-->

ಮನೆ ಗಂಡಸರ ತಮಾಷೆ ಕರ್ತವ್ಯಗಳು

ಸುಮ್ನೆ ಹೇಗಿರುತ್ತೆ ನೋಡಿ (ತಮಾಷೆಗೆ)  ಮನೆ ಗಂಡಸರ ಕರ್ತವ್ಯಗಳು;
             
1. ಗ್ಯಾಸ್ ಮೇಲಿಟ್ಟ ಕುಕ್ಕರ್ ಮೂರು ಸಿಟಿ ಹೊಡೆದ ನಂತರ ಓಡಿ ಬಂದು ಗ್ಯಾಸ್ ಒಲೆ ಆರಿಸುವುದು.

2. ಕಾಯಿಸಲಿಟ್ಟ ಹಾಲು ಉಕ್ಕಿ ಬರುತ್ತಿರುವುದು ಕಂಡ ತಕ್ಷಣ ಓಡಿ ಹೋಗಿ ಒಲೆ ಆರಿಸುವುದು.

3. ಡೋರ್ ಬೆಲ್ ಅಟೆಂಡ್ ಮಾಡುವದು.

4. ಅಟ್ಟದಲ್ಲಿರುವ ಸಾಮಾನುಗಳನ್ನು ಇಳಿಸಿ ಕೊಡುವುದು.

5. ಗಟ್ಟಿಯಾಗಿ ಮುಚ್ಚಿರುವ ದಿನಸಿ ಡಬ್ಬಿಗಳ ಮುಚ್ಚಳ ತೆಗೆದುಕೊಡುವುದು.

6. ಸಾಸ್ ಮತ್ತು ಜಾಮ್ ಬಾಟ್ಲಿ ಮುಚ್ಚಳಗಳನ್ನು ತೆಗೆದು ಕೊಡುವುದು.

7. ಮನೆಯಲ್ಲಿನ ಹಲ್ಲಿ, ಕಾಕ್ಕ್ರೋಚ್ ಇತ್ಯಾದಿ ಭಯಂಕರ ಪ್ರಾಣಿಗಳನ್ನು ಹೊಡೆದು ಹೊರಗೆ ಹಾಕುವದು.

8. ಪ್ರತೀ ಬಾರಿ ಗ್ಯಾಸ್ ಸಿಲಿಂಡರ್ ಬದಲಾಯಿಸಿ ಕೊಡುವುದು.

9. ಹೇಳಿದಾಗ ಮಾತ್ರ ಮಕ್ಕಳ ಮೇಲೆ ಗದರುವುದು, ಅವರನ್ನು ಸಂಭಾಳಿಸುವುದು.
      
10. ಬಾಗಿಲಲ್ಲಿ ಬಿದ್ದಿರುವ ಪೇಪರ್ ತರುವುದು, ತಂದ ತಕ್ಷಣ ಓದುವುದು ಮತ್ತು ಪದಬಂದ ಕಾಲಂ ಅನ್ನು ತುಂಬದೆ ಹಾಗೇ ಬಿಡುವುದು.




11. ಮನೆಯಿಂದ ಹೊರಗೆ ಬಿದ್ದರೆ ಮುಗಿತು ಖಬರೇ ಇರುದಿಲ್ಲ ಎಂಬ ಮಾತನ್ನು ದಿನ ನಿತ್ಯ ಕೇಳಿಸಿಕೊಳ್ಳುವುದು.

12. ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಇಲ್ಲಾ ಮಡಚಿ ತಂದು ಕೊಡುವುದು.

13. ಬ್ಯಾಂಕ್ ವ್ಯವಹಾರ ಮತ್ತು ಇತರ ಬಿಲ್ ತುಂಬುವ ಕೆಲಸ ಮಾಡುವುದು.

14. ತಿಂಗಳ ಸಾಮಾನಿನ ಚೀಲ ಅಂಗಡಿಯಿಂದ ತಾವೇ ಹೊತ್ತು ತರುವುದು.

15. ಶಾಪಿಂಗ್ ಮಾಡುವಾಗ ಎಷ್ಟೇ ಹೊತ್ತಾದರೂ ಕಿರಿ ಕಿರಿ ಮಾಡದೆ, ಹೆಂಡತಿ ಹಿಂದೆ ಹಿಂದೆ ಬರುವುದು, ಮತ್ತು ಖರೀದಿ ಮಾಡಿದಾಗ ಪೇಮೆಂಟ್ ಮರು ಮಾತನಾಡದೆ ಸುಮ್ಮನೆ ಪಾವತಿಸುವುದು.

16. ಅತ್ತೆ ಮನೆಯ ನೆಂಟ್ರು ಬಂದಾಗ ಮನೆಯ ಹೆಚ್ಚಿನ  ಕೆಲಸಗಳನ್ನು ನಿಭಾಯಿಸಿ, ಗುಡ್ ಎನಿಸಿಕೊಳ್ಳುವುದು.

17. ಮನೆಯ ಸಣ್ಣ ಪುಟ್ಟ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸ ಮಾಡುವುದು.

18. ನೆಲದ ಮೇಲಿಂದ ಇಲ್ಲಾ ಮಂಚದ ಮೇಲಿಂದ ಕೆಳಗೆ ಜಾರಿಬಿದ್ದು ಮೂರು ತುಂಡಾಗಿರುವ ರಿಮೋಟ್ ಅನ್ನು ರಿಪೇರಿ ಮಾಡಿ ಜೀವಂತಗೊಳಿಸುವುದು.

19. ಮನೆಯಲ್ಲಿ ಕಾರು ಸ್ಕೂಟರ್ ಇತ್ಯಾದಿ ಇದ್ದಲ್ಲಿ, ಡ್ರೈವಿಂಗ್ ಕಾರ್ಯ ನಿರ್ವಹಿಸುವುದು.

20. ಮನೆಯಲ್ಲಿ ವಾಹನ ಇಲ್ಲದಿದ್ರೆ, ತನ್ನ ಮೊಬೈಲ್ ನಿಂದ ಆನ್ಲೈನ್ ಬುಕ್ ಮಾಡಿ ಕೊಡುವುದು.
              
ಕೊನೆಯದಾಗಿ,                         
ಈ ಮನೆಯಲ್ಲಿ ದಿನವಿಡೀ ಎಲ್ಲಾ ಕೆಲಸಾನೂ ನಾನೊಬ್ಬಳೇ ಮಾಡಿ ಸಾಯಬೇಕು, ಒಬ್ಬರಾದರೂ ಸಹಾಯಕ್ಕೆ ಸಿಗೋದಿಲ್ಲ ಎನ್ನುವ ವಾಕ್ಯವನ್ನು ಎಷ್ಟು ಸಲವಾದರೂ ಶಾಂತ ರೀತಿಯಿಂದ ಕೇಳಿಸಿಕೊಳ್ಳುವುದು.. 😝😝😝😁....

–>