-->

Significance of Gaya - ಗಯಾ ಕ್ಷೇತ್ರ ಕಥೆ

 ಗಯಾ ಕ್ಷೇತ್ರವು ಬಿಹಾರ ರಾಜ್ಯದಲ್ಲಿದೆ. #ಫಲ್ಗು ನದಿಯ ತೀರದಲ್ಲಿ ಇರುವ #ವಿಷ್ಣುಪಾದ_ಮಂದಿರ ಆಸ್ಥಿಕ ಹಿಂದೂ ಯಾತ್ರಿಕರ ಶ್ರದ್ದಾ ಕೇಂದ್ರವಾಗಿದೆ.

ಗಯಾ ನಗರದ ಇತಿಹಾಸ ತ್ರೇತಾಯುಗದಲ್ಲೂ ಇದರ ಉಲ್ಲೇಖವಿದೆಯೆಂದರೇ , ಎಷ್ಟು ಪುರಾತನವಾದದ್ದೂ ಎಂಬ ಅರಿವುಂಟಾಗುತ್ತದೆ. 
 

 
 
  ಶ್ರೀರಾಮರು ಪತ್ನಿ ಸೀತಾಮಾತೆ ಮತ್ತು ಅನುಜ ಲಕ್ಷ್ಮಣ ನೊಡನೆ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸದಲ್ಲಿರುವಾಗ , ಪುತ್ರಶೋಕದಿಂದ ದಶರಥ ಮಾಹಾರಾಜನು ಮರಣ ಹೊಂದುತ್ತಾನೆ. ಈ ಸುದ್ದಿ ತಿಳಿದಾಗ ತಂದೆಯ ಶ್ರಾದ್ಧ ಕಾರ್ಯವನ್ನು ಶ್ರೀರಾಮ , ಗಯಾ ಕ್ಷೇತ್ರದಲ್ಲಿ ನಡೆಸುತ್ತಾನೆಂಬ ಉಲ್ಲೇಖವಿದೆ.
ಗಯಾ ಕ್ಷೇತ್ರ ಪಿತೃ ಕಾರ್ಯ ಮಾಡುವುದಕ್ಕೆ ಅಂದಿನಂದಲೂ ಮುಖ್ಯ ಕೇಂದ್ರವಾಗಿದೆ.. 
ಯಾಕೆ ಇದು , ಪಿತೃಕಾರ್ಯ ಗಳಿಗೆ ಪ್ರಮುಖವಾಯಿತು ಎಂಬುದರ ಹಿಂದೆ ಒಂದು ಪದ್ಮಪುರಾಣದಲ್ಲಿ ಬರುವ ಕಥೆಯೊಂದಿದೆ.
 
 ಈ ನಗರಕ್ಕೆ ಹೆಸರು ಬರಲು ಕಾರಣ , ಈ ಪ್ರದೇಶವನ್ನು #ಗಯಾಸುರ ನೆಂಬ ರಾಕ್ಷಸನ ಆಡಳಿತದಲ್ಲಿದ್ದಿತು. ಗಯಾಸುರನು ರಾಕ್ಷಸನಾದರೂ ಮಹಾದೈವ ಭಕ್ತ. ಇವನು ಒಮ್ಮೆ ವಿಷ್ಣುವನ್ನು ಒಲಿಸಿಕೊಳ್ಳಲು ಭೀಕರವಾದ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಇವನು ಇನ್ನೇನು ವರ ಕೇಳಿ ಬಿಡುವನೋ , ಅದರಿಂದ ತಮಗೇನು ಸಂಚಕಾರ ಬರುವುದೋ ಎಂದು ಚಿಂತಿತರಾದ ಇಂದ್ರಾದಿ ದೇವತೆಗಳು ಪರಶಿವನ ಮೊರೆ ಹೋಗುತ್ತಾರೆ.. ಆಗ ಪರಶಿವನು , ಇದಕ್ಕೆ ನೀವು ವಿಷ್ಣುವಿನ ಬಳಿಯೇ ಹೋಗುವುದು ಸೂಕ್ತವೆಂದು ಕಳಿಸುತ್ತಾನೆ. ಅದರಂತೆ ಇಂದ್ರಾದಿ ದೇವತೆಗಳು ವಿಷ್ಣುವಿನ ಬಳಿ ಹೋಗಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.  ದೇವತೆಗಳನ್ನು ಸಮಾಧಾನ ಗೊಳಿಸಿ ನಾರಾಯಣನು , ತಪಸ್ಸು ಮಾಡುತ್ತಿದ್ದ ಗಯಾ ಸುರನ ಬಳಿಗೆ ಬಂದು ನೋಡಲಾಗಿ , ಗಯಾಸುರ ಒಬ್ಬ ಉತ್ತಮ ಗುಣವುಳ್ಳ ಭಕ್ತ ಎಂದರಿತು , ಗಯಾಸುರನಿಗೆ ವಿಶೇಷ ವರವೊಂದನ್ನು ನೀಡುತ್ತಾನೆ. ಅದರಂತೆ ಯಾವ ಮಾನವ ,ತನ್ನ ಅಂತ್ಯಕಾಲದಲ್ಲಿ ಗಯಾಸುರನನ್ನು ಸ್ಪರ್ಷಿಸುತ್ತಾರೋ ಅವರಿಗೆ ಸ್ವರ್ಗ ಪ್ರಾಪ್ತಿಯಾಗಲಿ ಎಂದು.!! 
 
