-->

ಬಲಿಪಾಡ್ಯಮಿ ಹಬ್ಬದ ಕಿರುಪರಿಚಯ , Balipadyami significance in Deepawali festival

ಬಲಿ ಚಕ್ರವರ್ತಿಯು ಭೂಲೋಕ ಆಳುತ್ತಿದ್ದ ರಾಜ. ವಿಜಯಶಾಲಿಯಾದ ರಾಜನು ದೇವಲೋಕವನ್ನೂ ಗೆದ್ದುಕೊಂಡು ತನ್ನದಾಗಿಸಿಕೊಂಡನು.

ಇದರಿಂದ ಇಂದ್ರಾದಿ ದೇವತೆಗಳು ದೇವಲೋಕವನ್ನು ಬಿಡುವಂತಾಯಿತು. ಅವರು ವಿಷ್ಣುವಿನಲ್ಲಿ ಮೊರೆ ಹೋದರು. ಆಗ ಶ್ರೀ ವಿಷ್ಣು ವಾಮನ ಅವತಾರ ತಾಳಿ ಬಲಿಯ ಬಳಿ ಬಂದು, ತನಗೆ ೩ ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದನು.

ಒಂದು ಹೆಜ್ಜೆಯಿಂದ ಭೂಲೋಕವೆಲ್ಲ ಮುಚ್ಚಿತು, ಇನ್ನೊಂದು ಹೆಜ್ಜೆಯಿಂದ ಆಕಾಶವೆಲ್ಲ ಮುಚ್ಚಿ ಹೋಯಿತು. ಮೂರನೆಯ ಹೆಜ್ಜೆ ಎಲ್ಲಿ ಇಡಲಿ ಎಂದು ವಾಮನ ಕೇಳಲು, ಬಲಿಯು ನನ್ನ ತಲೆ ಮೇಲೆ ಇಡು ಎಂದನು. ಹೀಗ ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ ಅವನನ್ನು ಪಾತಾಳಕ್ಕೆ ತುಳಿದನು.

ಬಲಿಯ ಧರ್ಮ ನಿಷ್ಠೆಯನ್ನು ಮೆಚ್ಚಿ ವಿಷ್ಣುವು ಅವನಿಗೆ ಪಾತಾಳದ ಅಧಿಪತ್ಯ ಕೊಟ್ಟನು. ಜೊತೆಗೆ ವರುಷಕ್ಕೆ ಒಂದು ದಿನ ಭೂಲೋಕಕ್ಕೆ ಮರಳಿ ಬಂದು, ಭೂಲೋಕವನ್ನು ಆಳುವಂತೆ ಅನುಗ್ರಹಿಸಿದನು. ಇದೆ ಬಲಿಪಾಡ್ಯಮಿ. ಈ ದಿನ ಗೊಪೂಜೆಯೂ ನಡೆಯುತ್ತದೆ.

ಮನೆಯಲ್ಲಿ ಬೆಳ್ಳಿ ಕೃಷ್ಣ, ಬೆಳ್ಳಿ ಹಸು ಪ್ರತಿಮೆಗಳಿಗೆ ಪೂಜೆ ಮಾಡುತ್ತಾರೆ. ಕೆಲವರ ಮನೆಯಲ್ಲಿ ಕೆರಕ ಇಟ್ಟು ಪೂಜೆ ಮಾಡುತ್ತಾರೆ. ಕೆರಕ ಎಂದರೆ ಹಸುವಿನ ಸಗಣಿಯ ಉಂಡೆಗೆ ಚೆಂಡುಹೂವು ಇಡುತ್ತಾರೆ.

