-->

Clove Tea health benefits

 


 

Clove (Lawang) is one of the spices which has many health benefits and used as an ingredient in Indian foods. A simple tea made out of clove has many benefits .

How to prepare clove tea

Ingredients required

  • Clove - 10gms 
  • Water - 150 ml
  • Honey - 1 table spoon

How to prepare

  • Allow the water to boil 
  • Add cloves and let it boil for few minutes in moderate heat
  • Strain the tea and mix it with honey
  • Sip it hot

Health benefits  

  • Relieves sudden contraction of muscles or spasms
  • Relieves any gas in the form of fart , gastric disorders
  • Promotes digestion
  • Aids metabolism increasing energy
  • Relieves discomfort due to bloating , nausea , burning sensation
  • Effective for providing comfort for Asthma and cholera symptoms

 

 - Information contributed by Smt.Sangita Das of Naturedietcure. For more information and natural diet tips visit their center at Bengaluru.


Dry coconut benefits - ಒಣ ಕೊಬ್ಬರಿಯಿಂದ ಸಿಗುವ ಲಾಭ ತಿಳಿದರೆ ಪ್ರತಿ ದಿನ ತಪ್ಪದೇ ತಿನ್ನುತ್ತೀರಿ .!!!

ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಸೇವಿಸುವುದರಿಂದ ಏನೆಲ್ಲ ಲಾಭಗಳಿವೆ ಹಾಗೂ ಯಾವೆಲ್ಲ ರೋಗಗಳಿಗೆ ಇದು ಒಳ್ಳೆಯದು ಎಂದು ತಿಳಿಯೋಣ ಬನ್ನಿ
 

 
 
 ಸಾಮಾನ್ಯವಾಗಿ ಈಗ ಕಂಡು ಬರುವ ಮುಖ್ಯ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ,ಆಯಾಸ ,ಗಂಟುಗಳಲ್ಲಿ ನೋವು,ಸೊಂಟ ನೋವು,ರಕ್ತಹೀನತೆ,ಅಜೀರ್ಣ,ಕೂದಲು ಉದುರುವುದು,ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದು,ಜ್ಞಾಪಕ ಶಕ್ತಿಯ ತೊಂದರೆ ಇದಕ್ಕಾಗಿ ಹಾಗೂ ಇದನ್ನು ಸರಿಪಡಿಸಿಕೊಳ್ಳಲು ಹಲವಾರು ಮೆಡಿಸಿನ್ ಟ್ಯಾಬ್ಲೆಟ್ ಗಳ ಸೇವನೆ ಕೂಡ ಮಾಡಲಾಗುತ್ತಿದೆ.ಆದರೆ ಫಲಿತಾಂಶ ಆ ಔಷಧಿಗಳನ್ನು ಸೇವಿಸುವ ತನಕ ಅಷ್ಟೇ ಆಮೇಲೆ ಯಾವುದೇ ರೀತಿಯ ಫಲಿತಾಂಶ ದೊರೆಯುವುದಿಲ್ಲ.

ಇದಕ್ಕಾಗಿ ನಾವು ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಕೆಲವು ವಸ್ತುಗಳನ್ನು ತಪ್ಪದೇ ಸೇವಿಸಬೇಕು.ಇದರಲ್ಲಿ ಸಂಪೂರ್ಣವಾದ ಪೋಷಕಾಂಶಗಳಿದ್ದು ನಮ್ಮ ದೇಹದಲ್ಲಿನ ವಿಟಮಿನ್ ಕೊರತೆಗಳನ್ನು ಪೂರ್ಣಗೊಳಿಸಬೇಕು.

ಒಣಕೊಬ್ಬರಿಇದನ್ನು ಸೂಪರ್ ಫುಡ್ ಎಂದು ಕರೆದರು ತಪ್ಪಾಗುವುದಿಲ್ಲ.ಅಷ್ಟು ಪೋಷಕಾಂಶಗಳನ್ನು ಹೊಂದಿದೆ ಈ ಒಣಕೊಬ್ಬರಿ.ತುಂಬಾ ಜನರಿಗೆ ಒಣಕೊಬ್ಬರಿ ಎಂದರೆ ತುಂಬಾನೇ ಇಷ್ಟ.ಮನೆಯಲ್ಲಿ ಹಿರಿಯರು ಇದ್ದರೆ ಅವರು ಕೂಡ ಮಕ್ಕಳಿಗೆ ಒಣ ಕೊಬ್ಬರಿಯನ್ನು ತಿನ್ನಲು ಸಲಹೆ ಮಾಡುತ್ತಾರೆ.ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್,ನಾರಿನಾಂಶ,ಕಾಪರ್,ಸೆಲೆನಿಯಂ ಎನ್ನುವ ಪೋಷಕಾಂಶಗಳಿವೆ.

ಹಾಗಿದ್ರೆ ಯಾವ ರೀತಿಯಲ್ಲಿ ಒಣಕೊಬ್ಬರಿಯನ್ನು ಸೇವಿಸಿದರೆ ಒಳ್ಳೆಯದು ಎಂದು ನೋಡುವುದಾದರೆ 20 ರಿಂದ 25 ಗ್ರಾಂ ನಷ್ಟು ಪ್ರತಿ ದಿನ ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಇದನ್ನು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಚಿಕ್ಕ ತುಂಡು ಒಣಕೊಬ್ಬರಿಯನ್ನು ನೀವು ಸೇವಿಸಬಹುದು.

ಒಣಕೊಬ್ಬರಿ ಪ್ರತಿನಿತ್ಯ ಸೇವಿಸುವುದರಿಂದ ಸಿಗುವ ಲಾಭಗಳೇನು ಹಾಗೂ ಯಾವ ರೀತಿಯ ರೋಗಗಳಿಗೆ ಒಣಕೊಬ್ಬರಿ ಸೇವನೆ ಒಳ್ಳೆಯದು ಎಂಬುದನ್ನು ನೋಡುವುದಾದರೆ.ಒಣಕೊಬ್ಬರಿ ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುತ್ತದೆ.ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಮೂಳೆಗಳ ಅಂಗಾಂಶ ಅಂದರೆ ಟಿಶುಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಇರುತ್ತದೆ.ಇದು ಕಡಿಮೆಯಾದರೆ ದೇಹದ ಯಾವುದೇ ಭಾಗಕ್ಕೂ ಇದು ತೊಂದರೆ ನೀಡಬಹುದು.