ಇದರಿಂದ ಗಯಾಸುರನ ಸ್ಪರ್ಷ ಮಾತ್ರದಿಂದಲೇ ಮಾನವರೆಲ್ಲಾ ಸ್ವರ್ಗ ಪ್ರವೇಶ ಮಾಡುವುದನ್ನು ಕಂಡ ಯಮಲೋಕದಲ್ಲಿ ಯಾರಿಗೂ ಕೆಲಸವಿಲ್ಲದಂತಾಗಿ , ದೇವತೆಗಳು ಬ್ರಹ್ಮನ ಬಳಿ ಹೋಗಿ , ವಿಷ್ಣುವಿನ ವರದಿಂದ ಜನರೆಲ್ಲರೂ ಸ್ವರ್ಗಕ್ಕೆ ಹೋಗುತ್ತಿದ್ದು ನರಕಲೋಕದ ಅವಶ್ಯಕತೆ ಇಲ್ಲ , ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಿದೆಯೆಂದು ಪ್ರಾರ್ಥಿಸುತ್ತಾರೆ. ಆಗ ಬ್ರಹ್ಮದೇವನು  ಇದು  ವಿಷ್ಣುವು ವರ ದಯಪಾಲಿಸಿರುವುದರಿಂದ , ವಿಷ್ಣುವೇ ಇದಕ್ಕೆ ಪರಿಹಾರ ಕೊಡಲು ಸಾಧ್ಯ , ಎಂದು ದೇವತೆಗಳನ್ನು ವಿಷ್ಣುವಿನ ಬಳಿಗೆ ಕಳಿಸುತ್ತಾರೆ. ಅದರಂತೆ ದೇವತೆಗಳು ವಿಷ್ಣುವಿನ ಬಳಿಯಲ್ಲಿ ನಿವೇದಿಸಿಕೊಳ್ಳುತ್ತಾರೆ.. ಆಗ ವಿಷ್ಣುವು ಅವರನ್ನು ಸಮಾಧಾನಿಸಿ ಕಳಿಸಿ , ಒಬ್ಬ ಬ್ರಾಹ್ಮಣನ ವೇಷದಲ್ಲಿ ಗಯಾಸುರನ ಬಳಿಬಂದು  , ಲೋಕ ಕಲ್ಯಾಣಾರ್ಥವಾಗಿ ಯಾಗ ಮಾಡಬೇಕೆಂದು ಅದಕ್ಕೆ ಪರಿಶುದ್ದವಾದ ಸ್ಥಳ ತೋರಿಸಬೇಕು ಎಂದಾಗ ಗಯಾಸುರನು ಬ್ರಾಹ್ಮಣನಿಗೆ ಅನೇಕ ಜಾಗಗಳನ್ನು ತೋರಿಸುತ್ತಾನೆ.. ಇದಾವುದೂ ಪರಿಶುದ್ದವಲ್ಲವೆಂದು ಬ್ರಾಹ್ಮಣನು ಹೇಳುತ್ತಾರೆ.  ಆಗ ಗಯಾಸುರನು ಇನ್ನೇನು ನನ್ನ ಎದೆಯ ಮೇಲೆ ಯಾಗ ಮಡಬೇಕೇನು ಎಂದು ಕೇಳುತ್ತಾನೆ. ಆಗ ಬ್ರಾಹ್ಮಣ ರೂಪಿ ವಿಷ್ಣುವು , ಹೌದು ನೀನು ರಾಕ್ಷಸನಾಗಿದ್ದರೂ ಪರಿಶುದ್ದ. ನಿನ್ನ ಎದೆಯ ಮೇಲೆಯೇ ಹೋಮಕುಂಡವನ್ನಿಟ್ಟು ಯಾಗ ಮಾಡಲು‌ ಅನುಮತಿ ಕೇಳಿದಾಗ,   ಇದು ತನ್ನ ವಧೆಗಾಗಿ ಎಂಬ ಅರಿವು ಮೂಡುತ್ತದೆ , ಆದರೂ ವಿಷ್ಣುವಿನ ಮಾತಿಗೆ ಎದುರು ಹೇಳದೇ ಸಮ್ಮತಿಸುತ್ತಾನೆ.
 ಆಗ ವಿಷ್ಣುವು ಯಜ್ಞ ಕಾರ್ಯ ನೆರವೇರಿಸಿ ಕೊಡುವಂತೆ ಬ್ರಹ್ಮದೇವನನ್ನು ಆಹ್ವಾನಿಸುತ್ತಾರೆ.  ಬ್ರಹ್ಮದೇವರು ತನ್ನ ಮಾನಸಪುತ್ರರನ್ನು ಋತ್ವಿಜರನ್ನಾಗಿ ಕೂರಿಸುತ್ತಾನೆ. ಆಗ ಬ್ರಹ್ಮ ಮಾನಸಪುತ್ರರು ಗಯಾಸುರನನ್ನು ಉತ್ತರಾಭಿಮುಖವಾಗಿ ಮಲಗಿಸಿ ಯಜ್ಞಕಾರ್ಯ ಆರಂಭಿಸುತ್ತಾರೆ. ಯಜ್ಞ ಆರಂಭವಾಗುವ ಮುನ್ನವೇ  ಗಯಾಸುರನ ಉಸಿರಾಟದಿಂದ ಹೋಮಕುಂಡವು ಅಲುಗಾಡುತ್ತಿರುತ್ತದೆ.  