-->

Notebook taatha , turning discarded pages to useful books

ಪ್ರತಿದಿನ ಬೆಳಗ್ಗೆ ರಾಜಧಾನಿ ಬೆಂಗಳೂರಿನ ಬ್ಯಾಂಕ್ ಕಾಲನಿನಲ್ಲಿ ದಿನಪತ್ರಿಕೆಯ ಏಜೆಂಟರುಗಳು ತಮ್ಮ ಪತ್ರಿಕೆಯ ಬಂಡಲ್ ಗಳನ್ನು ಬಿಚ್ಚುತ್ತಾರೆ... ಹೀಗೆ ಬಿಚ್ಚುವಾಗ ಬಂಡಲ್ ಮೇಲೆ ಸುತ್ತಿರುವ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದು ಪಕ್ಕಕ್ಕೆ ಎಸೆದು ಪತ್ರಿಕೆಗಳನ್ನು ಜೋಡಿಸಿಸುತ್ತಾರೆ... ಅಲ್ಲಿಗೆ ವಯಸ್ಸಾದ ಹಿರಿಯ ವ್ಯಕ್ತಿಯೊಬ್ಬರು ಬಂದು ಕೆಳಗೆ ಬಿದ್ದಿದ್ದ ಎಲ್ಲಾ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದುಕೊಂಡು ಜೋಡಿಸಿ ಕೊಳ್ಳುತ್ತಾರೆ... 

Notebook taatha


ಪ್ರತಿದಿನ ಹೀಗೆ ವೇಸ್ಟ್ ಎಂದು ಬಿಸಾಡುವ ಈ ಪೇಪರ್ ಗಳನ್ನು ತೆಗೆದುಕೊಂಡು ಹೋಗಿ ಅದನ್ನು ಪುಸ್ತಕದ ಅಳತೆಗೆ ಕತ್ತರಿಸಿ ಅದರಿಂದ ಬರೆಯುವ ನೋಟ್ ಬುಕ್ ತಯಾರಿಸುತ್ತಾರೆ, ಹಲವಾರು ನೊಟಬುಕ್ ಗಳನ್ನು ತಯಾರಿಸಿ ಇವರು ಮೈಸೂರು ರಸ್ತೆಯಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ  ಮಕ್ಕಳಿಗೆ ಉಚಿತವಾಗಿ ಹಂಚುತ್ತಾರೆ... ಇವರು ಬಂದರೆಂದರೆ ಸಾಕು ಮಕ್ಕಳು ಓಡೋಡಿ ಬಂದು "ನೊಟಬುಕ್ ತಾತಾ" ಎನ್ನುತ್ತಾ ಮುದ್ದಾಡುತ್ತಾರೆ.. ಹೀಗೆ ಯಾರಿಗೂ ತಿಳಿಯದ ಹಾಗೆ ಸಮಾಜಸೇವೆ ಮಾಡುತ್ತಿರುವ ಈ ಹಿರಿಯ ನಾಗರಿಕ ವ್ಯಕ್ತಿಯು ಹೆಸರು ಮೋಹನ್... ಇವರು ಐ.ಟಿ.ಐ ಕಂಪನಿಯ ನಿವೃತ್ತ ಉದ್ಯೋಗಿ, ತಮ್ಮ ಜೀವನದ ಕೊನೆಯ ಕಾಲದಲ್ಲಿ ಮನೆಯಲ್ಲಿ ಹಾಯಾಗಿ ಇರದೇ ಶಾಲಾ ಮಕ್ಕಳಿಗೆ ತಮ್ಮದೇ ಆದ ವಿಶಿಷ್ಟವಾದ ಸೇವೆ ಮಾಡುತ್ತಿರುವ ಇವರು ನಿಜಕ್ಕೂ ಎಲ್ಲರಿಗೂ ಮಾದರಿ..

–>