-->

Interesting story on how lord Vishnu got the name Govinda

ತಿಮ್ಮಪ್ಪ ದೇವರಿಗೆ ಗೋವಿಂದ ಗೋವಿಂದ ಅಂತೀವಿ ಅದರ ಅರ್ಥವೇನು ?
ಇದಕ್ಕೊಂದು ಚಿಕ್ಕ ಕಥೆ.
ಶಿವನು ಅಭಿಷೇಕಪ್ರಿಯ, ವಿಷ್ಣು ಅಲಂಕಾರ ಪ್ರಿಯ,
ಒಮ್ಮೆ ಶಿವನು ಮತ್ತು ವಿಷ್ಣು  ಚರ್ಚಿಸುವಾಗ, ವಿಷ್ಣು ಶಿವನನ್ನ ಕೇಳುತ್ತಾರಂತೆ; ಮಹಾದೇವಾ ಅತಲ, ಸುತಲ, ಪಾತಾಳ, ಬ್ರಹ್ಮಾಂಡ, ದೇವಲೋಕ, ಇಂದ್ರಲೋಕ ಎಲ್ಲಾನು ನೋಡಿದ್ದೇನೆ. ಆದರೆ ನೀವು ಇರುವಂತಹ ಕೈಲಾಸವನ್ನು ನಾನು ನೋಡಿಲ್ಲ ಒಮ್ಮೆ ನೋಡಬೇಕು ಎಂಬ ಆಸೆ ಇದೆ  ಎಂದು ಕೇಳಲು,

ಪರಶಿವನು ಅದರಲ್ಲಿ ಏನಿದೆ ನಾಳೆಯೇ ಬಂದು ಕೈಲಾಸವನ್ನು ನೋಡಬಹುದು ಎಂದು ಆಹ್ವಾನಿಸುತ್ತಾರೆ.

 ಆಗ ಶಿವನು ಕೈಲಾಸಕ್ಕೆ ಬಂದು ಬೃಂಗಿಯನ್ನು ಕರೆದು ನೋಡಪ್ಪ ನಾಳೆ ವಿಷ್ಣುವು ಕೈಲಾಸಗೆ ಬರುತ್ತಾರೆ. ಆದುದರಿಂದ ಕೈಲಾಸವನ್ನು ಸ್ವಚ್ಛವಾಗಿ ಇಡಬೇಕಾದ ಕಾರ್ಯ ನಿನ್ನದು ಎಂದು ಹೇಳುತ್ತಾರೆ.

ಆಗ ಬೃಂಗಿಯು ಕೈಲಾಸವನ್ನು ಸ್ವಚ್ಛ ಮಾಡುವುದು ಹೇಗೆ? ಎಲ್ಲೆಲ್ಲಿ ನೋಡಿದರೂ ಹಿಮಗಡ್ಡೆಗಳು-ಬೆಟ್ಟಗುಡ್ಡಗಳು ಇದನ್ನು ಹೇಗೆ ಸ್ವಚ್ಛ ಮಾಡುವುದು ಎಂದು ದಿಗ್ಬ್ರಾಂತಿ ಗೆ ಒಳಗಾಗುತ್ತಾರೆ. ಇದು ನನ್ನ ಕೈಯಲ್ಲಿ ಸಾಧ್ಯವಾಗದ ಕೆಲಸವೆಂದು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ.

Interesting story on how lord Vishnu got the name Govinda


 ಆಗ ಗೋಮಾತೆ  ಕಾಮಧೇನು ಸಗಣಿಯನ್ನು ಹಾಕಿ ಹೋಗುವುದನ್ನು ಕಾಣುತ್ತಾರೆ. ಇದನ್ನು ನೋಡಿದ ಅವರಿಗೆ ಒಂದು ಆಲೋಚನೆ ಬರುತ್ತದೆ. ಕೈಲಾಸದಲ್ಲಿ ಇರುವಂತಹ ಹೆಣ್ಣು ಮಕ್ಕಳನ್ನು ಕರೆದು, ಸಗಣಿಯನ್ನು ಶೇಖರಿಸಿ ಅದನ್ನು ಕೈಲಾಸವನ್ನು  ಸಾರಿಸಿ
ಗುಡಿಸಿ  ರಂಗೋಲಿ ಇಂದ ಅಲಂಕರಿಸಿ, ಹೆಬ್ಬಾಗಿಲಿನಲ್ಲಿ ತಳಿರು ತೋರಣದಿಂದ  ಸಿಂಗಾರ ಗೊಳಿಸುತ್ತಾರೆ.

