-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

ಹೃದಯಘಾತ ಲಕ್ಷಣಗಳು , ನಿಯಂತ್ರಣ

 ಹೃದಯಘಾತ ದಿಢೀರ್ ಎಂದು ಬರುವುದಿಲ್ಲ!!

ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.  ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.  ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ,  ಮುನ್ಸೂಚನೆ ಎಂದು ಅರಿವಾಗುವುದಿಲ್ಲ.  ಬೇರೆಯವರಿಗೂ ಮನೆಯವರಿಗೂ  ಹೇಳುವುದಿಲ್ಲ. 



*ವಿಪರೀತ ಬೆವರುವುದು,*
*ಸುಸ್ತಾಗುವುದು,*
*ಯಾವುದಾದರು ರಟ್ಟೆ ವಿಪರೀತ ನೋಯುವುದು,*
*ಎದೆ ಕಿವುಚಿದಂತೆ ಆಗುವುದು*
ನಿರ್ಲಕ್ಷಿಸಬಾರದು.

ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ,  ಮೆಟ್ಟಿಲು ಹತ್ತುವಾಗಲೂ ಕಾಣಿಸುತ್ತವೆ, ತಕ್ಷಣ ಆಸ್ಪತ್ರೆಯನ್ನು ಸೇರಬೇಕು.

*ಗೊಲ್ಡನ್ ಹವರ್*
- ಹೃದಯಾಘಾತವಾದ ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು.

40 ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು..

*ವಯಸ್ಸಾದವರು, ಈಗಾಗಲೇ ನಿತ್ಯ ಚಿಕಿತ್ಸೆಯಲ್ಲಿ ಇರುವವರು ಹೊರಗೆ ಹೋಗುವಾಗ ಯಾವಾಗಲು ಸಾಕಷ್ಟು ಹಣ, ಜಾರ್ಜ್ ಮಾಡಿದ ಮೊಬೈಲ್*(ಯಾವುದಾದರು),
*ಎಟಿಎಂ ಕಾರ್ಡ್, ಐಡಿ ಕಾರ್ಡ್  ಮತ್ತು ನೀರಿನ ಬಾಟಲಿ* (200 ಎಂ.ಎಲ್. ಆದರೂ ಪರವಾಗಿಲ್ಲ)
*ಜೊತೆಯಲ್ಲಿ  ತೆಗೆದುಕೊಂಡು ಹೋಗವುದು ಶ್ರೇಯಕರ*

ಸಾವಿಗೆ ಹೆದರಬಾರದು, ಸಾವು ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು.

ಯೋಗ ಮಾಡುವುದರಿಂದ, ನಿತ್ಯ ನಡಿಗೆ ಮಾಡುವುದರಿಂದ, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಶಾಖಾಹಾರಿ ಯಾಗಿರುವುದರಿಂದ, ಬೊಜ್ಜು ದಪ್ಪ ಇಲ್ಲದೆ ಇರುವುದರಿಂದ, ತೆಳ್ಳಗೆ ಇರುವುದರಿಂದ, ಚಿಕ್ಕ ವಯಸ್ಸು ಇರುವುದರಿಂದ  ಹೃದಯಾಘಾತ ಆಗುವುದಿಲ್ಲ ಎಂಬುದು ತಪ್ಪು ತಿಳುವಳಿಕೆ. ಅನುವಂಶಿಕ ಕಾರಣಗಳು ಜೊತೆಗೆ ಇತರೆ ಕಾರಣಗಳು ಇರುತ್ತವೆ.

ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು(ಕ್ಲಾಟ್) ಸ್ವಲ್ಪವಾದರೂ ಇದ್ದೇ ಇರುತ್ತದೆ, ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಕ್) ಹೆಚ್ಚಾಗುತ್ತಿರುತ್ತದೆ, ಆದರೆ  ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ ನಿಯಂತ್ರಣದಲ್ಲಿರುತ್ತದೆ.

ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ, ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್‌ಗಳು ಒಂದಕ್ಕಿಂತ ಹೆಚ್ಚು ಕೂಡ  ಮೇಲ್ಪಟ್ಟು ಕೂಡ ಪತ್ತೆಯಾಗಿರುವುದು.  ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು ಆರಾಮವಾಗಿ ಆರೋಗ್ಯವಾಗಿರಬಹುದು. ಏನು ಹೆದರುವ ಅವಶ್ಯಕತೆ ಇಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ, ಎಲ್ಲರಂತೆ ಸುಖ ಜೀವನ ನಡೆಸಬಹುದು.

ಬೇರೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ಹೊಂದಲು ಸಮಯವಿರುತ್ತದೆ.
ಆದರೆ..  *ಹೃದಯ  ಖಾಯಿಲೆ ಹಾಗಲ್ಲ, ಕೆಲವೊಮ್ಮೆ ಒಂದು ನಿಮಿಷ ಕೂಡ ಸಮಯವನ್ನೇ ನೀಡುವುದಿಲ್ಲ, ತಕ್ಷಣ ಸಾವಿಗೆ ನೂಕಿ ಬಿಡುತ್ತದೆ. ಬದುಕಲು ಅದೃಷ್ಟ ಬೇಕು*

ವೈದ್ಯರು ಹೇಳುವುದು ಒಂದೇ...

*ಉತ್ತಮ ಆಹಾರ ಕ್ರಮ ಅನುಸರಿಸಿ*
*ಸದಾ ಚಟುವಟಿಕೆಯಿಂದ ಇರಿ*
*ಸರಳ ಜೀವನ ನಡೆಸಿ*

ನಿಮ್ಮ ಕುಟುಂಬದ ಹಾಗು ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ,   ಹೆಂಡತಿ ಮಕ್ಕಳನ್ನು, ನಿಮ್ಮ ಕುಟುಂಬವನ್ನು ನಡು ನೀರಿನಲ್ಲಿ ಕೈ ಬಿಡಬೇಡಿ,  ಅವರಿಗಾಗಿ ಬಾಳಿ ಬದುಕಬೇಕು..

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ

 

–>