-->

Thoughts - ಮಹಾ ತಾಯಿ , Mother


ತಾಯಿ ಎಂಬ ಎರಡು ಅಕ್ಷರದಲ್ಲಿ ಮೂವತ್ತಮೂರು ಕೋಟಿ ದೇವತೆಗಳು ವಾಸವಾಗಿದ್ದಾರೆ ಎಂಬುದು ನನ್ನ ವೈಯಕ್ತಿ ಅಭಿಪ್ರಾಯ. ಅಂಥ ದೇವೆಯನ್ನು ಪೂಜಿಸಿದರೆ ಸಲಕ ದೇವರನ್ನು ಪೂಜಿಸಿದ ಫಲ ಸಿಗುತ್ತದೆ. ಆದರೆ ದುರಂತ ಎಂದರೆ ಇಂದು ತಾಯಿಯನ್ನು ಪೂಜಿಸುವುದು ಇರಲಿ ಮನೆಯಲ್ಲಿ ಇಟಕೊಂಡು ಚನ್ನಾಗಿ ನೋಡಿಕೊಂಡರೆ ಸಾಕು ಎಂಬಂತಾಗಿದೆ. ದೇವತೆಯನ್ನು ಮನೆಯಿಂದ ಹೊರಗೆ ಹಾಕುವ, ವೃದ್ಧಾಶ್ರಮಕ್ಕೆ ಸೇರಿಸುವ ಕೆಟ್ಟ ಸಂಪ್ರದಾಯ ಬೆಳೆಯುತ್ತಿದೆ. 


ಯಾವ ದೇಶದಲ್ಲಿ ತಾಯಿಯನ್ನು ದೇವತೆ ಎಂದು ಪೂಜಿಸಲಾಗುತ್ತಿತ್ತೋ ಅದೇ ಭರತ ಖಂಡದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಒಂದು ಊರಿನಲ್ಲಿ ಒಬ್ಬ ಯುವಕ ಇದ್ದ. ಆತ ಅದೇ ಊರಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆಗೆ ಇಷ್ಟ ಇರಲಿಲ್ಲಿ. ಆದರೂ ದಿನಾ ಭೇಟಿಯಾಗಿ ನನ್ನನ್ನು ಪ್ರೀತಿಸು ಎಂದು ಪೀಡಿಸುತಿದ್ದ. ಒಂದು ದಿನ ಆ ಯುವಕ ಕೇಳುತ್ತಾನೆ ಏನು ಮಾಡಿದರೆ ನನ್ನನ್ನು ಪ್ರೀತಿಸುವಿ ಎಂದು.

Thoughts - ಮಹಾ ತಾಯಿ , Mother


ಆಗ ಆಯುವತಿ ಹೇಳುತ್ತಾಳೆ ನಿನ್ನ ತಾಯಿಯ ಹೃದಯ ತಂದುಕೊಟ್ಟರೆ ಪ್ರೀತಿಸುವೆ ಎಂದು. ಇಷ್ಟ ಇಲ್ಲದಕ್ಕೆ ಇದು ಯಾರಿಂದಲೂ ಆಗದ ಕಾರ್ಯ ಎಂದು ಆ ಯುವತಿ ಹೇಳುತ್ತಾಳೆ. ಆಗ ಹಿಂದೆ ಮುಂದೆ ವಿಚಾರ ಮಾಡದೆ ಯುವಕ ತಾಯಿ ಮಲಗಿದ್ದಾಗ ಎದೆ ಸೀಳಿ ಹೃದಯವನ್ನು ಅಂಗೈಯಲ್ಲಿ ಹಿಡಿದುಕೊಂಡು ಪ್ರೇಯಸಿ ಬಳಿಗೆ ಆತೂರದಿಂದ ಓಡುತ್ತಿರುವಾಗ ಕಾಲಿಗೆ ಕಲ್ಲುತಾಗಿ ಕೆಳಗೆ ಬಿದ್ದ. ಹೃದಯ ದೂರ ಬಿದ್ದಿತ್ತು. ತಡವರಸಿಕೊಂಡು ಎದ್ದು ಮತ್ತೆ ಹೃದಯ ಕೈಯಲಿ ಹಿಡಿದುಕೊಳ್ಳುತ್ತಾನೆ. ಆಗ ಹೃದಯ ಕೇಳಿತು. ಮಗು ಬಿದ್ದಿಯಲ್ಲ ನಿನಗೆ ಎಲ್ಲಾದರೂ ನೋವಾಯಿತಾ ಎಂದು. ಎದೆ ಸೀಳಿದಕ್ಕೆ ಬೇಜಾರಾಗಲಿಲ್ಲ  ಆ ತಾಯಿ ಹೃದಯಕ್ಕೆ ಮಗ ಬಿದ್ದಿದ್ದು ನೋವಾಯಿತು. 


