-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 7

ಹಣವನ್ನು ದಾನ ಮಾಡಬೇಕು, ಅನುಭವಿಸಲೂ ಬೇಕು.  ಸುಮ್ಮನೆ ಕೂಡಿಡಬಾರದು.  ಜೇನು ಹುಳುಗಳು ಹಗಲಿರುಳು ಶ್ರಮಿಸಿ  ಕೂಡಿಟ್ಟ ಜೇನನ್ನು ಇತರರು ಅಪಹರಿಸುವಂತೆ , ಕೂಡಿಟ್ಟ ಹಣವೂ ಪರರ ಪಾಲಾಗುವುದು.

ಒಳ್ಳೆಯ ಸಂಬಂಧ ಒಂದು ಪುಸ್ತಕವಿದ್ಧತೆ.
ಪುಸ್ತಕ ಎಷ್ಟೇ ಹಳೆಯದಾದರೂ ಅದರಲ್ಲಿನ ಪದಗಳು  ಬದಲಾಗುವುದಿಲ್ಲ......

ಜ್ಞಾನಿಗಳ ನುಡಿಗಳನ್ನು ಅರ್ಥೈಸಿಕೊಂಡರೆ ಸಾಲದು. ನಡೆಯನ್ನೂ ಅನುಸರಿಸಬೇಕು.
ಸಾಧಕರ ಸಾಧನೆಯ ಶ್ರಮವನ್ನು ಅರಿತುಕೊಂಡರೆ ಸಾಲದು. ಸಾಧ್ಯವಾದಷ್ಟು ಅನುಕರಣೆ ಮಾಡಬೇಕು.ಜ್ಞಾನ-ಸಾಧನೆ ಎರಡೂ ನಮ್ಮದಾಗಲು ಸಾಧ್ಯ.

ಮುಕ್ತಿ ಈ ಜನ್ಮದಲ್ಲಿ ಅಲ್ಲದಿದ್ದರೆ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂಬ  ಆಲಸ್ಯದ ಮನೋಧರ್ಮವೇಕೆ? ಭಕ್ತಿಯಲ್ಲಿ ಅಂತಹ ಸೋಮಾರಿತನ ಇರಬಾರದು.

ನೀವು ಯಾರನ್ನೂ ದ್ವೇಷಿಸಬೇಡಿ. ಏಕೆಂದರೆ ಯಾವ ದ್ವೇಷ  ನಿಮ್ಮಿಂದ ಬರುತ್ತದಯೋ ಅದು ಕೊನೆಗೆ ನಿಮಗೇ ಹಿಂತಿರುಗುತ್ತದೆ. ನೀವು ಪ್ರೀತಿಸಿದರೆ, ಆ ಪ್ರೀತಿಯೇ ಮರಳಿ ನಿಮಗೇ ಬಂದು ಸೇರುತ್ತದೆ.

ಹುಟ್ಟು ಎಲ್ಲೋ ಸಾವು ಎಲ್ಲೋ  ಬದುಕಿನ ಪಯಣ ಇನ್ನೇಲ್ಲೋ ಆದರೆ ಪಯಣದ ದಾರಿಯಲ್ಲಿ ಸಿಗುವ ಸ್ನೇಹ, ಪ್ರೀತಿ, ವಿಶ್ವಾಸ ಮಾತ್ರಮನಸ್ಸಿಗೆ ತುಂಬಾ ಹತ್ತಿರವಾಗಿರುತ್ತದೆ ನೆನಪುಗಳು ಜೀವಂತ ಶಾಶ್ವತ

ಕಲಿಯಬೇಕು ಎಂದು ನಿಶ್ಚಯಿಸಿದರೆ ಭಿಕ್ಷುಕನಿಂದಲು ಸಹ ಕಲಿಯಬಹುದು. ಕಲಿಯುವ ಮನಸ್ಸಿಲ್ಲದಿದ್ದರೆ ಎಂತಹ  ಜ್ಞಾನಿ ಬಂದರೂ ಸಹ ಕಲಿಯಲು ಸಾಧ್ಯವಿಲ್ಲ.

