-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 16

ಪುಸ್ತಕದ ಅಂಗಡಿಗಳಿಗೆ ಬಾಗಿಲುಗಳನ್ನು ಹಚ್ಚಬೇಕಾಗಿಲ್ಲ. ಕಾರಣ , ಕಳ್ಳರು  ಎಂದಿಗೂ ಪುಸ್ತಕ  ಓದುವುದಿಲ್ಲ. ಪುಸ್ತಕ ಓದಿದವರು ಎಂದಿಗೂ ಕಳ್ಳರಾಗುವುದಿಲ್ಲ.

ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ.. ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...
ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...ಆದರೆ "ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ ಎಚ್ಚರ ಗೆದ್ದರೆ ಕಾಲು ಹಿಡಿಯುತ್ತಾರೆ, ಬಿದ್ದರೆ ಕಾಲು ಎಳೆಯುತ್ತಾರೆ 

ಮಾಣಿಕ್ಯವು ( ರತ್ನವು ) ಎಷ್ಟೇ ಅಮೂಲ್ಯವೇ ಆದರೂ ಅದಕ್ಕೆ ಚಿನ್ನದ ಆಶ್ರಯ ಬೇಕೇ ಬೇಕು. ಹಾಗೆಯೇ ಪಂಡಿತರು , ವನಿತೆಯರು ಮತ್ತು ಲತೆಗಳು ಆಶ್ರೆಯವಿಲ್ಲದಿದ್ದರೇ ಶೋಭಿಸುವದಿಲ್ಲ.

ಬಡತನ ಮನುಷ್ಯನಿಗಿರಬೇಕೆ ಹೊರತು ಮನಸ್ಸಿಗೆ ಇರಬಾರದು, ಶ್ರೀಮಂತಿಕೆ ಮನಸ್ಸಿಗೆ ಇರಬೇಕೆ ಹೊರತು ಮನುಷ್ಯನಿಗಿರಬಾರದು...

ಪರಿಪೂರ್ಣ ಸಮಯಕ್ಕಾಗಿ ಕಾಯುವ  ಅವಶ್ಯಕತೆ ಇಲ್ಲ.ಆದರೆ, ಸ್ವಲ್ಪ  ಸಮಯ ತೆಗೆದುಕೊಂಡು ಅದನ್ನು ಪರಿಪೂರ್ಣಗೊಳಿಸಬೇಕು.

ನಮ್ಮ  ಶರೀರದಲ್ಲಿ ರಕ್ತಕ್ಕಿಂತ ನೀರಿನ ಅಂಶವೇ ಹೆಚ್ಚಾಗಿದ್ದರೂ ನಮಗೆ ಗಾಯವಾದಾಗ ಬರೋದು ರಕ್ತ ಮಾತ್ರ. ಆದರೆ ನಮ್ಮ ಹೃದಯದಲ್ಲಿ ಹೆಚ್ಚಿನ ಅಂಶ ರಕ್ತವಿದ್ದರೂ ನಮಗೆ ನೋವು ಆದಾಗ ಬರುವುದು ಕಣ್ಣೀರು ಮಾತ್ರ.

ಬಯಕೆಗಳು ಹೆಚ್ಚಾದಂತೆ ಬದುಕು ಬಂಡೆಗಲ್ಲಿನಂತೆ ಭಾರವಾಗುತ್ತದೆ... ಬಯಕೆಗಳು ಕಡಿಮೆಯಾದಂತೆ ಬದುಕು ಹೂವಿನಂತೆ ಹಗುರವಾಗುತ್ತದೆ

