-->

Amazing health benefits of using Bilwa pathra Bael leaves

 ಬಿಲ್ವಪತ್ರೆ ಶಿವಪೂಜೆಯಲ್ಲಿ ಶ್ರೇಷ್ಠ ಮಾತ್ರವಲ್ಲ ಔಷಧೀಯ ಮಹಾ ಶ್ರೇಷ್ಠ ವೃಕ್ಷ

ಇದರ ಎಲೆಗಳು ಶಿವಪೂಜೆಯಲ್ಲಿ ಶ್ರೇಷ್ಟವೆಂದು ಪರಿಗಣಿತವಾಗಿದೆ. ಇದರ ಬೇರು, ಎಲೆಗಳು, ತೊಗಟೆ, ಹಣ್ಣಿನ ತಿರುಳು ಆಯುರ್ವೇದದಲ್ಲಿ ಔಷಧವಾಗಿ ಉಪಯೋಗಿಸಲ್ಪಡುತ್ತದೆ. ಕಾಯಿಯ ತಿರುಳು ಗಾರೆಗೆ ಬಲ ಕೊಡಲು ಉಪಯೋಗವಾಗುತ್ತದೆ.

ಆಯುರ್ವೇದದಲ್ಲಿ ಬಿಲ್ವ 

ಬಿಲ್ವಕ್ಕೆ ಸಂಸ್ಕೃತದಲ್ಲಿರುವ ಹೆಸರುಗಳು ಅದರ ಗುಣಲಕ್ಷಣ ಮತ್ತು ಉಪಯೋಗಗಳನ್ನು ಸೂಚಿಸುತ್ತವೆ.

ವಿಲ್ವಸ್ತು ಪೂತಿಪಾತಃ ಶಾಂಡಿಲ್ಯ ಶ್ರೀಫಲಶ್ಚ ಮಾಣೂರಃ

ಮುಷ್ಟಿ ಫಲಶ್ಚಃ ಶಲಾಟಃ ಶೈಲೂಶಃ ಕರ್ಕಟಃ ಶ್ರೀಯಾಹ್ವಶ್ಚ

ಸದಾಫಲ ಪೀಲುಫಲೋ ಹೃದಯಗಂಧ ಹೃದ್ಯಗಂಧ ಶಲಾಟಿಕಃ

ಶಲಾಟುದ್ರುಮ ಇತ್ಯುಕ್ತೋ ಶಬ್ದೈ ಪರ್ಯಾಯವಾಚಕೈ

- ಅಭಿದಾನ ಮಂಜರೀ

ಬಿಲ್ವ - ಸರ್ವರೋಗನಿವಾರಕ ಶಾಂಡಿಲ್ಯ - ಎಲ್ಲ ಬಗೆಯ ನೋವನ್ನು ನಿವಾರಿಸುವಂಥದ್ದು. ಶೈಲೂಷ - ಪರ್ವತಗಳ ಮೇಲೆ ಬೆಳೆಯುವಂಥದ್ದು ಶ್ರೀಫಲ - ಸುಂದರ ಹಣ್ಣುಗಳನ್ನು ಕೊಡುವಂಥದ್ದು

ಆಯುರ್ವೇದದ ಪ್ರಕಾರ ಬಿಲ್ವದ ಗುಣಧರ್ಮಗಳು ಹೀಗಿವೆ : ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ. ಬಿಲ್ವದ ಹಸಿಕಾಯಿ ಕಫ ಮತ್ತು ವಾತನಿವಾರಕವಾಗಿದೆ. ಹಸಿವನ್ನು ಹೆಚ್ಚಿಸುತ್ತದೆ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಹೊಟ್ಟೆ ನೋವು ಮತ್ತು ಭೇದಿಗೆ ಚಿಕಿತ್ಸೆ ಮಾಡಲು ನೆರವಾಗುತ್ತದೆ. ಪಕ್ವವಾದ ಬಿಲ್ವದ ಹಣ್ಣು ವಾತಪಿತ್ತವನ್ನು ಹೆಚ್ಚಿಸುತ್ತದೆ. ಕಫವನ್ನು ಕಡಿಮೆ ಮಾಡುತ್ತದೆ. ಇದನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟ. ಬಿಲ್ವದ ಎಲೆ ವಾತ ಮತ್ತು ಕಫ ತೊರೆದು ಹಾಕುತ್ತದೆ. ಅಜೀರ್ಣ ಮತ್ತು ಹೊಟ್ಟೆನೋವಿಗಾಗಿ ಮದ್ದಾಗಿ ಬಳಕೆಯಾಗುತ್ತಿದೆ. ತಿರುಳಿನಿಂದ ತೆಗೆದ ತೈಲವು ವಾತನಿವಾರಕವಾಗಿದೆ.

