-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

Kannada subhashitha - ಕನ್ನಡ ಸುಭಾಷಿತ ಸಂಗ್ರಹ 17

 ಎಲ್ಲ ದಿನಗಳೂ ನಿಮ್ಮ ಪಾಲಿಗೆ ಒಳ್ಳೆಯದೇ ಆಗಿರಲಿಕ್ಕಿಲ್ಲ. ಆದರೆ ಪ್ರತಿ ದಿನದಲ್ಲೂ ಒಂದಾದರೂ  ಒಳ್ಳೆಯ ಘಟನೆ., ಅಂಶ ಇದ್ದೇ ಇರುತ್ತದೆ. ಆ ಮೂಲಕವೇ ಪ್ರತಿ ದಿನವನ್ನು ಸಾರ್ಥಕ ಗೊಳಿಸಬೇಕು.
ಮೇಲಿನ ವಾಕ್ಯದಿಂದ ನಾವು ತಿಳಿಯುವದೇನೆಂದರೆ ದಿನದಲ್ಲಿ ನಡೆಯುವ ಎಷ್ಟೋ ಘಟನೆಗಳಲ್ಲಿ ಶುಭ ಸಂದರ್ಭವನ್ನೇ ಸದುಪಯೋಗ ಮಾಡಿಕೊಳ್ಳಬೇಕು.

ನಮಗೆ ಕೆಲವು ದಿನ ಶುಭವಾದರೆ ಇನ್ನು ಕೆಲದಿನ ಅಶುಭ ಆಗುತ್ತವೆ. ಏಕೆಂದರೆ ಆಯಾದಿನ ಸಂಭಾವಿಸಿದ ಘಟನೆಯನ್ನು ಅವಲಂಬಿಸಿದೆ.ದಿನದ ಪ್ರತಿಯೊಂದು ಕ್ಷಣ ಒಳ್ಳೆಯದು ಇರುವದಿಲ್ಲ. ಅದು ನಮ್ಮ ಕೈಯಲ್ಲಿ ಇಲ್ಲ. ಎಲ್ಲವೂ ಪರಮಾತ್ಮನ ಸಂಕಲ್ಪದಂತೆ ನಡೆಯುತ್ತವೆ.
ಮೇಲಿನ ವಾಕ್ಯದಂತೆ ನಮ್ಮ ಜೀವನದ ದಿನಗಳಲ್ಲಿ. ದಿನಕ್ಕೆ ಒಂದಿಲ್ಲ ಒಂದು ಸಂತೋಷದ ಘಟನೆ ಇದ್ದೇ ಇರುತ್ತದೆ. ಅದನ್ನು ನಾವು ತಿಳಿದು ನಮ್ಮ ಇಡೀ ದಿನವನ್ನು ಸಂತೋಷದ ದಿನವನ್ನಾಗಿ ಮಾಡಿ., ಸಾರ್ಥಕ ಮಾಡಿಕೊಳ್ಳಬೇಕು. ಈ ಘಟನೆಯು ಬರುವದು ನಮಗೇತಿಳಿಯುವದು. ಕೆಟ್ಟ ಘಟನೆಗೆ, ದುಃಖಕ್ಕೆ ದಾರಿ. ಮಾಡಿಕೊಡದೆ ಸಂತೋಷವನ್ನೇ ತಂದುಕೊಳ್ಳ ಬೇಕು. ಸಂತೋಷದಿಂದ ನಮ್ಮ ಮನಸ್ಸು ಉಲ್ಹಸಿತ ಇದ್ದು ಉತ್ತಮ ಆರೋಗ್ಯಕ್ಕೆ ದಾರಿಯಗುವದು

 *********

ಯಾವತ್ತೂ ನೇರವಾಗಿ ಮಾತನಾಡುವ ವ್ಯಕ್ತಿಗಳ ಬಳಿಯಲ್ಲಿ ಜನರ ಸಮೂಹ ಕಡಿಮೆ ಇರುತ್ತದೆ.ಅದೇ ಡಂಬಚಾರದ ಮಾತುಗಳನ್ನು ಆಡುವವರ ಬಳಿ ಜನರ ಸಮೂಹ ದೊಡ್ಡದಿರುತ್ತದೆ. ಆದರೆ ನೇರ ಮಾತನಾಡುವವರು ಆದರ್ಶಪ್ರಾಯರಾದರೆ -ಡಂಬಚಾರಿಗಳು ಹಾಸ್ಯದ ವಸ್ತುಗಳಾಗಿರುತ್ತಾರೆ.

