-->
MENU 🏠 HOME 🔍 SEARCH ThinkBangalore 🔖 FOLLOW
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

ಹಿರಿಯರ ಕಿವಿ ಮಾತು - Elders advise


ಹಿರಿಯರು ಏನೋ ಹೇಳುತ್ತಾರೆ ಎಂದು ಮೂಗು ಮುರಿಯ ಬೇಡಿ ಸ್ನೇಹಿತರೆ. ಕೆಲವನ್ನಾದರು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ,



1) ಸೋಮವಾರ ತಲೆಗೆಣ್ಣೆ     ಹಾಕಬೇಡ.
2) ಒಂಟಿ ಕಾಲಲ್ಲಿ ನಿಲಬೇಡ.
3) ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ  ಹೋಗುದು ಬೇಡ.
4) ಶುಕ್ರವಾರ ಸೊಸೆನ ತವರಿಗೆ ಕಳಿಸುದು ಬೇಡ.
5) ಇಡೀ ಕುಂಬಳಕಾಯಿ  ಮನೆಗೆ ತರಬೇಡ.
6) ಮನೆಯಲ್ಲಿ ಉಗುರು ತೆಗಿಬೇಡ.
7) ಮಧ್ಯಾಹ್ನ ತುಳಸಿ ಕೊಯ್ಯಬೇಡ.
8) ಹೊತ್ತು ಮುಳುಗಿದ ಮೇಲೆ ಗುಡಿಸಬೇಡ.
9) ಹೊತ್ತು ಮುಳುಗಿದ ಮೇಲೆ ತಲೆ ಬಾಚ ಬೇಡ.
10) ಉಪ್ಪು ಮೊಸರು  ಸಾಲ ಕೊಡುವುದು ಬೇಡ.
11) ಬಿಸಿ ಅನ್ನಕ್ಕೆ ಮೊಸರು  ಬೇಡ
12) ಊಟ ಮಾಡುವಾಗ ಮೇಲೆ ಏಳ್ಬೇಡ.
13) ತಲೆ ಕೂದಲು ಒಲೆಗೆ  ಹಾಕಬೇಡ.
14) ಹೊಸಿಲನ್ನು ತುಳಿದು ದಾಟಬೇಡ
15)ಮನೆಯಿಂದಹೊರಡುವಾಗ ಕಸ ಗುಡಿಸುವುದು ಬೇಡ.
16) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ.
17) ರಾತ್ರಿ ಹೊತ್ತಲ್ಲಿ ಬಟ್ಟೆ   ಒಗಿಯಬೇಡ
18) ಒಡೆದ ಬಳೆ ದರಿಸಬೇಡ.
19) ಮಲಗೆದ್ದ ಚಾಪೆ ಮಡಿಸದೆ ಬಿಡಬೇಡ.
20) ಉಗುರು ಕಚ್ಚಲು ಬೇಡ.
21) ಅಣ್ಣ ತಮ್ಮ ಒಟ್ಟಿಗೆ ಚೌರ ಮಾಡಿಸಬೇಡ.
22) ಒಂಟಿ ಬಾಳೆಲೆ  ತರಬೇಡ.
23) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ.
24)ಮುಸಂಜೆ ಹೊತ್ತಲ್ಲಿ ಮಲಗಬೇಡ.
25) ಕಾಲು ತೊಳಿವಾಗ ಹಿಮ್ಮಡಿ ತೊಳಿಯೋದು ಮರೀಬೇಡ.
26) ಹೊಸಿಲ ಮೇಲೆ  ಕೂರಬೇಡ.
27) ತಿಂದ ತಕ್ಷಣ ಮಲಗಬೇಡ.
28) ಹಿರಿಯರ ಮುಂದೆ ಕಾಲು  ಚಾಚಿ / ಕಾಲ ಮೇಲೆ ಕಾಲು  ಹಾಕಿ ಕೂರಬೇಡ.
29) ಕೈ ತೊಳೆದು ನೀರನ್ನು  ಒದರಬೇಡಿ.
30) ರಾತ್ರಿ ಊಟದ ತಟ್ಟೆ ತೊಳೆಯದೇ ಬಿಡಬೇಡ.
31) ಎಂಜಲ ಕೈಯಲ್ಲಿ ಊಟ ಬಡಿಸಬೇಡ
32) ಪಾತ್ರೆಗಳ ಮೇಲೆ ಎಂಜಲು ಕೈ ತೊಳಿಯಬೇಡ.

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ

–>