Kannada subhashitha - ಕನ್ನಡ ಸುಭಾಷಿತ ಸಂಗ್ರಹ 16


ಎಷ್ಟೋ ಬಾರಿ ನಾವು ಸೋತಾಗ,

"ನನ್ನ ಸೋಲಿಗೆ ಅವರೇ ಕಾರಣ","ಆ ಘಟನೆ ನಡೆಯದಿದ್ದರೆ,ನಾನು ಗೆದ್ದು ಬಿಡುತ್ತಿದ್ದೆ.""ನಾನಂದುಕೊಂಡಂತೆ ನಡೆದಿದ್ದರೆ,ನಾನು ಗೆದ್ದೇ ಗೆಲ್ಲುತ್ತಿದ್ದೆ.""ನನಗೆ ಯಾರೂ ಸಹಾಯ ಮಾಡುತ್ತಿಲ್ಲ" "ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ" ಎಂದು ಸಾವಿರ ಕಾರಣ ಹೇಳಿ,*ನನ್ನ ಸೋಲಿಗೆ ಬೇರೆಯವರು ಕಾರಣ* ಎಂದು ಸಮರ್ಥಿಸಿಕೊಳ್ಳುತ್ತೇವೆ  *ಅದರ ಬದಲು* ಗೆಲ್ಲಲೇಬೇಕೆಂಬ ನನ್ನ ತೀರ್ಮಾನ ದೃಢವಾಗಿರಲಿಲ್ಲ.ನನ್ನ ಪ್ರಯತ್ನ ಸಾಕಾಗಲಿಲ್ಲ.ನನ್ನ ಪ್ರಯತ್ನ ನಿರಂತರವಾಗಿರಲಿಲ್ಲ.ನನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿತ್ತು.ನನ್ನಲ್ಲೇ ಏನೋ ಸಮಸ್ಯೆ ಇದೆ ಎಂದು ಆತ್ಮಾವಲೋಕನ‌ ಮಾಡಿಕೊಂಡರೆ, ನನ್ನಲ್ಲಿನ ಒಂದೊಂದೇ ಕೊರತೆಯನ್ನು ಸರಿಪಡಿಸಿಕೊಳ್ಳುತ್ತಾ ಹೋದರೆ, ಮುಂದಾದರೂ ಗೆಲುವು ಸಾಧಿಸುವ ಧ್ಯತೆ ಹೆಚ್ಚುತ್ತದೆ‌. ಸೋಲುಗಳು ಜೀವನದ ಪಾಠಗಳಾಗಲಿ.


ಸಮಯ ಕೆಲವರನ್ನ ಕಾಯಿಸುತ್ತಂತೆ ಮತ್ತೆ ಕೆಲವರನ್ನ ಪರೀಕ್ಷಿಸುತ್ತಂತೆ ಹಾಗೆ ಕೆಲವರನ್ನ ಮೆರೆಸುತ್ತಂತೆ ಇನ್ನು ಕೆಲವರನ್ನ ಸಮಾಧಾನಿಸುತ್ತಂತೆ ಆದರೆ ಕೆಲವೇ ಕೆಲವರನ್ನ ಮಾತ್ರ ನಗಿಸುತ್ತಂತೆಇಷ್ಟೇ ಜೀವನ.

ಇಷ್ಟಪಟ್ಟಿದ್ದೆಲ್ಲಾ ಸಿಗಬೇಕಾದರೆ ಪ್ರಯತ್ನ ಮಾತ್ರವಲ್ಲ, ಯೋಗವೂ ಬೇಕು. ಆ ಯೋಗ ಪಡೆಯುವುದು ನಮ್ಮಲ್ಲಿಲ್ಲ. ಆದರೇ ಇಷ್ಟಪಟ್ಟಿದ್ದು ಸಿಕ್ಕಾಗ ಉಳಿಸಿಕೊಳ್ಳುವುದಕ್ಕೆ ಯೋಗ್ಯತೆ ಬೇಕು. ಅದು ನಮ್ಮಲ್ಲಿ ಇರುತ್ತದೆ. ಉಪಯೋಗಿಸಬೇಕು ಅಷ್ಟೇ.

ಸ್ಪರ್ಧೆಗಳನ್ನು ಸವಾಲಾಗಿ ತೆಗೆದುಕೊಂಡರೆ ನಿರಾಳತೆ ಹೆಚ್ಚು.ಸ್ಪರ್ಧೆಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರೆ ಆತಂಕ ಹೆಚ್ಚು. ಸವಾಲು ಗೆದ್ದವನ ಬಳಿ ಪ್ರತಿಷ್ಠೆ ತಾನಾಗೇ ಬರುವುದು.

