-->

Dry coconut benefits - ಒಣ ಕೊಬ್ಬರಿಯಿಂದ ಸಿಗುವ ಲಾಭ ತಿಳಿದರೆ ಪ್ರತಿ ದಿನ ತಪ್ಪದೇ ತಿನ್ನುತ್ತೀರಿ .!!!

ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಸೇವಿಸುವುದರಿಂದ ಏನೆಲ್ಲ ಲಾಭಗಳಿವೆ ಹಾಗೂ ಯಾವೆಲ್ಲ ರೋಗಗಳಿಗೆ ಇದು ಒಳ್ಳೆಯದು ಎಂದು ತಿಳಿಯೋಣ ಬನ್ನಿ
 

 
 
 ಸಾಮಾನ್ಯವಾಗಿ ಈಗ ಕಂಡು ಬರುವ ಮುಖ್ಯ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ,ಆಯಾಸ ,ಗಂಟುಗಳಲ್ಲಿ ನೋವು,ಸೊಂಟ ನೋವು,ರಕ್ತಹೀನತೆ,ಅಜೀರ್ಣ,ಕೂದಲು ಉದುರುವುದು,ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದು,ಜ್ಞಾಪಕ ಶಕ್ತಿಯ ತೊಂದರೆ ಇದಕ್ಕಾಗಿ ಹಾಗೂ ಇದನ್ನು ಸರಿಪಡಿಸಿಕೊಳ್ಳಲು ಹಲವಾರು ಮೆಡಿಸಿನ್ ಟ್ಯಾಬ್ಲೆಟ್ ಗಳ ಸೇವನೆ ಕೂಡ ಮಾಡಲಾಗುತ್ತಿದೆ.ಆದರೆ ಫಲಿತಾಂಶ ಆ ಔಷಧಿಗಳನ್ನು ಸೇವಿಸುವ ತನಕ ಅಷ್ಟೇ ಆಮೇಲೆ ಯಾವುದೇ ರೀತಿಯ ಫಲಿತಾಂಶ ದೊರೆಯುವುದಿಲ್ಲ.

ಇದಕ್ಕಾಗಿ ನಾವು ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಕೆಲವು ವಸ್ತುಗಳನ್ನು ತಪ್ಪದೇ ಸೇವಿಸಬೇಕು.ಇದರಲ್ಲಿ ಸಂಪೂರ್ಣವಾದ ಪೋಷಕಾಂಶಗಳಿದ್ದು ನಮ್ಮ ದೇಹದಲ್ಲಿನ ವಿಟಮಿನ್ ಕೊರತೆಗಳನ್ನು ಪೂರ್ಣಗೊಳಿಸಬೇಕು.

ಒಣಕೊಬ್ಬರಿಇದನ್ನು ಸೂಪರ್ ಫುಡ್ ಎಂದು ಕರೆದರು ತಪ್ಪಾಗುವುದಿಲ್ಲ.ಅಷ್ಟು ಪೋಷಕಾಂಶಗಳನ್ನು ಹೊಂದಿದೆ ಈ ಒಣಕೊಬ್ಬರಿ.ತುಂಬಾ ಜನರಿಗೆ ಒಣಕೊಬ್ಬರಿ ಎಂದರೆ ತುಂಬಾನೇ ಇಷ್ಟ.ಮನೆಯಲ್ಲಿ ಹಿರಿಯರು ಇದ್ದರೆ ಅವರು ಕೂಡ ಮಕ್ಕಳಿಗೆ ಒಣ ಕೊಬ್ಬರಿಯನ್ನು ತಿನ್ನಲು ಸಲಹೆ ಮಾಡುತ್ತಾರೆ.ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್,ನಾರಿನಾಂಶ,ಕಾಪರ್,ಸೆಲೆನಿಯಂ ಎನ್ನುವ ಪೋಷಕಾಂಶಗಳಿವೆ.

ಹಾಗಿದ್ರೆ ಯಾವ ರೀತಿಯಲ್ಲಿ ಒಣಕೊಬ್ಬರಿಯನ್ನು ಸೇವಿಸಿದರೆ ಒಳ್ಳೆಯದು ಎಂದು ನೋಡುವುದಾದರೆ 20 ರಿಂದ 25 ಗ್ರಾಂ ನಷ್ಟು ಪ್ರತಿ ದಿನ ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಇದನ್ನು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಚಿಕ್ಕ ತುಂಡು ಒಣಕೊಬ್ಬರಿಯನ್ನು ನೀವು ಸೇವಿಸಬಹುದು.

