ಶ್ರೀ ಕೃಷ್ಣ ದ್ರೌಪದಿಯ ಮಾನ ಸಂರಕ್ಷಣೆ ಮಾಡಿದ. ದುಷ್ಟರ ಸಭೆಯದು, ಭೀಷ್ಮ, ದ್ರೋಣ, ಕೃಪಾಚಾರ್ಯರು ಜ್ಞಾನವಂತರಾಗಿದ್ದರೂ ಕಲಿ ಪ್ರಭಾವದಿಂದಾಗಿ ದ್ರೌಪದಿಯ ವಸ್ತ್ರಹರಣ ತಡೆಯಲು ಆಗಲಿಲ್ಲ. ಶ್ರೀ ಕೃಷ್ಣ ದ್ರೌಪದಿಯ ಮಾನ ಸಂರಕ್ಷಿಸಿದ್ದಾನೆ.
ಭಗವಂತ ಇದು ಕೇವಲ ದ್ರೌಪದಿಗೆ ಮಾಡಿದ ಅನುಗ್ರಹವಲ್ಲ. ಪ್ರತಿನಿತ್ಯ ನಮಗೂ ಮಾನ ರಕ್ಷಿಸುತ್ತಿದ್ದಾನೆ. ಭಗವಂತ ನಿಯಮಿಸಿದ ಧರ್ಮದ ಕಾರ್ಯ ನಿರ್ವಹಿಸುವುದೇ ಮಾನ ರಕ್ಷಣೆ. ಕೇವಲ ಬಟ್ಟೆಯಿಂದಲೇ ಮಾನ ರಕ್ಷಣೆ ಅಲ್ಲ. ಉತ್ತಮವಾದ ಬಟ್ಟೆ ಧರಿಸಿ ಸಣ್ಣ ಪ್ರಶ್ನೆಗೂ ಉತ್ತರ ಕೋಡದಿದ್ದರೂ ಮಾನ ಕಳೆದುಕೊಂಡಂತೆ. ನಮ್ಮ ಮಾತಿನಿಂದಲೂ ಮಾನ ರಕ್ಷಿಸಿಕೊಳ್ಳಬಹುದು. ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಅದೂ ಮಾನ ಕಳೆದುಕೊಂಡಂತೆ. ಮಾನವರು ಪ್ರತಿ ದಿನ ಹೆಜ್ಜೆ ಹೆಜ್ಜೆಗೂ ಮಾನ ಉಳಿಸಿಕೊಳ್ಳುವ ಅಗತ್ಯವಿದೆ. ತಮ್ಮ ತಮ್ಮ ಧರ್ಮವನ್ನು ಸರಿಯಾಗಿ ಆಚರಿಸಿದರೆ ಮಾನ ಉಳಿಸಿಕೊಂಡಂತೆ. ದಿನ ನಿತ್ಯದ ಕೆಲಸ ಪ್ರಾಮಾಣಿಕವಾಗಿ ನಿಭಾಯಿಸಬೇಕು ಇಲ್ಲವಾದರೆ ಮಾನ ಕಳೆದುಕೊಳ್ಳಬೇಕಾಗುತ್ತದೆ.
ರೇಷ್ಮೆ ಹುಳು ತನ್ನ ದೇಹದ ರಸದಿಂದ ಪವಿತ್ರವಾದ ರೇಷ್ಮೆ ಬಟ್ಟೆ ತಯಾರಿಸುತ್ತದೆ. ಅದನ್ನು ನಾವು ಹಣಕೊಟ್ಟು ಖರೀದಿಸುತ್ತೇವೆ. ರೇಷ್ಮೆ ದಾರ ತಯಾರಿಸುವುದು ನಮ್ಮಿಂದಾಗದು. ರೇಷ್ಮೆ ಬಟ್ಟೆ ಧರಿಸಿಕೊಂಡು ಮಾನವರು ಘನತೆ ಹೆಚ್ಚಿಸಿಕೊಳ್ಳುತ್ತಾರೆ. ಹೀಗಾಗಿ ಹುಳಿವಿಗಿರುವ ಮಾನ ಮಾನವರಿಗಿಲ್ಲ. ನಾವು ಮಡುವ ಉದ್ಯೋಗದಲ್ಲೂ ಪ್ರಾಮಾಣಿಕತೆ ತೋರದಿದ್ದರೆ ಅಲ್ಲೂ ಮಾನ ಕಳೆದುಕೊಳ್ಳುತ್ತೇವೆ. ದ್ರೌಪದಿ ಕೃಷ್ಣನನ್ನು ಸ್ಮರಿಸಿ ಮಾನ ಉಳಿಸಿಕೊಂಡಂತೆ ನಾವು ದೇವರು ವಹಿಸಿಕೊಟ್ಟ ಕಾರ್ಯ ಪರಿಪೂರ್ಣ ನಿರ್ವಹಿಸುವ ಮೂಲಕ ಮಾನ ರಕ್ಷಿಸಿಕೊಳ್ಳಬೇಕು.