ತಾಯಿಯ ವಾತ್ಸಲ್ಯ ಎಂದರೆ ಇದು. ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ಮಕ್ಕಳನ್ನು ಚನ್ನಾಗಿ ಬೆಳೆಸುತ್ತಾಳೆ. ತಾಯಿಯ ಋಣ ಎಷ್ಟು ಜನ್ಮ ತಾಳಿದರೂ ತೀರಿಸಲಾಗದು ಎಂಬ ಮಾತಿದೆ. ಆದರೆ  ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ತಾಯಿಯ ಋಣ ಮಕ್ಕಳು ತೀರಿಸಿಬಿಡುತ್ತಿದ್ದಾರೆ ಎಂಥ ವಿವಪರ್ಯಾಸ ಅಲ್ಲವೆ. ತಾಯಿಯ ಪ್ರೀತಿ ಮುಂದೆ ಯಾವುದೂ ಇಲ್ಲ. ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು, ಹೆರುವ ಮೂಲಕ ಪುನರ್ಜನ್ಮ ಪಡೆಯುತ್ತಾಳೆ. ಸ್ವಲ್ಪವೂ ನೋವಾಗದಂತೆ ಮಕ್ಕಳನ್ನು ಬೆಳೆಸುತ್ತಾಳೆ. ತಾನು ಉಪವಾಸ ವಿದ್ದು ಮಕ್ಕಳಿಗೆ ಚನ್ನಾಗಿ ಬೆಳೆಸುತ್ತಾಳೆ. ಮಕ್ಕಳ ಆರೋಗ್ಯದಲ್ಲಿ ಏರು ಪೇರಾದಾಗ  ಆ ತಾಯಿ ಜೀವ ಮಿಡಿಯುತ್ತಿರುತ್ತದೆ. ಬೇಗ ಆರಾಮ ಮಾಡು ದೇವರೆ ಎಂದು ಪ್ರಾರ್ಥಿಸುತ್ತಿರುತ್ತದೆ ತಾಯಿ ಜೀವ.


ತಾಯಿ ಎದೆ ಸೀಳಿದ ಖಟುಕ ಮಗ, ಹೃದಯಕ್ಕೆ ಗಾಯವಾದರೂ ಮಗನ ಕಾಳಜಿ ಮಾಡುವ ತಾಯಿಯ ವಾತ್ಸಲ್ಯ ಎಂಥ ವಿಚಿತ್ರ ವಲ್ಲವೇ. ಅದಕೆ ನಾನು ತಾಯಿ ದೇವರು ಅಂತ ಹೇಳೀದ್ದು. ದೇವರು ಕೂಡ ಒಂದೊಂದು ಸಮಯದಲ್ಲಿ ಶ್ರಾಪ ಕೊಡಬಹುದು ಆದರೆ ತಾಯಿ ಯಾವತ್ತು ಮಕ್ಕಳಿಗೆ ಕೆಡಕ್ಕನ್ನು ಬಯಸುವುದಿಲ್ಲ. ಮಕ್ಕಳು ಸರಿಯಾಗಿ ನೋಡಕೊಳ್ಳದಿದ್ದರೂ ಸಹಸಿಕೊಳ್ಳುತ್ತ್ತಾಳೆ.ಆದರೂ ಮಕ್ಕಳಿಗೆ ಕೆಡಕು ಬಯಸುವುದಿಲ್ಲ. ತಾಯಿ ಹೃದಯ ಸೀಳುವ ಮಕ್ಕಲಾಗದೆ, ತಾಯಿಯನ್ನು ಪ್ರೀತಿಸುವ ಹೃದಯಗಳು ನಾವಾಗಬೇಕು. ಅದೆಷ್ಟೊ ಕಷ್ಟ ಪಟ್ಟು ಬೆಳೆಸಿದ ಮಹಾ ತಾಯಿಯನ್ನು ಕೊನೆ ಗಳಿಗೆಯಲ್ಲಿ ಮಕ್ಕಳಂತೆ ನೋಡಿಕೊಳ್ಳುವ ಮಕ್ಕಳಾಗೋಣ. ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು ಇದ್ದರೂ ಅಷ್ಟೆ ಇಲ್ಲದಿದ್ದರೂ ಅಷ್ಟೆ.


 | ಶಾಮಸುಂದರ ಕುಲಕರ್ಣಿ, ಕಲ್ಬುರ್ಗ

–>