-->

Where is Happiness ? Its in being Happy - ಖುಷಿ ಎಲ್ಲಿದೆ? ಖುಷಿಯಲ್ಲಿದೆ!

ಖುಷಿ ಎಲ್ಲಿದೆ? ಖುಷಿಯಲ್ಲಿದೆ!

ಖುಷಿಯೆಂದರೆ,,,, ಇತರರಿಗೆ ನೀಡುವುದು ಮತ್ತು ಸೇವೆ ಮಾಡುವುದು

- ಹೆನ್ರಿ ಡ್ರಮ್ಮಂಡ್1. ಕೃತಙ್ಞತೆ ವ್ಯಕ್ತಪಡಿಸಿ

ನಮ್ಮ ಜನ್ಮಕ್ಕೆ ಕಾರಣವಾದ ಅಪ್ಪ-ಅಮ್ಮ, ಕೈಹಿಡಿದ ಸಂಗಾತಿ, ಓದುವಾಗ ಪ್ರೋತ್ಸಾಹಿಸಿದ ಸ್ನೇಹಿತರು, ಕೆಲಸ ಕೊಟ್ಟ ಸಂಸ್ಥೆ, ಬೆಳಗ್ಗೆ ನಾವು ಏಳುವ ಮೊದಲೆ ಹಾಲು ತಂದು ಹಾಕುವ ಹಾಲಿನವ, ಪೇಪರ್‌ನವ, ಓ ನಮ್ಮ ಜೀವನವು ನಮಗೆ ಗೊತ್ತಾಗದೆ ಇತರರನ್ನು ಅವಲಂಬಿಸಿದೆ. ನೀವು ಓದುತ್ತಿರುವ ಈ ಗಣಕಯಂತ್ರ ಮತ್ತು ಮೊಬೈಲ್,ಅಂತರ್‌ಜಾಲ ಯಾರೋ ನಿಮಗಾಗಿ ಕಂಡು ಹಿಡಿದಿದ್ದಾರೆ. ಒಮ್ಮೆ ಯೋಚಿಸಿ ನಾವು ಎಷ್ಟು ಜನರಿಗೆ ಥ್ಯಾಂಕ್ಸ್
ಹೇಳಬೇಕು ಎಂದು! ಕೃತಜ್ಞತೆಯನ್ನು ವ್ಯಕ್ತಪಡಿಸಿ, ಹೃದಯಾಂತರಾಳದಿಂದ ಖುಷಿ ನಿಮ್ಮ ತುಟಿಯ ಮೇಲೆ ಕಾಣಿಸಿಕೊಳ್ಳುತ್ತದೆ.

2. ಆಶಾವಾದವೇ ಜೀವನ ಸಾಕ್ಷಾತ್ಕಾರ

ಹೌದು ಜೀವನದಲ್ಲಿ ಏನೇ ಬಿಟ್ಟರೂ ಭರವಸೆಯನ್ನು ಮಾತ್ರ ಬಿಡಬಾರದು. ಆಶಾವಾದವನ್ನು ಇರಿಸಿಕೊಂಡವನು ಜೀವನದಲ್ಲಿ ಏನು ಬೇಕಾದರು ಸಾಧಿಸಬಲ್ಲ. ಖುಷಿಯನ್ನು ಪಡೆಯುವುದು ಅಸಾಧ್ಯವಲ್ಲ.