ಧರ್ಮಾಚರಣೆಗೆ ಹತ್ತಾರು ಅಡ್ಡಿ ಬರಬಹುದು.
ತನ್ನ ರೋಗ ನಿವಾರಿಸಿ ಕೊಳ್ಳಬೇಕಾದರೆ ವೈದ್ಯರು ಕೊಟ್ಟ ಔಷಧಿ ಸೇವಿಸಬೇಕು. ಔಷಧಿ ಸೇವಿಸಲು ಯಾರೂ ಬೇಡವೆಂದರೂ ಬಿಡುವುದಿಲ್ಲ.ಅದರಂತೆ ಧರ್ಮ ಆಚರಣೆಗೆ ಯಾರೆ ಅಡ್ಡಿ ಬಂದರೂ ಕೇಳದೆ ಆಚರಿಸಬೇಕು. ಔಷಧಿಯಿಂದ ರೋಗ ವಾಸಿಯಾದಂತೆ, ಧರ್ಮಾಚರಣೆಯಿಂದ ದುರ್ಗತಿ ಎಂಬ ರೋಗ ವಾಸಿಯಾಗಿ ಸದ್ಗತಿ ಸಿಗುತ್ತದೆ. ಧರ್ಮದಲ್ಲಿ ಅಂತಃಸತ್ವ, ಪ್ರಮಾಣಿಕ ಪ್ರಯತ್ನ ಮಾಡಿದರೆ ಭವಂತ ನಮ್ಮಿಂದ ಉತ್ತಮ ಕಾರ್ಯ ಮಾಡಿಸಿ ನಮ್ಮ ಮಾನ ಉಳಿಸುವನು.
ಮಾನ ಉಳ್ಳವನೆ ಮಾನವ. ನಾವೆಲ್ಲರೂ ಮಾನ ಉಳಿಸಿಕೊಂಡು ಮಾನವರಾಗುವುದನ್ನು ಕಲಿಯಬೇಕು. ಮತ್ತೆ ಎಷ್ಟು ಜನ್ಮ ಬೇಕೋ ಗೊತ್ತಿಲ್ಲ ಮಾನವ ಜನ್ಮ ಬರಲು. ಸಿಕ್ಕ ಅವಕಾಶದ ಸದುಪಯೋಗ ಪಡಿಸಿಕೊಂಡು ಸದ್ಗತಿ ಹೊಂದಬೇಕು.
ಧರ್ಮಕ್ಕೆ ದ್ರೋಹ ಮಾಡುವವರಿಗೂ ಭಗವಂತ ಮಾನ ರಕ್ಷಿಸುತ್ತಾನೆ. ತಿದ್ದಿಕೊಳ್ಳಲು ಒಂದು ಅವಕಾಶ ಕಲ್ಪಿಸಿಕೊಡುತ್ತಾನೆ. ತಿದ್ದಿಕೊಂಡು ಧರ್ಮವಂತರಿಗೂ ಸದ್ಗತಿ, ತಿದ್ದಿಕೊಳ್ಳದಿದ್ದರೆ ದುರ್ಗತಿ ನೀಡುವನು. ದುಷ್ಟರ ಸಭೆಯಲ್ಲಿ ಭೀಷ್ಮಾದಿ ಮಹಾನ್ ವ್ಯಕ್ತಿಗಳಿದ್ದರೂ, ದೌಪದಿಯ ಮಾನ ರಕ್ಷಿಸಲಾಗಲಿಲ್ಲ. ಕೈಕಟ್ಟಿ ಕುಳಿತಕೊಳ್ಳದ ದ್ರೌಪದಿ ಕೈಎತ್ತಿ ಭಗವಂತನನ್ನು ಪ್ರಾರ್ಥಿಸುವ ಮೂಲಕ ಮಾನ ರಕ್ಷಿಸಿಕೊಂಡಿದ್ದಾಳೆ.ನಾವು ಕೈಎತ್ತಿ ಭಗವಂತನನ್ನು ಪ್ರಾರ್ಥಿ ಸುವ ಮೂಲಕ ನಮ್ಮಮಾನ ರಕ್ಷಿಸಿಕೊಳ್ಳಬೇಕು.
- ಶಾಮಸುಂದರ ಕುಲಕರ್ಣ, ಕಲಬುರಗಿ (9886465925)
Subscribe , Follow on
Facebook Instagram YouTube Twitter WhatsApp