-->

Kannada Sloka - Money is not ultimate happiness

ಅರ್ಥಮನರ್ಥಂ ಭಾವಯ ನಿತ್ಯಂ

ನಾಸ್ತಿತತಃ ಸುಖಲೇಶಃ ಸತ್ಯಮ್ ।

ಪುತ್ರಾದಪಿ ಧನಭಾಜಾಂ ಭೀತಿಃ

ಸರ್ವತ್ರೈಷಾ ವಿಹಿತಾ ರೀತಿಃ ॥


ಸಂಪತ್ತು ಕ್ಷೇಮವಲ್ಲ, ನಿಜವಾಗಲೂ ಅದರಿಂದ ಯಾವ ಸಂತೋಷವೂ ದೊರಕುವುದಿಲ್ಲ. ಇದರ ಬಗೆಗೆ ಸದಾಕಾಲವೂ ವಿಚಾರಮಾಡು. ಇದರಿಂದಾಗಿ ಧನಿಕನೂ ಸಹ ತನ್ನ ಮಕ್ಕಳಿಗೂ ಹೆದರುತ್ತಾನೆ. ಸಂಪತ್ತಿನ ಮಹತ್ತು ಇದೇ ಎಲ್ಲೆಡೆ.

Kannada Sloka - Money is not ultimate happiness


ಮನುಷ್ಯನಿಗೆ ಹಣವು ಎಷ್ಟು ಅಗತ್ಯವೋ ಅಷ್ಟೇ ಅದು ಕಳೆದುಹೋಗುವುದೆಂಬುದರ ಬಗೆಗೆ ಕಳವಳವೂ ಇರುತ್ತದೆ. ಇದರಿಂದಾಗಿ ಹಣಕ್ಕಾಗಿ ಅವನಲ್ಲಿ ದುರಾಸೆಯೂ ಹುಟ್ಟುತ್ತದೆ ಹಾಗೂ ಭಯ, ಅನುಮಾನ, ಅಸೂಯೆಗಳುಂಟಾಗುತ್ತದೆ.ಹಣದಿಂದುಂಟಾಗುವ ಸಂತೋಷವು ಕ್ಷಣಿಕ ಹಾಗೂ ಅತ್ಯಂತ ಹಾನಿಕಾರಕ. ನೀವು ಸುಖದ ಸುಪ್ಪತ್ತಿಗೆಯನ್ನೇ ಹಣದಿಂದ ತರಬಹುದು, ಆದರೆ ಹಣವು ನಿಮಗೆ ನಿದ್ರೆಯನ್ನು ತರಬಲ್ಲದೇ? ಆದ್ದರಿಂದ ಯೌವನಾವಸ್ತೆ ಯಲ್ಲೇ ಸುಖವನ್ನು ಅನುಭವಿಸುತ್ತಿದ್ದರೂ ಅವುಗಳು ಶಾಶ್ವತವಲ್ಲವೆಂಬುದನ್ನು ಅರಿತು ಅವುಗಳ ಬಗ್ಗೆ ನಿರಾಸಕ್ತಿಯನ್ನು ಬೆಳೆಸಿಕೊಳ್ಳ ಬೇಕು. ಜಗದ್ಗುರುಗಳು ನಮ್ಮನ್ನು ಎಚ್ಚರಿಸುತ್ತಿರುವುದು ಸಂಪೂರ್ಣ ಹಣ ತ್ಯಜಿಸು ಎಂದಲ್ಲ. ಅವಸರಕ್ಕಿಂತ ಹೆಚ್ಚಿನ ಹಣ ಸದಾ ಹಣದ ಚಿಂತೆ ಹಣದ ಹಿಂದೆ ಬಿದ್ದಿರುವುದು ಇವೆಲ್ಲಾ ಹಾನಿಕಾರಕ ಹಣಕ್ಕೆ ಮೂರು ಗತಿಗಳು. ದಾನ ಭೋಗ ನಾಶ ಅಂದರೆ ಹಣ ಇದ್ದವರು ಮಾಡಬೇಕಾದ ಉತ್ತಮವಾದ ಕೆಲಸ ಎಂದರೆ ದಾನ ಮಾಡುವುದು ಮಧ್ಯಮ ಕೆಲಸ ಎಂದರೆ ಸ್ವತಹ ತಾವು ತಮ್ಮ ಹಣವನ್ನು ಅನುಭವಿಸುವುದು. ಮನುಷ್ಯ ಅವೆರಡನ್ನು ಮಾಡದಿದ್ದಾಗ ಖಚಿತವಾಗಿ ಹಣ ನಾಶವಾದಂತೆ ತನಗೆ ಸಿಗದೇ ಯಾರೋ ಪಾಲಾಗಿ ಹೋಗುತ್ತದೆ ಅದು ತನ್ನ ಸಂತಾನ ಇರಬಹುದು ಬೇರೆಯವರಿರಬಹುದು ಆತನಿಗೆ ಮಾತ್ರ ಇಲ್ಲದಂತಾಗುತ್ತದೆ. ಹಣದಿಂದ ಅಹಂಕಾರವು ಬಹುಬೇಗ ಬರುತ್ತದೆ. ಶ್ರೀ ರಾಮಕೃಷ್ಣ ಪರಮಹಂಸರು ಒಂದು ಸಣ್ಣ ಕಥೆ ಹೇಳುತ್ತಿದ್ದರು ಕಪ್ಪೆಗೆ ಎಲ್ಲಿಂದಲೋ ದಾರಿಯಲ್ಲಿ ಬಿದ್ದ ಒಂದು ರೂಪಾಯಿ ನಾಣ್ಯ ಸಿಕ್ಕಿತಂತೆ ಅದನ್ನು ತಳ್ಳುತ್ತಾ  ರಸ್ತೆಯ ಪಕ್ಕದಲ್ಲಿದ್ದ ತನ್ನ ಚಿಕ್ಕ ಮಣ್ಣಿನ ಪೊದೆಯಲ್ಲಿ ಇಟ್ಟುಕೊಂಡು ಪ್ರತಿದಿನ ಅದರ ಮೇಲೆ ಕೂಡುತ್ತಿತ್ತಂತೆ, ಆ ರೂಪಾಯಿ ನಾಣ್ಯದಿಂದ ಕಪ್ಪೆಗೆ  ಅಹಂಕಾರ ಬಂದು ಆ ಮಾರ್ಗದಲ್ಲಿ ಹೋಗುತ್ತಿದ್ದ ಆನೆಯನ್ನು ನೋಡಿ ಆನೆ ನೀನು ಮತ್ತೊಮ್ಮೆ ಈ ಹಾದಿಯಿಂದ ಬರಬೇಡ ಬಂದರೆ ವದಿಯುತ್ತೇನೆ ನೋಡು ಎಂದು ಹೇಳುತ್ತಿತ್ತಂತೆ. ಇದು ಕಥೆ ಕಲ್ಪನೆ ಇರಬಹುದು ವಾಸ್ತವ ಇರುವುದಿಲ್ಲ ಆದರೆ ಇದರ ನೀತಿ ನೋಡಿ ಮನುಷ್ಯನಿಗೆ ಹಣದಿಂದ ಹೇಗೆ ಗರ್ವ ಬರುತ್ತದೆ ತನ್ನ ಯೋಗ್ಯತೆ ಮೀರಿ ಮಾತಾಡುತ್ತಾನೆ ನಾವು ಇಂದು ಸಮಾಜದಲ್ಲಿ ಇಂತಹ ಬಹಳ ಜನರನ್ನು ನೋಡುತ್ತಿಲ್ಲವೇ. ಕಾರಣ ನಮ್ಮ ಶಾಸ್ತ್ರಗಳು ಧರ್ಮ ಅರ್ಥ ಕಾಮ ಮೋಕ್ಷ ಎಂದು ಹೇಳಿವೆ ಧರ್ಮದಿಂದ ಅರ್ಥವನ್ನು ಗಳಿಸಿ ನಿನ್ನ ಎಲ್ಲ ಕಾಮನೆಗಳನ್ನು ಪೂರ್ತಿ ಮಾಡಿಕೊಂಡು ನಿನ್ನ ಲಕ್ಷ ಗುರಿ ಮಾತ್ರ ಸದಾ ಮೋಕ್ಷದ ಕಡೆಗೆ ಭಗವಂತನ ಕಡೆಗೆ ಇರಲಿ ಧಾರ್ಮಿಕ ಕಾರ್ಯಗಳನ್ನು ಜೀವನದಲ್ಲಿ ಸದಾ ಮಾಡುತ್ತಿರಬೇಕು ಎಂಬುದೇ ನಮ್ಮ ಹಿರಿಯರ ಋಷಿ ಮುನಿಗಳ ಸಂದೇಶ. ದುಡ್ಡೇ ದೊಡ್ಡಪ್ಪ ಹಣವಿಲ್ಲದ ವ್ಯಕ್ತಿ ಹೆಣಕ್ಕೆ ಸಮಾನ ಇಂತಹ ನಾನ್ನುಡಿಗಳು ಇವೆ ಆದರೆ ಅವೆಲ್ಲ ಸಮಯ ಸಂದರ್ಭಕ್ಕೆ ಬೇರೆ ಬೇರೆ ರೀತಿ ಅರ್ಥ ಕೊಡುತ್ತವೆ. ಎಲ್ಲಾ ಸಮಯದಲ್ಲಿ ಒಂದೇ ಅರ್ಥ ಕೊಡುವುದಿಲ್ಲ. ಹಣದಿಂದ ಹಂಸ 

