-->

ನರಹುಲಿ ಹೋಗಲಾಡಿಸಲು ಪರಿಣಾಮಕಾರಿಯಾದ ಮನೆಮದ್ದು Home remedy to treat Warts

ನರಹುಲಿ ಸಮಸ್ಯೆ ಅಂದರೆ ಕತ್ತಿನ ಭಾಗದಲ್ಲಿ, ಮುಖದ ಮೇಲೆ, ಕೈಗಳ ಬೆರಳುಗಳ ಮೇಲೆ ಚಿಕ್ಕ ಮಾಂಸದ ಗಂಟುಗಳು ಏಳುವುದು. ಹೀಗೆ ನರಹುಲಿ ಬಂದರೆ ಅದು ನಮ್ಮ ಬಾಹ್ಯ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಇವುಗಳು ಕತ್ತಿನ ಭಾಗದಲ್ಲಿ ಕೆಲವರಿಗೆ ಹೆಚ್ಚಾಗಿ ಕಂಡು ಬರುತ್ತದೆ.


 
 
 ನರಹುಲಿ ಸಮಸ್ಯೆ ಬಂದಾಗ ಚರ್ಮರೋಗ ತಜ್ಞರ ಬಳಿ ಚಿಕ್ಕ ಶಸ್ತ್ರಕ್ರಿಯೆ ಮೂಲಕ ಇವುಗಳನ್ನು ತೆಗೆಯುತ್ತಾರೆ. ಆದರೆ ಇವುಗಳನ್ನು ಮನೆಮದ್ದು ಮೂಲಕ ಕೂಡ ತೆಗೆಯಬಹುದು. ಇಲ್ಲಿ ನಾವು ನರಹುಲಿ ತೆಗೆಯಲು ಸರಳವಾದ ಹಾಗೂ ಪರಿಣಾಮಕಾರಿಯಾದ ಮನೆಮದ್ದು ನೀಡಿದ್ದೇವೆ. ಇವುಗಳನ್ನು ಮಾಡಿದರೆ ನರಹುಲಿ ಸಮಸ್ಯೆ ಇಲ್ಲವಾಗಿಸಬಹುದು ನೋಡಿ:

1. ಚಾಕ್ ಪೀಸ್
ನರಹುಲಿ ಹೋಗಲಾಡಿಸಲು ನಿಮ್ಮ ಮನೆಯಲ್ಲಿರುವ ಚಾಕ್‌ಪೀಸ್ ಸಾಕು. ಚಾಕ್‌ಪೀಸ್‌ ಬಳಸಿ ನರಹುಲಿ ತೆಗೆಯುವುದು ಹೇಗೆ ಎಂದು ನೋಡೋಣ:
ನರಹುಲಿ ತೆಗೆದು ಹಾಕಲು ಒಂದು ಬಟ್ಟಲಲ್ಲಿ ಸೀಮೆ ಸುಣ್ಣವನ್ನು ಪುಡಿ ಮಾಡಿ ಹಾಕಿ. ಪುಡಿ ತುಂಬಾ ನುಣ್ಣಗೆ ಇರಬೇಕು. ಈಗ ಪುಡಿ ಮಾಡಿರುವ ಸುಣ್ಣವನ್ನು ದೇಹದಲ್ಲಿರುವ ನರಹುಲಿಗಳಿ ಮೇಲೆ ಹಚ್ಚಿ ನಂತರ ಅದರ ಮೇಲೆ ಗಾಯಕ್ಕೆ ಹಾಕುವ ಪ್ಲಾಸ್ಟರ್ ಹಾಕಿ. ಈ ರೀತಿ ರಾತ್ರಿ ಮಲಗುವಾಗ ಮಾಡಿ. ಬೆಳಗ್ಗೆ ಎದ್ದ ಬಳಿಕ ಪ್ಲಾಸ್ಟರ್ ತೆಗೆಯಿರಿ. ಈ ರೀತಿ ದಿನಬಿಟ್ಟು ದಿನದಂತೆ ಹದಿನೈದು ದಿನ ಮಾಡಿದರೆ ನರಹುಲಿ ಪೂರ್ತಿಯಾಗಿ ಇಲ್ಲವಾಗುವುದು.