ಸಮಯದ ಮಹತ್ವವನ್ನು ತಿಳಿದವರು ,"ಜೀವನದ ಮಹತ್ವ ತಿಳಿದವರಾಗಿರುತ್ತಾರೆ " ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿದ್ದೇ ಆದಲ್ಲಿ, ಖಂಡಿತವಾಗಿಯೂ ಅದು ನಮ್ಮ ಮುಂದಿನ ಬೆಳವಣಿಗೆಗೆ ಶಕ್ತಿಯಾಗಿರುತ್ತದೆ...

Kannada subhashitha - ಕನ್ನಡ ಸುಭಾಷಿತ ಸಂಗ್ರಹ 7

 

ಸತ್ಯದ ನುಡಿಗೆ ಶತ್ರುಗಳು ಜಾಸ್ತಿ, ಸುಳ್ಳಿನ ಕಂತೆಗೆ  ಅಭಿಮಾನಿಗಳು ಜಾಸ್ತಿ. ಆದರೂ ನಮ್ಮನ್ನು ಕೊನೆಯ ಹಂತದಲ್ಲಿ  ಕಾಪಾಡುವುದು ಸತ್ಯವೇ ಹೊರತು ಸುಳ್ಳಲ್ಲ.

ಮನಸ್ಸಿನಲ್ಲಿ ನೋವು ಹೆಚ್ಚಾದಾಗ ಜೀವನವೇ ಸಾಕೇನಿಸುತ್ತದೆ                    *ಆದರೆ*                         ಜವಾಬ್ದಾರಿ ನೆನೆಸಿಕೊಂಡಾಗ ಬದುಕಿ ಬಾಳು ಬೇಕೆನಿಸುತ್ತದೆ.......

ನಿಜವಾದ ಧಾರ್ಮಿಕ ವ್ಯಕ್ತಿ ಏಕಾಂತದಲ್ಲಿದ್ದರೂ, ಯಾರೂ ಅವನನ್ನು ಗಮನಿಸುತ್ತಿಲ್ಲವಾದಾಗ್ಯೂ, ಯಾವುದೇ ಪಾಪವನ್ನು ಎಸಗುವುದಿಲ್ಲ. ಏಕೆಂದರೆ ಭಗವಂತ ತನ್ನನ್ನು ಯಾವಾಗಲೂ ಅವಲೋಕಿಸುತ್ತಿರುತ್ತಾನೆ ಎಂಬ ಭಾವನೆ ಅವನಲ್ಲಿರುತ್ತದೆ.

 ಹೊಟ್ಟೆ ಬಿರಿಯುವಷ್ಟು ತಿಂದರೆ ಆಮೇಲೆ ಅನುಭವಿಸಲೇಬೇಕು; ಅಗತ್ಯ ಮೀರಿ ಹೊಗಳಿಕೆಯನ್ನು ಅನುಭವಿಸಿದರೆ ಕಕ್ಕಲೇ ಬೇಕು!

ಕಷ್ಟಪಟ್ಟು ಸಾಧನೆ ಮಾಡಿ. ನೀವು ಬದುಕಿದರೂ, ಸತ್ತರೂ, ಚಿಂತೆಯಿಲ್ಲ.‌ ಫಲಾಪೇಕ್ಷೆ ಇಲ್ಲದೆ ನೀವು ಕೆಲಸದಲ್ಲಿ ಮುಳುಗಬೇಕು. ನೀವು ಧೈರ್ಯಶಾಲಿಗಳಾದರೆ ಆರು ತಿಂಗಳಲ್ಲೇ ಸಿದ್ಧಿಯೋಗಿಗಳಾಗುವಿರಿ.

ಮಿತ್ರರನ್ನು ಪ್ರೀತಿಸಿ... ಶತ್ರುಗಳನ್ನು ಗೌರವಿಸಿ... ಒಬ್ಬರು ಬಲ ತುಂಬುತ್ತಾರೆ,ಮತ್ತೊಬ್ಬರು ಛಲ  ತುಂಬುತ್ತಾರೆ.

