-->

ಗೋದಾನದ ಮಹಿಮೆ ಹೇಳಿದ ಬ್ರಹ್ಮ , ಮಹಾಭಾರತ ಸಾರ

 ಒಂದು ದಿನ ಬ್ರಹ್ಮದೇವರ ಮತ್ತು ದೇವೀಂದ್ರರ ನಡುವೆ ಸಂವಾದ ನಡೆದಿತ್ತು.
ತಿಳಿದೋ ತಿಳಿಯದೋ  ಯಾರಾದರೂ ಹಣದ ಆಸೆಗಾಗಿ ಗೋವುಗಳನ್ನು ಕದ್ದು ಬೇರೆಯವರಿಗೆ ಮಾರಿದರೆ ಅಂಥವರಿಗೆ ಎಂಥ ಗತಿ ಉಂಟಾಗುತ್ತದೆ ಎಂದು ದೇವೀಂದ್ರ ಕೇಳುತ್ತಾನೆ.
ಗೋವು ಕಳ್ಳತನ ಮಾಡಿ ದಾನ ಮಾಡುವುದಾಗಲಿ, ಗೋಮಾಂಸ ಸೇವಿಸುವುದಾಗಲಿ ಮಹಾ ಪಾಪ. ಗೋವು ಕಳ್ಳತನ ಮಾಡಿ ಕಟುಗರಿಗೆ ಮಾರಿದರೆ ಅಥವಾ ಗೋ ಮಾಂಸ ತಿಂದವರಿಗೆ ಹತ್ಯೆಮಾಡಿದ ಗೋವಿನಲ್ಲಿ ಎಷ್ಟು ರೋಮಗಳಿರುತ್ತವೆಯೋ ಅಷ್ಟು ವರ್ಷ ಗಳ ಕಾಲ ನರಕಯಾತನೆ ಅನುಭವಿಸುತ್ತಾರೆ ಎಂದು ಬ್ರಹ್ಮದೇವರು ಹೇಳುತ್ತಾರೆ.
ಒಬ್ಬ ವ್ಯಕ್ತಿ ಶಾಸ್ತ್ರೋಕ್ತವಾಗಿ ಗೋದಾನ ಮಾಡಿದರೆ ಹಿಂದಿನ ಏಳು ತಲೆಮಾರಿನವರು ಹಾಗೂ ಮುಂದಿನ ಏಳು ತಲೆಮಾರಿನವರನ್ನು ಉದ್ಧಾರ ಮಾಡಿದ ಪುಣ್ಯ ಸಿಗುತ್ತದೆ. ಯಾರೂ ಶಾಸ್ತ್ರೋಕ್ತವಾಗಿ ಗೋದಾನ ಮಾಡುವರೋ ಅವರಿಗೆ ಸನಾತನವಾದ ಶುಭಲೋಕಗಳು ಪ್ರಾಪ್ತವಾಗುತ್ತವೆ ಎಂದು ಬ್ರಹ್ಮ ದೇವರು ಉಪದೇಶಿಸುತ್ತಾರೆ.
ಬ್ರಹ್ಮ ದೇವರಿಂದ ಅರಿತ ಗೋದಾನದ ಮಹಿಮೆಯನ್ನು ದೇವೀಂದ್ರನು  ಧಶರಥನಿಗೆ ಹೇಳಿದ. ದಶರಥನು ಶ್ರೀರಾಮನಿಗೆ, ರಾಮನು ಲಕ್ಷ್ಮಣನಿಗೆ  ಹೇಳಿದ. >

ಗೋದಾನದ ಮಹಿಮೆ ಹೇಳಿದ ಬ್ರಹ್ಮ , ಮಹಾಭಾರತ ಸಾರ
ವನವಾಸ ದಲ್ಲಿದ್ದಾಗ ಲಕ್ಷ್ಮಣನು ಅಲ್ಲಿದ್ದ ಋಷಿಗಳಿಗೆ ಗೋದಾನ ಮಹಾತ್ಮೆ ಉಪದೇಶ ಮಾಡಿದ.
ಹೀಗೆ ಪರಂಪರಾಗತವಾಗಿ ಬಂದ ಗೋ ವ್ರತವನ್ನು ಕಠೋರ ವ್ರತ ನಿಷ್ಟರಾದ ಋಷಿಗಳು ಹಾಗೂ ಧಾರ್ಮಿಕರಾದ ರಾಜರು ಅನುಷ್ಠಾನಕ್ಕೆ ತಂದರು ಎಂದು ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳಿದರು.
ಮಾತಾಪಿತೃಗಳ ಶುಶ್ರೂಷೆಯಿಂದ ಯಾವ ಫಲ ಸಿಗುತ್ತದೆ ಎಂದು ಧರ್ಮರಾಜ ಪ್ರಶ್ನಿಸುತ್ತಾನೆ.
ಮಾತಾ ಪಿತೃಗಳ ಶುಶ್ರೂಷೆ ಮಾಡದೆ ಇರುವವರಿಗೆ ಭಗವಂತನ ಅನುಗ್ರಹ ವಾಗುವುದಿಲ್ಲ. ತಂದೆ ತಾಯಿಗಳ ಸೇವೆ ಮಾಡದೆ ತೀರ್ಥ ಯಾತ್ರೆ ಮಾಡಿದರೆ ಪ್ರಯೋಜನವಾಗದು ಮಾತಾ ಪಿತೃಗಳ ಸೇವೆ ಮಾಡಿದವರಿಗೆ ಸ್ವರ್ಗಲೋಕದಲ್ಲಿ. ಸರ್ವ ಸನ್ಮಾನಿತವಾದ ಸ್ಥಾನಮಾನ ಸಿಗುತ್ತದೆ ಎಂದು ಭೀಷ್ಮರು ಹೇಳುತ್ತಾರೆ.
ಸಹಸ್ರ ಅಶ್ವಮೇಧಯಾಗ ಮಾಡಿದ ಪುಣ್ಯ ಒಂದು ಕಡೆ,  ಸತ್ಯ.ನಿಷ್ಠೆ, ಪ್ರಾಮಾಣಿಕಥೆಯಿಂದ ಗಳಿಸಿದ ಪುಣ್ಯವನ್ನು ಇನ್ನೊಂದು ತಕ್ಕಡೆಯಲ್ಲಿವಿಟ್ಟು ತೂಕ ಮಾಡಿದರೆ ಸತ್ಯ ನಿಷ್ಠೆ ಪ್ರಾಮಾಣಿಕತೆಯಿಂದ ಗಳಿಸಿದ ಪುಣ್ಯದ ತೂಕವೇ ಹೆಚ್ಚಾಗುತ್ತದೆ. ಸತ್ಯಕ್ಕೆ ಸದಾ ಗೆಲವುವಿದೆ ಎಂದು ಭೀಷ್ಮರು ಹೇಳಿದರೆ.

- ಶಾಮಸುಂದರ ಕುಲಕರ್ಣ, ಕಲಬುರಗಿ (9886465925)

–>