2. ಈರುಳ್ಳಿ ರಸ
ನರಹುಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಪರಿಣಾಮಕಾರಿ ವಿಧಾನವೆಂದರೆ ಈರುಳ್ಳಿ ರಸ ಹಾಗೂ ಕೊಬ್ಬರಿ ಎಣ್ಣೆ. ಈರುಳ್ಳಿ ಪೇಸ್ಟ್‌ ಮಾಡಿ, ಅದರ ರಸ ತೆಗೆದು, ಅದಕ್ಕೆ ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಶುದ್ಧಕೊಬ್ಬರಿ ಎಣ್ಣೆ ಹಾಕಿ ಮಿಶ್ರಮಾಡಿ, ನರಹುಲಿ ಇರುವ ಕಡೆ ಹಚ್ಚಿ 10 ನಿಮಿಷ ಬಿಡಿ, ಆ ರಸ ಒಣಗಿದ ಮೇಲೆ ಮತ್ತೊಮ್ಮೆ ಹಚ್ಚಿ 2-3 ಗಂಟೆ ಬಿಡಿ, ರಾತ್ರಿ ಹೊತ್ತಿನಲ್ಲಿ ಹಚ್ಚಿ ಬೆಳಗ್ಗೆ ತೊಳೆದರೆ ಇನ್ನೂ ಒಳ್ಳೆಯದು. ಈ ರೀತಿ ಒಂದು ವಾರ ಮಾಡಿದರೆ ಸಾಕು ನರಹುಲಿ ಅಥವಾ ಸ್ಕಿನ್‌ ಟ್ಯಾಗ್ ಇಲ್ಲವಾಗುವುದು.

3. ಬೆಳ್ಳುಳ್ಳಿ
2-3 ಎಸಳು ಬೆಳ್ಳುಳ್ಳಿ ತೆಗೆದು ಸಿಪ್ಪೆ ಸುಲಿದು ಜಜ್ಜಿ, ಅದನ್ನು ನರಹುಲಿ ಮೇಲೆ ಇಡಿ, ಅದರ ಮೇಲೆ ಪ್ಲಾಸ್ಟರ್‌ ಹಚ್ಚಿ ರಾತ್ರಿ ಹೊತ್ತು ಬಿಡಿ, ಬೆಳಗ್ಗೆ ಹೊತ್ತು ಪ್ಲಾಸ್ಟರ್ ತೆಗೆಯಿರಿ. ಈ ರೀತಿ ಒಂದು ವಾರ ಮಾಡಿದರೆ ಸಾಕು ನರಹುಲಿ ಬಿದ್ದು ಹೋಗುವುದು.

4. ಬಾಳೆಹಣ್ಣು ಸಿಪ್ಪೆ
ನರಹುಲಿ ಇರುವ ಕಡೆ ಬಾಳೆಸಿಪ್ಪೆ ಸಿಪ್ಪೆ ಇಟ್ಟು ಪ್ಲಾಸ್ಟರ್ ಹಾಕಿ, ಬೆಳಗ್ಗೆ ತೆಗೆಯಿರಿ. ಈ ರೀತಿ ಒಂದು ವಾರ ಮಾಡಿದರೆ ಸಾಕು ನರಹುಲಿ ಇಲ್ಲವಾಗುವುದು.

5. ಅಡುಗೆ ಸೋಡಾ
ಅರ್ಧಚಮಚ ಅಡುಗೆ ಸೋಡಾವನ್ನುಒಂದು ಚಮಚ ಹರಳೆಣ್ಣೆಯಲ್ಲಿ ಮಿಶ್ರ ಮಾಡಿ. ನಂತರ ಇದನ್ನು ನರಹುಲಿ ಇರುವ ಕಡೆ ಹಚ್ಚಿ ಪ್ಲಾಸ್ಟರ್ ಹಾಕಿ, ಈ ರೀತಿ ದಿನಬಿಟ್ಟು ದಿನ ಮಾಡಿದರೆ ಕೆಲವೇ ದಿನಗಳಲ್ಲಿ ನರಹುಲಿ ಇಲ್ಲವಾಗುವುದು. ಇದನ್ನು ಮುಖಕ್ಕೆ ಹಾಕುವ ಮುನ್ನ ಕುತ್ತಿಗೆ ಭಾಗದಲ್ಲಿ ಹಾಕಬಹುದು.

6. ನೇಲ್ ಪಾಲಿಶ್
ನೇಲ್ ಪಾಲಿಶ್ ಬಳಸಿ ಕೂಡ ನರಹುಲಿ ತೆಗೆಯಬಹುದು. ನರಹುಲಿ ಇರುವ ನೇಲ್‌ಪಾಲಿಷ್ ಹಚ್ಚಿ ಬೆಳಗ್ಗೆ ಕೊಬ್ಬರಿ ಎಣ್ಣೆ ಹಚ್ಚಿ ತೆಗೆಯಿರಿ. ಈ ರೀತಿ ಹದಿನೈದು ದಿನ ಮಾಡಿದರೆ ನರಹುಲಿ ಬಿದ್ದು ಹೋಗಿರುತ್ತದೆ.
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
–>