ಇದು ಗಣಪತಿಯ ಸ್ವರೂಪ ಎಂದು ಭಾವಿಸುತ್ತಾರೆ. ಬಲಿ ಚಕ್ರವರ್ತಿಯ ರಾಜ್ಯವು ಐಶ್ವರ್ಯ, ಅಭಿವೃದ್ಧಿ ಹೊಂದಿತ್ತು. ಅಂತಯೇ ನಮ್ಮ ಬಾಳಲ್ಲೂ ಲಕ್ಷ್ಮೀ ಸ್ಥಿರವಾಗಿ ನೆಲಿಸಿ, ಅಭಿವೃದ್ಧಿ ಸಿಗಲಿ ಎಂದು ಪ್ರಾರ್ಥನೆ ಮಾಡುವ ಪದ್ಧತಿ.

ದೀಪಾವಳಿ ಹಬ್ಬದಲ್ಲಿ ನೇಮ, ಉಪವಾಸ, ವ್ರತ ಕಥೆ ಇವ್ಯಾವುದೂ ಇಲ್ಲ. ಹಾಗಾಗಿ ಇದು ಸಂತಸ, ಸಡಗರ, ಸಂಭ್ರಮದ ಹಬ್ಬ . ಬೆಳಿಗ್ಗೆ ಎದ್ದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ ಮಾಡಿ,ಹೊಸ ಉಡುಗೆ ಹಾಕಿಕೊಂಡು, ರುಚಿಯಾದ ಹಬ್ಬದ ಅಡಿಗೆ ಊಟ ಮಾಡಿ, ವಿಧ ವಿಧವಾದ ದೀಪ ಹಚ್ಚಿ ಆನಂದಿಸುವ ಹಬ್ಬ ಇದು.
ದೀಪಾವಳಿಯ ಬೆಳಕು ಎಲ್ಲರ ಬಾಳನ್ನೂ ಪ್ರಕಾಶಗೊಳಿಸಲಿ.

ಮಹಾವಿಷ್ಣು ವಾಮನನಾಗಿ ಬಲಿಚಕ್ರವರ್ತಿಯ ತಲೆಯ ಮೇಲೆ ಮೂರನೇ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳಿದ ಜೊತೆಗೆ ಪಾತಾಳ ಅಂದರೆ ಅದು ಬೇರೆ ಯಾವೊದೊ ಒಂದು ಲೋಕ  ಎಂದು ತಿಳಿದಿದ್ದರೆ ಅದು ತಪ್ಪು..

ಪಾತಾಳ ಅಂದರೆ ಈಗಿನ ದಕ್ಷಿಣಅಮೆರಿಕದಪೆರುದೇಶ(ಸುತಲ) !!

#ಬಲಿಚಕ್ರವರ್ತಿಯು ಏಶಿಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳು ಈತನ ಆಳ್ವಿಕೆಯಲ್ಲಿತ್ತು ಬಲಿ ಉತ್ತಮ ರಾಜನಾಗಿದ್ದರು ದೇವತೆಗಳು ವಿರೋಧಿಯಾಗಿ ಬೆಳೆಯತ್ತಿದ್ದ‌. ಮುಂದೆ ಇವನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದು ದೇವತೆಗಳ ಮೊರೆಗೆ ಮಹಾವಿಷ್ಣು ವಾಮನವತಾರಿಯಾಗಿ ಮಹಾನ್ ಶಕ್ತಿಶಾಲಿಯಾದ ಮತ್ತು ದಾನಿಯಾದ ರಾಕ್ಷಸ ದೊರೆ # ಬಲಿಯಿಂದ ಮೂರು ಹೆಜ್ಜೆಗಳು ಭೂಭಾಗ ದಾನ ಪಡೆದು ಮೂರು ಹೆಜ್ಜೆಗಳಿಗೆ ಈಗಿನ ಏಶಿಯಾ, ಯುರೋಪ್,ಮತ್ತು ಆಫ್ರಿಕಾ ಖಂಡಗಳು ಅಳೆದ. (ಈಗಲೂ ಭಾರತದಲ್ಲಿ ಹೆಜ್ಜೆಗಳನ್ನು ಅಳತೆಯಾಗಿ ಬಳಸುವ ರೂಡಿಯಲ್ಲಿದೆ.) ಈಗೇ ಮೂರು ಹೆಜ್ಜೆಗಳಲ್ಲಿ ದಾನ ನೀಡಿದ ಭೂಭಾಗದಲ್ಲಿ ಬಲಿಚಕ್ರವರ್ತಿ ಗೆ ಇರಲು ಹಕ್ಕಿಲ್ಲದೆ ಇರುವುದರಿಂದ, ಬಲಿಯನ್ನು ದಟ್ಟವಾದ ಕಾಡುಗಳಿಂದ ಕೂಡಿದ ದಕ್ಷಿಣ ಅಮೆರಿಕಕ್ಕೆ ಕಳುಹಿಸಿದ !

