-->

1008 ಬಗೆಯ ತರಕಾರಿಗಳು ಇವೆಯಾ - ಅರುಂದತಿ ವಿಶ್ವಾಮಿತ್ರ ಕಥೆ

ಒಮ್ಮೆ ತಮ್ಮ ಪಿತೃ ಶ್ರಾದ್ಧ/ತಿಥಿ ಊಟಕ್ಕಾಗಿ ತಮ್ಮ ಕುಟೀರಕ್ಕೆ ವಿಶ್ವಾಮಿತ್ರರನ್ನು, ವಸಿಷ್ಠರು ಕರೆದರು. ಅದಕ್ಕೆ ವಿಶ್ವಾಮಿತ್ರರು ಆಗಲಿ ಬರುತ್ತೇನೆ. ಆದರೆ ನನ್ನದೊಂದು ನಿಬಂಧನೆ. ನೀವು 1008 ಬಗೆಯ ತರಕಾರಿ ಅಡಿಗೆ ಮಾಡಿ ನನಗೆ ಬಡಿಸಬೇಕು ಎಂದರು. ಈ ಲೋಕದಲ್ಲಿ 1008 ಬಗೆಯ ತರಕಾರಿಗಳು ಇವೆಯಾ ? ಹಾಗೆ ಇದ್ದರೂ ಸಹ ಇಷ್ಟು ತರಕಾರಿಗಳನ್ನು ಯಾರಾದರೂ ಅಡಿಗೆ ಮಾಡಿ ಉಣ ಬಡಿಸುತ್ತಾರ? ಹಾಗೆ ಅಡಿಗೆ ಮಾಡಿ ಬಡಿಸಿದರೂ, ಅದಷ್ಟನ್ನೂ ತಿನ್ನಲು ಯಾರಿಂದ ಸಾಧ್ಯ? ವಿಶ್ವಾಮಿತ್ರರು ತನ್ನನ್ನು ಬೇಕಂತಲೆ ಸಿಲುಕಿಸಿ ಅವಮಾನಿಸಲು ಈ ರೀತಿ ಬೇಡಿಕೆ ಇಟ್ಟಿರಬಹುದೆಂದು ವಸಿಷ್ಠರರಿಗೆ ತಿಳಿಯದೇ ಇರಲಿಲ್ಲ ಆದರೂ ವಸಿಷ್ಠರು, ನೀವು ಕೇಳಿದ 1008 ಬಗೆಯ ತರಕಾರಿಗಳ ಪಲ್ಯ ಮಾಡಲು ಅರುಂದತಿಗೆ ತಿಳಿಸುತ್ತೇನೆ ಎಂದರು.ಶ್ರಾದ್ದ/ ತಿಥಿ ದಿನವೂ ಬಂತು. ವಿಶ್ವಾಮಿತ್ರರಿಗೆ, ಬಾಳೆ ಎಲೆ ಹಾಕಿ, ಹಾಗಲಕಾಯಿ ಪಲ್ಯ, ಹಲಸಿನ ಹಣ್ಣು, ಮಂಗರಬಳ್ಳಿ ಚಟ್ನಿ ಮತ್ತು ಇವೆಲ್ಲರ ಜೊತೆಗೆ ಬಾಳೆ ಎಲೆ ತುಂಬುವಷ್ಟು ಇನ್ನೂ ಕೆಲವು ತರಕಾರಿ ಪಲ್ಯವನ್ನು ಮಾತ್ರ ಅರುಂದತಿ ಬಡಿಸಿದಳು. 1008 ತರಕಾರಿ ಇರಲಿಲ್ಲ. ಅದಕ್ಕೆ ವಿಶ್ವಾಮಿತ್ರರು ಕೋಪಗೊಂಡು ಏನಿದು ಈ ಎಲೆಯಲ್ಲಿ 1008 ತರಕಾರಿಗಳು ಎಲ್ಲಿವೆ? ಎಂದು, ವಸಿಷ್ಠರನ್ನು ಕೇಳಿದರು. ಅದಕ್ಕೆ ವಸಿಷ್ಠರು, ನಾನು ಅರುಂದತಿ ಬಳಿ ಆಗಲೇ ತಿಳಿಸಿರುವೆನು, ಅವಳನ್ನೇ ಕೇಳಿ ಎಂದರು. ಇವರೀರ್ವರ ಮಾತನ್ನು ಆಲಿಸಿತ್ತಿದ್ದ ಪತಿವ್ರತೆ ಆದ ಅರುಂದತಿ ಅವರ ಮುಂದೆ ಬಂದು ಈ ಸ್ಲೋಕವನ್ನು ವಿಶ್ವಾಮಿತ್ರರಿಗೆ ಹೇಳುತ್ತಾಳೆ. 


 


"ಕಾರವಲ್ಲಿ ಸದಂ ಸೈವ(ಹಾಗಲಕಾಯಿ,  ವಜ್ರವಲ್ಲಿ (ಮಂಗರಬಳ್ಳಿ) ಸದತ್ತ್ರಯಂ. ಬನಸಮ್ಸತ್(ಹಲಸಿನ ಹಣ್ಣು) ಸದಂಸೈವ ಶ್ರಾದ್ದಕಾಲೇ ವಿದೀಯತೆ"
"कारवल्ली शान्थ सैव, वज्रवल्ली सदथ्रयं, बनसं षट् सदंसौव श्राद्दकाले विदीयथे" 
 
ಇದರ ಅರ್ಥ 
"ಒಂದು ಶ್ರಾದ್ದಕಾಲದಲ್ಲಿ ಹಾಗಲಕಾಯಿ 100 ತರಕಾರಿಗೆ ಸಮ. ಮತ್ತೆ ಮಂಗರಬಳ್ಳಿ ಚಟ್ನಿ 300 ತರಕಾರಿಗೆ ಸಮ. ಹಲಸಿನ ಹಣ್ಣು 600 ತರಕಾರಿಗೆ ಸಮ. ಇವು ಮೂರು ಒಟ್ಟು 1000 ತರಕಾರಿಗಳು.ಮತ್ತೆ ಎಲೆಯಲ್ಲಿ ಉಳಿದ ಎಂಟು ತರಕಾರಿಗಳು ಬಡಿಸಿದ್ದೀನಿ ಎಂದಳು ಅರುಂದತಿ. ಇದನ್ನು ಕೇಳಿ ವಿಶ್ವಾಮಿತ್ರರು ತಬ್ಬಿಬ್ಬಾಗಿ, ಮರು ಮಾತಾಡದೆ  ಊಟ ಮಾಡಿ ಹೋದರು. ಧರ್ಮೋ ರಕ್ಷತಿ ರಕ್ಷಿತ‌‌.
Terms | Privacy | 2024 🇮🇳
–>