ಸಜ್ಜನರು ಕೆಲ ವಿಶೇಷ ವ್ಯಕ್ತಿಗಳು ಇಂದ್ರನ ವಜ್ರದ ತರಹ ಸಮಯ ಬಂದಾಗ ಅತಿ ಕಠೂರವಾಗಿರುತ್ತಾರೆ. ಅದೇ ತರಹ ಪುಷ್ಪದ ಹಾಗೆ ಅತಿ ಕೋಮಲವಾಗಿರುತ್ತಾರೆ. ಇಂತಹ ವ್ಯಕ್ತಿಗಳು ಲೋಕಕ್ಕೆ ಲೋಕದ ವ್ಯವಹಾರಕ್ಕೆ ಭಿನ್ನವಾಗಿ ಎತ್ತರದಲ್ಲಿ ಇರುತ್ತಾರೆ. ಇವರ ಹೃದಯವನ್ನು ತಿಳಿಯಲು ಯಾರು ಸಮರ್ಥರು.?
ಅಂತಹ ಕೆಲ ಸಂತರು ನಮ್ಮ ದೇಶದಲ್ಲಿ ಆಗಿ ಹೋಗಿದ್ದಾರೆ ಹಾಗೂ ಈಗಲೂ ಇದ್ದಾರೆ. ಸಂತ ಶ್ರೀ ಚಾಣಕ್ಯ ಸಂತ ಶ್ರೀ ಸಮರ್ಥ ರಾಮದಾಸರು ಸಂತ ಶ್ರೀ ವಿದ್ಯಾರಣ್ಯರು
ಇಂದು ಕೆಲ ಸಂತರು ಕೇವಲ ತಮ್ಮ ಮಠದ ತಮ್ಮ ಶಿಷ್ಯರ ಅಭಿವೃದ್ಧಿ ನೋಡುತ್ತಾ ತಾವು ಬಹಳ ಸಾತ್ವಿಕರಾಗಿ ಸಂಭವಿತರಾಗಿ ದೇಶ, ಸಮಾಜ ಏನೇ ಆಗಲಿ ತಾವು ಮಾತ್ರ ಯಾವುದೇ ವಿವಾದಗಳಿಗೆ ಸಿಕ್ಕಿಹಾಕಿಕೊಳ್ಳದೆ ದೇವರ ಪೂಜೆ,ಜಪ-ತಪಗಳಲ್ಲಿ ಮೌನವಾಗಿ ಕಾಲ ಕಳೆಯುತ್ತಾರೆ.
ಇನ್ನೂ ಕೆಲವು ಸಂತರು ನೀಲಕಂಠನ ತರ ತಾವು ಲೋಕನಿಂದೆ ಸಮಾಜದ ವಿರೋಧ ಲೆಕ್ಕಿಸದೆ ಲೋಕಕಲ್ಯಾಣಕ್ಕಾಗಿ ಸದಾ ದುಡಿಯುತ್ತಿರುತ್ತಾರೆ ಇಂಥವರನ್ನು ನಿಜವಾದ ಸಂತರು ಎಂದರೆ ತಪ್ಪಾಗಲಿಕ್ಕಿಲ್ಲ.
1. ಚೈನಾ ದೇಶದ ಫಾಹಿಯಾನ್ ಎಂಬ ಪರ್ಯಟನಕಾರ ಬಹಳ ದಿನಗಳ ಹಿಂದೆ ಭಾರತದ ಮಗದ ರಾಜ್ಯಕ್ಕೆ ಬಂದಿದ್ದ. ನಂತರ ಆತ ತನ್ನ ಪುಸ್ತಕದಲ್ಲಿ ಬರೆಯುತ್ತಾನೆ.ಮಗಧ ರಾಜ್ಯದಲ್ಲಿ ನಾನು ಪ್ರಾಮಾಣಿಕ ಕಠೋರ ನಿರ್ಣಯ ತೆಗೆದುಕೊಳ್ಳಬಲ್ಲ ಅದ್ಭುತ ಮೇಧಾ ಶಕ್ತಿ ಸರಳ ಸಾತ್ವಿಕ ನಿರಾಡಂಬರ ವಾಗಿ ಜೀವಿಸುತ್ತಿದ್ದ ಶ್ರೀ ಚಾಣಕ್ಯ ಎಂಬ ರಾಜಕೀಯ ಸಂತನನ್ನು ನೋಡಿದ್ದೆ ಎಂದು ಪುಸ್ತಕದಲ್ಲಿ ಬರೆದಿದ್ದಾನೆ.
