-->

ಮನಸ್ಸೆಂಬ ಮಿಕ್ಸಿಗೂ ಬೇಡವೆ ಸ್ವಲ್ಪ ವಿಶ್ರಾಂತಿ ?

ಹಗಲು-ರಾತ್ರಿ ಒಂದಲ್ಲಾ ಒಂದು ಯೋಚನೆಗಳು, ಅನಗತ್ಯ ಚಿಂತೆಗಳು ಹೀಗೆ ಏನಾದರೂ ಒಂದು ವಿಚಾರವನ್ನು ಹಾಕಿ ಮನಸ್ಸನ್ನು ಓಡಿಸುತ್ತಲೇ ಇರುತ್ತೇವೆ. ರುಬ್ಬುವ ಮಿಕ್ಸಿಗಾದರೂ ಹೀಟಾಗುವುದೆಂದು ನಿಲ್ಲಿಸುತ್ತೇವೆ ಅಥವಾ ಅಗತ್ಯವಿದ್ದಾಗ ಮಾತ್ರ ಅದನ್ನು ಬಳಸುತ್ತೇವೆ. ಆದರೆ, ಮನಸ್ಸೆಂಬ ಮಿಕ್ಸಿ ಸರಿ ಇದ್ದರು, ಸರಿ ಇಲ್ಲದಿದ್ದರೂ ಸುತ್ತುತ್ತಲೇ ಇರುತ್ತದೆ. ಎಂದಾದರೂ ನಿಮ್ಮ ಮನಸ್ಸಿನ ಆರೈಕೆಯ ಕಡೆಗೆ ಯೋಚನೆ ಬಂದಿದೆಯಾ....? ಸತತವಾಗಿ ಮನಸ್ಸನ್ನು ಬಳಸಿದರೆ ಅದರ ಸ್ಥಿತಿ ಏನಾಗುವುದೆಂದು ಯೋಚಿಸಿದ್ದೀರಾ...?

ನಾವು ಮಲಗಿದ್ದಾಗ ಅದಕ್ಕೆ ರೆಸ್ಟ್ ಸಿಗುತ್ತದೆಯಲ್ಲಾ! ಎನ್ನುವುದು ಹಲವರ ಅಭಿಪ್ರಾಯ. ಮಲಗಿದಾಗ ಶರೀರಕ್ಕೆ ವಿಶ್ರಾಂತಿ ಸಿಗುತ್ತದೆ ಹೊರತು ಮನಸ್ಸಿಗಲ್ಲಾ. ಅದಕ್ಕಾಗಿ ಉದಾಹರಣೆ ನೋಡಿ; ಎಷ್ಟೋ ಜನರು ನಿದ್ರೆಯಲ್ಲಿ ಒಳ್ಳೆಯ ಅಥವಾ ಕೆಟ್ಟ ಕನಸ್ಸುಗಳನ್ನು ಕಾಣುತ್ತಾರೆ, ಚಡಪಡಿಸುತ್ತಾರೆ, ಕನವರಿಸುತ್ತಾರೆ, ಬೆಚ್ಚಿಬೀಳುತ್ತಾರೆ, ಮಾತಾಡುತ್ತಾರೆ, ನಡೆಯುತ್ತಾರೆ ಕೂಗಾಡುತ್ತಾರೆ. ಮಕ್ಕಳ ಬಗ್ಗೆ ಹೇಳಬೇಕೆಂದರೆ ತಮಗೆ ಗೊತ್ತಿರುವುದಿಲ್ಲ, ಹಾಸಿಗೆಯಲ್ಲಿ ಮೂತ್ರ ಮಾಡಿರುತ್ತಾರೆ. ಇನ್ನೂ ಕೆಲವರು ಮಲಗಿ ಎದ್ದಕೂಡಲೇ ಅವರು ಮುಖದಲ್ಲಿ ಫ್ರೆಶ್ ನೆಸ್ ಗಿಂತ ಬೇಸರ, ಚಿಂತೆ,ಕೋಪ ಮತ್ತು ದುಃಖ ಅವರ ಮುಖದಲ್ಲಿ ಎದ್ದುಕಾಣುತ್ತಿರುತ್ತದೆ. ಇದರಿಂದ ಅರ್ಥವಾಗುವುದೇನೆಂದರೆ, ನಿದ್ರೆಯಿಂದ ಮನಸ್ಸಿಗೆ ಸಂಪೂರ್ಣ ವಿಶ್ರಾಂತಿ ಸಿಗುವುದಿಲ್ಲವೆಂದು.
ಹಾಗಾದರೆ ಮನಸ್ಸಿಗೆ ವಿಶ್ರಾಂತಿ ಸಿಗಲು ಏನು ಮಾಡಬೇಕು.? ಅದಕ್ಕಾಗಿ *ಕೆಲವು ಸಲಹೆಗಳಿವೆ ಅವುಗಳು ಯಾವುವು ಎನ್ನುವುದನ್ನು ಈ ಕೆಳಗಿನಂತೆ ನೋಡೋಣ.*

ಮನಸ್ಸೆಂಬ ಮಿಕ್ಸಿಗೂ ಬೇಡವೆ ಸ್ವಲ್ಪ ವಿಶ್ರಾಂತಿ ?