ಜೀವನದ ಆರಂಭ ನಮ್ಮ ಕೈಲಿಲ್ಲ. ಎಲ್ಲಿಯೋ ಏನೋ ನಮಗೆ ತಿಳಿಯುವುದಿಲ್ಲ. ಜೀವನದ ಅಂತ್ಯವೂ ನಮ್ಮ ಕೈಲಿಲ್ಲ...!! ಹೇಗೋ ಏನೋ ನಿರ್ಧರಿಸಲಾಗುವುದಿಲ್ಲ.. ನಡುವಿರುವ ನಾಲ್ಕು ದಿನ ಮಾತ್ರ ನಮ್ಮದಾಗಿರುವಾಗ, ಒಳ್ಳೆಯವರಾಗಿ ಹೆಸರು ಮಾಡದಿದ್ದರೂ ಚಿಂತೆಯಿಲ್ಲ... ಇನೊಬ್ಬರಿಗೆ ಕೆಡುಕು ಬಯಸಿ ಬದುಕುವುದು ಬೇಡ.

ಒಳ್ಳೆಯ ಸಂಬಂಧ ಒಂದು ಪುಸ್ತಕವಿದ್ದಂತೆ. ಪುಸ್ತಕ ಎಷ್ಟೇ ಹಳೆಯದಾದರೂ ಅದರಲ್ಲಿನ ಪದಗಳು ಎಂದೂ ಬದಲಾಗುವುದಿಲ್ಲ.. ಹಾಗೆಯೇ , ಸಹಾಯ ಅನ್ನೋದು ರವೆ ಉಂಡೆಲ್ಲಿರೋ, ಸಕ್ರೆ ಪಾಕದಂತೆ ಇರ್ಬೇಕು . ನೋಡೋರ ಕಣ್ಣಿಗೆ ಕಾಣಿಸಬಾರದು, ತಿಂದೊರ ಬಾಯಿ ಸಿಹಿ ಮರೆಯಬಾರದು..

ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಇವೆರೆಡೂ ಒಂದಲ್ಲ ಒಂದು ದಿನ ಫಲ ಕೊಟ್ಟೆ ಕೊಡುತ್ತದೆ......

ಬೇರೆಯವರು ನಿಮ್ಮ ಬಗ್ಗೆ ಏನು ಆಲೋಚಿಸುತ್ತಾರೆ ಎಂಬುದಕ್ಕೆ ನೀವು ಜವಾಬ್ದಾರರಲ್ಲ. ನೀವು ಹೇಗಿದ್ದೀರಿ ಎಂಬುದಕ್ಕಷ್ಟೇ ನೀವು ಹೊಣೆ.

ನಿನ್ನೊಳಗೆ ಆಧ್ಯಾತ್ಮಿಕತೆಯ ತುಂಬಾ ದುರ್ಬಲವಾಗಿದ್ದಾಗ, ಸಿಕ್ಕಸಿಕ್ಕವರ ಕೈಯಿಂದ ವಿವೇಚನೆಯಿಲ್ಲದೆ ಆಹಾರ ತಿಂದರೆ, ಇರುವ ಆಧ್ಯಾತ್ಮಿಕತೆಯೂ ನಂದಿಹೊಗುವ ಅಪಾಯವಿದೆ. ಆದರೆ ಅದೇ ಆಧ್ಯಾತ್ಮಿಕತೆ ಬಲವಾಗಿ ಪ್ರಜ್ವಲಿಸುತ್ತಿದ್ದರೆ  ಯಾವುದೇ ಆಹಾರವೂ ಹಾನಿ ಮಾಡಲಾರದು.

ಸನ್ಯಾಸಿ ಶುಭ್ರವಾದ ಬಿಳಿಯ ಬಟ್ಟೆಯಂತೆ. ಗೃಹಸ್ಥ ಕಪ್ಪು ಬಟ್ಟೆಯಂತೆ. ಕಪ್ಪು ಬಟ್ಟೆಯ ಮೇಲೆ ಸಾಕಷ್ಟು ಮಸಿಯ ಚುಕ್ಕಿಗಳು ಇದ್ದರೂ ಕಾಣುವುದಿಲ್ಲ. ಆದರೆ ಬಿಳಿಯ ಬಟ್ಟೆಯ ಮೇಲೆ ಒಂದು ಸಣ್ಣ ಚುಕ್ಕಿ ಇದ್ದರೂ ಎದ್ದು ಕಾಣುತ್ತದೆ. ಭೌತಿಕ ಶರೀರದ ಮೇಲಿನ ಆಸಕ್ತಿಯೇ ಎಲ್ಲ ಪಾಪಗಳಿಗೆ ಮೂಲ.


–>