ಒಮ್ಮೆ ಚಂದ್ರಗುಪ್ತ ರಾಜನಿಗೆ ತನ್ನ ಅತಿ ಸುಂದರ ಮಗಳನ್ನು ಕೊಟ್ಟು ವಿವಾಹ ಮಾಡಬೇಕೆಂದು ಒಬ್ಬ ರಾಜ ಬಂದಿರುತ್ತಾನೆ. ಆತನ ಅತಿ ಸುಂದರ ಮಗಳನ್ನು ನೋಡಿ ಚಂದ್ರಗುಪ್ತ ಮೋಹಿತನಾಗಿ ಇಂದೇ ವಿವಾಹ ಮಾಡಿಕೊಳ್ಳುತ್ತೇನೆ ಎಂಬ ನಿರ್ಣಯಕ್ಕೆ ಬರುತ್ತಾನೆ. ಇದೆಲ್ಲವನ್ನು ಗಮನಿಸುತ್ತಿದ್ದ ಚಾಣಕ್ಯ ಇಂದು ವಿವಾಹ ಮುಹೂರ್ತ ಇಲ್ಲ ನಾಳೆ ನಿಮ್ಮ ವಿವಾಹ ನಾನೇ ಜರುಗಿಸುತ್ತೇನೆ ಎಂದು ಚಂದ್ರಗುಪ್ತನಿಗೆ ಹೇಳಿ ಅಂದು ಆಗಬೇಕಾಗಿದ್ದ ವಿವಾಹವನ್ನು ಮಾರನೇ ದಿನಕ್ಕೆ ಮುಂದೂಡುತ್ತಾನೆ. ರಾತ್ರಿ ಆ ಅತಿಥಿ ರಾಜ ಆತನ ಸುಂದರ ಮಗಳನ್ನು ತನ್ನ ಪಕ್ಕದ ಅತಿಥಿ ಗೃಹದಲ್ಲಿ ಸಕಲ ರಾಜ ಮರ್ಯಾದೆಗಳ ಜೊತೆ ನಿವಶಿಸಲು ಅನುಕೂಲ ಮಾಡಿಕೊಡುತ್ತಾನೆ. ಅಂದು ರಾತ್ರಿ 2 ಗಂಟೆ ಸಮಯ ಅತಿಥಿ ರಾಜ ಆತನ ಸುಂದರ ಮಗಳು ಗಾಢ ನಿದ್ರೆಯಲ್ಲಿದ್ದಾಗ ಆ ಅತಿಥಿ ಗ್ರಹಕ್ಕೆ ಶ್ರೀ ಚಾಣಕ್ಯ ಬೆಂಕಿ ಹಚ್ಚಿ ಅವರಿಬ್ಬರನ್ನು ಜೀವಂತ ಸುಟ್ಟುಬಿಡುತ್ತಾನೆ. ಮಾರನೇ ದಿನ ಚಂದ್ರಗುಪ್ತ ಈ ವಿಷಯವನ್ನು ತಿಳಿದುಕೊಂಡು ಶ್ರೀ ಚಾಣಕ್ಯನೇ ಅವರನ್ನು ದಹನ ಮಾಡಿದ್ದಾನೆಂದು ತಿಳಿದು ಕೋಪದಿಂದ ಶ್ರೀ ಚಾಣಕ್ಯನ ಹತ್ತಿರ ಬರುತ್ತಾನೆ. ನೀವು ಅತಿಥಿ ರಾಜ ಆತನ ಸುಂದರ ಮಗಳನ್ನು ಬೆಂಕಿ ಇಟ್ಟು ಕೊಂದಿರಂತೆ ಇದು ನಿಜವಾ ಎಂದು ಕೇಳುತ್ತಾನೆ. ಆಗ ಚಾಣಕ್ಯ ಸಂಧ್ಯಾವಂದನೆ ಮಾಡುತ್ತಿದ್ದೇನೆ ಸ್ವಲ್ಪ ಕುಳಿತುಕೋ ಎಂದು ಹೇಳುತ್ತೇನೆ . ರಾಜ ಚಂದ್ರಗುಪ್ತ ಮನುಷ್ಯರನ್ನು ಸುಡುವ ವ್ಯಕ್ತಿಗಳು ಸಂಧ್ಯಾವಂದನೆ ಕೂಡ ಮಾಡುತ್ತಾರೆಯೇ ? ಎಂದು ಗುಣಗುತ್ತ ಕೂತಿರುತ್ತಾನೆ. ನಂತರ ಶ್ರೀ ಚಾಣಕ್ಯ ಬಂದು