ಆಗ ಬ್ರಹ್ಮನು ಯಮನಿಗೆ ದರ್ಮಶಿಲೆಯೊಂದು ತಂದು ಗಯಾಸುರನ ತಲೆಯ ಮೇಲಿಡುವಂತೆ ಯಮನಿಗೆ ಹೇಳುತ್ತಾರೆ. ಹಾಗೆಯೇ ಯಮನು ಧರ್ಮಶಿಲೆಯೊಂದನು ಗಯಾಸುರನ ತಲೆಯ ಮೇಲಿಟ್ಟರೂ ತಲೆಯ ಕುಲುಕಾಟವನ್ನು ತಪ್ಪಿಸಲು ಆಗುವುದಿಲ್ಲ.. ಕಡೆಗೆ ಸಾಕ್ಷಾತ್ ವಿಷ್ಣುವೇ ಗಯಾಸುರನ ಎದೆಯ ಮೇಲಿದ್ದ ಯಜ್ಞಕುಂಡದ ಮೇಲೆ ತನ್ನ ಬಲಪಾದವನ್ನು ಇಟ್ಟು ನಿಲ್ಲುತ್ತಾನೆ ಮತ್ತು ಗಯಾಸುರನ ಅಂತ್ಯವು ಸಮೀಪಿಸುತ್ತದೆ.. ಸಾಕ್ಷಾತ್ ವಿಷ್ಣುವಿನ ದರ್ಶನದಿಂದ ಮತ್ತು ಸ್ಪರ್ಶದಿಂದ ಗಯಾಸುರನು , ವಿಷ್ಣುವಿಗೆ ಸ್ವಾಮಿ ನನ್ನ ಇಷ್ಟು ದಿನದ ತಪಸ್ಸಿನ ಪರಿಶ್ರಮಕ್ಕೆ ಇಂದು ನಿನ್ನ ದರ್ಶನ ಮತ್ತು ಸ್ಪರ್ಷದಿಂದ ಫಲ ಸಿಕ್ಕಂತಾಯಿತು. ನಿಮ್ಮ ಪಾದ ಸ್ಪರ್ಶವಾಗುರುವ ಈ ಸ್ಥಳವು ಗಯಾ ಕ್ಷೇತ್ರವೆಂದು ಪ್ರಸಿದ್ದಿಗೆ ಬರಲಿ ಎಂದು ಬೇಡುತ್ತಾನೆ. ಇಲ್ಲಿ ವಾಸವಾಗಿರುವ ತನ್ನ ವಂಶಜರನ್ನು ಯಾರೂ ರಾಕ್ಷಸರೆಂದು ಗುರುತಿಸದೇ , ಅವರನ್ನೇ ಪಿತೃಕಾರ್ಯ ಗಳಿಗೆ ನಿಮಂತ್ರಿಸುವಂತಾಗಬೇಕೆಂದು ಮತ್ತು ಶ್ರಾದ್ದಭೋಜನ ಮಾಡಿದ ಪಾಪವೂ ಅವರಿಗೆ ತಟ್ಟದಿರಲೆಂದೂ  ಪ್ರಾರ್ಥಿಸುತ್ತಾನೆ. ತನ್ನ ಅಂತ್ಯಕಾಲದಲ್ಲಿ ಕೂಡ ತನ್ನ ಬಗ್ಗೆ ಯೋಚಿಸದೇ , ತನ್ನ ಜನರ ಹಿತ ಬಯಸಿದ ಗಯಾಸುರನನ್ನು , ಮಹಾವಿಷ್ಣುವು ಗಯಾಸುರನ ಕೋರಿಕೆಗಳನ್ನು ಮನ್ನಿಸಿ ,   ಬ್ರಹ್ಮ ಆದಿಯಾಗಿ ತಾನೂ ಸೇರಿದಂತೆ ನಿಂತಿರುವ ಸ್ಥಳಕ್ಕೆ ಗಯಾಸುರನ ಹೆಸರಿನಿಂದಲೇ , ಗಯಾ ಕ್ಷೇತ್ರ ಎಂದು ನಾಮಕರಣ ಮಾಡಿ ,ಯಾರು ಈ ಸ್ಥಳದಲ್ಲಿ ಪಿತೃಕಾರ್ಯ ನೆರವೇರಿಸುತ್ತಾರೆಯೋ ಅವರ ಪೂರ್ವಿಕರೆಲ್ಲರಿಗೂ ಮತ್ತು ಕಾರ್ಯ ಮಾಡಿದವನಿಗೂ ಸದ್ಗತಿ ದೊರಕುವುದೆಂದು  ವರ ನೀಡುತ್ತಾನೆ.
ಗಯಾ ಕ್ಷೇತ್ರವು ದೇವಾದಿದೇವತೆಗಳು ಅನುಗ್ರಹಿಸಿದ ಕ್ಷೇತ್ರವಾಗಿದೆ. ಆ ಕಾರಣದಿಂದಲೇ , ತಾವು ಮಾಡಿರುವ ಕೆಟ್ಟ ಕರ್ಮಗಳಿಂದ , ತಮಗೆ ಸಂಭವಿಸಬಹುದಾದ ನರಕಲೋಕದ ಭಯಕ್ಕೆ , ಮೃತ ಹೊಂದಿದ ದೇಹಗಳು , ತಮ್ಮ ವಂಶಜರಲ್ಲಿ ಒಬ್ಬನಾದರೂ ಗಯಾ ಕ್ಷೇತ್ರದಲ್ಲಿ ಶ್ರಾದ್ದಕಾರ್ಯ ಮಾಡಿ ಪಿಂಡ ಪ್ರಧಾನ ಮಾಡಲೆಂದು ಅಪೇಕ್ಷಿಸುತ್ತಿರುತ್ತಾರೆ.. 
ಗಯಾ ಕ್ಷೇತ್ರದಲ್ಲಿ ಯಾವ ಮಗನು ಪಿಂಡ ಪ್ರಧಾನ ಮಾಡುವನೋ ಅವನೇ ನಮಗೆ ರಕ್ಷಕನಾಗುತ್ತಾನೆ ಎಂದು ಪಿತೃಗಳು , ಗಯೆಗೆ  ಹೋಗುವ ಮಗನನ್ನು ಕಂಡು ಹರ್ಷಚಿತ್ತರಾಗಿ ಸಂತುಷ್ಟಗೊಂಡು ಆಶೀರ್ವದಿಸುತ್ತಾರೆ. 
 
