🌷 *ಒಡೆದಿರುವ ಅಥವಾ ಬಿರುಕು ಬಿಟ್ಟಿರುವ ಕನ್ನಡಿ ಇಡಬೇಡಿ* ; ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.
🌷 *ಮನೆಯ ಯಾವುದೇ ಸ್ಥಳದ ನಲ್ಲಿಯಲ್ಲಿ ನೀರು ನಿರಂತರ ಸೋರುವಿಕೆ ಇರಬಾರದು* ; ಅದರಿಂದ ಹಣ ವ್ಯಯ ಸಂಭವ.
🌷 *ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ* ; ಇದರಿಂದ ಮನಸ್ಸನಲ್ಲಿ ಖಿನ್ನತೆ ಉಂಟಾಗುವ ಸಂಭವ.
🌷 *ಸಾಧ್ಯವಾದಷ್ಟು ದೇವರಿಗೆ ಮನೆಯ ಹೂವುಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ.* ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸಬೇಕು. ಶುದ್ಧ ಮಾಡಿ ನಂತರ ಉಪಯೋಗಿಸಬೇಕು. ಇಲ್ಲದಿದ್ದರೆ ಮನೆಯ ಅಡುಗೆ ಸಾಮಗ್ರಿ ಹಾಳಾಗುವ ಸಂಭವ.
🌷 *ನಿಂತ ಗಡಿಯಾರವು ಅಶುಭ* ಲಕ್ಷಣ.ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ
🌷 *ದೇವರ ಕೋಣೆಯ ಮೇಲೆ ಅತಿಯಾದ ಭಾರವನ್ನು ಇಡಬಾರದು.ಒಡೆದುಹೋದ ದೇವರ ಮೂರ್ತಿ ಅಥವಾ ಫೋಟೋಗಳನ್ನು ಇಡಬೇಡಿ.*
🌷 *ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ-ತಾಯಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ.* ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು.ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ
🌷 *ದೇವರ ಕೋಣೆಯಲ್ಲಿ ಒಂಟಿ ದೀಪ ಉರಿಸಬಾರದು. ಸಣ್ಣ ದೀಪವಾದರೂ ಅಡ್ಡಿ ಇಲ್ಲ, ಎರಡು ದೀಪಗಳನ್ನು ಇಡಿ.*
🌷 *ಚಾಪೆ ಬಳಸುತ್ತಿದ್ದರೆ ಮುಗುಚಿ ಹಾಕಬಾರದು. ಸಂಜೆ* ಗುಡಿಸಿದ ಕಸವನ್ನು ಹೊರಗೆ ಹಾಕಬಾರದು.
🌷 *ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳುವುದು.* ಇದರಿಂದ ವಸ್ತುವಿನಲ್ಲಿ ಇದ್ದ ಕಲಿ ದೋಷ ದೂರವಾಗುವುದು.
🌷 *ಕುಲದೇವರಿಗೆ ;ಇಷ್ಟ ದೇವರಿಗೆ; ಗ್ರಾಮ ದೇವರಿಗೆ ಮನೆಯ ಎಲ್ಲ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ* .
🌷 *ಜೇಡರಬಲೆ ಮನೆಯಲ್ಲಿ ಕಟ್ಟಿದ್ದರೆ ತಕ್ಷಣ ನಿವಾರಿಸಿ- ಅದು ಅಶುಭ ತರುವ ಸಂಕೇತ.* ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ವೃದ್ಧಿಸುವುದು
🌷 *ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ - ಅದು ಕಷ್ಟಗಳು ಎದುರಾಗುವ ಸಂಕೇತ.* ಅವುಗಳ ಪ್ರಾಣ ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು.
🌷 *ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು* . ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ.