ಹುಟ್ಟಿನಿಂದ ಯಾರೂ ಶ್ರೇಷ್ಠ ವ್ಯಕ್ತಿ ಆಗಿರುವುದಿಲ್ಲ, ನಮ್ಮ ನಡೆ-ನುಡಿ, ನಾವು ಇನ್ನೊಬ್ಬರ ಜೊತೆ  ನಡೆದುಕೊಳ್ಳುವ ರೀತಿ , ನಮ್ಮನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ಬದಲಾಯಿಸುತ್ತವೆ.

ಸಂಬಂಧಗಳು ರಕ್ತದಿಂದಲ್ಲ ವಿಶ್ವಾಸದಿಂದ ಹುಟ್ಪುತ್ತವೆ. ವಿಶ್ವಾಸವಿದ್ದಲ್ಲಿ ಹೊರಗಿನವರೂ ನಮ್ಮವರಾಗುತ್ತಾರೆ, ಇಲ್ಲವಾದರೆ ನಮ್ಮವರೇ ಹೊರಗಿನವರಾಗುತ್ತಾರೆ. ದೂರಾದವರಿಗಾಗಿ ಪ್ರಾರ್ಥಿಸಿ, ಜೊತೆಗಿರುವವರನ್ನು ಪ್ರೀತಿಸಿ.

ಪ್ರಭಾವ ನೋಡಿ ಹತ್ತಿರ ಬರುವ ಜನರಿಗಿಂತ ಸ್ವಭಾವ ನೋಡಿ ಹತ್ತಿರ ಬರುವವರೇ…. ನಿಜವಾದ ನಮ್ಮ ಹಿತೈಶಿಗಳು.

ಒಂದು ಬಾರಿಯ ಗೆಲುವು ನಮ್ಮ ಸಾಮರ್ಥ್ಯಕ್ಕೆ ಕೈಗನ್ನಡಿಯಲ್ಲ.  ಒಮ್ಮೆ ಗೆದ್ದು ಇನ್ನೊಮ್ಮೆ ಸೋತರೆ ಅದನ್ನು ಅದೃಷ್ಟವೆಂದೇ ಪರಿಗಣಿಸಲಾಗುತ್ತದೆ.  ಬಾರಿ ಬಾರಿಯ ಸತತ ಗೆಲುವು ಮಾತ್ರ ನಮ್ಮ ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತದೆ.

 ಜ್ಞಾನಿಗಳ ನುಡಿಗಳನ್ನು ಅರ್ಥೈಸಿಕೊಂಡರೆ ಸಾಲದು. ನಡೆಯನ್ನೂ ಅನುಸರಿಸಬೇಕುಸಾಧಕರ ಸಾಧನೆಯ ಶ್ರಮವನ್ನು ಅರಿತುಕೊಂಡರೆ ಸಾಲದು. ಸಾಧ್ಯವಾದಷ್ಟು ಅನುಕರಣೆ ಮಾಡಬೇಕು.ಜ್ಞಾನ-ಸಾಧನೆ ಎರಡೂ ನಮ್ಮದಾಗಲು ಸಾಧ್ಯ.

ನೀವು ಯಾರನ್ನೂ ದ್ವೇಷಿಸಬೇಡಿ. ಏಕೆಂದರೆ ಯಾವ ದ್ವೇಷ  ನಿಮ್ಮಿಂದ ಬರುತ್ತದಯೋ ಅದು ಕೊನೆಗೆ ನಿಮಗೇ ಹಿಂತಿರುಗುತ್ತದೆ. ನೀವು ಪ್ರೀತಿಸಿದರೆ, ಆ ಪ್ರೀತಿಯೇ ಮರಳಿ ನಿಮಗೇ ಬಂದು ಸೇರುತ್ತದೆ.
–>