 ಸ್ವಂತ ಮಗನೇ ಆಗಲೀ ಅಥವಾ ಬೇರಾರೇ ಆಗಲೀ ಮೃತಪಟ್ಟಿರುವ ಯಾವುದೇ ವ್ಯಕ್ತಿಯ ಗೋತ್ರ, ಹೆಸರನ್ನು ಹೇಳಿ ಯಾವಾಗ ಗಯಾ ಕ್ಷೇತ್ರದಲ್ಲಿ ಪಿಂಡ ದಾನ ಮಾಡುತ್ತಾನೆಯೋ ಆ ಕ್ಷಣದಲ್ಲಿಯೇ ಅವನು ಕೊಟ್ಟ ಪಿಂಡಕ್ಕೆ ಪಾತ್ರನಾದ ಚೇತನನು ಬ್ರಹ್ಮ ಸಾಯುಜ್ಯವನ್ನು ಪಡೆಯುತ್ತಾನೆ ಎಂದು ಪದ್ಮಪುರಾಣದಲ್ಲಿ ಹೇಳಲಾಗಿದೆ.

ಗಯಾಕ್ಷೇತ್ರದಿಂದ ಕೇವಲ 15 km ದೂರದಲ್ಲಿಯೇ ಸ್ಥಳವಿದೆ. ಭಗವಾನ್ ಬುದ್ದನಿಗೆ ಸಾಕ್ಷಾತ್ಕಾರ ದೊರಕಿದ ಬೋಧಿ ವೃಕ್ಷವೂ ಇಲ್ಲಿದೆ. 
ಇಲ್ಲಿ  ಧ್ಯಾನ ಭಂಗಿಯಲ್ಲಿರುವ ಭಗವಾನ್ ಬುದ್ದನ ಬೃಹತ್ ಮೂರ್ತಿಯನ್ನೂ ನೋಡಬಹುದು.
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ  