Amazing health benefits of using Bilwa pathra Bael leaves



ಚರ್ಮದ ಸಮಸ್ಯೆಗಳು : ದೇಹದ ಚರ್ಮದ ದುರ್ಗಂಧವನ್ನು ನಿವಾರಿಸಲು ತಾಜಾ ಬಿಲ್ವಪತ್ರೆ ರಸವನ್ನು ಪ್ರತಿದಿನ ಮೈಗೆ ಚೆನ್ನಾಗಿ ಲೇಪಿಸಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು. ದೇಹದ ಮೇಲೆ ಕುರುಗಳು ಇದ್ದಾಗ ಬಿಲ್ವ ವೃಕ್ಷದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುತ್ತಿರಬೇಕು..

ತಲೆನೋವು : ತಲೆನೋವು ಸಮಸ್ಯೆ ಇದ್ದಾಗ ಬಿಲ್ವದ ಮರದ ಒಣಬೇರನ್ನು ಅರೆದು ಹಣೆಗೆ ಲೇಪಿಸಬೇಕು.

ತಲೆಕೂದಲಿನ ಸಮಸ್ಯೆಗಳು : ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ನಂತರ ಅದರ ತಿರುಳನ್ನು ತೆಗೆದು ನುಣ್ಣಗೆ ಅರೆದು ತಲೆಗೆ ಲೇಪಿಸಿಕೊಡು ಅರ್ಧ ಗಂಟೆಯ ನಂತರ ತೊಳೆಯಬೇಕು. ಇದನ್ನು ದಿನಕ್ಕೊಮ್ಮೆಯಂತೆ ಹದಿನೈದು ದಿನಗಳ ಕಾಲ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ತಲೆ ಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಿಕೊಳ್ಳಬೇಕು. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಅಕಾಲ ನರೆಕೂದಲು ಸಮಸ್ಯೆ ನಿವಾರಣೆಯಾಗುತ್ತದೆ.

ಮಾನಸಿಕ ಸಮಸ್ಯೆಗಳು : ನಿದ್ರಾಹೀನತೆಯಿಂದ ಬಳಲುತ್ತಿರುವವರು ಬಿಲ್ವದ ಎಲೆಯನ್ನು ನೀರು ಸೇರಿಸದೆ ಅರೆದು ಹಣೆಗೆ ಲೇಪಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ. ನಿಶ್ಯಕ್ತಿ : ಬಿಲ್ವಪತ್ರೆಯ ರಸವನ್ನು ಪ್ರತಿದಿನ ೨ - ೩ ಚಮಚೆಯ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.ನಿಶ್ಯಕ್ತಿ , ಆಯಾಸದಿಂದ ಬಳಲುತ್ತಿರುವವರು ದಿನದಲ್ಲಿ ಮೂರು ಬಾರಿ ದಶಮೂಲಾರಿಷ್ಟವನ್ನು ಎರಡೆರಡು ಚಮಚೆಯಂತೆ ಸೇವಿಸಬೇಕು.

ಕಣ್ಣಿನ ಸಮಸ್ಯೆಗಳು : ಕಣ್ಣಿನಲ್ಲಿ ಉರಿ , ತುರಿಕೆ ಇದ್ದಾಗ ಬಿಲ್ವಪತ್ರೆಯನ್ನು ನುಣ್ಣಗೆ ಅರೆದು ಕಣ್ಣಿನ ಮೇಲೆ ಲೇಪಿಸಿಕೊಳ್ಳಬೇಕು. ಕಣ್ಣಿನ ಸೋಂಕು ಇದ್ದಾಗ ಅಥವಾ ಕಣ್ಣು ಕೆಂಪಾದಾಗ ಮಾಡಬಹುದಾದ ಚಿಕಿತ್ಸೆ ಇದು - ಒಂದು ಹಿಡಿಯ ಬಿಲ್ವದ ಎಳೆಯ ಎಲೆಗಳನ್ನು ಸಂಗ್ರಹಿಸಿ ಮಣ್ಣಿನ ಕುಡಿಕೆಗೆ ಹಾಕಿ ಹುರಿಯಬೇಕು. ಅದು ಸ್ವಲ್ಪ ಬಿಸಿ ಇರುವಾಗಲೇ ಒಂದು ಬಟ್ಟೆಯಲ್ಲಿ ಹಾಕಿ ಕಣ್ಣಿನ ಮೇಲಿಡಬೇಕು. ಸ್ವಲ್ಪ ನೀರಿನಲ್ಲಿ ಬಿಲ್ವದ ಹೂಗಳನ್ನು ನೆನೆಸಿಟ್ಟು ನಂತರ ಶೋಧಿಸಿ ಆ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳುತ್ತಿದ್ದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ.