ಆಂತರ್ಯವನ್ನು ಶುದ್ಧವಾಗಿಟ್ಟುಕೊಂಡರೆ ಎಂಥದ್ದೇ ಬಾಹ್ಯ ಸಮಸ್ಯೆಗಳು ಬಂದರೂ ದಿಟ್ಟತನದಿಂದ ಎದುರಿಸಿ ಗೆಲ್ಲಬಹುದು.
 
ಬದುಕೊಂದು ಯುದ್ಧಭೂಮಿ ಇದ್ದಹಾಗೆ ಧೈರ್ಯವಾಗಿ ಹೋರಾಡಿ,ಕಾಲ ಕೆಳಗಿನ ನೆಲ ಕುಸಿದು ಬಿದ್ದರೂ ಯಾರಿಂದಲೂ ಏನನ್ನೂ ಬಯಸದೆ ಯಾರಿಗೂ ಹೆದರದೇ ಮುನ್ನುಗ್ಗಿ 
 
ವಯಸ್ಸಿನ ಪಕ್ವತೆಗಿಂತ ಅನುಭವದ ಪಕ್ವತೆ ಹೆಚ್ಚು ಪರಿಣಾಮಕಾರಿ.
ಯಾಕೆಂದರೆ ಅನುಭವಿ ಅನ್ನಿಸಿಕೊಳ್ಳಲು ಹಲವಾರು ಏಳುಬೀಳುಗಳನ್ನು ದಾಟಬೇಕಾಗುತ್ತದೆ.
ವಯಸ್ಕ ಅನ್ನಿಸಿಕೊಳ್ಳಲು ವರ್ಷಕ್ಕೊಮ್ಮೆ ಬರುವ ಜನ್ಮದಿನದ ದಿನಾಂಕ ದಾಟಿದರೆ ಸಾಕು
 
ಇಂದಿನ ಕಷ್ಟದ ದಿನಗಳೇ ನಾಳೆಯ ಖುಷಿಗೆ ಕಾರಣ.
ನಮ್ಮನ್ನು ಸಮಯ ಎಷ್ಟು ಕಾಯಿಸುತ್ತದೆಯೋ ಅಷ್ಟು ಉತ್ತಮ ಫಲ ಸಿಗುತ್ತದೆ 
 
ಜೀವನ ನಿತ್ಯ ಕಲಿಯುವ ಪಾಠಶಾಲೆ. ಸಜ್ಜನರಿಂದ ಸಂತೋಷದ ಪಾಠ , ದುರ್ಜನರಿಂದ ನೋವಿನ ಪಾಠ . ಕಲಿತ ಪಾಠ ಅರಗಿಸಿಕೊಳ್ಳುವದೇ ಜೀವನದ ಶ್ರೇಷ್ಠ ಕಲಿಕೆ
 
ಪ್ರಾಮಾಣಿಕ ಸ್ನೇಹಿತರು ಯಾರು, ಸಮಯಸಾಧಕರು ಯಾರು ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಸಂಪೂರ್ಣ ಸೋತಂತೆ ನಟಿಸಿಬಿಡಿ.
ಪ್ರಾಮಾಣಿಕ ಸ್ನೇಹಿತರು ಬೆಟ್ಟದ ತುದಿಯಲ್ಲಿದ್ದರೂ ಭೇಟಿಯಾಗುತ್ತಾರೆ.
ಸಮಯಸಾಧಕರು ಕಣ್ಣೆದುರು ಇದ್ದರೂ ಕಡೆಗಣಿಸುತ್ತಾರೆ.
 
ಸಂಪತ್ತಿಗಿಂತ ಸದ್ಗುಣಗಳನ್ನು ಶೇಖರಿಸಿಟ್ಟುಕೊಳ್ಳುವುದು ತುಂಬಾ ಸುಲಭಕಾರ್ಯ.
ನಮ್ಮ ಸಂಪತ್ತನ್ನು ನಾವೇ ಕಾಯಬೇಕಾಗುತ್ತದೆ.
ನಮ್ಮ ಸದ್ಗುಣಗಳು ನಮ್ಮನ್ನೇ ಕಾಯುತ್ತವೆ.
 