32 interesting facts of our Mysore city

1)Mysuru is the First cleanest city in India.
2)Mysuru railway junction is cleanest railways station in India. 3)University of Mysore(first university in Karnataka),sixth university in India and It was the first university in India started by indians. 4)MMC (Mysore Medical college )1st medical college in Karnataka. 5)1st city to undertake planned development in Asia. 6)Mysuru is the Cultural capital of Karnataka. 7)Mysuru is called as the ashtanga yoga capital of India. 8)Mysuru is Famous for Mysuru Silk,Mysuru Masala Dosa, Mysuru mallige,Mysuru Pak sweet. Mysuru Beetle,Mysuru Bonda etc,... 9)World's largest corporate university (Infosys GEC) is situated in Mysuru. 10)Mysuru zoo is 2nd best zoo in Asia. 11)In 2010, the city of Mysuru became the first Wi-Fi enabled city in India,.Today, Wi-Fi enabled Mysuru is the second in the world after Jerusalem. 12)Indian election inks (marked on finger) is manufactured only in Mysuru. 13)One of four cities in INDIA where currency notes are printed. 14)2nd largest IT exporter in Karnataka after Bengaluru. 15)Mysuru Was Home To The First Private Radio Station In India. The official name of all India Radio"Akashavani is the contribution of Mysuru. 16)Mysuru's Karanji Lake's Aviary Is The Biggest 'Walk Through' Aviary In India. 17)Mysuru has India's First Intelligent Transport System. 18)St.Philomena’s Church in myusru is the India’s 2nd Tallest Church & second largest church in Asia 19)CFTRI is one and only food research organisation situated in Karnataka is in Mysuru. 20)DFRL is only one Defence food research Lab of India which is in Mysuru. 21)RMP is the only rare material plant in Karnataka after Mumbai that is in Mysuru. 22)World's largest paint manufacturing unit(Asian paints) is in Mysuru 23)One of Indian naval ship is named after Mysuru (INS Mysore) 24)Rolls Royce car company names their car collection as Rolls-Royce Bespoke Ghost Mysore. 25)India’s first toilet for transgenders was started in Mysuru. 26)Asia's first TB hospital(PKTB sanitorium) was started in mysuru. 27)The rail museum in mysuru is the second one of its kind established in india after the one at delhi. 28)Mysuru is the second fastest growing city in Karnataka after Bengaluru. 29)Mysore Zoo is the 3rd Oldest in India. 30)Venkata subba shetty of mysuru was first aeroplane builder in india. 31)Mysuru Railway Station is the First visually challenged-friendly station in India. 32)Mysuru palace is the most visited monument in india,even more than taj mahal