ಒಣ ಕೊಬ್ಬರಿಯ ಸೇವನೆಯಿಂದ ಈ ಮೂಳೆಗಳಲ್ಲಿನ ಖನಿಜಾಂಶ ಅಂದ್ರೆ ಮಿನರಲ್ಗಳ ಕಡಿಮೆ ಯನ್ನು ಪೂರ್ಣಗೊಳಿಸಿ ಕೊಳ್ಳಬಹುದು.ಒಣ ಕೊಬ್ಬರಿಯಿಂದ ದೊರೆಯುವ ಈ ಮಿನರಲ್ ದೇಹಕ್ಕೆ ಬೇಗನೆ ಸೇರಿಬಿಡುತ್ತದೆ.ಇದರಿಂದಾಗಿ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರಾಗಬಹುದು.ಇನ್ನು ಕೆಲವರ ಗಂಟುಗಳಲ್ಲಿ ಕಟಕಟ ಶಬ್ದವಾಗುತ್ತಿರುತ್ತದೆ. ಇದು ಮೂಳೆಗಳಲ್ಲಿರುವ ಲೂಬ್ರಿಕೇನ್ಟ್ ನ ಕೊರತೆಯಿಂದ ಆಗುತ್ತದೆ.ಇಂಥವರು ಒಣಕೊಬ್ಬರಿಯ ಸೇವನೆ ಮಾಡಬೇಕು. ಒಣಕೊಬ್ಬರಿ ಯಲ್ಲಿ ನೈಸರ್ಗಿಕವಾದ ಎಣ್ಣೆ ಹಾಗೂ ಖನಿಜ ಇರುವುದರಿಂದ ಇದು ಮೂಳೆಗಳನ್ನು ಬಲಶಾಲಿಯಾಗಿಸಿ ಈ ಸಮಸ್ಯೆಯೂ ಸರಿಹೋಗುತ್ತದೆ.

ಮೆದುಳು ಚುರುಕಾಗಿರುತ್ತದೆ. ಒಣ ಕೊಬ್ಬರಿ ಸೇವನೆಯಿಂದ ನಿಮ್ಮ ಮೆದುಳು ಚುರುಕಾಗುತ್ತದೆ.ಇದರಿಂದ ಮೆದುಳಿನ ಫಂಕ್ಷನ್ ಇಂಪ್ರೂವ್ ಆಗುತ್ತದೆ.ನಿಮಗೆ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಹಾಗೂ ಮೆದುಳು ಚುರುಕಾಗಿ ಇರಬೇಕು ಅಂದರೆ ತಪ್ಪದೇ ನೀವು ಒಣ ಕೊಬ್ಬರಿಯನ್ನು ಸೇವಿಸಲೇಬೇಕು.ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಯೂ ಕೂಡ ಒಣಕೊಬ್ಬರಿ ಒಳ್ಳೆಯ ಔಷಧಿ.ಇದನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ.ಒಣ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡ ಸರಿಪಡಿಸುತ್ತದೆ.

ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ರಕ್ತಹೀನತೆಯ ಸಮಸ್ಯೆ ಹೆಚ್ಚಾದರೆ ಶರೀರದಲ್ಲಿ ಶಕ್ತಿಯಿರುವುದಿಲ್ಲ,ತಲೆಸುತ್ತು,ಮೊದಲಾದ ತೊಂದರೆ ಎದುರಾಗುತ್ತದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಒಣಕೊಬ್ಬರಿಯ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಏಕೆಂದರೆ ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿದೆ ಆದ್ದರಿಂದ ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡಲು ಒಣಕೊಬ್ಬರಿಯ ಸೇವನೆಯನ್ನು ತಪ್ಪದೇ ಮಾಡಿ.

ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಒಣಕೊಬ್ಬರಿಯನ್ನು ಹೀಗೆ ಬಳಸಿದರೆ ಸಂಪೂರ್ಣವಾಗಿ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ತುರಿದ ಕೊಬ್ಬರಿ 20 ರಿಂದ 25 ಗ್ರಾಂ ತೆಗೆದುಕೊಳ್ಳಿ 20 ರಿಂದ 25 ಗ್ರಾಂ ನಷ್ಟು ಕಲ್ಲು ಸಕ್ಕರೆ ತೆಗೆದುಕೊಳ್ಳಿ.ಇವೆರಡನ್ನು ಸೂರ್ಯ ಉದಯಿಸುವುದಕ್ಕಿಂತ ಮೊದಲು ಸೇವಿಸಿ.ಜಗಿದು ಜಗಿದು ಸೇವಿಸಬೇಕು.ಈ ರೀತಿಯಾಗಿ ನೀವು ಪ್ರತಿನಿತ್ಯ ಸೇವಿಸಿದರೆ ಸ್ವಲ್ಪ ದಿನದಲ್ಲೇ ಎಷ್ಟೇ ಹಳೆಯದಾದ ತಲೆನೋವಿದ್ದರು ಹಾಗೂ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.

ಥೈರಾಡ್ ಸಮಸ್ಯೆ ಇರುವವರು ಒಣಕೊಬ್ಬರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ದೇಹದಲ್ಲಿ ಸೆಲೆನಿಯಂ ಕೊರತೆಯಿಂದ ಉಂಟಾಗುತ್ತದೆ.ಒಣ ಕೊಬ್ಬರಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ.ನಿಮಗೆ ಹೈಪರ್ ಥೈರಾಯ್ಡ್ ಇರಲಿ ಅಥವಾ ಹೈಪೋ ಥೈರಾಯ್ಡ್ ಇರಲಿ ನೀವು ತಪ್ಪದೆ ಒಣಕೊಬ್ಬರಿ ಸೇವಿಸಿ.ಇದು ನಿಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾಗಿ ಇಡುತ್ತದೆ.