 ತುಲ್ಯ ಹಾಸಿಗೆ ಎಸಿ ಖರೀದಿಸಬಹುದು ಆದರೆ ನಿದ್ದೆ ನಮ್ಮ ಕೈಯಲ್ಲಿ ಇಲ್ಲ. ಹಣದಿಂದ ಪಂಚ ಪಕ್ವಾನ್ ತಯಾರು ಮಾಡಬಹುದು ಆದರೆ ಹಸಿವೆ ಹುಟ್ಟುವುದು ಜೀರ್ಣ ಮಾಡಿಕೊಳ್ಳುವ ಶಕ್ತಿ ನಮ್ಮ ಕೈಯಲ್ಲಿಲ್ಲ. ಹಣದಿಂದ ಔಷಧ ಖರೀದಿಸಬಹುದು ಆರೋಗ್ಯ ನಮ್ಮ ಕೈಯಲ್ಲಿಲ್ಲ ಇವೆಲ್ಲ ಭಗವಂತನ ಅನುಗ್ರಹ ಕೃಪೆ ದಿಂದ ನಮಗೆ ಸಿಗುತ್ತವೆ. ಹಣ ಅವಸರ ಆದರೆ ಹಣವೇ ಸರ್ವಸ್ವ ಅಲ್ಲ ಇದು ತಿಳಿದು ಜೀವನ ಮಾಡಬೇಕು. ಇಂತಹ ಕಥೆಗಳನ್ನು ನಮ್ಮ ಯುವಕರಿಗೂ ಹೇಳಿ ನಾವು ಆಚರಿಸಲು ಪ್ರಯತ್ನಿಸೋಣ

–>