ಬಲಿಪಾಡ್ಯಮಿ ಹಬ್ಬದ ಕಿರುಪರಿಚಯ , Balipadyami significance in Deepawali festival


ಸಮುದ್ರ ಮಾರ್ಗವಾಗಿ ಬಲಿ ಚಕ್ರವರ್ತಿಯನ್ನು  ಕಳಿಸುವಾಗ ಹಾಗೆ ಬರಿಗೈಯಲ್ಲಿ ಕಳಿಸಲಿಲ್ಲ ಅಷ್ಟ ಐಶ್ವರ್ಯಗಳೊಂದಿಗೆ ಮತ್ತೆ ಅಲ್ಲಿ ನೆಲೆಸಲು ಅನುಕೂಲವಾಗಲು ರಾಕ್ಷಸರ ಮಾಣ್ತ್ರಿಕ  ಮಯ ನೊಂದಿಗೆ ಅಸುರರು, ದೈತ್ಯರು,ದಾನವರು, ಕಳುಹಿಸಿ ನಾಗ ಜನಾಂಗ ಮತ್ತು ಸರ್ಪಕುಲದವರ ಅಳಿಯ ಆಸ್ತಿಕ ಮಹರ್ಷಿಗಳ ಜನಾಂಗವನ್ನು ಈಗಿನ ರಾ ಏಜೆಂಟ್ ಗಳಂತೆ  ಬಲಿಯ ಚಲನವಲನಗಳ ಮಾಹಿತಿ ಪಡೆಯಲು ನೇಮಿಸಿ ಮಹಾವಿಷ್ಣು ಕಳುಹಿಸಿದರು..

ಅದು ಭಾರತದ ಪೂರ್ವದಿಂದ ದಕ್ಷಿಣ ಅಮೆರಿಕದ ಈಗಿನ ಪೆರು(ಸುತಲ)ಕ್ಕೆ ಸಮುದ್ರಮಾರ್ಗದಲ್ಲಿ ಕಳುಹಿಸಿದ. ಇದು ಬೇರೆ ದಾರಿಗಳಿಗಿಂತ ದಕ್ಷಿಣ ಅಮೆರಿಕಾಕ್ಕೆ ಹತ್ತಿರದ ದಾರಿ

#ನಮಗೆ ಪಾತಾಳ ಅಂದಕ್ಷಣ ನೀರಿನ ಕೆಳಗೆ ಹೋಗಬೇಕು (ಅಂದರೆ ಸಮುದ್ರದಲ್ಲಿ ಪ್ರಯಾಣಿಸಬೇಕು) ಮತ್ತೊಂದು ಪಾತಾಳ ಎಲ್ಲಿದೆ ಅಂದಕ್ಷಣ ಭೂಮಿಯ ಕೆಳಗಿದೆಯೆಂದು ಕಾಲು ಒತ್ತಿ  ತೋರಿಸುತ್ತೇವೆ #ಅಂದರೆ ಭಾರತದಲ್ಲಿ ಒಂದು ರಂಧ್ರವನ್ನು ಕೊರೆದರೆ ಅದು ದಕ್ಷಿಣ ಅಮೆರಿಕಾಗೆತಲುಪುತ್ತದೆ.