    ಆಗ ಮರುದಿನ ವೈಕುಂಠಾದಿಪತಿ ವಿಷ್ಣುವು ಕೈಲಾಸಕ್ಕೆ ಬರುವಂತಹ ವೇಳೆಯಲ್ಲಿ, ಅಷ್ಟೈಶ್ವರ್ಯವನ್ನು ಅಲಂಕಾರ ಮಾಡಿಕೊಂಡು, ಸುಗಂಧ ದ್ರವ್ಯಗಳಿಂದ, ಶಂಕು-ಚಕ್ರ-ಗದಾ-ಪುಷ್ಪ  ಹಸ್ತಗಳಿಂದ ವಿರಾಜಿಸುತ್ತ ,
ಗರುಡಾರೂಢನಾಗಿ  ಕೈಲಾಸಕ್ಕೆ ಬರುತ್ತಾರೆ.

 ಪರಶಿವನು ಮತ್ತು ಆತನ ಸಂಗಡಿಗರು ಎಲ್ಲರೂ ಬಂದು ವಿಷ್ಣುವನ್ನು ಭವ್ಯ ದಿಂದ  ಸ್ವಾಗತಿಸುವಾಗ,
ವಿಷ್ಣುವು ಕೇಳುತ್ತಾರಂತೆ ಎಲ್ಲಿಂದ ಬರುತ್ತಿದೆ ಈ ಸುವಾಸನೆ? ಇಷ್ಟೊಂದು ಸುಗಂಧವಾದ ಪರಿಮಳ, ಎಂದು ತನ್ನನ್ನು ತಾನೇ ಮರೆತು  ಆ ಪರಿಮಳವನ್ನು ಸೇವಿಸುತ್ತಾ  ನಿಂತಿರಲು,

ಆಗ  ಪರಶಿವನು ಬೃಂಗಿಯನ್ನು ಕರೆದು ಇದರ ವಿಚಾರವನ್ನು ಕೇಳಿದಾಗ,

 ಬೃಂಗಿಯು ಗೋವು ವಿಂದಾದಿಂದ ಬರುತ್ತಿರುವಂತಹ ಸುಗಂಧ ಪರಿಮಳ ಎಂದು ಹರಿಹರರಿಗೆ  ಹೇಳಲು,
(ವಿಂದಾ  ಅಂದರೆ ಸಂಸ್ಕೃತದಲ್ಲಿ ಸಗಣಿ ಎಂದು ಅರ್ಥ  ) ಅಲ್ಲಿ ನೆರೆದಿದ್ದ ಅಂತ ಜನಗಳು ಜೋರು ಧ್ವನಿಯಲ್ಲಿ ಗೋವಿಂದಾ- ಗೋವಿಂದಾ- ಗೋವಿಂದ ಎನ್ನಲು
 ವೈಕುಂಠ ಪತಿ ಆದ ಶ್ರೀ ಮನ್  ನಾರಾಯಣನು  ಸಂತೋಷಭರಿತ ನಾಗಿ  ಇದೆ  ವೈಕುಂಠ - ಇದೇ ಕೈಲಾಸ ಎಂದು ಅಲ್ಲಿದ್ದ ಜನಗಳಿಗೆ ಆಶೀರ್ವಾದ ಮಾಡತ್ತಾರೆ

 ಇದನ್ನು ಕಂಡ ಪರಶಿವನು ಇನ್ನು ಮುಂದೆ ಕಲಿಯುಗದಲ್ಲಿ ನಿನ್ನನ್ನು ಗೋವಿಂದ - ಗೋವಿಂದ (ಗೋವು + ವಿಂದ) ಎಂದು ಯಾರು ಕರೆಯುತ್ತಾರೆ ಅವರಿಗೆ ಮುಕ್ತಿ ಸಿಗಲಿ ಎಂದು ಹರಿಸುತ್ತಾರೆ.

 ಕೈಲಾಸಕ್ಕೆ ಬಂದಂತ ವಿಷ್ಣುವಿಗೆ ಪರಶಿವನೆ  ಗೋವಿಂದ ಎಂದು ನಾಮಕರಣ ಮಾಡಿದರು

–>