3. ಈ ಕ್ಷಣದಲ್ಲಿ ಬದುಕಿ

ನಾಳೆ ಹೇಗಪ್ಪಾ ಎಂದು ಆಲೋಚಿಸಿದರೆ ಮುಗಿಯಿತು ನಿಮ್ಮ ಕತೆ! ಬಿಡ್ರಿ ಆರಾಮಾಗಿ ನಿಮ್ಮ ಈಗಿನ ಜೀವನವನ್ನು ಆನಂದಿಸಿ. ಅರೆ ಕಳೆದುಹೋಗ್ತಿದೆ ಸ್ವಾಮಿ ಸಮಯ! ಆನಂದಿಸಿ. ಟಿವಿಯಲ್ಲಿ ಒಳ್ಳೆ ಪ್ರೋಗ್ರಾಂ ಬರುತ್ತಿದೆ, ರೇಡಿಯೋದಲ್ಲಿ ಒಳ್ಳೆ ಹಾಡು ಬರುತ್ತಿದೆ. ಅಕ್ಕ ಪಕ್ಕ ಪರಿಸರ ನೋಡಿ ಎಷ್ಟು ಚೆನ್ನಾಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಈ ವೆಬ್‌ಸೈಟ್‌ನಲ್ಲಿರುವ ಅಂಕಣಗಳನ್ನು ಓದಿ ನಿಮ್ಮ ಖುಷಿಗಾಗಿಯೇ ಬರೆದಿರುವುದು!!!

4. ಕ್ಷಮಿಸಿಬಿಡಿ

ಹೋಗಲಿ ಬಿಡಿ ಅವರ ಮೇಲೆ ದ್ವೇಷ ಸಾಧಿಸಿ, ಅವರನ್ನು ಹಣ್ಣು ಗಾಯಿ ನೀರು ಗಾಯಿ ಮಾಡಲು ನಮ್ಮ ಜೀವನವೆನ್ನುವುದು ಸಿನಿಮಾ ಕ್ಲೈಮ್ಯಾಕ್ಸ್ ಅಲ್ಲವಲ್ಲ. ಕ್ಷಮಿಸಿ ಬಿಡಿ, ಅದೇ ಅವರಿಗೆ ನೀವು ನೀಡಬಹುದಾದ ದೊಡ್ಡ ಶಿಕ್ಷೆ. ಅವರನ್ನು ನೆನಪಿಸಿಕೊಳ್ಳುವುದು ಬಿಡುವುದರಿಂದ ಖುಷಿ ನಿಮ್ಮದಾಗುತ್ತದೆ.

5. ಸಾಮಾಜೀಕರಣ ಹೊಂದಿ

ಸಮಾಜದ ಜೊತೆಗೆ ನಾವು ಬೆರೆಯುತ್ತಿದ್ದೀವಾ? ಅರೆ ಎಷ್ಟು ದಿನ ಆಯ್ತು ನಾವು ಕಾರ್ಯಕ್ರಮಗಳಿಗೆ ಹೋಗಿ, ಕರೆದಿಲ್ಲವೇ? ಹೋಗಲಿ ಬಿಡಿ, ನೀವೇ ಒಂದು ಸಣ್ಣ ಕಾರ್ಯಕ್ರಮ ಮಾಡಿ, ಸಂತೋಷ ಹಂಚಿಕೊಳ್ಳೋಕೆ. ಇಲ್ಲವೇ ನಿಮ್ಮ ಅಕ್ಕಪಕ್ಕ ಇರುವವರನ್ನು ಕನಿಷ್ಟ ಟೀ ಕುಡಿಯಲಾದರು ಕರೆದುಕೊಂಡು ಹೋಗಿ.

6. ಖುಷಿಗಾಗಿ ಇತರರ ಮೇಲೆ ಅವಲಂಬಿಸಬೇಡಿ

ಅವಳಿದ್ದರೆ, ಅವನಿದ್ದರೆ, ಅವರಿದ್ದರೆ, ಆಗಿದ್ದರೆ, ಈಗಿದ್ದರೆ ಖುಷಿಯಾಗಿರಬಹುದಿತ್ತು ಎಂಬ ವಾಕ್ಯ ಬಳಸಬೇಡಿ. ನೀವು ಈಗ ಇರುವ ರೀತಿಯಲ್ಲಿ ಬದುಕಿದರು ಸಹ ಖುಷಿಯಾಗಿರಬಹುದು. ಹೋಲಿಕೆಗಳು ಕವನಗಳಿಗೆ ಸರಿ, ಜೀವನಕ್ಕಲ್ಲ. ಖುಷಿಯಾಗಿರಲು ನಾವು ನಿದರ್ಶನವಾಗಬೇಕು.

