-->

ಧರ್ಮಸಾರ , Essence of Dharma - questions and answers

 ಧರ್ಮಸಾರ - ಪ್ರಶ್ನೋತ್ತರ ಮಾಲಿಕೆ 


1. ಯಾವುದು ಎಲ್ಲರಿಗೂ ಬೇಸರವಾಗುವಂತೆ ಮಾಡುತ್ತದೆ ?
ಅಸಮಂಜಸವಾದ ಮಾತು.

2. ಜೀವಿತದ ಸಾಫಲ್ಯ ಯಾವುದರಿಂದ ?
ಲೋಕಹಿತದಲ್ಲಿಯೇ ತನ್ನ ಹಿತವೂ ಅಡಗಿದೆ ಎಂದು ನಿಸ್ವಾರ್ಥಿಯಾಗಿ, ತ್ಯಾಗಿಯಾಗಿ, ಪರೋಪಕಾರಿಯಾಗಿ ಜೀವಿಸುವುದು.

3. ನಿಜವಾದ ಸಜ್ಜನನಾರು ?
ಕನಸು ಮನಸ್ಸಿನಲ್ಲೂ ಯಾರಿಗೂ ಕೇಡು ಬಯಸದವನು, ಮತ್ತೊಬ್ಬರ ಮನಸ್ಸು ನೋಯಿಸದವನು.

4. ಉತ್ತಮವಾದ ಸಂಪತ್ತು ಯಾವುದು ?
ಜ್ಞಾನ

5. ಜಗತ್ತಿನಲ್ಲಿ ಜೀವಿಗಳಿಗೆ ದುರ್ಲಭವಾದುದು ಯಾವುದು ?
ಯಥಾರ್ಥವಾದ ಜ್ಞಾನ.

6. ಜೀವಿಗೆ ಸುಖ ಪ್ರಾಪ್ತಿ ಯಾವುದರಿಂದ ?  

ಧರ್ಮ ಪಾಲನೆಯಿಂದ

7. ಯಾವುದನ್ನು ಮಾಡಬಾರದು ?
ಮಾನವೀಯತೆಗೆ ವಿರುದ್ಧವಾದುದನ್ನು ಮಾಡಬಾರದು.

8. ಭಕ್ತಿ ಎಂದರೇನು ?
ಕಪಟರಹಿತವಾದ ಆರಾಧನೆ.

9. ಅನುಕಂಪವೆಂದರೇನು ?
ಇತರರ ದುಃಖವನ್ನು ದೂರಮಾಡಲು ಪ್ರಯತ್ನಿಸುವುದು,

10. ಆತ್ಮನ ಸ್ವಭಾವವೇನು ?
ಜ್ಞಾನ - ದರ್ಶನ-ಚೇತನ-ಸುಖಾನಂದ.

 ಧರ್ಮಸಾರ , Essence of Dharma - questions and answers



11. ದುಃಖಿತರು ಯಾರು ?
ದುರಾಶಾ ಪೀಡಿತನು.

12. ಪಂಚಮಹಾ ಪಾತಕಗಳಾವುವು ?
ಸುಳ್ಳು, ಕೊಲೆ, ಕಳವು, ಪರಸ್ತ್ರೀ ಸಂಗ, ಅತಿಕಾಂಕ್ಷೆ

13. ಪಂಚ ಮಹಾ ಪುಣ್ಯಗಳಾವುವು ?
ದಾನ, ಪೂಜೆ, ಅಹಿಂಸೆ, ಶೀಲ, ಉಪವಾಸ,

14. ಪಂಚ ವ್ರತಗಳಾವುವು ?
ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ, ಅಪರಿಗ್ರಹ,

15. ಕರ್ಮವೆಂದರೇನು ?
ಜೀವಿಗೆ ಸುಖ-ದುಃಖಗಳನ್ನು ನೀಡುತ್ತಾ ಸಂಸಾರ ಚಕ್ರದಲ್ಲಿ ಸುತ್ತಿಸುವುದು.

16. ಸಂಸಾರಕ್ಕೆ ಮೂಲ ಯಾವುದು ?
ರಾಗ, ದ್ವೇಷ, ಮೋಹ,

17. ಭವ್ಯ ಎಂದರೇನು ?
ಎಂದಾದರೂ ಮುಕ್ತಿ ಹೊಂದುವ ಜೀವ

18, ಅಭವ್ಯಾ ಎಂದರೇನು ?
ಮುಕ್ತಿ ಹೊಂದದೇ ಸಂಸಾರ ಸಾಗರದಲ್ಲಿಯೇ ಸುತ್ತುವ ಜೀವ.

19. ಪಾಪಕ್ಕೆ ಪ್ರಾಯಶ್ಚಿತ್ತ ಯಾವುದು ? 

ಪಶ್ಚಾತ್ತಾಪವೇ ಪ್ರಾಯಶ್ಚಿತ್ತ.

20. ವ್ಯರ್ಥ ಯಾವುದು ?
ಅರ್ಥವಿಲ್ಲದ ಮಾತು.

21. ಕೃತಜ್ಞತೆ ಎಂದರೇನು ?
 ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವುದು.

22. ಕೃತಘ್ನತೆ ಎಂದರೇನು ?

ಉಪಕಾರಕ್ಕೆ ಅಪಕಾರವನ್ನು ಮಾಡವುದು.

23. ವಿದ್ಯಾವಂತನಲ್ಲಿ ಇರಬೇಕಾದ ಗುಣವೇನು ?
ವಿನಯ, ವಿಧೇಯತೆ,

24. ಜೀವನದಲ್ಲಿ ನೆಮ್ಮದಿಯು ಹೇಗೆ ದೊರೆಯುವುದು ?
ಆಸೆ ಆಕಾಂಕ್ಷೆಗಳು ಮಿತವಾಗಿದ್ದಾಗ

25. ಶರೀರದಲ್ಲಿರುವ ಆತ್ಮನನ್ನು ಹೇಗೆ ಕಾಣಬೇಕು ?

ಅರಿವಿನಿಂದ.

 - ನಮ್ಮ ಓದುಗರು ನೀಡಿದ ಲೇಖನ

–>