ಭೂಮಂಡಲದಲ್ಲಿ ಅಸೂರ ಶಕ್ತಿ ಹೆಚ್ಚಾಗಿ ಸಜ್ಜನರು ಕಷ್ಟ ಪಡುತ್ತಿದ್ದಾರೆ. ಭೂಭಾರ ಹರಣಕ್ಕೆ ಅವತಾರ ಮಾಡುಬೇಕು ಎಂದು ದೇವತೆಗಳು ಭಗವಂತ ನಾರಾಯಣನಲ್ಲಿ ಪ್ರಾರ್ಥಿಸುವ ಮೂಲಕ ಕೃಷ್ಣಾವತಾರಕ್ಕೆ ಪೀಠಿಕೆ ಹಾಕಿದ್ದಾರೆ.
ಹಿಂದೆ ದೇವ-ಅಸೂರರ ಭಯಂಕರ ಸಂಗ್ರಾಮ ನಡೆದೆದಿದ್ದನ್ನು ಸ್ಮರಿಸಿಕೊಂಡಿದ್ದಾರೆ ದೇವತೆಗಳು.
ಆ ಸಂಗ್ರಾಮದಲ್ಲಿ ನೂರು ಅಕ್ಷೋಹಿಣಿ ಸಂಖ್ಯೆಯ ಮಹೋಗ ದಷ್ಟು ದೇವತೆಗಳ ಸೈನ್ಯವಿತ್ತು. ಅದರ ಎರಡು ಪಟ್ಟು ಅಸುರ ಸೈನ್ಯವಿತ್ತು.(ಒಂದರ ಮುಂದೆ 134 ಸೊನ್ನೆ ಇಟ್ಟಾಗ ಬರುವಷ್ಟು ಸಂಖ್ಯೆ ದೇವ ಸೈನ್ಯ) ಅದರ ಎರಡು ಪಟ್ಟು ದೈತ್ಯರ ಸೈನ್ಯವಿತ್ತು. ಯಾರಿಂದಲೂ ಸಾಯಬಾರದು ಎಂದು ರುದ್ರದೇವರಿಂದ ವರ ಪಡೆದ ಸಂಬರಾಸುರ ದೈತ್ಯ ತನ್ನ ಅಸೂರ ಶಕ್ತಿಯಿಂದ ಎಲ್ಲ ದೇವತಗಳಿಗೆ ಮಾಯೆ ಆವರಿಸಿದ್ದಾನೆ. ಇಂದ್ರ ದೇವರು ಬ್ರಹ್ಮರಿಂದ ಪಡೆದ ವಿಷ್ಣುಮಂತ್ರ ಪಠಿಸಿದ್ದಾರೆ. ಆಗ ಎಲ್ಲ ಅಸುರ ಶಕ್ತಿ ಮಾಯವಾಗಿದೆ. ಸಂಬರಾಸುರನ್ನನು ಇಂದ್ರ ಸಂಹರಿಸಿದ. ಮುಂದೆ ವಿಪ್ರಚಿತ್ತ ಎಂಭ ಭಯಾನಕ ದೈತ್ಯ ಯುದ್ಧಕ್ಕೆ ಬರುತ್ತಾನೆ. ಬ್ರಹ್ಮ ದೇವರ ವರವಿತ್ತು. ಇಂದ್ರನಿಂದ ಆತನನ್ನು ಸಂಹರಿಸಲಾಗಲಿಲ್ಲ. ವಾಯುದೇವರು ಬಂದು ಸಂಹರಿಸಿದ್ದಾರೆ. ಮುಂದೆ ಕಾಲನೇಮಿ ದೈತ್ಯ ಬಂದಿದ್ದಾನೆ. ಆತನಿಗೆ ಸಾವಿರ ತಲೆ, ಎರಡು ಸಾವಿರ ಬಾಹುಗಳಿದ್ದವು. ಆತನನ್ನು ವಾಯು ದೇವರು ಸಂಹರಿಸಬಹುದಿತ್ತು ಬ್ರಹ್ಮದೇವರ ವರಕ್ಕೆ ಗೌರವಕೊಟ್ಟು ಭಗವಂತನನ್ನು ಪ್ರಾರ್ಥಿಸಿದ್ದಾರೆ. ಭಗವಂತ ಆಗಮಿಸಿ ಸುದರ್ಶನ ಚಂಕ್ರದಿಂದ ಮೊದಲು ಬಾಹು ಕತ್ತಿರಿಸಿದ್ದಾರೆ. ನಂತರ ತಲೆ ಕತ್ತರಿಸಿದ್ದಾನೆ.
