😎😥😤ಹಾಸ್ಯ ಪ್ರೇಮಿಯ ಸಾವಿನ ಪತ್ರ.😎😹😹. ನನ್ನ ಸಾವಿಗೆ ನಾ ಕಾರಣವಲ್ಲ, ಬೇರೆ ಯಾರೆಂದು ನಾ ಹೇಳುವುದಿಲ್ಲ. ನಾ ಸತ್ತಮೇಲೆ ಯಾರು ನನಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಬೇಡಿ. ಬದುಕಿರುವಾಗಲೆ ಸಿಗದ ಮಧುಶ್ರೀ, ವಿದ್ಯಾಶ್ರೀ, ದಿವ್ಯಶ್ರೀ, ಸೌಮ್ಯಶ್ರೀ,..🎭 ಇನ್ನು ನಾ ಸತ್ತಮೇಲೆ ನನಗೇಕೆಬೇಕು ಈ ಶಾಂತಿ ರೀ..😀😂😂 ************************************* : ಗುಡ್ ನೈಟ್ ಹಚ್ಚಿದ್ದರೂ ರಾತ್ರಿ ವೇಳೆ ಸೊಳ್ಳೆ ಕಚ್ಚಿದಾಗ ಏನ್ ಮಾಡಬೇಕು ಅಂದ್ರೆ..?!! . . . . ಏನಿಲ್ಲ ಸುಮ್ನೆ 'ಕೆರ್ಕೊಂಡು ಮಲಗಬೇಕು' ಅಷ್ಟೆ! 😂 ************************************* *ಚಿಕ್ಕಮಕ್ಕಳ ಚಡ್ಡಿ* ಮತ್ತು *ವಾಟ್ಸ್ ಪ್* ಎರಡೂ ಒಂದೇ. ಅವಾಗಾವಾಗ ಚೆಕ್ ಮಾಡ್ಕೊಂಡು ಇರಬೇಕಾಗುತ್ತೆ☜.. ಏನಾದರೂ ಬಂತಾ ,ಇಲ್ಲವಾ ಅಂತ!!! 😂😂😆😆😆😆 ************************************* ಟೀಚರ್ : ಯಾಕೋ ಗುಂಡ ಮಗು ಅಳತ್ತಿದೆ. ಗುಂಡ : ಪಾಪ ಹಸಿವು ಆಗ್ತಿದೆ ಅಂತ, ಮೆಣಸಿನಕಾಯಿ ಕೊಟ್ಟೆ, ಇನ್ನೊಂದು ಬೇಕು ಅಂತ ಅಳುತ್ತಿರಬೇಕು ************************************* ತಿಮ್ಮ: ನಾನು ತೆಂಗಿನಮರ ಹತ್ತಿ ನೋಡಿದರೆ ಇಂಜೀನಿಯರಿಂಗ್ ಕಾಲೇಜ ಹುಡುಗಿಯರು ಕಾಣತಾರೆ ಗೋತ್ತಾ. ಗುಂಡ: ಹತ್ತಿದ ಮೇಲೆ ಕೈ ಬಿಟ್ಟು ನೋಡು ಮೆಡಿಕಲ್ ಕಾಲೇಜ ಹುಡುಗಿಯರು ಕಾಣತ್ತಾರೆ. 😄😄😜 ************************************* ರಾಮ ಬಿಲ್ಲು ಮುರಿದಿದ್ ಕೆ ಸೀತೆ ಅಪ್ಪನನ್ನ ಬಿಟ್ಟು ಬಂದ್ಲು........🤓 ಕೃಷ್ಣ ಕೊಳಲು ಊಧಿಧಕೆ ರಾಧೆ ಅಪ್ಪನ್ನ ಬಿಟ್ಟು ಬಂದ್ಲು..😘 ನಾನು ಬರಿ ಒಂದು ಮೆಸೇಜ್ ಕಳ್ಸಿದ್ಕೆ ಅವ್ಳು ಅವ್ಳ ಅಪ್ಪನ ಕರ್ಕೊಂಡ್ ಬಂದ್ಲು...