-->

ಸ್ತ್ರಿರಕ್ಷಣೆಗೆ ಪತಿವ್ರತೆಯೇ ಪರಮ ಅಸ್ತ್ರ , ಮಹಾಭಾರತಸಾರ

 ದಮಯಂತಿಯು ಕಾಡಿನಲ್ಲಿ ಒಬ್ಬಳೇ ಸಂಚರಿಸುತ್ತಿದ್ದಾಳೆ. ಎಂಥ ಕಷ್ಟ ಬಂದರೂ ಧೈರ್ಯ ಬಿಡಲಿಲ್ಲ. ದೇಹ ತ್ಯಾಗ ಮಾಡಲು ಮುಂದಾಗಿಲ್ಲ. ನಳನನ್ನು ಹುಡುಕುತ್ತ ಕಾಡಿನಲ್ಲಿ ಅಲಿಯುತ್ತಿದ್ದಾಳೆ. ವೃಕ್ಷ, ಪರ್ವತ, ನದಿಗಳನ್ನು ಪ್ರಾರ್ಥಿಸಿದ್ದಾಳೆ ನಳನನ್ನು ತೋರಿಸು ಎಂದು. ಇದ್ದಕ್ಕಿದ್ದಂತೆ ಕಾಡಿನಲ್ಲಿ ಒಂದು ಆಶ್ರಮ ಕಂಡಿದೆ. ಆಶ್ರಮಕ್ಕೆ ತೆರಳಿದ್ದಾಳೆ. ಆಗ ಋಷಿಗಳು ಕೇಳಿದ್ದಾರೆ ಯಾರು ನೀನು ದೇವಕನ್ಯ ಎಂದು. ಸತ್ಯಒಂದೇ ಗೊತ್ತಿರುವ ದಮಯಂತಿ, ನಳ ಮಹಾರಾಜನ ಸತಿ ನಾನು. ನಳನನ್ನು ಹುಡುಕುತ್ತಿರುವೆ. ಮಾವು ಅನುಗ್ರಹಿಸಬೇಕು ಎಂದು ಪ್ರಾರ್ಥಿಸಿದ್ದಾಳೆ.  ಮಂಗಳಕರ ಸಮಯ ಶೀಘ್ರ  ಬರಲಿದೆ ಎಂದು ತಪಸ್ವಿಗಳು ಹರಿಸಿದ್ದಾರೆ. ಕಣ್ಣು ತೆರೆದು ನೋಡುವಷ್ಟರಲ್ಲಿ ಅಲ್ಲಿ ಕಾಡು ಇತ್ತು. ಆಶ್ರಮವಿಲ್ಲ. ಋಷಿಗಳು ಇಲ್ಲ.  ಮತ್ತೆ ಮುಂದೆ ನಡೆದಿದ್ದಾಳೆ. ಅಲ್ಲೊಂದು ವ್ಯಾಪರಿಗಳ ಗುಂಪು ಕಂಡಿತು.  

ಆ ಗುಂಪಿನಲ್ಲಿ ಸೇರಿಕೊಂಡಳು. ರಾತ್ರಿ ಎಲ್ಲರೂ ಮಲಗಿರುವಾಗ ಆನೆಗಳ ದಂಡು ಬಂದಿತು. ಆನೆಗಳು ಎಲ್ಲರನ್ನೂ ತುಳಿದವು. ಅದರಲ್ಲಿ ಕೆಲವರು ತಪ್ಪಿಸಿಕೊಂಡಿದ್ದರು. ದಮಯಂತಿ ಕೂಡ ತಪ್ಪಿಸಿಕೊಂಡಿದ್ದಾಳೆ. ಅವಳಿಂದಲೇ ಹೀಗಾಗಿದ್ದು ಎಂದು ಅವಳನ್ನು ನಿಂದಿಸಿದರು. ಅದರಲ್ಲೂ ಸಜ್ಜನರಾದವರು ಅವಳ ಕಷ್ಟ ಕೇಳಿ ಮುಂದೆ ಕೇಗಿರಾಜನ ಪಟ್ಟಣವಿದೆ ಅಲ್ಲಿ ಬಿಡುತ್ತೇವೆ ಅಲ್ಲಿ ಆಶ್ರಯ ಪಡೆದುಕೊಳ್ಳಿ ಎಂದರು. ರಾಜನ ಅರಮನೆಗೆ ಬಂದಿದ್ದಾಳೆ. ಅಲ್ಲೂ ಕೂಡ ಪ್ರಜೆಗಳು ನಿಂದಿಸುತ್ತಿದ್ದಾರೆ. ದೂರದಿಂದ ಅವಳನ್ನು ಕಂಡ ರಾಜಮಾತೆ ಅಂತಃಪುರಕ್ಕೆ ಕರೆಸಿದ್ದಾಳೆ. ನನಗೆ ಅಶ್ರಯ ಬೇಕು ಆದರೆ ಎಂಜಿಲು ಅನ್ನ ಸೇವಿಸುವುದಿಲ್ಲ, ಯಾರ ಪಾದ ತೊಳೆಯುವು ದಿಲ್ಲ. ಮತ್ತು ಪರ ಪುರುಷರ ಜತೆ ಮಾತನಾಡುವುದಿಲ್ಲ ಎಂದು ದಮಯಂತಿ ಕರಾರು ಹಾಕಿದ್ದಾಳೆ. ದಮಯಂತಿಯ ಕರಾರಿಗೆ ಒಪ್ಪಿದ ರಾಜಮಾತೆ ಆಶ್ರಯ ನೀಡಿದ್ದಾಳೆ. 