7. ಸದಾ ಕ್ರಿಯಾಶೀಲರಾಗಿ

ಸದಾ ಒಂದು ಗುರಿಗಾಗಿ ಆಲೋಚಿಸುವವರಿಗೆ ದುಃಖವು ಹತ್ತಿರ ಸಹ ಸುಳಿಯುವುದಿಲ್ಲ. ಮಹತ್ವಾಕಾಂಕ್ಷಿ ಅಲ್ಲದಿದ್ದರು ಪರವಾಗಿಲ್ಲ. ಆಕಾಂಕ್ಷಿಯಾಗಿರುವುದು ಉತ್ತಮ. ನಿಮ್ಮ ಗುರಿಗಳನ್ನು ಸಿದ್ಧಗೊಳಿಸಿ.

8. ಹವ್ಯಾಸಗಳು ನಿಮಗೆ ಖುಷಿ ನೀಡುತ್ತವೆ

ಹೌದು, ಒಂದು ಹವ್ಯಾಸವು ನಿಮ್ಮನ್ನು ಖಿನ್ನತೆಯಿಂದ ದೂರ ಮಾಡಬಲ್ಲದು. ಅದು ರಚನಾತ್ಮಕ ಮತ್ತು ಧನಾತ್ಮಕವಾಗಿರಲಿ. ಓದುವುದು, ಖುಷಿಯಾದ ಹಾಡು ಕೇಳುವುದು, ಪಕ್ಷಿವೀಕ್ಷಣೆ, ಕೆರೆ ದಡದಲ್ಲಿ ಓಡಾಟ ಇತ್ಯಾದಿ ಮಾಡಿ. ಖುಷಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

9. ನೀರಿನಲ್ಲಿ ಖುಷಿಯ ಉಂಗುರ!

ಸಾಹಿತ್ಯ ಬದಲಿಸಿಲ್ಲ ಕಣ್ರೀ, ಖುಷಿ ಬೇಕೆಂದಾಗ ಸ್ವಲ್ಪ ನೀರು ಕುಡಿಯಿರಿ, ಇಲ್ಲವೇ ಸ್ನಾನ ಮಾಡಿ, ಪಾತ್ರೆ ತೊಳೆಯಿರಿ, ಬೈಕ್ ತೊಳೆಯಿರಿ, ಬಟ್ಟೆ ಒಗೆಯಿರಿ, ಈಜಾಡಿ ಹೀಗೆ ಏನೇ ಮಾಡಿ ನೀರು ನಿಮ್ಮ ಪಾಲಿನ ಖುಷಿ ನೀಡುವ ದೇವತೆಯಾಗುತ್ತದ���.

10. ಸ್ವಲ್ಪ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಿ

ಹೌದು ನೀವು ಆಸ್ತಿಕರಾದರೆ ದೇವರು ದೊಡ್ಡವನು ಎಂದು ದೇವಾಲಯಕ್ಕೆ ಹೋಗಿ. ನಾಸ್ತಿಕರಾದರೆ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಧ್ಯಾನದಲ್ಲಿ ತೊಡಗಿಕೊಳ್ಳಿ. ಧ್ಯಾನ ಮತ್ತು ಪ್ರಾರ್ಥನೆ ಎಲ್ಲವೂ ನಿಮಗೆ ಖುಷಿ ನೀಡುತ್ತದೆ. "ಅತ್ಯುತ್ತಮ ಚಿಂತನೆಯು ಅತ್ಯುತ್ತಮ ಪ್ರಾರ್ಥನೆಗೆ ಸಮ" ಎಂದವರು ವಿಕ್ಟರ್ ಹ್ಯೂಗೋ, ಒಳ್ಳೆಯದನ್ನು ಚಿಂತಿಸಲು ಸ್ವಲ್ಪ ಸಮಯ ಮೀಸಲಿಡಿ. ಖುಷಿ ಸಿಗುತ್ತದೆ.

 
ಈ ಮೇಲಿನ ಸಲಹೆಗಳನ್ನು ಪಾಲಿಸಿ ಖುಷಿಯು ನಿಮ್ಮದಾಗುವುದರಲ್ಲಿ .....
–>