😳😝😜😙 ************************************* ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ. ಗುಂಡಾ: ನಾವು ಆದಷ್ಟು ಬೇಗ ಆ ಮಹಿಳೆಯನ್ನು ಕಂಡುಹಿಡಿಯಬೇಕು ಸಾರ್ 😀😀 ************************************* ಹುಡುಗನ ತಂದೆ : ನಿಮ್ ಹುಡ್ಗಿ ನಮ್ಗೆ ತುಂಬಾ ಹಿಡ್ಸಿದ್ದಾಳೆ... ಮದುವೇಲಿ ಏನೇನ್ ಹಾಕ್ತಿರಿ...? ಹುಡಗಿ ತಂದೆ : ತಲೆಕೂದ್ಲಿಗೆ ಡೈ.. ತುಟಿಗೆ ಲಿಪ್ ಸ್ಟಿಕ್.. ಕಣ್ಣಿಗೆ ಕಪ್ಪು.. ಕೈಗಳಿಗೆ ಗೋರಂಟಿ ಹಾಕ್ತೇವೆ 😂😂😝 ************************************* ಟೀಚರ್ :- ಮಕ್ಕಳೆ - ಸೊಳ್ಳೆಗಳು ಮನೆ ಒಳಗೆ ಬರದಿರಲು ಏನು ಮಾಡಬೇಕು ? ಗುಂಡ :- ಸಿಂಪಲ್ ಮೇಡಂ, ಸೊಳ್ಳೆಗಳಿಗೆ ಮನೆ ಅಡ್ರಸ್ ಕೊಡಬಾರದು 😂😂😂😜 ******** ಇದೀಗ ಬಂದ ಸುದ್ದಿ ಯುವತಿ ಕೇವಲ ಐದು ನಿಮಿಷದಲ್ಲೇ ಸೀರೆ ಸೆಲೆಕ್ಟ್ ಮಾಡಿದ್ದನ್ನು ನೋಡಿ ದಿಗಿಲುಗೊಂಡು ಸೀರೆ ತೋರಿಸುತ್ತಿದ್ದ ಹುಡುಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವು😊😀 😂 ---------------------- ದೆಹಲಿಯ ಲೇಡಿಸ್ ಹಾಸ್ಟೆಲ್ ಮುಂದೆ ತರಕಾರಿ ಮಾರುವವನಿಗೆ ಹುಡುಗಿಯರೆಲ್ಲಾ ಸೇರಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ನಡೆದಿದೆ. ಕಾರಣ:- ತರಕಾರಿ ಮಾರುವವನು "ಕ್ಯಾ ರೇಟ್ ಕ್ಯಾ ರೇಟ್" ಎಂದು ಕೂಗುತ್ತಿದ್ದನಂತೆ! 😜 😂 -------------------- ತಿಮ್ಮ : ಅಲ್ಲೋ ಕಾಲಿಗೆ ಹಾವು ಕಚ್ಚಿ ಇನ್ನೂ ಐದು ನಿಮಿಷ ಆಗಲಿಲ್ಲ. ಅಷ್ಟರಾಗ ಹೆಂಗ ಸತ್ತ..? ಗುಂಡ : ತಲೀಗೆ ವಿಷ ಏರತ್ತೋ ಏನೋ ಅಂತ.... ಕುತ್ತಿಗೀಗೆ ಜೋರಾಗಿ ಹಗ್ಗ ಬಿಗಿದಿದ್ವಿ..! 😳😳😱😱😆😆😂 ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ??? ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,, ----------------- ಬಾಸ್ : ನೆನ್ನೆ ಯಾಕ್ರಿ ಕೆಲ್ಸಕ್ಕೆ ಬರ್ಲಿಲ್ಲ?😠 ನಾನು : ಕ್ಯಾಲೆಂಡರಲ್ಲಿ ರೆಡ್ ನಂ. ತೋರಿಸ್ತಿತ್ತು ಅಂತ ರಜ ಹಾಕ್ದೆ.😞 ಸಂಜೆ ಗೊತ್ತಾಯ್ತು ಹೊಸ ಕ್ಯಾಲೆಂಡರ್ ಪೂಜೆಗೆ ನಮ್ಮಜ್ಜಿ ಕುಂಕುಮ ಹಚ್ಚಿದ್ರು ಅಂತ!