48 interesting facts you may have not known

1.🌱Hot water will turn into ice faster than cold water.
2.🌴The Mona Lisa has no eyebrows.
3.🌱The sentence, “The quick brown fox jumps over the lazy dog” uses every letter in the English language. 4.🌱The strongest muscle in the body is the tongue. 5.Ants never sleep! 6.🌴“I Am” is the shortest complete sentence in the English language. 7. 🌴Coca-Cola was originally green. 8.🌴 The most common name in the world is Mohammed. 9.🌴When the moon is directly overhead, you will weigh slightly less. 10.🌴Camels have three eyelids to protect themselves from the blowing desert sand. 11.🌱There are only two words in the English language that have all five vowels in order: “abstemious” and “facetious.” 12.🌱The name of all the continents end with the same letter that they start with. 13.🌴There are two credit cards for every person in the United States. 14.🌱TYPEWRITER is the longest word that can be made using the letters only on one row of the keyboard. 15.🌱Minus 40 degrees Celsius is exactly the same as minus 40 degrees Fahrenheit. 16.🌱Chocolate can kill dogs, as it contains theobromine, which affects their heart and nervous system. 17.🌱Women blink nearly twice as much as men! 18.🌴You can't kill yourself by holding your breath. 19.🌱It is impossible to lick your elbow. 20.🌴The Guinness Book of Records holds the record for being the book most often stolen from Public Libraries. 21.🌱People say "Bless you" when you sneeze because when you sneeze, your heart stops for a millisecond. 22.🌴It is physically impossible for pigs to look up into the sky 23.🌱The "sixth sick sheik's sixth sheep's sick" is said to be the toughest tongue twister in the English language. 24.🌱“Rhythm” is the longest English word without a vowel. 25.🌱If you sneeze too hard, you can fracture a rib. If you try to suppress a sneeze, you can rupture a blood vessel in your head or neck and die. 26.🌴Each king in a deck of playing cards represents great king from history. Spades - King David Clubs - Alexander the Great, Hearts - Charlemagne Diamonds - Julius 28.🌴111,111,111 x 111,111,111 = 12,345,678,987,654,321 29.🌱If a statue of a person in the park on a horse has both front legs in the air, the person died in battle. If the horse has one front leg in the air, the person died as a result of wounds received in battle. If the horse has a all four legs on the ground, the person died of natural causes. 30. 🌱What do bullet proof vests, fire escapes, windshield wipers and laser printers all have in common? Ans. - All invented by women. 31.🌱Question - This is the only food that doesn't spoil. What is this? Ans. - Honey 32. 🌴A crocodile cannot stick its tongue out. 33. 🌴A snail can sleep for three years. 34. 🌱All polar bears are left handed. 35. 🌱American Airlines saved $40,000 in 1987 by eliminating one olive from each salad served in first-class. 36. 🌴Butterflies taste with their feet. 37. 🌱Elephants are the only animals that can't jump. 38. 🌴In the last 4000 years, no new animals have been domesticated. 39. 🌱On average, people fear spiders more than they do death. 40. 🌴Stewardesses is the longest word typed with only the left hand. 41. 🌴The ant always falls over on its right side when intoxicated. 42.🌴 The electric chair was invented by a dentist. 43. 🌱The human heart creates enough pressure when it pumps out to the body to squirt blood 30 feet. 44. 🌴Rats multiply so quickly that in 18 months, two rats could have over million descendants. 45. 🌱Wearing headphones for just an hour will increase the bacteria in your ear by 700 times 46. The cigarette lighter was invented before the match. 47. 🌴Most lipstick contains fish scales. 48. 🌴Like fingerprints, everyone's tongue print is different.
Terms | Privacy | 2024 🇮🇳
–>