ಮಿತ್ರರನ್ನು ಪ್ರೀತಿಸಿರಿ, ಅವರು ಬಲ ತುಂಬುತ್ತಾರೆ.
ಅದೇರೀತಿ, ಶತ್ರುಗಳನ್ನು ಗೌರವಿಸಿರಿ, ಅವರು ಛಲ ತುಂಬುತ್ತಾರೆ.
 
*ಬೀಗವನ್ನು ಬೀಗದ ಕೈಯಿಂದ ಮತ್ತು ಸುತ್ತಿಗೆಯಿಂದಲೂ ತೆರೆಯಬಹುದು.*
*ಆದರೆ ಕೈಯಿಂದ ತೆಗೆದ ಬೀಗವು ಮತ್ತೆ ಮತ್ತೆ ಉಪಯೋಗಕ್ಕೆ ಬರುತ್ತದೆ.*
*ಮತ್ತು ಸುತ್ತಿಗೆಯಿಂದ ತೆಗೆದ ಬೀಗವು ಮತ್ತೆ ಉಪಯೋಗಿಸಲು ಬಾರದು.*
*ಸಂಬಂಧಗಳ ಬೀಗವನ್ನು ಕೋಪದ ಸುತ್ತಿಗೆಯಿಂದಲ್ಲ ಬದಲಾಗಿ ಪ್ರೀತಿಯ ಬೀಗದ ಕೈಯಿಂದ ತೆರೆಯೋಣ*

Kannada subhashitha - ಕನ್ನಡ ಸುಭಾಷಿತ ಸಂಗ್ರಹ 17


*ಯಾರು ಎಲ್ಲ ವಿಷಯಗಳಲ್ಲೂ ಅನಾಸಕ್ತರಾಗಿ, ಶುಭವನ್ನು ಪಡೆದಾಗ ಸಂತೋಷಿಸುವುದಿಲ್ಲವೋ ಮತ್ತು ಅಶುಭ ಉಂಟಾದಾಗ ದ್ವೇಷಿಸುವುದಿಲ್ಲವೋ, ಅವರ ಬುದ್ಧಿಯು ಸ್ಥಿರವಾಗಿರುತ್ತದೆ. ಶುಭಾಶುಭಗಳನ್ನು ಸಮನಾಗಿ ಸ್ವೀಕರಿಸುವವರು ಯಶಸ್ವೀ ಜೀವನ ನಡೆಸುತ್ತಾರೆ.*
 
ಬ್ರಹ್ಮಾನಂದವೇನೆಂಬುದನ್ನು ತಿಳಿಯದ ಜನ ವಿಷಯಾನಂದವೇ ರಮಣೀಯವೆನ್ನುತ್ತಾರೆ. ತುಪ್ಪವನ್ನೇ ಎಂದೂ ಕಾಣದವನು ಎಳ್ಳೆಣ್ಣಿಯನ್ನೇ ಶ್ರೇಷ್ಠವೆಂದು ತಿಳಿಯುತ್ತಾನೆ.
 
*ವಿರೋಧ ಅನ್ನುವುದು , ಇಲ್ಲದೇ ಹೋದರೆ ,ವ್ಯಕ್ತಿ , ಪರಿಪೂರ್ಣನಾಗಲಾರ.
*ಗಾಳಿಪಟ  ಆಕಾಶಕ್ಕೆ ಹಾರಬೇಕಿದ್ದರೆ, ಗಾಳಿಯ ವಿರುದ್ಧವೇ ಸಾಗಬೇಕು.*
*ಜೀವನದ ಯಶಸ್ಸಿನಲ್ಲಿ , ಮಿತ್ರರಗಿಂತ ಶತ್ರುಗಳ ಪಾತ್ರ ಜಾಸ್ತಿ ಇರುತ್ತದೆ.*

 ದುರ್ಬಲನಿಗೆ ರಾಜನೇ ಬಲ. ಬಾಲಕನಿಗೆ ಅಳುವದೇ ಬಲ. ಮೂರ್ಖನಿಗೆ ಮಾತನಾಡದಿರುವದೇ ಬಲ. ಕಳ್ಳನಿಗೆ ಸುಳ್ಳೇ ಬಲ.