ಗೂಢಚಾರವನ್ನು ಕರಿಸಿ ಎಲ್ಲ ವಿಷಯ ವಿವರಿಸುತ್ತಾನೆ. ಆ ಸುಂದರ ಕನ್ಯೆ ಒಬ್ಬ ವಿಷಕನ್ನೇ ನಾಗರಹಾವಿನ ವಿಷವನ್ನು ಸ್ವಲ್ಪ ಸ್ವಲ್ಪವಾಗಿ ಆಕೆ ವರ್ಷಗಟ್ಟಲೆ ಸೇವಿಸಿ ಮೈಯಲ್ಲ ವಿಷದಿಂದ ತುಂಬಿ ಇರುತ್ತಾಳೆ ಆಕೆಯನ್ನು ಯಾರು ಲಗ್ನವಾಗುತ್ತಾರೋ ಅಂದು ರಾತ್ರಿಯೇ ಆಕೆ ಶರೀರ ಸಹವಾಸದಿಂದ ಲಗ್ನವಾದ ವ್ಯಕ್ತಿ ಮೃತರಾಗುತ್ತಾರೆ ಅಷ್ಟು ವಿಷ ಆಕೆ ಶರೀರದಲ್ಲಿ ಇರುತ್ತದೆಯಂತೆ. ನೀನು ನಿನ್ನೆ ಲಗ್ನವಾಗಿದ್ದರೆ ನಿನ್ನೆ ರಾತ್ರಿ ನೀನು ಮರಣ ಹೊಂದುತ್ತಿದ್ದಿ ಎಂದು ಶ್ರೀ ಚಾಣಕ್ಯ ಚಂದ್ರಗುಪ್ತನಿಗೆ ಹೇಳುತ್ತಾನೆ. ಈ ವಿಷಯ ಗೂಢಾಚಾರರು ಖಚಿತಪಡಿಸುತ್ತಾರೆ. ಗಾಬರಿಗೊಂಡ ಚಂದ್ರಗುಪ್ತ ಶ್ರೀ ಚಾಣುಕ್ಯರ ಪಾದಗಳಿಗೆ ನಮಸ್ಕರಿಸಿ ಧನ್ಯವಾದಗಳು ಹೇಳಿ ಹೋಗುತ್ತಾನೆ. ಇಷ್ಟು ಕಠೋರ ನಿರ್ಣಯ ಮುಂಜಾಗ್ರತೆ ಆಲೋಚನ ಶಕ್ತಿ ಹೊಂದಿದ್ದರು ಶ್ರೀ ಚಾಣಕ್ಯರು.
2, ಇದೇ ತರ ಚಾಣಕ್ಯರ ಜೀವನದ ಇನ್ನೊಂದು ಘಟನೆ. ಮಗದ ರಾಜ್ಯದ ಧನಾನಂದನೆಂಬ ದುಷ್ಟ ರಾಜನನ್ನು ಚಂದ್ರಗುಪ್ತನ ಸಹಾಯದಿಂದ ಸಂವರಿಸಲಾಯಿತು. ಮುಂದೆ ಚಂದ್ರಗುಪ್ತನನ್ನು ರಾಜನಾಗಿ ಮಾಡಬೇಕು. ಆದರೆ ಬ್ರಾಹ್ಮಣ ಪಂಡಿತರು ಇದಕ್ಕೆ ವಿರೋಧ ಮಾಡುತ್ತಾರೆ. ಚಂದ್ರಗುಪ್ತ ಶೂದ್ರ ಜಾತಿಯ ವ್ಯಕ್ತಿ ಕೇವಲ ಕ್ಷತ್ರಿಯರಿಗೆ ಮಾತ್ರ ರಾಜ್ಯ ಅಧಿಕಾರ ಶೂದ್ರ ಹೇಗೆ ರಾಜನಾಗುತ್ತಾನೆ ಎಂಬುವ ವಾದ ಬ್ರಾಹ್ಮಣ ಪಂಡಿತರು ಮುಂದಿಡುತ್ತಾರೆ. ಆಗ ಚಾಣಕ್ಯ ಕಲಿಯುಗದಲ್ಲಿ ಮನು ಸ್ಮೃತಿ ನೋಡಬಾರದು ಕಲಿಯುಗದಲ್ಲಿ ಪರಾಶರ ಸ್ಮೃತಿ ಮಾತ್ರ ನೋಡಬೇಕು ಹಾಗೂ ಯಾಜ್ಞವಲ್ಕರ ಸೂಕ್ಷ್ಮ ಧರ್ಮ ಸಂದೇಶಗಳನ್ನು ಬ್ರಾಹ್ಮಣ ಪಂಡಿತರ ಮುಂದಿಡುತ್ತಾರೆ. ಇದಾವುದಕ್ಕೂ ಬ್ರಾಹ್ಮಣ ಪಂಡಿತರು ಒಪ್ಪದೇ ಸಭೆಯಿಂದ ಎದ್ದು ಹೋಗಿಬಿಡುತ್ತಾರೆ. ಮಾರನೆಯ ದಿನ ಶ್ರೀ ಚಾಣಕ್ಯ ತನ್ನ ಮಂತ್ರಿಗಳನ್ನು ಕರೆದು ಬ್ರಾಹ್ಮಣ ಪಂಡಿತರು ವಾಸವಾಗಿರುವ ಊರುಗಳ ಪಟ್ಟಿಯನ್ನು ತರಿಸಿ ಆ ಎಲ್ಲಾ ಬ್ರಾಹ್ಮಣರು ವಾಸಿಸುವ ಓಣಿಗಳಿಗೆ ಬೆಂಕಿ ಹಚ್ಚಿ ಬ್ರಾಹ್ಮಣರನ್ನು ಜೀವಂತ ಸುಟ್ಟು ಬಿಡಲು ಆಗ್ನೆ ಮಾಡುತ್ತಾನೆ. ಇದನ್ನು ತಿಳಿದು ಗಾಬರಿಗೊಂಡ ಬ್ರಾಹ್ಮಣ ಪಂಡಿತರು ಚಾಣಕ್ಯನ ಹತ್ತಿರ ಬಂದು ಇಲ್ಲ ಇಲ್ಲ ಶೂದ್ರ ಜಾತಿಯ ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡಿ ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳುತ್ತಾರೆ. ನೋಡಿ ಚಾಣಕ್ಯನ ಕಠೋರ ಕೆಲ ನಿರ್ಣಯಗಳು ಸಮಾಜಹಿತಕ್ಕಾಗಿ ರಾಷ್ಟ್ರ ಹಿತಕ್ಕಾಗಿ ತೆಗೆದುಕೊಂಡದ್ದು. ಇಂತಹ ನಿರ್ಣಯ ತೆಗೆದುಕೊಳ್ಳುವಾಗ ಸ್ವಜನ ಪಕ್ಷಪಾತ, ಸ್ವಜಾತಿ ಯಾವುದನ್ನು ಲೆಕ್ಕಿಸಲಿಲ್ಲ. ಶ್ರೀ ಕೃಷ್ಣ ಪರಮಾತ್ಮ ಕೂಡ ದ್ರೋಣಾಚಾರ್ಯ ಕರ್ಣನನ್ನು ಕೊಲ್ಲುವಾಗ ಇದೇ ರೀತಿ ಕಠೋರ ನಿರ್ಣಯ ತೆಗೆದುಕೊಂಡಿದ್ದರು. ಶ್ರೀಚಾಣಕ್ಯ ನಿಗೆ ಮೊದಲನೆಯ ಪ್ರಧಾನ್ಯತೆ ತನ್ನ ರಾಷ್ಟ್ರ .ಹೀಗಿದ್ದ ಶ್ರೀ ಚಾಣಕ್ಯ. ಇದು 52 ಉಪನಿಷತ್ ಗಂಗಾ ದಲ್ಲಿ ಉಲ್ಲೇಖವಿದೆ. ಕಾರಣ ನಾವು ನಮ್ಮ ಮೊದಲ ಪ್ರಾಧಾನ್ಯತೆ ನಮ್ಮ ದೇಶಕ್ಕೆ ಕೊಡಬೇಕು. ಅನಂತರ ಪಕ್ಷಕ್ಕೆ ಕೊಡಬೇಕು ಮೂರನೇಯ ಪ್ರಾಧಾನ್ಯತೆ ನಮ್ಮ ನಾಯಕನಿಗೆ/ವ್ಯಕ್ತಿಗೆ ಕೊಡಬೇಕು. ನಮಗೆ ಮೊದಲು ದೇಶ.
Subscribe , Follow on
Facebook Instagram YouTube Twitter WhatsApp