemies - ಮಾತುಗಳೆ ಮಿತ್ರ , ಶತ್ರು

ದೇವರು ಸೃಷ್ಟಿದ ಅದ್ಭುತ ವಸ್ತು ಜಗತ್ತು. ಇಲ್ಲಿ ನಾವು ಸುಂದರಮಯವಾದ ಜೀವನ ಸಾಗಿಸಬೇಕಾದರೆ  ಜಗತ್ತಿನ ಸ್ವರೂಪ ತಿಳಿದುಕೊಳ್ಳಬೇಕು. ಪ್ರಪಂಚದಲ್ಲಿ ಏನಿದೆ ಅನ್ನುವುದನ್ನು ಅರಿಯಬೇಕು. ಜೀವನದಲ್ಲಿ ಬರುವಕಷ್ಟ ನೋವುಗಳನ್ನು ಎದುರಿಸುವುದನ್ನು ಕಲಿಯಬೇಕು. ನಾವು ಇಲ್ಲಿಗೆ ಬಂದಿರುವುದೇ ಕಲಿಯುವ ಗೋಸ್ಕರ. ಏನು ಕಲಿಯಬೇಕೊ ಅದನ್ನು ಮರೆಯುತ್ತಿದ್ದೇವೆ. 


 

ಅಗತ್ಯವಿಲ್ಲದನ್ನು ಕಲಿತು ಜೀವನ ಹಾಳು ಮಾಡಿಕೊಳ್ಳುತ್ತಿದ್ದೇವೆ. ಅಧ್ಯಾತ್ಮದ ಸಾಧನೆ ಮಾಡಿ ಸಂತೋಷದ ಕ್ಷಣ ಪಡೆಯಬೇಕು. ಶಾಂತಿ ಪಡೆಯುವುದೇ ಜೀವನ. ಸಾಧನೆ ಮಾಡಲು ಮಾನವ ಜನ್ಮಕ್ಕೆ ಭಗವಂತ ಸುವರ್ಣಾವಕಾಶ ಕೊಟ್ಟಿದಾನೆ. ಅದನ್ನು ಸಮರ್ಥ ವಾಗಿ ಬಳಸಿಕೊಳ್ಳಬೇಕು. ಜಗತ್ತಿನಲ್ಲಿ ಪ್ರಾಣಿ, ಪಕ್ಷಿಗಳೂ ಬದುಕುತ್ತಿವೆ. ಅವು ಬದುಕಲು ಎಷ್ಟು ಕಷ್ಟ ಪಡುತ್ತವೆ ಆದರೆ ಮನುಷ್ಯರಿಗೆ ಎಲ್ಲವನ್ನೂ ದೇವರು ಕರುಣಿಸಿದ್ದಾನೆ ಅದರ ಪ್ರಯೋಜನ ಪಡದು ನೆಮ್ಮದಿಯಿಂದ ಬಾಳಬೇಕು. ನಾವು ಜೀವನ ರೂಪಿಸಿಕೊಳ್ಳಬೇಕೆ ಹೊರತು ಕೆಡಿಸಿಕೊಳ್ಳಬಾರದು. ಜೀವನ ರೂಪಿಸಿಕೊಳ್ಳುವುದು ಹಾಗೂ ಕೆಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಕೆಟ್ಟದನ್ನು ಅನುಸರಿಸಿ ರಾಕ್ಷಸರಾಗಿ ಬದುಕುವುದಕುಂತ ಉತ್ತಮ ಕಾರ್ಯ ಮಾಡಿ ಮಹಾದೇನಾಗಲೂ ಪ್ರಯತ್ನಿಸಬೇಕು. ನಮ್ಮ ಮಾತುಗಳೆ ನಮಗೆ ಮಿತ್ರ ಮತ್ತು ಶತ್ರುಗಳಾಗುತ್ತಿವೆ. ಮಾತೇ ಮಾಣಿಕ್ಯ ಎಂಬ ಮಾತಿದೆ. ಮಾತಾಎಉವ ಮೊದಲು ಅದಿಂದ ಯಾವ ಒರಿಣಾಮ ಬೀರುತ್ತದೆ ಎಂದು ಯೋಚಿಸಬೇಕು. ಒಂದು ಸಲ ಮಾತಾಡಿದರೆ ಮರಳಿ ಪಡೆಯೊಕೆ ಆಗದು. ಮಸ್ಸು ಒಡೆಯವ ಮಾತು ಆಡಬಾರದು. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು ನಮ್ಮ ಹಿರಿಯರು ತಮ್ಮ ಅನುಭವದ ಮಾತು ಹೇಳಿದ್ದಾರೆ. ನಮ್ಮ ಮಾತು ನಮಗೆ ಶತ್ರುವಾಗಬಾರದು.
ಬದುಕುವುದೂ ಒಂದಯ ಕಲೆ. ಹೇಗೆ ಬದುಕಬೇಕು ಎಂಬುದನ್ನು ಜ್ಞಾನಿಗಳಿಂದ ಕಲಿಯಬೇಕು. ಇಷ್ಟೆಲ್ಲ ಕೊಟ್ಟರೂ ದೇವರೂ ನಮಗೇನು ಕೊಟ್ಟಿದ್ದಾನೆ ಎಂದು ಭಾವಿಸುವುದು ಅಜ್ಞಾನ. ಆಸೆ ಇರಲಿ ದ್ವೆಷಯಾಕೆ ಬೇಕು. ಹೆಚ್ಚು  ಜ್ಞಾನ ಪಡೆದಂತೆ ನಮ್ಮಲ್ಲಿ ಆಸೆ ಕಡಿಮೆಯಾಗಬೇಕು. ಜಗತ್ತನ್ನು ಸುಂದರಗೊಳಿಸಿ ಹೋಗಬೇಕು ಕೆಡಿಸಿ ಹೋಗೊವುದಲ್ಲ. 


ಜೀವನ ಎಂದರೆ ಸಮಯದ್ರ ಇದ್ದಂತೆ ಸಮುದ್ರದಲ್ಲಿ ಅನೇಕ ಜಲಚರ ಪ್ರಾಣಿಗಳಿರುತ್ತವೆ. ಅವುಗಳ ಬಾಯಿಗೆ ಸಿಗದೇ ಸಾಗರ  ಪಾರಾಗಬೇಕು. ಅದರಂತೆ ಭವ ಸಾಗರದಲ್ಲಿಯೂ ಆಸೆ, ಕೋಪ, ತಾಪ, ಅಸೂಹೆ ಎಂಬ ಪ್ರಾಣಿಗಳಿರುತ್ತವೆ. ಅಂಥ ಪ್ರಾಣಿಗಳ ಬಾಯಿಗೆ ಸಿಗದಂತೆ ಈಜಿ ಸಂಸಾರ ಎಂಬ ಸಾಗರ ದಾಟಿ ದಡ ಸೇರುವುದೇ ನಿಜವಾದ ಜೀವನ. ಈ ಭವ ಸಾಗರ ದಾಟಿಸುವ ಅಂಬಿಗನೇ ಭಗವಂತ. ಆ ಭಗವಂತನನ್ನು ಪ್ರಾರ್ಥಿಸಬೇಕು ಭವಸಾಗರದಲ್ಲಿ ಯಾವ ಆಸೆ, ಕೋಪ, ತಾಪ, ಅಸೂಹೆ ಎಂಬ ಪ್ರಾಣಿ ಬಾಯಿಗೆ ಸಗಿದಂತೆ ಸುರಕ್ಷಿತ ವಾಗಿ ದಡ ಸೇರಿಸು ಎಂದು. 


ಭಗವಂತನೆ ಅಂಬಿಗನಾಗಿ ಭವ ಸಾಗರ ದಾಟಿಸುವಾಗ ನಾವು ಅಜ್ಞಾನದಿಂದ ನಡು ನೀರಿನಲ್ಲಿ ಮುಳುಗುವುದೇಕೆ. ಸಂಸಾರದಾಚೆಗೂ ನಮ್ಮ ಜೀವನ ವಿಸ್ತರಿಸಿದೆ. ಅದನ್ನು ಜ್ಞಾನಿಗಳಿಂದ ತಿಳಿದುಕೊಂಡು ಸುಂದರ ಜೀವನ ರೂಪಿಸಿಕೊಳ್ಳಬೇಕು. ಋಷಿ ಮುನಿಗಳು, ಪೂರ್ವಜರು ಸಂಪಾದಿಸಿದ ಪುಣ್ಯದಿಂದಲೇ ಇಂದು ನಾವು ಸುಖಮಯ ಜೀವನ ಸಾಗಿಸುತ್ತಿದ್ದೇವೆ ಎಂಬುದನ್ನು ಮರೆಯಬಾರದು. 

-| ಶಾಂಸುಂದರ ಕುಲಕರ್ಣಿ, ಕಲ್ಬುರ್ಗಿ

–>