#ಬಲಿಚಕ್ರವರ್ತಿಯ ದಾನಕ್ಕೆ #ಮೆಚ್ಚಿ ಮಹಾವಿಷ್ಣುನಲ್ಲಿ ಕೊರಿಕೆಯ ಮೇರೆಗೆ ಬಲೇಂದ್ರನಿಗೆ ಭಾರತವರ್ಷಕ್ಕೆ ವರ್ಷಕೊಮ್ಮೆ ಬೇಟಿ ಕೊಡಲು ಅನುಮತಿಸಿದ. #ಇಂದಿಗೂ ಕೇರಳದಲ್ಲಿ ವೈಭವದ ಓಣಂ ಹಬ್ಬವನ್ನು ಹತ್ತುದಿನಗಳ ಕಾಲ ಆಚರಿಸುತ್ತಾರೆ. #ಈಸಮಯದಲ್ಲಿ ಬಲೀಂದ್ರ ನೌಕೆಯಲ್ಲಿ ಸಮುದ್ರ ಯಾನದ ನೆನಪಿಗಾಗಿ ಬೊಟ್ ಸ್ಪರ್ಧೆಗಳನ್ನು ಕಾಣಬಹುದು. ಹಾಗೂ ಹತ್ತುದಿನಗಳು ಬಲಿಯು ಪಾತಾಳದಿಂದ #ಅಂದರೆ ದಕ್ಷಿಣ ಅಮೆರಿಕ ದಿಂದ ಭರತವರ್ಷಕ್ಕೆ ಬಂದು ಇರುವ ಸಂಕೇತವಾಗಿ ಕೇರಳದ ಕೊಚ್ಚಿ ಬಳಿಯಿರುವ ಕಾಕ್ಕನಾಡು ಪ್ರದೇಶದಲ್ಲಿ ಬಲಿಗಾಗಿ ನಿರ್ಮಿಸಿದ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರವೇ ಓಣಂ ಉತ್ಸವ ಪ್ರಾರಂಭವಾಗುತ್ತದೆ.

#ಇಲ್ಲಿ ಗಮನಿಸುವ ಅಂಶವೇನೆಂದರೆ 

೧.#ಬಲಿಯ ಆಪ್ತ ಮಯ ಶ್ರೇಷ್ಠ ವಾಸ್ತುಶಿಲ್ಪಿ . ಮಾಯನ್ಸ್ ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. #ಇದರಅವಶೇಷಗಳು ಹಲವನ್ನು ಈಗಲು ನೋಡಬಹುದು.
೨. #ಸರ್ಪಕುಲದ ಅಳಿಯ ಆಸ್ತಿಕ ಮಹರ್ಷಿಯಿಂದ ಆಜ್ಟೆಕ್ ಜನಾಂಗ ಪ್ರಾರಂಬವಾಯಿತು.
೩. #ನಾಗಜನಾಂಗೀಯ ಇಂಕ ಸಾಮ್ರಾಜ್ಯ , ಇವರ ವಂಶವನ್ನು ಈಗಲೂ ಉತ್ತರ ಮತ್ತು ದಕ್ಷಿಣ ಅಮೆರಿಕದ ಹಲವು ಕಡೆ ಕಾಣುತ್ತಾರೆ.
೪. #ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಮೂಲ ಜನಾಂಗ ಭಾರತೀಯ ಚಹರೆ,ಬಣ್ಣವನ್ನೆ ಹೋಲುವುದನ್ನು ಕಾಣಬಹುದು
೫. #ಮಾಯಾನ್, ಆಜ್ಟೆಕ್, ಇಂಕಾ ಸಾಂಪ್ರದಾಯಿಕ ಹಲವು ಹೋಲಿಕೆ ಕಾಣಬಹುದು ಭಾರತೀಯರಂತೆ ಪೃಕೃತಿಯನ್ನು ಪೂಜಿಸುವರು, ಪುರೋಹಿತಶಾಹಿ, ಪಂಚಾಂಗ ಮುಂತಾದ ಹಲವು ಆಚರಣೆ ನಮ್ಮನ್ನೆ ಹೋಲುತ್ತದೆ.