ಇನ್ನು ಒಣಕೊಬ್ಬರಿ ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇದರಲ್ಲಿರುವ ಫೈಬರ್ ಹೃದಯವನ್ನು ಆರೋಗ್ಯವಾಗಿಡುತ್ತದೆ.ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆ.ಇದರಿಂದಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ನಿತ್ಯವೂ ತಪ್ಪದೆ ಒಣಕೊಬ್ಬರಿಯನ್ನು ಸೇವನೆ ಮಾಡುವುದು ಉತ್ತಮ.

ನಿದ್ರಾಹೀನತೆಯ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಒಣಕೊಬ್ಬರಿಗಿದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.

ಒಣಕೊಬ್ಬರಿಯನ್ನು ಸೇವಿಸುವುದರಿಂದ ಅಜೀರ್ಣತೆಯ ಸಮಸ್ಯೆಯೂ ಕೂಡ ಸರಿ ಹೋಗುತ್ತದೆ.ಇನ್ನು ಒಣ ಕೊಬ್ಬರಿಯನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು.ಇದು ರಕ್ತದಲ್ಲಿ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಕೊಬ್ಬರಿಯ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯೂ ಬೇಗನೆ ಕಡಿಮೆಯಾಗುತ್ತದೆ.ಒಣಕೊಬ್ಬರಿ ಒಂದು ಒಳ್ಳೆಯ ಆ್ಯಂಟಿ ಬಯಾಟಿಕ್ ತರ ಕೆಲಸ ಮಾಡುತ್ತದೆ.ಇದರಿಂದಾಗಿ ಯಾವುದೇ ರೀತಿಯ ಅಲರ್ಜಿ ಅಥವಾ ಯಾವುದೇ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಸೇರಲು ಸಾಧ್ಯ ಇಲ್ಲ.

ಒಣ ಕೊಬ್ಬರಿ ನಮ್ಮ ಕಣ್ಣುಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇನ್ನು ಇದರಿಂದ ಹಲವಾರು ಲಾಭಗಳು ದೊರೆಯುತ್ತದೆ.ಇದರ ಸೇವನೆಯ ನಂತರ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ದೇಹದಲ್ಲಿ ಒಳ್ಳೆಯ ವ್ಯತ್ಯಾಸ ಕಂಡುಬರುತ್ತದೆ.ನಮಗೆ ಯಾವುದೇ ರೋಗ ಇರಲಿ ಇಲ್ಲದಿರಲಿ ಇಂತಹ ಅದ್ಭುತವಾದ ಆಹಾರವನ್ನು ನಮ್ಮ ಪ್ರತಿನಿತ್ಯ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಮ್ಮ ದೇಹವು ಆರೋಗ್ಯವಾಗಿರುತ್ತದೆ.
 
ಯಾವುದೇ ರೋಗವು ನಮ್ಮ ಹತ್ತಿರವೂ ಸುಳಿಯುವುದಿಲ್ಲ.
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ 

ಕಡಲೆಕಾಳು ನೀರು ಅರೋಗ್ಯ ಗುಣಗಳು - Channa soak water Health Benefits

*ಕಡಲೆಕಾಳು ನೆನೆಸಿದ ನೀರನ್ನುಕುಡಿದರೆ ಅದರಲ್ಲಿ ಇರುವ ಐರನ್ ದೇಹಕ್ಕೆ ಸಿಗುತ್ತದೆ. ಇದರಿಂದ ರಕ್ತದ ಪ್ರಮಾಣ ಹೆಚ್ಚಾಗುವುದಷ್ಟೇ ಅಲ್ಲ, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.*

1. ಸುಸ್ತು, ನಿಶ್ಯಕ್ತಿಯಂತಹವು ದೂರವಾಗುತ್ತವೆ. ನಿತ್ಯ ಆಕ್ಟೀವ್ ಆಗಿ ಇರಬಹುದು. ಎಷ್ಟೇ ಕೆಲಸ ಮಾಡಿದರೂ ಸುಸ್ತಾಗಲ್ಲ.

2. ಈ ನೀರನ್ನು ಕುಡಿದರೆ ದೇಹದಲ್ಲಿನ ಇರುವ ಕೆಟ್ಟ ಕೊಲೆಸ್ಟರಾಲ್ ನಿವಾರಣೆಯಾಗುತ್ತದೆ. ಒಳ್ಳೆಯ ಕೊಲೆಸ್ಟರಾಲ್ ಬೆಳೆಯುತ್ತದೆ. ಇದರಿಂದ ಅಧಿಕ ತೂಕ ಕಡಿಮೆಯಾಗುತ್ತದೆ. ಹೃದಯ ಸಮಸ್ಯೆಗಳು ಬರಲ್ಲ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ರಕ್ತನಾಳಗಲ್ಲಿ ಇರುವ ಅಡ್ಡಿ ಆತಂಕಗಳು ದೂರವಾಗುತ್ತವೆ. ಬಿಪಿ ನಿಯಂತ್ರಣಕ್ಕೆ ಬರುತ್ತದೆ.

3. ವ್ಯಾಯಾಮ ಮಾಡುವವರು ಈ ನೀರು ಕುಡಿದರೆ ಉತ್ತಮ. ಸ್ನಾಯುಗಳು ಶೀಘ್ರವಾಗಿ ಬೆಳೆಯುತ್ತವೆ. ಹೊಸ ಕಣಜಾಲ ನಿರ್ಮಾಣವಾಗುತ್ತದೆ. ಸ್ನಾಯುಗಳು ಬಿಲ್ಡ್ ಆಗುತ್ತವೆ. ದೈಹಿಕವಾಗಿ ದೃಢವಾಗುತ್ತಾರೆ.