🌷ಬಾವುಲಿಗಳು ಮನೆಯ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರವಹಿಸಿ
🌷 *ಹಿರಿಯರು ನಂಬಿಕೊಂಡು ಬಂದ ದೈವಗಳಿಗೆ; ಅವರದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ.*
🌷 *ಉತ್ತರ ದಿಕ್ಕಿಗೆ ತಲೆ ಮಾಡಿ* *ಮಲಗಬಾರದು* . ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು
🌷 *ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ* ವಸ್ತ್ರಗಳನ್ನು ಧರಿಸುವುದು ಮಾಡಬೇಡಿ.
🌷 *ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿಮಾಡಿ.* ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಿಷ್ಣು ಸಹಸ್ರನಾಮ ಅಥವಾ ನಿಮ್ಮ ಇಷ್ಟದೇವರ ಯಾವುದೇ ಸ್ತೋತ್ರ ಮಂತ್ರ (ಭಜನೆ) ಪಠಿಸಿ ಅಥವಾ ಅದನ್ನು ಮನೆಯಲ್ಲಿ ಕೇಳುವಂತೆ ನಿತ್ಯ ವ್ಯವಸ್ಥೆ ಮಾಡಿ. ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ
🌷 *ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು* . ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು. ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬೇಡಿ. ನೆಗಟಿವ್ ಎನರ್ಜಿ ವಕ್ಕರಿಸುವ ಅಪಾಯವಿರುತ್ತದೆ.
🌷 *ಆಹಾರ ಸೇವಿಸಿದ ನಂತರ ಎಂಜಲು ಮುಸುರೆ ಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ*
🌷 *ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ* . ಒಂದು ವೇಳೆ, ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ರಾತ್ರಿಹೊತ್ತಿನಲ್ಲಿ ಕನ್ನಡಿ ನೋಡುವುದು ಅಷ್ಟು ಸಮಂಜಸವಲ್ಲ
🌷 *ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ* ಉತ್ತಮ. ಇದರಿಂದ ವಾಸ್ತು ಸದೃಢವಾಗಿರುತ್ತದೆ
🌷 *ವರ್ಷಕ್ಕೆ ಒಮ್ಮೆಯಾದರೂ ಶ್ರೀ ವೈಷ್ಣವ ಬ್ರಾಹ್ಮಣ ಸುವಾಸಿನಿ (ಅತಿಥಿಸತ್ಕಾರ ) ಪೂಜೆ ಮಾಡಿ* . ಯೋಗ್ಯರಿಗೆ ದಾನ ಮಾಡಿ. ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ
🌷 **ಸಾಧ್ಯವಿದ್ದಲ್ಲಿ ನಿತ್ಯವೂ ಮನೆಯ ಸಮೀಪದದೇವಾಲಯ ಮತ್ತು ಗ್ರಾಮದೇವರಸಂದರ್ಶನ ಉತ್ತಮ .*
*
🌷ವರ್ಷಕ್ಕೆ ಒಮ್ಮೆಯಾದರೂ ಸಮಾಜದ (ಕುಟುಂಬದ) ಗುರುಪೀಠದ ಫಲಮಂತ್ರಾಕ್ಷತೆಯನ್ನು ತರುವುದು.
🌷ಮನೆಯ ಹಾಲ್ ನಲ್ಲಿ ಅಕ್ವೇರಿಯಂ ಇದ್ದರೆ, ಆಗ್ನೇಯ(ಸೌಥ್ ಈಸ್ಟ್) ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಒಳ್ಳೆಯದು
🌷 *ಸ್ನಾನವಿಲ್ಲದೆ ಊಟ ಮಾಡುವುದು ಒಳ್ಳೆಯದಲ್ಲ. ಅನ್ನವು ದೇವರಿಗೆ ಸಮಾನ.*
🌷 *ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ.ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ.*
🌷 *ಹಣದಿಂದ ನಾವು ಏನೆಲ್ಲ ಕೊಂಡು ಕೊಳ್ಳಬಹುದು ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನಲ್ಲ* . ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯ ಗಳನ್ನು ಆಚರಿಸಿದಾಗ ಮಾತ್ರ ಸಾಧ್ಯ
Subscribe , Follow on
Facebook Instagram YouTube Twitter WhatsApp