ಕಸ್ತ್ರಿರಕ್ಷಣೆಗೆ ಪತಿವ್ರತೆಯೇ ಪರಮ ಅಸ್ತ್ರ ,  ಮಹಾಭಾರತಸಾರ

ಇತ್ತ ನಳ ಕಾಡಿನಲ್ಲಿ ಅಲಿಯುತ್ತಿದ್ದಾನೆ. ಕಾಡ್ಗಿಚ್ಚು ಆವರಿಸಿದೆ. ನಳ ಮಹಾರಾಜ ನನ್ನನ್ನು ರಕ್ಷಿಸು ಎಂದು ಯಾರೋ ಕೂಗಿದ್ದಾರೆ. ಅಲ್ಲಿ ದೊಡ್ಡ ನಾಗ ಇದ್ದ ಅದನ್ನು ರಕ್ಷಿಸಿದ ನಳ ಮಹಾರಾಜ ನಾಲ್ಕು ಹೆಜ್ಜೆ ಮುಂದೆ
ಹೋಗಿದ್ದಾನೆ  ಆಗ ನಾಗ ಅವನ್ನು ಕಚ್ಚಿತು. ನಳನ‌ ಮೈ ಎಲ್ಲ ಕಪ್ಪು ಬಣ್ಣವಾಯಿತು. ರಕ್ಷಣೆ ನೀಡಿದರೆ ನೀ ಕಚ್ಚಿದಿಯಲ್ಲ ಎಂದು ನಳ ಕೇಳಿದ.  ನಾನು ಕಚ್ಚಿದ್ದಿರಿಂದ ನಿನ್ನ ಬಣ್ಣ ಕಪ್ಪಾಗಿರಬಹುದು. ನಿನ್ನೊಳಗಿರುವ ಕಲಿ ಈ ಭಯಂಕರವಾದ ವಿಷ ಸಹಿಸಲಾಗದೇ ಬೇಗ ಹೊರ ಬರುವನು. ಕಲಿ ಹೋರಗೆ ಹೋದರೆ ನಿನ್ನ ಕಷ್ಟ ದೂರಾಗಲಿದೆ ಎಂದು ಹೇಳಿ ಅಯೋದ್ಯ ಪಟ್ಟಣಕ್ಕೆ ಹೋಗು ಅಲ್ಲಿ ಋತುಪರ್ಣ ರಾಜನಲ್ಲಿ ಆಶ್ರಯ ಪಡೆದು ಅವನಿಗೆ ಅಶ್ವವಿದ್ಯ ಕಲಿಸಿ, ಅವನಲ್ಲಿ ಜೂಜಾಟ ಮರ್ಮ ತಿಳಿದುಕೊ ಎಂದು ನಾಗ ಹೇಳಿ ಕಳಿಸಿತು. 


ದಮಯಂತಿ ತಂದೆ  ನಳ ದಮಯಂತಿನ್ನು ಹುಡಿಕಿಕೊಟ್ಟರೆ ಸಹಸ್ರ ಗೋವು ಕೊಡುವುದಾಗಿ ಘೊಷಿಸಿದ್ದಾನೆ.
ನಳದಮಯಂತಿಯನ್ನು ಹುಡುಕಲು ಸುದೇವ ಎಂಬ ಬ್ರಾಹ್ಮಣ ಕೇಗಿರಾಜನ ಪಟ್ಟಣಕ್ಕೆ ಬಂದಿದ್ದಾನೆ. ಅಲ್ಲಿ ದಮಯಂತಿಯನ್ನು ಕಂಡು ಹಿಡದು ಮಾತನಾಡಿಸಿದ್ದಾನೆ. ದಮಯಂತಿಯ ವಿಷಯ ರಾಜ ಮಾತೆಗೆ ಗೊತ್ತಾಗಿ ವಿದರ್ಭ ದೇಶಕ್ಕೆ ಅವಳನ್ನು ಕಳುಹಿಸಿಕೊಟ್ಟಳು.
 

- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)

–>