4. ಕಡೆಲೆಯನ್ನು ನೆನೆಸಿದ ನೀರು ಮಧುಮೇಹ ಇರುವವರಿಗೆ ಔಷಧಿ ಎಂದೇ ಹೇಳಬಹುದು. ಈ ನೀರನ್ನು ಕುಡಿದರೆ ಅವರಲ್ಲಿ ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುತ್ತದೆ. ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ.

5. ಫೈಬರ್ ಹೆಚ್ಚಾಗಿ ಇರುವುದರಿಂದ ಮೆಟಬಾಲಿಸಂ ಪ್ರಮಾಣ ಹೆಚ್ಚುತ್ತದೆ. ಈ ಮೂಲಕ ಕೊಬ್ಬು ಕರಗುತ್ತದೆ. ಹೊಟ್ಟೆ ಸುತ್ತಲೂ ಇರುವ ಕೊಬ್ಬು ನಿವಾರಣೆಯಾಗುತ್ತದೆ. ಅಧಿಕ ತೂಕ ಕಡಿಮೆಯಾಗುತ್ತದೆ.

6. ಮಿದುಳಿನ ಕೆಲಸ ಉತ್ತಮಗೊಳ್ಳುತ್ತದೆ. ಜ್ಞಾಪಕಶಕ್ತಿ ಹೆಚ್ಚುತ್ತದೆ. ಮಿದುಳು ಆಕ್ಟೀವ್ ಆಗಿ, ಚುರುಕಾಗಿ ಕೆಲಸ ಮಾಡುತ್ತದೆ. ಓದಿಕೊಳ್ಳುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಪಾನೀಯ ಎಂದು ಹೇಳಬಹುದು.

7. ಚರ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ. ಚರ್ಮದ ಮೇಲೆ ಉಂಟಾಗುವ ಮಚ್ಚೆಗಳು, ಮೊಡವೆಗಳು ಬರಲ್ಲ. ಚರ್ಮ ಮೃದುವಾಗಿ, ಕಾಂತಿಯುತವಾಗಿ ಬದಲಾಗುತ್ತದೆ.

. ಕೂದಲು ದೃಢವಾಗಿ, ದಟ್ಟವಾಗಿ ಬೆಳೆಯುತ್ತದೆ. ತಲೆಹೊಟ್ಟು, ಕೂದಲು ಉದುರುವ ಸಮಸ್ಯೆಗಳು ಬರಲ್ಲ. ಕೂದಲು ದಟ್ಟವಾಗಿ ಬೆಳೆಯುತ್ತವೆ.

9. ದಂತಗಳು, ಒಸಡಿನ ಸಮಸ್ಯೆಗಳು ಬರಲ್ಲ. ದಂತಗಳು ದೃಢವಾಗಿ ಬದಲಾಗುತ್ತವೆ. ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಒಸಡು ದೃಢವಾಗಿರುತ್ತದೆ.

10. ಕಡಲೆಯನ್ನು ನೆನೆಸಿದ ನೀರನ್ನು ಕುಡಿದರೆ ಕ್ಯಾನ್ಸರ್ ಕಣಗಳು ನಾಶವಾಗುತ್ತವೆ. ಆ ಕಣಗಳು ಬೆಳೆಯಲ್ಲ. ಕ್ಯಾನ್ಸರನ್ನು ಸಮರ್ಥವಾಗಿ ನಿವಾರಿಸುವ ಔಷಧ ಗುಣಗಳು ಈ ನೀರಿನಲ್ಲಿವೆ.

ರಾಗಿ ಮುದ್ದೆ - 12 ಆರೋಗ್ಯ ಪ್ರಯೋಜನಗಳು , Raagi Balls 12 health benefits

ನಿಮಗೆ ರಾಗಿಯ ಬಗ್ಗೆ ತಿಳಿದಿದೆಯೇ? ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದರ ರುಚಿ ಸಪ್ಪೆಯಾಗಿರುವುದರಿಂದ. ಆದರೆ ರಾಗಿ ನಮ್ಮ ದೇಹದಲ್ಲಿ ಉಂಟುಮಾಡುವ ಜಾದೂ ನಿಮಗೆ ತಿಳಿಯಿತೆಂದರೆ

ಇಂದೇ ನೀವು ಅದನ್ನು ಬಳಸಲು ಪ್ರಾರಂಭಿಸುವಿರಿ. ಹೆಚ್ಚಾಗಿ ರಾಗಿಯನ್ನು ಅಗೆಯುವುದಕ್ಕಿಂತ ನುಂಗುವುದು ವಾಡಿಕೆ. ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ಕಷಾಯ, ರಾಗಿ ರೊಟ್ಟಿ ಹೀಗೆ ಒಂದಾ ಎರಡಾ ರಾಗಿಯ ರೆಸಿಪಿಗಳು. ರಾಗಿಯಿಂದ ತಯಾರಿಸುವ ಪ್ರತಿಯೊಂದು ಆಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ.

ಇಂದಿನ ಲೇಖನದಲ್ಲಿ ರಾಗಿಯಿಂದ ತಯಾರಿಸಲ್ಪಟ್ಟ ಮುದ್ದೆಯ ಆರೋಗ್ಯ ಪ್ರಯೋಜನಗಳನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾದುದು. ಅದಕ್ಕಿರುವ ಮಹತ್ವ ಘನತೆ ಬೇರೆ ಧಾನ್ಯಗಳಿಗಿಲ್ಲ. ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು.

ತಮ್ಮ ದೇಹ ತೂಕವನ್ನು ಇಳಿಸುವ ಯೋಜನೆ ಇದ್ದವರು ರಾಗಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಸಸ್ಯಾಹಾರಿಗಳಿಗೆ ಪ್ರೋಟೀನ್ ಶ್ರೀಮಂತವಾಗಿರುವ ರಾಗಿ ದೇಹ ತೂಕ ಇಳಿಸುವವರಿಗೆ ವರದಾನವೇ ಸರಿ.
ದಕ್ಷಿಣ ಭಾರತದಲ್ಲಿ ರಾಗಿ ಮುದ್ದೆ ತುಂಬಾ ಜನಪ್ರಿಯ. ಕರ್ನಾಟಕದಲ್ಲಂತೂ ಪ್ರತೀ ದಿನ ರಾಗಿ ಮುದ್ದೆಯನ್ನು ತಿಂದೇ ತಮ್ಮ ದೈನಂದಿನ ಕಾಯಕವನ್ನು ಪ್ರಾರಂಭಿಸುವವರು ಬಹುತೇಕ ಮಂದಿ. ರಾಗಿ ಮುದ್ದೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳತ್ತ ಕಣ್ಣು ಹಾಯಿಸಿ.


