-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn Follow ThinkBangalore WhatsApp ChannelWhatsApp

ತಾರಕಾಸೂರನ ವಧೆ , ಮಹಾಭಾರತ ಸಾರ

ದೇವತೆಗಳು ಬ್ರಹ್ಮದೇವರು ಹೇಳಿದ ರಹಸ್ಯ ಅಗ್ನಿಗೆ ಹೇಳುತ್ತಾರೆ. ನಂತರ ಅಗ್ನಿ ದೇವನು ಗಂಗಾ ಭಾಗೀರಥಿ ತೀರಕ್ಕೆ ಹೋದ. ಗಂಗಾ  ದೇವಿಯೊಡನೆ ಸಮಾಗಮ ಮಾಡಿ ಅವಳಲ್ಲಿ ಗರ್ಭ ವನ್ನು (ಮಹಾದೇವನಿಂದ ಪಡೆದ ವಿರ್ಯವನ್ನು)  ಇರಿಸಿದನು. ಅಗ್ನಿದೇವ ಇರಿಸಿದ  ಗರ್ಭವೂ ಗಂಗೆಯಹೊಟ್ಟೆಲ್ಲಿ ಬೆಳೆಯತೊಡಗಿತು. ಅಗ್ನಿಯ ತೇಜಸ್ಸು ಅವಳಿಗೆ ತಡೆದುಕೊಳ್ಳಲು ಆಗಲಿಲ್ಲ.ಗರ್ಭದ ಬಲದಿಂದ  ಸೋತಿದ್ದ ಗಂಗೆಯು. ನಿನ್ನ ತೇಜಸ್ಸುಧಾರಣೆ ಮಾಡಲು ನಾನು ಅಸಮರ್ಥಳಾಗಿದ್ದೇನೆ. ಬಹಳ ದುಖದಿಂದ ಈ ಗರ್ಭವನ್ನು ನಾನು ವಿಸರ್ಜಿಸುತ್ತಿದ್ದೆನೆ ಎಂದು ಅಗ್ನಿಗೆ ಹೇಳುತ್ತಾಳೆ.  ನೀನು ಗರ್ಭವನ್ನು ಧರಿಸಿಕೊಂಡಿರು. ವಿಸರ್ಜಿಸಬೇಡ ಎಂದು ಅಗ್ನಿ ಪ್ರಾರ್ಥಿಸುತ್ತಾನೆ. ಸಮಗ್ರವಾದ ಭೂಮಮಂಡಲವನ್ನೇ ಧರಿಸುಲು ನೀನುಸಮರ್ಥಳಾಗಿರುವೆ. ಈಗರ್ಭ ಧರಿಸಲು ಕಷ್ಟವೇ ಎಂದು ಕೇಳಿದ.
ಕೆಲ ದಿನಗಳ ನಂತರ ಅಗ್ನಿಯ ತೇಜಸ್ಸನ್ನು ತಾಳಲಾಗದೆ ಗಂಗೆಯು ಮೇರು ಪರ್ವತದ ಶಿಖರದಲ್ಲಿ ಗರ್ಭವನ್ನು ವಿಸರ್ಜಿಸಿದಳು.
ನಂತರ ಅಗ್ನಿಯು ಗಂಗೆಯನ್ನು ಭೇಟಿಯಾಗಿ ನಿನ್ನ ಆ ಗರ್ಭ ಯಾವ ಬಣ್ಣದ್ದಾಗಿತ್ತು ಯಾವ ರೂಪದಿಂದ ಅದು ಕಾಣಿಸಿತು ಎಂದು ಕೇಳಿದ.

ಕತಾರಕಾಸೂರನ ವಧೆ , ಮಹಾಭಾರತ ಸಾರ
ಆ ಗರ್ಭವೂ ಸುವರ್ಣಮಯವಾಗಿತ್ತು. ಕಾಂತಿಯುಕ್ತವಾಗಿತ್ತು ಎಂದು ಹೇಳಿ ಗಂಗೆ ಅದೃಶ್ಯಳಾದಳು. ಅಗ್ನಿಯು ದೇವತೆಗಳ ಆಪೇಕ್ಷೆಯಂತೆ ತನ್ನ ಕಾರ್ಯ ಪೂರೈಸಿದನು. ಅಗ್ನಿಯ ಈ ಕಾರ್ಯ ಮೆಚ್ಚಿ ದೇವತೆಗಳು
ಅಗ್ನಿಯನ್ನು ಹಿರಣ್ಯ ರೇತಸ ಎಂದು ಕರೆದರು. ಅಗ್ನಿ ಜನಿತವಾದ ಹಿರಣ್ಯ (ವಸು) ವನ್ನು ಭೂದೇವಿ ಧಾರಣೆ ಮಾಡಿದ್ದರಿಂದ ಅವಳು ವಸುಮತಿಯಾದಳು.
ಆ ಗರ್ಭವು ದಿವ್ಯವಾದ ಗುಹೆಯಲ್ಲಿ ಸೇರಿಕೊಂಡಿತು. ಅಲ್ಲಿಯೇ ಬೆಳೆಯತೊಡಗಿತು. ತೇಜಸ್ಸಿನಿಂದ ಕೂಡಿದ್ದ ಆ ಬಾಲಕನನ್ನು ನೋಡಿದ ಕೃತ್ತಿಕಾ ದೇವತೆಗಳು ತಮ್ಮ ಪುತ್ರನೆಂದೇ ಭಾವಿಸಿ ಎದೆ ಹಾಲು ಉಣಿಸಿದರು.ಕೃತಿಕಾ ನಕ್ಷತ್ರಾದಿ ದೇವತೆಗಳು  ಸಾಕಿದ ಕಾರಣ. ಬಾಲಕನಿಗೆ  ಕಾರ್ತಿಕೇಯ ಎಂಬ ಹೆಸರು ಬಂದಿತು. ಸ್ಕನ್ನವಾದ ಗರ್ಭದಿಂದ ಜನಿಸಿದ್ದಕ್ಕಾಗಿ ಸ್ಕಂದನಾದನು. ಪರ್ವತದ ಗುಹೆಯಲ್ಲಿದ್ದ ಕಾರಣ ಗುಹನೆಂದು ಹೆಸರು ಪಡೆದನು. ಗರುಢನು ತನ್ನ ಮರಿಯಾದ ನವಿಲನ್ನು ಕಾರ್ತಿಕೇಯನಿಗೆ ಕೊಟ್ಟನು. ಮುಂದೆ ಕಾರ್ತಿಕೇಯನು  ಅಮೋಘ ಅಸ್ತ್ರಗಳಿಂದ ತಾರಾಕಾಸೂರನನ್ನು ಸಂಹಾರ ಮಾಡಿದನು ಎಂದು ಭೀಷ್ಮರು ಯಧಿಷ್ಠಿರನಿಗೆ ಹೇಳಿದರು.

- ಶಾಮಸುಂದರ ಕುಲಕರ್ಣ, ಕಲಬುರಗಿ (9886465925)

–>