* ಒಂದು ದಿನ = 24 ಘಂಟೆ.
* ಒಂದು ಘಂಟೆ = 60 ನಿಮಿಷ.
* ಒಂದು ನಿಮಿಷ = 60 ಸೆಕುಂಡ್.
* ಒಂದು ಘಂಟೆ = 2 ವರೆ ಘಟಿ.
* ಒಂದು ನಿಮಿಷ = 2 ವರೆ ವಿಘಟಿ.
* ಒಂದು ದಿನ = 60 ಘಟಿ
* ಒಂದು ಘಟಿ = 60 ವಿಘಟಿ
* ಒಂದು ಘಟಿ = 24 ನಿಮಿಷ.
* ಒಂದು ವಿಘಟಿ =24 ಸೆಕುಂಡ್.
* 1 ಮುಹೂರ್ತ= 48 ನಿಮಿಷಗಳು
* 15 ನಿಮೇಷ (ಒಂದು ಸಲ ಕಣ್ಣು ರೆಪ್ಪೆ ಬಡಿಯುವಷ್ಟು ಕ್ಷಣ ಕಾಲ. ಇದಕ್ಕೆ ನಿಮೇಷ ಅನ್ನುತ್ತಾರೆ.) = 1 ಕಾಷ್ಠಾ
* 30 ಕಾಷ್ಠಾ = 1ಕಲ
* 30 ಕಲ = 1 ಕ್ಷಣ
* 12 ಕ್ಷಣ. = 1 ಮುಹೂರ್ತ (48 ನಿಮಿಷಗಳು).
* 30 ಮುಹೂರ್ತ = 1ದಿನ = 1 ತಿಥಿ.
* 15 ದಿನ = 1 ಪಕ್ಷ.
* 2 ಪಕ್ಷ, = 1 ಮಾಸ ( ತಿಂಗಳು)
* 2 ಮಾಸ = 1ಋತು.
* 6 ಋತು = 12 ಮಾಸ = 1ಸಂವತ್ಸರ
* 1 ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು, ದಕ್ಷಿಣಾಯನ = ರಾತ್ರಿ) .
* 360 ಮನುಷ್ಯ ವರ್ಷ = 1 ದೇವ ವರ್ಷ.
* 4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ.
* 8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.
* 12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.
* 17,28,000 ಮನುಷ್ಯ ವರ್ಷ = ಕೃತಯುಗ ಅವಧಿ.
* 43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ
* 71 ಚತುರ್ಯುಗ = 1 ಮನ್ವಂತರ
* 14 ಮನ್ವಂತರ = ಬ್ರಹ್ಮನ 1 ಹಗಲು
* 14 ಮನ್ವಂತರ = ಬ್ರಹ್ಮನ 1 ರಾತ್ರಿ.
* 28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ
* 360 ಬ್ರಹ್ಮದಿನ = 1 ಬ್ರಹ್ಮ ವರ್ಷ
* 100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.
* 100ವರ್ಷ(864 ಕೋಟಿ×360×100) ಬ್ರಹ್ಮನ ಆಯುಷ್ಯ. ಇದಕ್ಕೆ ಪರ ಕಾಲ ಅನ್ನುವರು.
ಹೀಗೆ ಈ ಬ್ರಹ್ಮದೇವರ 100 ವರ್ಷ ಆಯುಷ್ಯ ' ಪರ' ಕಾಲ *ಪರಮಾತ್ಮನಿಗೆ* ಒಂದು ಸಲ ಕಣ್ಣು ರೆಪ್ಪೆ ಬಡಿಯುವಷ್ಟು ಕ್ಷಣ ಕಾಲ. ಇದಕ್ಕೆ ನಿಮೇಷ ಅನ್ನುತ್ತಾರೆ.
* ಚತುರ್ಮುಖ ಬ್ರಹ್ಮನ ಆಯಸ್ಸು ಅಥವಾ ಸತ್ಯಲೋಕದ ಆಯಸ್ಸು 100 ವರ್ಷ. ಅಂದರೆ 864 ಕೋಟಿ X 360 X 100=31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ. ಇದು ಬ್ರಹ್ಮದೇವರ ಸೃಷ್ಟಿ ಕಾಲ.
ನಂತರ ರಾತ್ರಿ ಅಂದರೆ ಮಹಾಪ್ರಳಯ. ಈ ಮಹಾಪ್ರಳಯದ ಕಾಲ 31,104 ಸಾವಿರ ಕೋಟಿ ವರ್ಷ(ರಾತ್ರಿ).
ಪ್ರಳಯಗಳಲ್ಲಿ ಮೂರು ವಿಧ.
1. ಮನ್ವಂತರ ಪ್ರಳಯ;
2. ದಿನಪ್ರಳಯ;
3.ಮಹಾಪ್ರಳಯ. [ಈ ಮೂರು ಪ್ರಳಯಗಳಲ್ಲದೆ ಇನ್ನೂ ಅನೇಕ ಚಿಕ್ಕ ಪ್ರಳಯಗಳಾಗುತ್ತವೆ. ಯುಗ ಗಳಿಗೊಮ್ಮೆ ಚತುರ್ಯುಗಗಳಿಗೆ ಒಮ್ಮೆ, ಮನ್ವಂತರ ಗಳಿಗೆ ಒಮ್ಮೆ.....
ಮನ್ವಂತರ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುವುದಿಲ್ಲ-ಆದರೆ ನಾಗರೀಕತೆ ನಾಶವಾಗುತ್ತದೆ.
ದಿನಪ್ರಳಯ ಚತುರ್ಮುಖ ಬ್ರಹ್ಮನ ರಾತ್ರಿ. ಅಂದರೆ ಪ್ರತೀ 432 ಕೋಟಿ ವರ್ಷಕ್ಕೊಮ್ಮೆ ದಿನಪ್ರಳಯ. ಈ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುತ್ತದೆ.
ನಂತರ ಮಹಾಪ್ರಳಯ ಪ್ರತೀ 31,104 ಸಾವಿರ ಕೋಟಿ ವರ್ಷಕ್ಕೊಮ್ಮೆ ಹಾಗು ಈ ಪ್ರಳಯದಲ್ಲಿ ಸತ್ಯ ಲೋಕದಿಂದ ಹಿಡಿದು ಸರ್ವ ಲೋಕಗಳೂ ಸರ್ವ ಸ್ಥಾವರ; ಜಂಗಮ ಗಳು ಜೀವ ಜಲ ಚೈತನ್ಯಗಳು ಸೂಕ್ಷ್ಮಾತಿ ಸೂಕ್ಷ್ಮ ಪರಮಾಣುವಿನ ರೂಪದಲ್ಲಿ ಲೀನವಾಗುತ್ತವೆ.
- ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter X WhatsApp