*ದೇಹ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ:*
ಹೆಚ್ಚಿನ ಕೊಬ್ಬನ್ನು ಹಾಗೂ ತೂಕವನ್ನು ಕರಗಿಸುವ ಯೋಜನೆ ನಿಮ್ಮದಾಗಿದ್ದರೆ, ರಾಗಿ ಮುದ್ದೆಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸಿ. ರಾಗಿಯಲ್ಲಿರುವ ಅಮೀನೊ ಏಸಿಡ್ ಟ್ರೈಪ್ಟೋಫನ್ ಹಸಿವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

*ಮೂಳೆಗಳಿಗೆ ಉತ್ತಮ:*
ರಾಗಿ ಮುದ್ದೆಯ ಇನ್ನೊಂದು ಪರಿಣಾಮಕಾರಿ ಪ್ರಯೋಜನವೆಂದರೆ ನಿಮ್ಮ ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದ್ದು, ಮಕ್ಕಳಿಗೆ ಹಾಗೂ ವೃದ್ಧರಿಗೆ ಆವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇದು ಹೊಂದಿದೆ.

*ಮಧುಮೇಹಿಗಳಿಗೆ ಸೂಕ್ತ:*
ಮಧುಮೇಹದಿಂದ ನೀವು ಬಳಲುತ್ತಿದ್ದೀರಾ? ನಿಮಗೆ ಸೇವಿಸಲು ಇದೊಂದು ಪರಿಪೂರ್ಣ ಆಹಾರವಾಗಿದೆ. ಮಧುಮೇಹದ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.

*ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:*
ರಾಗಿಯಲ್ಲಿರುವ ಅಮೀನೊ ಏಸಿಡ್ ಲೆಸಿತಿನ್ ಹಾಗೂ ಮೆಥೊನಿನ್ ನಿಮ್ಮ ಜೀರ್ಣಾಂಗವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.

*ನೀವು ಒಬ್ಬ ಅನೀಮಿಕ್ ಆಗಿದ್ದರೆ:*
ನೀವು ಅನಿಮೀಯಾದಿಂದ ಬಳಲುತ್ತಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಐರನ್ನ ಮೂಲ ರಾಗಿ ಗಿಡವಾಗಿದೆ.

*ನಿಮಗೆ ರಿಲ್ಯಾಕ್ಸ್ ಆಗಲು ಸಹಕಾರಿ:*
ರಾಗಿಗಿರುವ ಇನ್ನೊಂದು ಮಹತ್ವದ ಗುಣವೆಂದರೆ ಅದು ನಿಮಗೆ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಒತ್ತಡಪೂರ್ಣ ಜೀವನದಿಂದ ಮುಕ್ತಿ ಸಿಗಲು ನಿಮ್ಮ ಪಥ್ಯದಲ್ಲಿ ಸೇರಿಸಬೇಕಾದ ಒಂದು ಉತ್ತಮ ಸಾಮಾಗ್ರಿ ರಾಗಿ ಮುದ್ದೆಯಾಗಿದೆ.

*ದೇಹವನ್ನು ತಂಪುಗೊಳಿಸುತ್ತದೆ:*
ಬೇಸಿಗೆ ಸಮಯದಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮದ್ದು ಸಹ ರಾಗಿಯಾಗಿದೆ.

*ಸದೃಢತೆಗೆ:*
ನಿಮ್ಮ ಸಾಮರ್ಥ್ಯ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು, ರಾಗಿ ಮುದ್ದೆಯನ್ನು ನಿಮ್ಮ ಆಯ್ಕೆಯಾಗಿಸಿಕೊಳ್ಳಿ. ಇದರಲ್ಲಿರುವ ಪ್ರೊಟೀನ್ ವಿಟಮಿನ್ಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿರಿಸುತ್ತದೆ.

*ಮಲಬದ್ಧತೆಗೆ ಉಪಯೋಗಕಾರಿ:*
ರಾಗಿ ಮುದ್ದೆಯಲ್ಲಿರುವ ಫೈಬರ್ ಗುಣ ಮಲಬದ್ಧತೆಗೆ ಸಹಾಯಕಾರಿ. ನೀವು ಸುಲಭವಾದ ಮಲಬದ್ಧತೆಯನ್ನು ಹೊಂದಲು ನಿತ್ಯವೂ ರಾಗಿಮುದ್ದೆ ಸೇವಿಸಿ.

*ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ:*
ಹೌದು, ರಾಗಿ ಮುದ್ದೆಯ ಆರೋಗ್ಯಕಾರಿ ಪ್ರಯೋಜನವೆಂದರೆ ನಿಮ್ಮ ಥೈರಾಯ್ಡ್ ಅನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಹೈಪೋಥೈರಾಯ್ಡ್ನಿಂದ ಬಳಲುತ್ತಿರುವವರಿಗೆ ಇದು ಉತ್ತಮ.

*ನೂತನ ತಾಯಂದಿರಿಗೆ:*
ನೂತನ ತಾಯಂದಿರಿಗೆ, ಹಿಮೋಗ್ಲೋಬೀನ್ ಮಟ್ಟಗಳನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.

ಡೆಂಗ್ಯೂ ಭಯ ಬೇಡ ಇರಲಿ ಎಚ್ಚರ , Don't fear Dengue , but be aware

ಡೆಂಗ್ಯೂ ಭಯ ಬೇಡ ಇರಲಿ ಎಚ್ಚರ, ನನ್ನ ಈ ಸಣ್ಣ ಬರವಣಿಗೆ ಬಹುಶಃ ನಿಮಗೆ ದಾರಿದೀಪವಾಗಬಹುದು. ಒಮ್ಮೆ ಕಣ್ಣಾಡಿಸಿ ನನ್ನ ನಲ್ಮೆಯ ಸ್ನೇಹಿತರೆ....

ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಮತ್ತು ಸಮುದಾಯದ ಆಸಕ್ತಿ , ಸ್ಥಳೀಯ ಮತ್ತು ನಗರಾಡಳಿತ ಮತ್ತು ಆರೋಗ್ಯ ಇಲಾಖೆಯ ಸಮರೋಪಾದಿ ಜವಾಬ್ದಾರಿಯಿಂದ  ಮಾತ್ರ ರೋಗ ತಡೆ ಸಾಧ್ಯ. ಆದುದರಿಂದ ನಾವೆಲ್ಲ ಒಟ್ಟಾಗಿ ಕೈ ಜೋಡಿಸಿ ಈ ಮಹಾಮಾರಿಯನ್ನ ತಡೆಯೋಣ ಬನ್ನಿ ಸ್ನೇಹಿತರೆ.

         ಡೆಂಗ್ಯೂ ಎಂದರೆ ಏನು?

ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4  ಎಂಬ 4 ವಿಧದ ವೈರಸ್ಗಳಿಂದ ಹರಡುತ್ತದೆ.

      ಇದು ಹೇಗೆ ಹರಡುತ್ತದೆ?

ಇದು ಮನುಷ್ಯನಿಗೆ ಈಡೀಸ್ ಎಂಬ ಡೆಂಗ್ಯೂ ಪೀಡಿತ ಹೆಣ್ಣು ಸೊಳ್ಳೆ ಕಡಿಯುವುದರಿಂದ ಹರಡುತ್ತದೆ.

    ಈ ಈಡೀಸ್ ಸೊಳ್ಳೆ ಹೇಗಿರುತ್ತದೆ?

ಇದು ನೋಡಲು ಸಾದ ಸೊಳ್ಳೆಗಳಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ. ಅಂದ್ರೆ ಈ ಸೊಳ್ಳೆಯ ಮೈ ಮೇಲೆ ಕಪ್ಪು ಬಿಳಿ ಬಣ್ಣದ ಪಟ್ಟೆ/ಗೆರೆಗಳಿರುತ್ತವೆ. ಆದ ಕಾರಣ ಇವುಗಳನ್ನು ಟೈಗರ್ ಸೊಳ್ಳೆ ಗಳು ಅಂತ ಅಡ್ಡ ಹೆಸರಿಂದ ಸಹ ಕರೆಯುತ್ತೇವೆ.ಸಾಮಾನ್ಯವಾಗಿ ಇವು ಹಗಲು ಸಮಯ ಮಾತ್ರ ಕಡಿಯುತ್ತವೆ.

            ನಿಮಗಿದು ಗೊತ್ತೇ?

1. ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೊಟೀನ್ಗಾಗಿ ಮಾತ್ರ ನಮ್ಮನ್ನು ಕಚ್ಚುತ್ತವೆ.
2. ಇವುಗಳಿಗೆ ,ಸೋಂಕಿತ ವ್ಯಕ್ತಿಗೆ ಕಚ್ಚಿದಾಗ ಆತನಿಂದ ರೋಗಾಣು ಇವುಗಳಿಗೆ ಹರಡುತ್ತವೆ, ಹಾಗೂ ಇದು ಸಾಯುವವರೆಗೂ ರೋಗಾಣುಗಳನ್ನು ತನ್ನೊಂದಿಗೆ ಇಟ್ಟುಕೊಂಡಿದ್ದು , ಈ ಸೊಳ್ಳೆ ಕಚ್ಚುವ ಎಲ್ಲ ವ್ಯಕ್ತಿಗಳಿಗೂ ಸೋಂಕು ಹರಡಿಸುತ್ತವೆ.
3. ಮತ್ತೊಂದು ಭಯಾನಕ ಸತ್ಯ ಎಂದರೆ ಒಮ್ಮೆ ಸೋಂಕಿಗೊಳಗಾದ ಸೊಳ್ಳೆ, ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದಲ್ಲದೆ, ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸಿ ತನ್ಮೂಲಕ , ಆ ಮೊಟ್ಟೆ ಮರಿ ಸೊಳ್ಳೆಯಾಗಿ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ ಮತ್ತೆ ರೋಗ ಪಸರಿಸುತ್ತದೆ.
4. ಸಾಮಾನ್ಯವಾಗಿ ಈ ಸೊಳ್ಳೆ ಸೂರ್ಯ ಹುಟ್ಟುವ ಮತ್ತು ಮುಳುಗುವ 2 ಗಂಟೆ ಮುಂಚೆ ಮನುಷ್ಯನಿಗೆ ಕಡಿಯುತ್ತವೆ
5. ಈ ಸೊಳ್ಳೆಯ ಜೀವಿತಾವಧಿ 2 ವಾರಗಳು ಮಾತ್ರ.
6. ಆದರೆ ಈ ಸೊಳ್ಳೆಗಳು ತಮ್ಮ ಜೀವಿತಾವಧಿಯಲ್ಲಿ 3 ಬಾರಿ ಮೊಟ್ಟೆ ಇಡುತ್ತವೆ. ಹಾಗೂ ಒಮ್ಮೆಲೇ ಸುಮಾರು 100 ಮೊಟ್ಟೆ ಇಡುತ್ತವೆ.
7. ದುರಂತ ಏನಂದ್ರೆ ಈ ಸೊಳ್ಳೆಗಳು ಇಡುವ ಮೊಟ್ಟೆ, ಇದರಿಂದ ಹುಟ್ಟುವ ಮರಿಸೊಳ್ಳೆಗಳು ಸಹ ಸೋಂಕಿತ ಸೊಳ್ಳೆಗಳಗುತ್ತವೆ (ಮೊಟ್ಟೆ ಒಡೆದು ಮರಿಗಳಾಗಳು ಗಾಳಿ ನೀರು ಆಹಾರ ಮತ್ತು ಸೂಕ್ತ ಉಷ್ಣತೆ ಬೇಕು) ಆದರೆ ಈ ಮೊಟ್ಟೆಗಳು ಅತ್ಯಂತ ಉಷ್ಣತೆಯನ್ನು ಸಹ ಸಹಿಸಿ, ನೀರು ಇಲ್ಲದೆ ಇದ್ದರೂ ಸಹ ಹಲವಾರು ತಿಂಗಳುಗಳ ಕಾಲ ಇರುತ್ತವೆ. ಮತ್ತೆ ನೀರು ಸಿಕ್ಕಾಗ ಅಂದರೆ ಸಾಮಾನ್ಯವಾಗಿ ಮುಂಗಾರು ಮಳೆ ಅಥವಾ ಪ್ರವಾಹದ ಸಂದರ್ಭದಲ್ಲಿ ಮೊಟ್ಟೆಯೊಡೇದು ಬಂದು ಮತ್ತೆ ಡೆಂಗ್ಯೂ ಸೋಂಕಿತ ಸೊಳ್ಳೆಗಳಾಗಿ ಮನುಷ್ಯನನ್ನು ಭಾದಿಸುತ್ತವೆ.
8. ಇವು ಸಾಮಾನ್ಯವಾಗಿ ಕತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ ಅಂದ್ರೆ ನಮ್ಮ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್ ರೋಬ್ಸ್ ಹೀಗೆ ಕತ್ತಲ ಜಾಗಗಳಲ್ಲಿರುತ್ತವೆ.
9.ಆದರೆ ಇವುಗಳು ಹಾರಾಡುವ ಮತ್ತು ಪಸರಿಸುವ ದೂರ ಬಹಳ ಕಡಿಮೆ ಅಂದರೆ ಕೇವಲ 400 ಮೀಟರ್ ಮಾತ್ರ. ದುರಂತವೇನಂದ್ರೆ ಸೊಳ್ಳೆಗಳಿಗಿಂತ ಹೆಚ್ಚಾಗಿ ಪ್ರದೇಶ ಮತ್ತು ಸಮುದಾಯಗಳ ಮದ್ಯೆ ಸೋಂಕು ಹರಡಿಸುವುದು ಹೆಚ್ಚಾಗಿ ಮನುಷ್ಯನೇ ಹೊರತು ಸೊಳ್ಳೆಗಳಲ್ಲ.(ಮನುಷ್ಯ ಯಾವಾಗಲೂ ಅಲೆದಾಡುವುದರಿಂದ ಆ ಪ್ರದೇಶದ ಒಂದು ಸೊಳ್ಳೆ ಸೋಂಕಿತವಾದರೆ ಅಲ್ಲಿಗೆ ಎಲ್ಲ ಮುಗಿಯಿತು)
10.ನಮ್ಮ ಮನೆಯಲ್ಲೇ ಇವು ಹೆಚ್ಚಾಗಿ ಬೆಳೆಯುತ್ತವೆ. ಅದು ಬಿಟ್ಟು ಕೊಚ್ಚೆ ನೀರು ಚರಂಡಿ ಮತ್ತು ನದಿ ತೊರೆಗಳಲ್ಲಿ ಇವು ಮೊಟ್ಟೆ ಇಡುವುದಿಲ್ಲ, ಇವಕ್ಕೆ ಶುದ್ಧ ನೀರು ಒಳ್ಳೆ ಜಾಗಗಳೇ ಬೇಕು.

     ಹಾಗಾದ್ರೆ ಇದರ ಸೋಂಕನ್ನು ನಾವು ಹೇಗೆ ತಡೆಗಟ್ಟಿಕೊಳ್ಳಬಹುದು?

1. ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ದ ಸಮಯದಲ್ಲಿ , ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.
2. ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ
2.ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು

        ಡೆಂಗ್ಯೂನ ಲಕ್ಷಣಗಳು  

ಜ್ವರ ಕಾಣಿಸಿಕೊಂಡ 2 ರಿಂದ 7 ದಿನಗಳಲ್ಲಿ ಈ ಕೆಳಕಂಡ ಯಾವುದಾದರೂ 2 ಲಕ್ಷಣಗಳು ಕಂಡು ಬಂದರೆ ಹೆಚ್ಚು ಜಾಗರೂಕತೆಯಿಂದ ಇರಬೇಕು.
1.ತೀವ್ರ ತಲೆನೋವು
2.ಕಣ್ಣಿನ ಹಿಂಭಾಗ ನೋವು ಅಂದ್ರೆ ಕಣ್ಣು ಗುಡ್ಡೆಯಲ್ಲಿ
3. ಸ್ನಾಯು ಸೆಳೆತ(ಮೈ ಕೈ ನೋವು)
4.ಕೀಲು ನೋವು
5.ಚರ್ಮ ಕೆಂಪಾಗುವುದು
6. ಮೂಗು ಅಥವಾ ಒಸಡುಗಳಲ್ಲಿ ರಕ್ತಸ್ರಾವ

    ಈ ಲಕ್ಷಣಗಳು ತಮ್ಮಲ್ಲಿ ಕಂಡುಬಂದರೆ ಏನು ಮಾಡುವುದು?