ಭೂಮಿಯ ೧೮೫೧-೨೧೫೯ ಮಿಲಿಯನ್ ವರ್ಷಗಳ ಹಿಂದೆ ನಡೆದ ಈ ಐತಿಹಾಸಿಕ ಘಟನೆಗಳನ್ನು ಕಾಲಕ್ರಮೇಣ ಪುರಾಣದ ರೂಪದಲ್ಲಿ ಸ್ವಲ್ಪ ಮಟ್ಟಿಗೆ ಅತಿಶಯವಾಗಿ ಕಥೆಗಳ ರೂಪದಲ್ಲಿ ಬದಲಾಗಿ ಕೇಳುತ್ತೇವೆ. ಆದರೆ ಅದರ ಬಗ್ಗೆ ವೈಜ್ಞಾನಿಕ ಮತ್ತು ಸಂಶೋಧನೆಗಳಿಂದ ಅನ್ವೇಷಿಸಿದಾಗ ಅನೇಕ ಪುರಾಣದ ಕಥೆಗಳು ಇತಿಹಾಸವಾಗಿ ಕಂಡುಬರುತ್ತದೆ ##ಅದನ್ನು ಅರ್ಥೈಸಿಕೊಳ್ಳವ ಮನೋಭಾವ ಇರಬೇಕು .

ಮತ್ತೊಂದು ವಿಷಯ ಬಲಿ ಚಕ್ರವರ್ತಿ ಗೇ ಮಹಾವಿಷ್ಣು  ಬಲಿ ಚಕ್ರವರ್ತಿ ಬಲಶಾಲಿಯಾದಂತೆ ಬಲಿಯಲ್ಲೂ ಅನೇಕ ದುರ್ಗಣಗಳು ಹೆಚ್ಚಾಗಿ ಪಾಪ ಕಾರ್ಯಗಳಿಗೆ ಕೈ ಹಾಕಿದಾಗ ಬಲಿಯನ್ನು ಮಟ್ಟಹಾಕಲು ದೇವತೆಗಳ ಕೈಯಲ್ಲೂ ಸಾಧ್ಯವಾಗದಾಗ ಮಹಾವಿಷ್ಣು ವಾಮನ ಅವತಾರ ಎತ್ತಬೇಕಾಯಿತು.

ಬಲಿ ಚಕ್ರವರ್ತಿ ದಾನಕ್ಕೆ ಮೆಚ್ಚಿ  ಮಹಾವಿಷ್ಣು ಬಲಿಚಕ್ರವರ್ತಿಯ ಬಲಿ ತೆಗೆದುಕೊಳ್ಳದೆ. ಈ ಭೂ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಿದ ಹಾಗೂ ಬಲಿ ಚಕ್ರವರ್ತಿ ಮೇಲಿನ ಪ್ರೀತಿಗಾಗಿ ಸ್ವತಃ ಬಲಿ ಚಕ್ರವರ್ತಿಯ ದ್ವಾರ ಪಾಲಕನಾಗಿ ಕಾಯುತ್ತಿದ್ದ ಹಾಗೂ ಮುಂದಿನ ಕಲ್ಪದಲ್ಲಿ ಬಲಿ ಚಕ್ರವರ್ತಿಗೆ #ಇಂದ್ರಪದವಿಯ ವರ ನೀಡಿದ್ದು ಮತ್ತೆ ಚಿರಂಜೀವಿ ಯಾಗಿರು ಎಂದು  ಇಂದಿಗೂ ಪ್ರಪಂಚದ ಏಳುಜನ ಚಿರಂಜೀವಿ ಗಳಲ್ಲಿ ಒಬ್ಬರಾಗಿರುವ ಬಲಿಂದ್ರನಿಗೆ ವರವಿತ್ತ ಮಹಾವಿಷ್ಣುವಾದ ವಾಮನಮೂರ್ತಿಯೇ ಎಂಬುದು ಮರೆಯಬಾರದು.
(ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ
ಕೃಪಃ ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನಃ)

–>