😒 ------------------------- ಡಾಕ್ಟರ್ - ಹುಂ.. ಏನ್ ತಿಂಡಿ ತಿಂದಿದ್ಯವ್ವಾ? ಹುಡ್ಗಿ- ಐ ಈಟ್ ಹಂಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ & ಕಾರ್ನ್ ಪಿಜ್ಜಾ.. ಡಾಕ್ಟರ್- ಇದು ಫೇಸ್'ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ? ಹುಡ್ಗಿ- ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ.. 😂😂😂😂 ---------------------- ಹಾಸ್ಯ ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ.. ಗುಂಡ : " ಕರ್ಕೊಂಡ್ ಬನ್ನಿ, ಹೊತ್ಕಂಡ್ ಹೋಗಿ, ಹಣ ನಮಗೆ, ಹೆಣ ನಿಮಗೆ " 😂😂😂😂😂 --------------- ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ 🐓ಮೊದಲ ಬಂತೋ..? ರಾಮ್ಯಾ: ಸರ್ ತತ್ತಿ ಬಂತ್ರಿ.. ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..? ಮಾಸ್ತರ: ಹೇಳಪಾ, ನೀನ ಹೇಳ. ಮಂಜ್ಯಾ: ಸರ ಮೊದಲ ಬೀರ್ 🍾ಬಂತರಿ, ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ, ಆಮೇಲೆ ಕೋಳಿ ಬಂತರಿ ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ.. 😀😄😜😜😂😂😂 ------------------- ಟೀಚೆರ್ : ಗುಂಡ " ಗಂಡ ಬೇರುಂಡ " ಎಂದರೆ ಏನು ? ವಿವರಿಸು ? ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ. " ಗಂಡ" "ಬೇರೆ" "ಉಂಡ " 😁😊😁😊😁😊😁😊 --------------- -ನ್ಯಾಯಾಲಯದಲ್ಲಿ- ಜಡ್ಜ್ - ಈ ಗುಂಡನ ಎರಡೂ ಕಿವಿ ಕಟ್ ಮಾಡಿ🤕 ಗುಂಡ - ಬ್ಯಾಡಾ ಸ್ವಾಮಿ ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ.. ಜಡ್ಜ್ - ಲೇ ಹುಚ್ಚಾ ಕಿವಿ ಕತ್ತuರಿಸಿದ್ರ ಕುರುಡ ಹೆಂಗ ಆಗ್ತೀ ಲೇ..⁉ ಗುಂಡ - ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ..❓ 😭😵 -------------------- ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ ಹುಡುಗಿ: ಥ್ಯಾಂಕ್ಸ್ ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ ಹುಡುಗಿ: ಥ್ಯಾಂಕ್ಸ್ ಹುಡುಗ: ಮೇಕಪ್ ಅಂತು ಖತರನಾಕ ಹುಡುಗಿ: ಥ್ಯಾಂಕ್ಸ್ *ಅಣ್ಣಾ* ಹುಡುಗ: ಆದರೂ ಎನ್ ಬಿಡವಾ ಚಂದ ಕಾಣವಲ್ಲಿ. 