-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn Follow ThinkBangalore WhatsApp ChannelWhatsApp

ಸಂಸ್ಕಾರವೆಂದರೇನು? What is Sanskar

ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..!

ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..!

ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಹೆರಳ ತುಂಬ ಹೂವು ಸಂಸ್ಕಾರ..!

ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ..!

ಯಜಮಾನಿಕೆ ದೊಡ್ಡಸ್ತಿಕೆ ಇದ್ದರು ಚಿಕ್ಕವರಿಗೆ ತೋರಿಸೋ ಪ್ರೀತಿ ವಿಶ್ವಾಸ ಕಳಕಳಿ ಸಂಸ್ಕಾರ..!

ನಮ್ಮ ನಡವಳಿಕೆಯಲ್ಲಿರೋ ನಯ ವಿನಯ ನಾಜೂಕತನ ಸಂಸ್ಕಾರ..!

ಓದು ಬರಹ ಉದ್ಯೋಗದ ಹೊರತಾಗಿಯೂ ಹೊರುವ ಜವಾಬ್ದಾರಿ ಸಂಸ್ಕಾರ..!

ಖಾಯಿಲೆಯ ತಂದೆಯನ್ನು ಮಗನಂತೆಯೇ ಜೋಪಾನ ಮಾಡೋದು ಸಂಸ್ಕಾರ..!

ಸದಾ ಕುಟುಂಬದ ಕಣ್ಣಾದ ತಾಯಿಯ ಬೇಕು ಬೇಡ ಕೇಳಿ ಈಡೇರಿಸುವದು ಸಂಸ್ಕಾರ..!

ಮುದ್ದಿನ ಮಗ ತಪ್ಪು ಮಾಡಿದಾಗ ಮೃದು ಮಾತಿನಿಂದ ದಾರಿಗೆ ತರೋದು ಸಂಸ್ಕಾರ..!

ಅಡ್ಡ ದಾರಿ ತುಳಿತಾ ಇರೋ ಮಗಳಿಗೆ ನಲ್ಮೆಯ ಮಾತುಗಳಿಂದ ಮನವೊಲಿಸುವುದು ಸಂಸ್ಕಾರ...!

ತನ್ನ ನೂರು ಕಷ್ಟಗಳ ಮಧ್ಯೆಯೂ ಸಹಾಯ ಬೇಡಿದೊಡನೆ ಸಹಾಯ ಮಾಡೊ ಗೆಳೆಯನ ಗುಣ ಸಂಸ್ಕಾರ..!

ಸಣ್ಣ ಸಂಪಾದನೆಯಲ್ಲಿ ತನ್ನ ಇಷ್ಟಾ ನಿಷ್ಟ ಮರೆತು ನಿಮ್ಮನ್ನೊಪ್ಪಿ ಬಂದ ಹೆಂಡತಿಯ ಉದಾರ ಗುಣ ಸಂಸ್ಕಾರ..! 



 ಸಂಸ್ಕಾರ ಎಲ್ಲೆಲ್ಲೂ ಇದೆ.. ಅಂಗಳದ ರಂಗೋಲಿಯಲ್ಲಿ..ದೇವರ ಮುಂದೆ ದೀಪದಲ್ಲಿ..
ಅಡುಗೆಯಾದೊಡನೆ ಬರುವ ಘಮದಲ್ಲಿ.. ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ತಾರದಲ್ಲಿ..
ತುಳಸಿ ಕಟ್ಟೆ ಮುಂದೆ ಕೈ ಮುಗಿವ ಕೈಗಳಲ್ಲಿ.. ತಟ್ಟೆಯ ಮುಂದೆ ಕೂತಾಗ ಬಡಿಸುವವನ ಕೈಯಲ್ಲಿ.. ಹುಶಾರಿಲ್ಲದೆ ಮಲಗಿದಾಗ ಏನಾಯಿತು ಎಂದು ಮರಗುವವರ ಮನದಲ್ಲಿ..

ನಮ್ಮ ನಡವಳಿಕೆ ಗುಣ ಮಾತು ನಡತೆಯಲ್ಲಿ ಸಂಸ್ಕಾರ ಅಡಗಿದೆ..!

–>