✓ಸಕಾರಾತ್ಮಕ ಆಲೋಚನೆ ಮಾಡುವುದು.
✓ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು.
✓ಪ್ರೇರಣೆ, ಆತ್ಮವಿಶ್ವಾಸ ಹೆಚ್ಚಿಸುವ ಪುಸ್ತಕಗಳನ್ನು ಓದುವುದು.
✓ಮನಸ್ಸಿಗೆ ಮೊದ/ಹಿತ ನೀಡುವ ಸಂಗೀತ ಕೇಳುವುದರಿಂದ.
✓ಸುಂದರ ಪ್ರಕೃತಿಯ ನಡುವೆ ಸಮಯ ಕಳೆಯುವುದರಿಂದ.
✓ ರಜಾದಿನಗಳಲ್ಲಿ ಸ್ನೇಹಿತರೊಡಗೂಡಿ ಆಟಗಳನ್ನು ಆಡುವುದು, ಟ್ರೆಕ್ಕಿಂಗ್ ಹೋಗುವುದು.
✓ ನೃತ್ಯ, ಸಂಗೀತ, ಡ್ರಾಯಿಂಗ್, ಪೇಂಟಿಂಗ್ ಕಲಿಯುವುದು ಹಾಗೂ ಹೊಸ-ಹೊಸ ಅಡುಗೆ ತಯಾರಿಸುವುದು ಅಥವಾ ಕೃಷಿ ಚಟುವಟಿಕೆಯಲ್ಲಿ ತೊಡಗುವುದು.
✓ ಕುಟುಂಬಕ್ಕೆ ಸಮಯ ನೀಡಿ ಒಟ್ಟಿಗೆ ಕುಳಿತು ಊಟ ಮಾಡುವುದು, ಪರಸ್ಪರ ಕಷ್ಟ-ಸುಖಗಳನ್ನು ಹಂಚಿ ಕೊಳ್ಳುವುದು ಹಾಗೂ ಕುಟುಂಬದವರೆಲ್ಲಾ ಸೇರಿ ತಿಂಗಳಿಗೆ ರೌಂಡು ಬಾರಿ ಪಿಕ್ ನಿಕ್ ಹೋಗುವುದರಿಂದ.
✓ಹುಟ್ಟು-ಹಬ್ಬ ವಿಶೇಷ ಆಚರಣೆಗಳಂದು ವೃದ್ದಾಶ್ರಮ, ಅನಾಥಾಲಾಯ, ಬುದ್ದಿಮಾಂದ್ಯ, ಅಂಗವಿಕಲ ಹಾಗೂ ಅಂಧರ ಆರೈಕೆಯ ಕೇಂದ್ರಗಳಿಗೆ ಬೇಟಿನೀಡಿ ಕೈಲಾದ ಸಹಾಯ ಮಾಡುವುದರಿಂದ.
✓ಬೆಳಗ್ಗೆ ಮತ್ತು ಸಂಜೆ ಬಿಡುವು ಮಾಡಿಕೊಂಡು, ಏಕಾಂತದಲ್ಲಿ ಕುಳಿತು ಧ್ಯಾನ ಮಾಡುವುದರಿಂದ.

ಈ ರೀತಿಯ ವಿಶ್ರಾಂತಿಯು ಮನಸ್ಸಿಗೆ ಅತೀ ಅಗತ್ಯವಿರುತ್ತದೆ. ಆದ್ದರಿಂದ, ಮನಸ್ಸು ಗೊಂದಲ ಅಥವಾ ಒತ್ತಡಕ್ಕೆ ಒಳಗಾದಾಗ ಮನಸ್ಸನ್ನು ಗೌರವಿಸಬೇಕು ಅದಕ್ಕಾಗಿ ಸ್ವಲ್ಪ ಸಮಯ ನೀಡಬೇಕು. ಹೇಗೆ ! ದೇಹವನ್ನು ಸದೃಢವಾಗಿಟ್ಟು ಕೊಳ್ಳುವುದಕ್ಕಾಗಿ: ಡಯಟ್, ವಾಕಿಂಗ್, ಜಿಮ್, ಎಕ್ಸರ್ಸೈಜ್, ವರ್ಕೌಟ್ ಬಾಡಿ ಬಿಲ್ಡಿಂಗ್ ಮಾಡುತ್ತೀರೋ. ಹಾಗೇ, ಮನಸ್ಸಿಗೂ ವಿಶ್ರಾಂತಿ ನೀಡಬೇಕು ಮತ್ತು ಮನಸ್ಸನ್ನು ರಿಫ್ರೆಶ್ ಮಾಡುವ ಅಭ್ಯಾಸವನ್ನು ಪ್ರತಿದಿನ ನಮ್ಮಲ್ಲಿ ರೂಢಿಸಿಕೊಳ್ಳಬೇಕು.

ಇದೆಲ್ಲಾ ಮಾಡಿದರೂ ಸಹ ನಿಮ್ಮ ಮನಸ್ಸಿನಲ್ಲಿ ಚೇತರಿಕೆ, ಉತ್ಸಾಹ, ಚೈತನ್ಯ ಅಥವಾ ಮೊದಲಿದ್ದ ಲವ-ಲವಿಕೆ ಕಂಡು ಬರುತ್ತಿಲ್ಲವೆಂದರೆ. ಸಮಯ ವ್ಯರ್ಥ ಮಾಡದೆ ಒಮ್ಮೆ ನಿಮ್ಮ ಹತ್ತಿರದ ಕೌನ್ಸೆಲರ್(ಆಪ್ತ ಸಲಹೆಗಾರರು) ರಿಂದ ಕೌನ್ಸಿಲಿಂಗ್ ಪಡೆಯಿರಿ ಅಥವಾ ಮನೋವೈದ್ಯರು-ಮನೋತಜ್ಜರನ್ನು ಬೇಟಿ ಮಾಡಿ ಸೂಕ್ತ ಸಲಹೆ ಅಥವಾ ಚಿಕಿತ್ಸೆಯನ್ನು ಪಡೆದು ಆರೋಗ್ಯಯತ ಸಂತೋಷದ ಜೀವನವನ್ನು ನಡೆಸಿ.

–>