😂😂😂😂😂😂 ------------------------- ಭಿಕ್ಷುಕ : ಮಗ ತಿನ್ನಲಿಕ್ಕೆ ಏನಾದರೂ ಕೋಡು, ಗುಂಡ : ನಿನಗೆ ಕೊಟ್ಟ್ರೆ ನನಗೆ ಏನು ಸಿಗುತ್ತೆ ಭಿಕ್ಷುಕ : ನಿನಗೆ ಸ್ವರ್ಗ ಸಿಗುತ್ತೆ, ಗುಂಡ : ನಿಂಗೆ ಬೆಂಗಳೂರು ಕೊಡುತ್ತಿನಿ, ಭಿಕ್ಷುಕ : ಬೆಂಗಳೂರು ಏನು ನಿಂದಾ, ಗುಂಡ : ಮತ್ತೆ ಸ್ವರ್ಗ ಏನು ನಿಮ್ಮಪ್ಪಂದಾ,😆😆😂😂😂 ******* ಶ್ರೀಕೃಷ್ಣಾಯನಮ: ಮಹಾಭಾರತ ಯುದ್ಧದ ನಂತರ ಎಲ್ಲಾ ಕಾರ್ಯಗಳೂ ಮುಗಿದು ಶ್ರೀಕೃಷ್ಣ ತನ್ನ ಮನೆಗೆ ಬಂದಾಗ ದೇವಿ ರುಗ್ಮಿಣಿ ಪತಿಯನ್ನು ಎದುರ್ಗೊಂಡು ಈ ರೀತಿ ಪ್ರಶ್ನಿಸುತ್ತಾಳೆ. " ಪಿತಾಮಹ ಭೀಷ್ಮರು ಮತ್ತು ಗುರು ದ್ರೋಣರು ಅಷ್ಟು ಪ್ರಾಮಾಣಿಕರೂ ಸಜ್ಜನರೂ ಆಗಿದ್ದರೂ ಸಹ ಅವರು ಕೊಲ್ಲಲ್ಪಟ್ಟರು, ಮತ್ತು ನೀನೂ ಅದರ ಭಾಗವಾಗಿದ್ದೆ. ಯಾಕೆ ಹೀಗೆ ? " ಕೇಶವ ತನ್ನ ಎಂದಿನ ಮುಗುಳ್ನಗೆಯೊಂದಿಗೆ ಪತ್ನಿಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ರುಗ್ಮಿಣೀದೇವಿ ಒತ್ತಾಯಿಸಿದಾಗ ಗಂಭೀರವಾಗಿ ಉತ್ತರಿಸುತ್ತಾನೆ. " ಸಂಶಯವೇ ಇಲ್ಲ, ಅವರಿಬ್ಬರೂ ಜೀವನದುದ್ದಕ್ಕೂ ಸಜ್ಜನಿಕೆ, ಪ್ರಾಮಾಣಿಕತೆಯ ಪರಮಾವಧಿಯನ್ನು ತಲುಪಿದವರು. ಆದರೆ ಅವರು ಮಾಡಿದ ಒಂದು ತಪ್ಪು ಅವರ ಎಲ್ಲಾ ಪುಣ್ಯ, ಪ್ರಾಮಾಣಿಕತೆಯನ್ನು ನಾಶಮಾಡಿತು. " ರುಗ್ಮಿಣೀದೇವಿ :- ಏನದು ? ಯಾವ ತಪ್ಪು ? ಶ್ರೀಕೃಷ್ಣ :- " ಒಬ್ಬ ಸ್ತ್ರೀ ಅಸಹಾಯಕಳಾಗಿ ಮಾನಭಂಗಕ್ಕೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಆ ಸಭೆಯಲ್ಲಿ ಆ ಇಬ್ಬರೂ ಹಿರಿಯರೆನಿಸಿಕೊಂಡವರು ಉಪಸ್ಥಿತರಿದ್ದರು. ಆ ಹೀನಕೃತ್ಯವನ್ನು ನಡೆಯದಂತೆ ತಡೆಯುವ ಎಲ್ಲಾ ಅಧಿಕಾರವೂ ಸಾಮರ್ಥವೂ ಅವರಿಗಿತ್ತು. ಆದರೂ ಅವರು ತಡೆಯಲಿಲ್ಲ, ಬದಲಿಗೆ ನಿಸ್ಸಹಾಯಕರಂತೆ ಕುಳಿತರು. ಇದೊಂದೇ ಅಪರಾಧ ಅವರ ಎಲ್ಲ ಪುಣ್ಯವನ್ನೂ ಪ್ರಾಮಾಣಿಕತೆಯನ್ನೂ ನಾಶ ಮಾಡಿತು. " ರುಗ್ಮಿಣೀದೇವಿ :- " ಸರಿ, ಮತ್ತೆ ಕರ್ಣ? " ಕರ್ಣನ ದಾನಶೂರತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅವನ ಮನೆಬಾಗಿಲಿಗೆ ಯಾರೇ ಬಂದರೂ ಬರಿಕೈಯಲ್ಲಿ ಹಿಂದಿರುಗುತ್ತಿರಲಿಲ್ಲ. ಇಂಥವನು ಏಕೆ ಕೊಲ್ಲಿಸಿದೆ ? " ಕೇಶವ :- " ಹೌದು, ಕರ್ಣನ ಮನೆಯಿಂದ ಯಾರೊಬ್ಬರೂ ಬರಿಕೈಯಿಂದ ಹಿಂತಿರುಗಿಲ್ಲ. ಆದರೆ ಬಾಲಕ ಅಭಿಮನ್ಯು ಇಂಥಾ ಅತಿರಥ ಮಹಾರಥರಿರುವ ಸೇನೆಯ ವಿರುದ್ಧ ಏಕಾಂಗಿಯಾಗಿ ಯಶಸ್ವೀ ಹೋರಾಟ ನಡೆಸಿ, ಕೊನೆಗೆ ಸಾಯುವ ಸ್ಥಿತಿ ತಲುಪಿದಾಗ ಹತ್ತಿರದಲ್ಲೇ ಇದ್ದ ಕರ್ಣನಲ್ಲಿ ನೀರು ಕೇಳಿದ. ಕರ್ಣನ ಬಳಿಯಲ್ಲೇ ಒಂದು ಹಳ್ಳದಲ್ಲಿ ಸ್ವಚ್ಛವಾದ ಕುಡಿಯುವ ನೀರಿತ್ತು. ದುರ್ಯೋಧನನ ಸ್ನೇಹಬಂಧಕ್ಕೆ ಸಿಲುಕಿದ ಕರ್ಣ ಸಾಯುತ್ತಿರುವ ವ್ಯಕ್ತಿಗೆ ನೀರು ಕೊಡಲಿಲ್ಲ. ದಾನಶೂರತೆಯಿಂದ ಜೀವನಪರ್ಯಂತ ತಾನು ಗಳಿಸಿದ ಪುಣ್ಯವನ್ನು ತನ್ನ ಕೈಯಾರೆ ನಾಶಮಾಡಿಕೊಂಡ. ಕೊನೆಗೆ ಅದೇ ಹಳ್ಳದಲ್ಲಿ ರಥದ ಚಕ್ರ ಸಿಲುಕಿ ಕರ್ಣ ಕೊಲ್ಲಲ್ಪಟ್ಟ. " ನಮ್ಮ ಒಂದೇ ಒಂದು ನಿರ್ಲಕ್ಷ್ಯದ ಪ್ರಮಾದ ನಮ್ಮ ಎಲ್ಲಾ ಪುಣ್ಯಗಳನ್ನೂ ನಾಶ ಮಾಡಬಲ್ಲುದು. ಜೀವನಪರ್ಯಂತ ನಾವು ಗಳಿಸಿದ ಎಲ್ಲಾ ಗೌರವವನ್ನು ಮಣ್ಣುಮುಕ್ಕಿಸಬಹುದು. ಅಭಿವೃದ್ಧಿಯ ಪಥದಲ್ಲಿ ಕರ್ಮಯೋಗದ ಒಂದು ಸಣ್ಣ ಉದಾಹರಣೆಯಿದು. ಆದ್ದರಿಂದ ಪಾಪಪುಣ್ಯಗಳ ಸರಿಯಾದ ಅರಿವಿನೊಂದಿಗೆ ಕರ್ಮಗಳನ್ನು ಆಚರಿಸೋಣ. 🕉🕉🕉👏👏👏 *********** ಟೀಚರ್ : ಮಕ್ಕಳೇ , ಒಳ್ಳೆಯ ಆರೋಗ್ಯಕ್ಕಾಗಿ ನೀವು ದಿನವೂ ೮ ಗಂಟೆಗಳ ಕಾಲ ಮಲಗಬೇಕು . ಸ್ಟೂಡೆಂಟ್ : ಅದು ಹೇಗೆ ಸಾಧ್ಯ ಮೇಡಂ , ಸ್ಕೂಲ್ ಇರೋಧು ಬರಿ ೭ ಗಂಟೆಗಳು ಮಾತ್ರವೇ . ಹೆಡ್ಮಾಸ್ಟರ್ : ಐನ್ಸ್ಟೀನ್ ಯಾರು ? ಸ್ಟೂಡೆಂಟ್: ಗೊತ್ತಿಲ್ಲ ಸರ್ . ಹೆಡ್ಮಾಸ್ಟರ್ : ಗಮನ ಸ್ಟಡೀಸ್ ಕಡೆ ಇರ್ಲಿ , ಆಗ ಎಲ್ಲಾ ಗೊತ್ತಾಗುತ್ತೆ . ಸ್ಟೂಡೆಂಟ್ : ನಿಮಗೆ ರಮೇಶ ಯಾರು ಅಂತ ಗೊತ್ತಾ ? ಹೆಡ್ಮಾಸ್ಟರ್ : ಗೊತ್ತಿಲ್ಲ . ಸ್ಟೂಡೆಂಟ್ : ಗಮನ ನಿಮ್ಮ ಮಗಳ ಕಡೆನೂ ಇರ್ಲಿ . ಆಗ ಎಲ್ಲಾ ಗೊತ್ತಾಗುತ್ತೆ . ಟೀಚರ್ : ಎಲೆಕ್ಟ್ರಿಸಿಟಿ ಇಲ್ಲದೆ ಹೋಗಿದ್ರೆ , ಏನಾಗುತ್ತಿತ್ತು ? ಪಪ್ಪು : ರಾತ್ರಿಯಲ್ಲಿ ಕ್ಯಾಂಡಲ್ ಹಿಡ್ಕೊಂಡು ಟಿವಿ ನೋಡಬೇಕಾಗಿತ್ತು . ಟೀಚರ್ : ನಾವು ಬದುಕ ಬೇಕಾದರೆ ಆಮ್ಲಜನಕ ತುಂಬಾ ಮುಖ್ಯ . ಇದನ್ನು 4 ಶತಮಾನಗಳ ಮುಂಚೆ ಕಂಡುಹಿಡಿಯಲಾಯಿತು . ಪಪ್ಪು : ಸದ್ಯ , ನಾನು ಆ ಕಾಲದಲ್ಲಿ ಹುಟ್ಟಲಿಲ್ಲ . ಇಲ್ಲಾಂದರೆ ಸತ್ತು ಹೋಗ್ತಾ ಇದ್ದೆ . ಟೀಚರ್ : ಶಬ್ದ ಮಾಲಿನ್ಯನ ಕಡಿಮೆ ಮಾಡೋಕೆ ಏನು ಮಾಡಬೇಕು ? ಸ್ಟೂಡೆಂಟ್ : ನಮ್ಮ ಕಿವಿ ಮುಚ್ಕೋಬೇಕು ಸರ್ . ********** ಟೀಚರ್ : ನೀನು ಶಾಲೆಗೇ ಯಾಕೆ ಬರ್ತೀಯ ? ಸ್ಟೂಡೆಂಟ್ : 'ವಿದ್ಯಾ ' ಗೋಸ್ಕರ ಮೇಡಂ ಟೀಚರ್ : ಮತ್ತೆ ಈಗ ನಿದ್ದೆ ಯಾಕೆ ಮಾಡ್ತಾ ಇದ್ದೀಯ ? ಸ್ಟೂಡೆಂಟ್ : ಇವತ್ತು ವಿದ್ಯಾ ಬಂದಿಲ್ವಲ್ಲ ಮೇಡಂ , ಅದಕ್ಕೆ ಟೀಚರ್ : 1 ಮಾರ್ಕ್ ತಗೊಂಡ ಮೇಲೆ ಕೂಡ ನೀನು ಯಾಕೆ ನಗುತಾ ಇದ್ದೀಯ . ನಾಚಿಕೆ ಆಗೋಲ್ವಾ ? ಸ್ಟೂಡೆಂಟ್ : ಇಲ್ಲ , ಆ 1 ಮಾರ್ಕ್ ಎಲ್ಲಿಂದ ಬಂತು ಅಂತ ಯೋಚಿಸಿದರೆ ನನಗೆ ನಗು ಬರ್ತಾ ಇದೆ . ಟೀಚರ್ : ೧ ಬಾಳೆ ಹಣ್ಣನ್ನು ೫ ಮಂದಿ ಹೇಗೆ ತಿಂತಾರೆ ? ಸ್ಟೂಡೆಂಟ್ : ಬಾಯಿಂದ
Part 119 - Jokes , Fun , Haasya , Humor , Quotes , Greetings
Read more on
#fun
#greetings
#haasya
#humor
#jokes
#Quotes
Write / View Comments ( 0 )
Related you make like
🛒 Shop now
Deals today
New Launches
Best Sellers
Gifts
Books
Home products
Kitchen
Houseware
Grocery Pantry
Beauty
Personal care
Decor Furniture
Outdoors
Latest Fashion
Men
Women
Apparels
Footwear
Watches
Luggage
Kids
Baby care
Kids fashion
Toys
Electronics
Gadgets
Mobile phones
Laptops
Home appliances
Buy Kannada Books
Latest Books
Fictions and Novels
Philosophy
Subscribe , Follow on