ಕಷ್ಟಗಳ ಮೂಲ ಆಸೆ.ಆದರೂ ಆಸೆ ಅಗಣಿತವಾದುದು. ಆಸೆಯನ್ನು ಬಿಟ್ಟು ಲೋಕವಿಲ್ಲ. ಆಸೆಯೆಂಬ ಸುಮಗಳ ಸುತ್ತ ಮನವೆಂಬ ಭ್ರಮರವು ಸುತ್ತುತ್ತಲೇ ಇರುತ್ತದೆ. ಪಂಚೇಂದ್ರಿಯಗಳ ಮೂಲಕ ಅನುಭವಿಸುವ      ಎಲ್ಲವೂ ಆಸೆಯ ಮೂಲವೇ ಆಗಿದೆ ಎನ್ನಬಹುದು. ಆದ್ದರಿಂದ ಆಸೆಯ ಕೈಗೆ ‍ಮನಸ್ಸನ್ನು ಕೊಡದೆ ನಮ್ಮ ಬದುಕು ಬವಣೆಯಾಗದಂತೆ ಸಮರಸದ ಬಾಳನ್ನು ಬಾಳೋಣ.
 
*ಗುಲಾಬಿ ತರಹ ವಿಕಸಿತ ಆಗಲು ಬಯಸಿದರೆ*,*ನಾವು ಮುಳ್ಳುಗಳ ಜೊತೆಗೆ ಹೊಂದಾಣಿಕೆ ಗೊಳ್ಳುವ ಕಲೆ ಕರಗತ ಮಾಡಿಕೊಳ್ಳಬೇಕು. ಯಾರನ್ನು ಸಂಧಿಸುತ್ತೇವೆ ಎಂಬುದನ್ನು ಕಾಲ ನಿರ್ಧರಿಸಿದರೆ, ನಮ್ಮ ಜೀವನದಲ್ಲಿ* *ಯಾರು ಉಳಿದು ಕೊಳ್ಳುತ್ತಾರೆ ಎಂಬುದನ್ನು* *ನಮ್ಮ ವರ್ತನೆ ನಿರ್ಧರಿಸುತ್ತದೆ*
 
*ನಿಮ್ಮದೇ ಕೆಲಸಕ್ಕಾಗಿ ಇನ್ನೊಬ್ಬರ ಬಳಿ ಅಭಿಪ್ರಾಯಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.*
*ಆದರೇ ಅನುಷ್ಠಾನದಲ್ಲಿ ಮಾತ್ರ ನಿಮ್ಮದೇ ಸ್ವತಂತ್ರ ಆಲೋಚನೆಯಿರಲಿ.*
*ನಿಮ್ಮ ಬಗ್ಗೆ ನಿಮಗೆ ಅರಿವಿಲ್ಲದಿದ್ದಾಗ ಮಾತ್ರ ಬೇರೆಯವರ ಅಭಿಪ್ರಾಯಗಳಿಗೆ ನೀವು ಅವಲಂಬಿತರಾಗಿರುತ್ತೀರಿ.* 
ನಮ್ಮ ಕಷ್ಟ ಸಮಯದಲ್ಲಿ ದೇವರು ಮೌನವಾಗಿದ್ದಾರೆ, ಎಂದು ದುಃಖಿಸಬಾರದು. ಏಕೆಂದರೆ, ಪರೀಕ್ಷಾ ಕೊಠಡಿಯಲ್ಲಿ ನಮಗೆ ಪಾಠ ಕಲಿಸಿದ ಶಿಕ್ಷಕರೂ ಕೂಡ,ಮೌನವಾಗಿರುತ್ತಾರೆ
 
ಬದುಕಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವಂತೆ ಬದುಕೋದು ಸ್ವಾಭಿಮಾನದ ಜೀವನ. ನಮ್ಮನ್ನ ಮತ್ತೊಬ್ಬರು ಗುರುತಿಸುವಂತೆ ಬದುಕುವುದು ಅಭಿಮಾನದ ಸನ್ಮಾನ
–>