ಬಾಯಿಯ ಸಮಸ್ಯೆಗಳು : ಬಾಯಿಯಲ್ಲಿ ಹುಣ್ಣಾಗಿದ್ದಾಗ ಬಿಲ್ವಪತ್ರೆ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನದಲ್ಲಿ ಒಂದು ಬಾರಿ ಸೇವಿಸಬೇಕು. ಅಜೀ ಸಮಸ್ಯೆಯಿಂದ ಅಥವಾ ಹೊಟ್ಟೆ ಹುಣ್ಣಿನ ಸಮಸ್ಯೆ ಯಿಂದ ವಾಂತಿ ಆಗುತ್ತಿದ್ದರೆ ಎರಡು ಚಮಚೆ ಬಿಲ್ವಪತ್ರೆ ರಸಕ್ಕೆ ಒಂದು ಚಮಚೆ ಜೇನುತುಪ್ಪ ಸೇರಿಸಿ ದಿನದಲ್ಲಿ ೨-೩ ಬಾರಿ ನೆಕ್ಕಬೇಕು. ಬಿಲ್ವ ಫಲದ ಚಿಪ್ಪನ್ನು ಅರೆದು ಜೀನುತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ ವಾಕರಿಕೆ ನಿಲ್ಲುತ್ತದೆ.

ಮೂಗಿನ ಸಮಸ್ಯೆಗಳು : ನೆಗಡಿ , ಇದ್ದಾಗ ಬಿಲ್ವಪತ್ರೆ ಎಲೆಯ ರಸವನ್ನು ಸ್ವಲ್ಪ ನೀರಿಗೆ ಬೆರೆಸಿ, ಈ ನೀರನ್ನು ಮೂಗಿಗೆ ಹನಿಸಬೇಕು.

ನೆಗಡಿ, ಕೆಮ್ಮು , ದಮ್ಮು , ಶ್ವಾಸಕೋಶದ ಸಮಸ್ಯೆಗಳು' : ಕ್ಷಯರೋಗದಿಂದ ಬಳಲುತ್ತಿರುವವರು ೪೦ ದಿನಗಳವರೆಗೆ ಊಟದ ನಂತರ ಬಿಲ್ವದ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಜೀನುತುಪ್ಪ ಸೇರಿಸಿ ತಿನ್ನಬೇಕು. ನೆಗಡಿಯಾದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮುಂಜಾನೆ ಎದ್ದಕೂಡಲೇ ಒಂದು ಬಿಲ್ವದ ಎಲೆಯನ್ನು ೨-೩ ಕಾಳುಮೆಣಸಿನೊಂದಿಗೆ ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು. ಇದನ್ನು ೩೦-೪೦ ದಿನಗಳ ಕಾಲ ಮಾಡಬೇಕು.

ಹೃದಯದ ಸಮಸ್ಯೆಗಳು : ಆಗಾಗ ಹೃದಯದ ಬಡಿತ ತಪ್ಪುವ ಪಾಲ್ಪಿಟೇಶನ್ ಸಮಸ್ಯೆ ಇರುವವರು ಬಿಲ್ವ ಮರದ ಬೇರಿನ ತೊಗಟೆಯ ಕಷಾಯವನ್ನು ಕುಡಿಯುತ್ತಿರಬೇಕು. ಬಿಲ್ವದ ಎಲೆಗಳನ್ನು ಚೆನ್ನಾಗಿ ಒಣಗಿಸಿ ಚೂರ್ಣ ಮಾಡಿ ಸಂಗ್ರಹಿಸಿಡಬೇಕು. ರಕ್ತದ ಅಧಿಕ ಒತ್ತಡ ಇರುವವರು

- ನಮ್ಮ ಓದುಗರು ನೀಡಿದ ಲೇಖನ

–>