ದೈತ್ಯ ಸೈನ್ಯ ನಾಲ್ಕು ಭಾಗದಲ್ಲಿ ಮೂರರಷ್ಟು ಭಗವಂತನೇ ಸಂಹರಿಸಿದ್ದಾನೆ. ಒಂದು ಭಾಗರಂದು ವಾಯುದೇವರು ಮತ್ತೆ ಎಲ್ಲ ದೇವತೆಗಳು ಸೇರಿ ಕೇವಲ ಶೇ. ಒಂದರಷ್ಟು ಅಸುರರನ್ನು ಸಂಹರಿಸಿದ್ದಾರೆ ಎಂದು ಭಗವಂತನ ಉಪಕಾರ ಸ್ಮರಣೆ ಮಾಡುವ ಮೂಲಕ ಪ್ರಾರ್ಥಿಸಿದ್ದಾರೆ.
ಅಂದು ಸತ್ತ ದೈತ್ಯರು ಮತ್ತೆ ಭೂಮಿಮೇಲೆ ಇಂದು ಅವತರಿಸಿ ಸಜ್ಜನರಿಗೆ ಹಿಂಸಿಸುತ್ತಿದ್ದಾರೆ. ದೇವತೆಗಳಿಗೆ ಅವರ ಕಷ್ಟ ತಡೆಯಲಾಗುತ್ತಿಲ್ಲ. ಇನ್ನೂ ಮಾನವರ ಗತಿ ಏನು. ಅಂದಿನ ವಿಪ್ರಚಿತ್ತ ಇಂದು ಜರಸಂದನಾಗಿ, ಕಾಲನೇಮಿ ಕಂಸನಾಗಿ ಹಾಗೂ ಅನೇಕರು ಜನಿಸಿದ್ದಾರೆ. ಅವರೆಲ್ಲರಿಗೂ ರುದ್ರದೇವರ, ಬ್ರಹ್ಮ ದೇವರ ವರವಿದೆ. ನಿನ್ನಿಂದ ಮಾತ್ರ ಅವರನ್ನು ಸಂಹರಿಸಲು ಸಾಧ್ಯ ಎಂದು ಪ್ರಾರ್ಥಿಸಿದ್ದಾರೆ. ದೇವತೆಗಳಿಗೆ ಭಗವಂತ ಅಭಯ ನೀಡಿದ್ದಾನೆ.
ದೇವತೆಗಳಿಗೆ ಹಿಂದೆ ಇಷ್ಟೆಲ್ಲ ಉಪಕಾರ ಮಾಡಿದ್ದಿ ಎಂದು ಸ್ಮರಿಸಿ ಪ್ರಸ್ತುತ ತಮ್ಮ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಭಗವಂತ ಕಾಲನೇಮಿಯ ಬಾಹು ಮೊದಲ ಕತ್ತರಿಸಿ ನಂತರ ತಲೆ ಕತ್ತರಿಸಿದ. ನಮ್ಮಲ್ಲಿನ ವಿಷಯಗಳಿಗಾಗಿ ಓಡುವ ಇಂದ್ರಿಯಗಳನ್ನು ಮೊದಲು ನಿಗ್ರಹಿಸಿ ನಂತರ ಮನಸ್ಸಿನಲ್ಲಿನ ಕಾಮ ನಿಗ್ರಹಿಸಬೇಕು ಎಂಬ ದಿವ್ಯ ಸಂದೇಶ ಭಗವಂತ ನೀಡಿದ್ದಾನೆ. ಸದ್ಗುಣಗಳೇ ದೇವ ಸೈನ್ಯ, ದುರ್ಗಣಗಳೆ ಅಸುರ ಸೈನ್ಯ ಎಂದರ್ಥ.
- ಶಾಮಸುಂದರ ಕುಲಕರ್ಣ, ಕಲಬುರಗಿ (9886465925)
Subscribe , Follow on
Facebook Instagram YouTube Twitter WhatsApp