ಒಣಕೊಬ್ಬರಿ ಪ್ರತಿನಿತ್ಯ ಸೇವಿಸುವುದರಿಂದ ಸಿಗುವ ಲಾಭಗಳೇನು ಹಾಗೂ ಯಾವ ರೀತಿಯ ರೋಗಗಳಿಗೆ ಒಣಕೊಬ್ಬರಿ ಸೇವನೆ ಒಳ್ಳೆಯದು ಎಂಬುದನ್ನು ನೋಡುವುದಾದರೆ.ಒಣಕೊಬ್ಬರಿ ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುತ್ತದೆ.ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಮೂಳೆಗಳ ಅಂಗಾಂಶ ಅಂದರೆ ಟಿಶುಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಇರುತ್ತದೆ.ಇದು ಕಡಿಮೆಯಾದರೆ ದೇಹದ ಯಾವುದೇ ಭಾಗಕ್ಕೂ ಇದು ತೊಂದರೆ ನೀಡಬಹುದು.

ಒಣ ಕೊಬ್ಬರಿಯ ಸೇವನೆಯಿಂದ ಈ ಮೂಳೆಗಳಲ್ಲಿನ ಖನಿಜಾಂಶ ಅಂದ್ರೆ ಮಿನರಲ್ಗಳ ಕಡಿಮೆ ಯನ್ನು ಪೂರ್ಣಗೊಳಿಸಿ ಕೊಳ್ಳಬಹುದು.ಒಣ ಕೊಬ್ಬರಿಯಿಂದ ದೊರೆಯುವ ಈ ಮಿನರಲ್ ದೇಹಕ್ಕೆ ಬೇಗನೆ ಸೇರಿಬಿಡುತ್ತದೆ.ಇದರಿಂದಾಗಿ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರಾಗಬಹುದು.ಇನ್ನು ಕೆಲವರ ಗಂಟುಗಳಲ್ಲಿ ಕಟಕಟ ಶಬ್ದವಾಗುತ್ತಿರುತ್ತದೆ. ಇದು ಮೂಳೆಗಳಲ್ಲಿರುವ ಲೂಬ್ರಿಕೇನ್ಟ್ ನ ಕೊರತೆಯಿಂದ ಆಗುತ್ತದೆ.ಇಂಥವರು ಒಣಕೊಬ್ಬರಿಯ ಸೇವನೆ ಮಾಡಬೇಕು. ಒಣಕೊಬ್ಬರಿ ಯಲ್ಲಿ ನೈಸರ್ಗಿಕವಾದ ಎಣ್ಣೆ ಹಾಗೂ ಖನಿಜ ಇರುವುದರಿಂದ ಇದು ಮೂಳೆಗಳನ್ನು ಬಲಶಾಲಿಯಾಗಿಸಿ ಈ ಸಮಸ್ಯೆಯೂ ಸರಿಹೋಗುತ್ತದೆ.

ಮೆದುಳು ಚುರುಕಾಗಿರುತ್ತದೆ. ಒಣ ಕೊಬ್ಬರಿ ಸೇವನೆಯಿಂದ ನಿಮ್ಮ ಮೆದುಳು ಚುರುಕಾಗುತ್ತದೆ.ಇದರಿಂದ ಮೆದುಳಿನ ಫಂಕ್ಷನ್ ಇಂಪ್ರೂವ್ ಆಗುತ್ತದೆ.ನಿಮಗೆ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಹಾಗೂ ಮೆದುಳು ಚುರುಕಾಗಿ ಇರಬೇಕು ಅಂದರೆ ತಪ್ಪದೇ ನೀವು ಒಣ ಕೊಬ್ಬರಿಯನ್ನು ಸೇವಿಸಲೇಬೇಕು.ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಯೂ ಕೂಡ ಒಣಕೊಬ್ಬರಿ ಒಳ್ಳೆಯ ಔಷಧಿ.ಇದನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ.ಒಣ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡ ಸರಿಪಡಿಸುತ್ತದೆ.

ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ರಕ್ತಹೀನತೆಯ ಸಮಸ್ಯೆ ಹೆಚ್ಚಾದರೆ ಶರೀರದಲ್ಲಿ ಶಕ್ತಿಯಿರುವುದಿಲ್ಲ,ತಲೆಸುತ್ತು,ಮೊದಲಾದ ತೊಂದರೆ ಎದುರಾಗುತ್ತದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಒಣಕೊಬ್ಬರಿಯ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಏಕೆಂದರೆ ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿದೆ ಆದ್ದರಿಂದ ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡಲು ಒಣಕೊಬ್ಬರಿಯ ಸೇವನೆಯನ್ನು ತಪ್ಪದೇ ಮಾಡಿ.

ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಒಣಕೊಬ್ಬರಿಯನ್ನು ಹೀಗೆ ಬಳಸಿದರೆ ಸಂಪೂರ್ಣವಾಗಿ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ತುರಿದ ಕೊಬ್ಬರಿ 20 ರಿಂದ 25 ಗ್ರಾಂ ತೆಗೆದುಕೊಳ್ಳಿ 20 ರಿಂದ 25 ಗ್ರಾಂ ನಷ್ಟು ಕಲ್ಲು ಸಕ್ಕರೆ ತೆಗೆದುಕೊಳ್ಳಿ.ಇವೆರಡನ್ನು ಸೂರ್ಯ ಉದಯಿಸುವುದಕ್ಕಿಂತ ಮೊದಲು ಸೇವಿಸಿ.ಜಗಿದು ಜಗಿದು ಸೇವಿಸಬೇಕು.ಈ ರೀತಿಯಾಗಿ ನೀವು ಪ್ರತಿನಿತ್ಯ ಸೇವಿಸಿದರೆ ಸ್ವಲ್ಪ ದಿನದಲ್ಲೇ ಎಷ್ಟೇ ಹಳೆಯದಾದ ತಲೆನೋವಿದ್ದರು ಹಾಗೂ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.

ಥೈರಾಡ್ ಸಮಸ್ಯೆ ಇರುವವರು ಒಣಕೊಬ್ಬರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ದೇಹದಲ್ಲಿ ಸೆಲೆನಿಯಂ ಕೊರತೆಯಿಂದ ಉಂಟಾಗುತ್ತದೆ.ಒಣ ಕೊಬ್ಬರಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ.ನಿಮಗೆ ಹೈಪರ್ ಥೈರಾಯ್ಡ್ ಇರಲಿ ಅಥವಾ ಹೈಪೋ ಥೈರಾಯ್ಡ್ ಇರಲಿ ನೀವು ತಪ್ಪದೆ ಒಣಕೊಬ್ಬರಿ ಸೇವಿಸಿ.ಇದು ನಿಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾಗಿ ಇಡುತ್ತದೆ.

ಇನ್ನು ಒಣಕೊಬ್ಬರಿ ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇದರಲ್ಲಿರುವ ಫೈಬರ್ ಹೃದಯವನ್ನು ಆರೋಗ್ಯವಾಗಿಡುತ್ತದೆ.ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆ.ಇದರಿಂದಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ನಿತ್ಯವೂ ತಪ್ಪದೆ ಒಣಕೊಬ್ಬರಿಯನ್ನು ಸೇವನೆ ಮಾಡುವುದು ಉತ್ತಮ.

ನಿದ್ರಾಹೀನತೆಯ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಒಣಕೊಬ್ಬರಿಗಿದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.

ಒಣಕೊಬ್ಬರಿಯನ್ನು ಸೇವಿಸುವುದರಿಂದ ಅಜೀರ್ಣತೆಯ ಸಮಸ್ಯೆಯೂ ಕೂಡ ಸರಿ ಹೋಗುತ್ತದೆ.ಇನ್ನು ಒಣ ಕೊಬ್ಬರಿಯನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು.ಇದು ರಕ್ತದಲ್ಲಿ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಕೊಬ್ಬರಿಯ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯೂ ಬೇಗನೆ ಕಡಿಮೆಯಾಗುತ್ತದೆ.ಒಣಕೊಬ್ಬರಿ ಒಂದು ಒಳ್ಳೆಯ ಆ್ಯಂಟಿ ಬಯಾಟಿಕ್ ತರ ಕೆಲಸ ಮಾಡುತ್ತದೆ.ಇದರಿಂದಾಗಿ ಯಾವುದೇ ರೀತಿಯ ಅಲರ್ಜಿ ಅಥವಾ ಯಾವುದೇ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಸೇರಲು ಸಾಧ್ಯ ಇಲ್ಲ.

ಒಣ ಕೊಬ್ಬರಿ ನಮ್ಮ ಕಣ್ಣುಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇನ್ನು ಇದರಿಂದ ಹಲವಾರು ಲಾಭಗಳು ದೊರೆಯುತ್ತದೆ.ಇದರ ಸೇವನೆಯ ನಂತರ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ದೇಹದಲ್ಲಿ ಒಳ್ಳೆಯ ವ್ಯತ್ಯಾಸ ಕಂಡುಬರುತ್ತದೆ.ನಮಗೆ ಯಾವುದೇ ರೋಗ ಇರಲಿ ಇಲ್ಲದಿರಲಿ ಇಂತಹ ಅದ್ಭುತವಾದ ಆಹಾರವನ್ನು ನಮ್ಮ ಪ್ರತಿನಿತ್ಯ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಮ್ಮ ದೇಹವು ಆರೋಗ್ಯವಾಗಿರುತ್ತದೆ.
 
ಯಾವುದೇ ರೋಗವು ನಮ್ಮ ಹತ್ತಿರವೂ ಸುಳಿಯುವುದಿಲ್ಲ.
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ 
–>