-->

ಎಲ್ಲವೂ ಭಾರ

ಅವಶ್ಯಕತೆ ಮುಗಿದ ಮೇಲೆ ಎಲ್ಲವೂ
ಭಾರವಯ್ಯ ಭಾರವು ಬಹಳಷ್ಟು ಭಾರವು

ಊಟ ಮುಗಿದ ಮೇಲೆ ತಟ್ಟೆ ಭಾರ
ಮಳೆ ನಿಂತ ಮೇಲೆ ಕೊಡೆ(ಛತ್ರಿ) ಭಾರ
ಸಹಾಯ ಪಡೆದ ಮೇಲೆ ಸ್ನೇಹ ಭಾರ
ಮೋಹ ಕಳೆದ ಮೇಲೆ ಪ್ರೀತಿ ಭಾರ
!!ಅವಶ್ಯಕತೆ ಮುಗಿದ ಮೇಲೆ ಎಲ್ಲವೂ!!

ನೀರು ಕುಡಿದ ಮೇಲೆ ಬಾಟಲ್ ಭಾರ
ಪಯಣ ಮುಗಿದ ಮೇಲೆ ವಾಹನ ಭಾರ
ಹಣ ಪಡೆದ ಮೇಲೆ ಗುಣ ಭಾರ
ಅನ್ನ ಪಡೆದ ಮೇಲೆ ಋಣ ಭಾರ
!!ಅವಶ್ಯಕತೆ ಮುಗಿದ ಮೇಲೆ ಎಲ್ಲವೂ!!

ಆಸ್ತಿ ಭಾಗವಾದ ಮೇಲೇ ಹೆತ್ತವರು ಭಾರ
ಮಡದಿ ಬಂದಮೇಲೆ ಒಡಹುಟ್ಟಿದವರು ಭಾರ
ಹೂವು ಕಿತ್ತ ಮೇಲೆ ಗಿಡ ಭಾರ
ಫಲ ಕೊಟ್ಟ ಮೇಲೆ ಮರ ಭಾರ
!!ಅವಶ್ಯಕತೆ ಮುಗಿದ ಮೇಲೆ ಎಲ್ಲವೂ!!

 ಎಲ್ಲವೂ ಭಾರ


ಜ್ಞಾನ ಪಡೆದ ಮೇಲೆ ಪುಸ್ತಕ ಭಾರ
ಗುರಿ ತಲುಪಿದ ಮೇಲೆ ಗುರು ಭಾರ
ಆಯಸ್ಸು ಮುಗಿದ ಮೇಲೆ ದೇಹ ಭಾರ
ಸಂಕಷ್ಟ ಕಳೆದ ಮೇಲೆ ಆ ದೇವರೇ ಭಾರ
!!ಅವಶ್ಯಕತೆ ಮುಗಿದ ಮೇಲೆ ಎಲ್ಲವೂ!!

 - ನಮ್ಮ ಓದುಗರು ನೀಡಿದ ಲೇಖನ

–>