1. ವಿಶ್ರಾಂತಿ ಬಹಳ ಮುಖ್ಯ
2.ಅತಿ ಮುಖ್ಯವಾಗಿ ಆಸ್ಪಿರಿನ್ ಮತ್ತು ಬ್ರುಫೆನ್ ನಂತಹ ಮಾತ್ರೆಗಳನ್ನು ತೆಗೆದುಕೊಳ್ಳುಬಾರದು. ಅವಶ್ಯಕತೆ ಇದ್ದರೆ ವೈದ್ಯರ ಸಲಹೆ ಪಡೆಯಬೇಕು (ಇವುಗಳು ಗ್ಯಾಸ್ಟ್ರಿಕ್, ವಾಂತಿ, ಮತ್ತು ರಕ್ತ ಸ್ರಾವಕ್ಕೆ ಕಾರಣವಾಗುತ್ತವೆ)
3.paracetamol ಮಾತ್ರೆಗಳು ಉಪಯೋಗಿಸಬಹುದು.(ಅವಶ್ಯಕತೆ ಇದ್ರೆ ವೈದ್ಯರ ಸಲಹೆಯಂತೆ)
4. ಯಥೇಚ್ಛ ನೀರು , ಎಳನೀರು ಮತ್ತು ಓ ಆರ್ ಎಸ್ ದ್ರಾವಣ ಕುಡಿಯಬೇಕು. ರೋಗಕ್ಕಿಂತ ಜಾಸ್ತಿ ಸಾವು ನಿರ್ಜಲೀಕರಣ ಉಂಟಾಗುತ್ತದೆ. ಕಾರಣ ಅತಿ ಹೆಚ್ಚು ಜ್ವರ, ಬೆವರು, ಆದುದರಿಂದ ತಮ್ಮ ರಕ್ತದೊತ್ತಡ ಕಡಿಮೆಯಾಗಿ ಸಾವು ಸಂಭವಿಸುತ್ತದೆ. ದಯವಿಟ್ಟು ಹೆಚ್ಚು ದ್ರವಾಹಾರ ಸೇವಿಸಿರಿ.
5. ಸೊಳ್ಳೆಗಳಿಂದ ದೂರವಿರಿ
6. ವೈದ್ಯರ ಭೇಟಿ ಮಾಡಿ
ಸಾಮಾನ್ಯವಾಗಿ ಡೆಂಗ್ಯೂ ಇಂದ ಬಳಲುವ ರೋಗಿಗಳು 1 ರಿಂದ 2 ವಾರಗಳಲ್ಲಿ ಪುನಃ ಆರೋಗ್ಯವಂತರಾಗುತ್ತಾರೆ.

      ಡೆಂಗ್ಯೂವಿನಿಂದ ನಾವು ಸಾಯುತ್ತೇವೆಯೇ?

1.ಸಾಮಾನ್ಯವಾಗಿ ಈ ರೋಗದಿಂದ ಸಾವು ಸಂಭವಿಸುವದು ಅತಿ ವಿರಳ ಆದರೆ ಕೆಲವೊಬ್ಬರಿಗೆ DHF(dengue hemorrhagic fever) ಅಥವಾ DSS (dengue shocking syndrome) ಆಗಿ ಸಾವನ್ನಪ್ಪಬಹುದು.
2. ಇಂತಹ ರೋಗಿಗಳಿಗೆ ಮಾತ್ರ ಒಳ ರೋಗಿಯಾಗಿ ಚಿಕಿತ್ಸಿಸುವ ಅವಶ್ಯಕತೆ ಇದೆ. ಆದುದರಿಂದ ತಡಮಾಡದೆ ಆಸ್ಪತ್ರೆಗೆ ದಾಖಲಿಸಿ.
3. ಸರಿಯಾದ ಮತ್ತು ಸಮಯೋಚಿತ ಚಿಕಿತ್ಸೆಯಿಂದ ಉತ್ತಮವಾಗಿ ಇಂತಹ ರೋಗಿಗಳನ್ನು ಗುಣಪಡಿಸಬಹುದು.

          ಅತಿ ಜರೂರು *Immediate medical attention*

1. ತುಂಬಾ ಹೊಟ್ಟೆನೋವು
2.ಚರ್ಮದ ಮೇಲಿನ ಕೆಂಪು ಗುಳ್ಳೆ ಅಥವಾ ಮಚ್ಚೆ
3.ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವ
4.ರಕ್ತ ಮಿಶ್ರಿತ ವಾಂತಿ
5.ಕಪ್ಪು ಬಣ್ಣದ ಮಲ ವಿಸರ್ಜನೆ
6.ತುಂಬಾ ಸಪ್ಪೆಯಾಗಿ ವರ್ತಿಸುವುದು
7. ತಣ್ಣಗಾದ ಅಥವಾ ಒಣ ಚರ್ಮ
8.ಉಸಿರಾಟಕ್ಕೆ ತೊಂದರೆ.

      ಇಂತಹ ಸಂದರ್ಭದಲ್ಲಿ ಮಾಡಬೇಕಾದ್ದು.  

1.ಪ್ರತಿ ಗಂಟೆಗೊಮ್ಮೆ ರೋಗಿಯ ತಪಾಸಣೆ.
2. ಪ್ಲೇಟ್ಲೇಟ್ ಚೆಕ್ ಮಾಡುವುದು.
3. ವೈದ್ಯರು ಅವಶ್ಯಕತೆ ಇದ್ರೆ ಇ. ವಿ. ಫ್ಲುಯಡ್ಸ್ ಅಥವಾ ಪ್ಲೇಟ್ಲೆಟ್ ಮರು ಪೂರಣ ಮಾಡಬೇಕಾಗಬಹುದು
(ಎಲ್ಲ ರೋಗಿಗಳಿಗೂ ಪ್ಲೇಟ್ಲೆಟ್ ಮರುಪೂರಣದ ಅವಶ್ಯಕತೆ ಇಲ್ಲ)

   ಇಂತಹ ರೋಗಿಗಳನ್ನು ಮನೆಯಲ್ಲೆ ಚಿಕಿತ್ಸಿಸಬಹುದೇ?

ಹೌದು , ಅವರಿಗೆ ಗೃಹಾದಾರಿತ ಚಿಕಿತ್ಸೆ ಸಾಕು, ಆದರೆ ದ್ರವಾಹರ ಹೆಚ್ಚಾಗಿ ನೀಡಬೇಕು ಮತ್ತು ಮೇಲ್ಕಂಡ ತೀವ್ರ ತರದ ಲಕ್ಷಣಗಳು ಕಂಡು ಬಂದಾಗ ಮಾತ್ರ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.

An article shared in public interest  - Mr.Anand Jr Health inspector
Terms | Privacy | 2024 🇮🇳
–>