-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 19

ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಏನು ಮಾಡಬೇಕು  ಎನ್ನುವ ಪ್ರಶ್ನೆಗೆ, ಒಬ್ಬ ಜ್ಞಾನಿ ಹೇಳಿದ  ಸುಂದರವಾದ ನುಡಿ " ಕಾಲು ಎಳೆಯುವುದು ಬಿಟ್ಟು  ಕೈಯನ್ನು ಎಳೆಯಬೇಕು"ಎಂದು
ಒಮ್ಮೆ ಕ್ಷಮಿಸಿ ಒಳ್ಳೆಯವರಾಗಿ,ಆದರೆ  ಮತ್ತೆ ಪುನಃ ಅದೇ ವ್ಯಕ್ತಿಯನ್ನು ನಂಬಿ ಮೂರ್ಖರಾಗಬೇಡಿ. 

*********

ಕೊಂಬೆಯ ಮೇಲೆ ಕುಳಿತ ಹಕ್ಕಿಯು ಮರ ಜೋರಾಗಿ ಅಲುಗಾಡಿದರೆ ಹೆದರುವುದಿಲ್ಲ. ಏಕೆಂದರೆ ಆ ಹಕ್ಕಿಗೆ ಕೊಂಬೆಗಿಂತ ಹೆಚ್ಚಿನ ವಿಶ್ವಾಸ ತನ್ನ ರೆಕ್ಕೆಯ ಮೇಲೆ ಇರುತ್ತದೆ. ಯಾವತ್ತೂ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ

*********

ಕಣ್ಣು ಇಡೀ ಜಗತ್ತನ್ನೇ ನೋಡುತ್ತದೆ...ಆದರೆ, ತನ್ನೊಳಗೆ ಬಿದ್ದ ಸಣ್ಣ ಧೂಳಿನ ಕಣವನ್ನು ನೋಡಲಾರದು... ಹಾಗೆಯೇ ನಾವೆಲ್ಲರೂ ಕೂಡ ಬೇರೆಯವರ ತಪ್ಪುಗಳನ್ನೆಲ್ಲಾ ಗುರುತಿಸುತ್ತೇವೆ. ಆದರೆ, ನಮ್ಮ ತಪ್ಪುಗಳನ್ನು ಗುರುತಿಸಲಾರೆವು...

********* 

ಬೇರೆಯವರು ನಮ್ಮ ಮೇಲಿಟ್ಟಿರುವ ವಿಶ್ವಾಸ ಎಂದಿಗೂ  ತಾತ್ಕಾಲಿಕವಾಗಬಾರದು. ಅದು ನಮ್ಶ ಶ್ವಾಸವಿರುವವರೆಗೂ ನಮ್ಮ ಜೊತೆಯಲ್ಲೇ ಇರುವಂತೆ ನೋಡಿಕೊಂಡಾಗಲಷ್ಟೇ   ನಮ್ಮ ಬದುಕು ಸಾರ್ಥಕ. ಆದ್ದರಿಂದ ನಾವು ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಬೇಕು

*********

ಮೂರ್ಖರನ್ನು ಕಾಣಲು ಹೋಗಬಾರದು, ಹಾಗೆ ಕಂಡರೂ ಅವರೊಡನೆ ಇರಬಾರದು; ಹಾಗೆ ಇದ್ದರೂ ಅವರೊಡನೆ ಮಾತಾಡಬಾರದು; ಹಾಗೆ ಮಾತಾಡಿದರೆ ಮೂರ್ಖನಂತೆಯೇ ಮಾತಾಡಬೇಕು.

*********

ಕ್ಷಮೆ ಮತ್ತು ಧನ್ಯವಾದಗಳು ತುಂಬಾ ಚಿಕ್ಕ ಪದಗಳು ಎಂದೆನಿಸಿದರೂ.....ಎಷ್ಟೋ ಸಂಬಂಧಗಳು ಒಡೆಯದಂತೆ ನೋಡಿಕೊಳ್ಳುವಲ್ಲಿ ಅತಿ ದೊಡ್ಡ ಪಾತ್ರವಹಿಸಿದೆ

*********

Kannada subhashitha - ಕನ್ನಡ ಸುಭಾಷಿತ ಸಂಗ್ರಹ 19

 

ಎಲ್ಲರನ್ನೂ ಸಂತೋಷದಿಂದ ಇಟ್ಟುಕೊಳ್ಳುವ ಪ್ರಯತ್ನ ಜೀವಂತ ಕಪ್ಪೆಗಳನ್ನು ತಕ್ಕಡಿಯಲ್ಲಿ ಕೂರಿಸಿದಂತೆ... ಒಂದನ್ನು ಕೂರಿಸುವ ಹೊತ್ತಿಗೆ ಇನ್ನೊಂದು ಜಿಗಿದು ಹೋಗುತ್ತದೆ

*********

ಖುಷಿ ,ಸಂತೋಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ. ಅದು ಎಂದಿಗೂ ಬರಿದಾಗುವುದಿಲ್ಲ. ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ ಹಂಚುವ ಮೂಲಕ , ಇನ್ನೊಬ್ಬರ ಮೊಗದಲ್ಲೂ ಆ ಸಂತಸವನ್ನು ಕಾಣಬಹುದು

*********

ನಾಳೆ ಬರಲಿದೆ, ಅದು ನಿಶ್ಚಿತ.  ಆದರೆ ನೀವು ಅದನ್ನು ಯಾವ ರೂಪದಲ್ಲಿ ನೋಡಲು ಬಯಸುತ್ತೀರಿ ಎಂಬುದನ್ನು ಮಾತ್ರ   ಇಂದೇ ನಿರ್ಧರಿಸಬೇಕು.

*********

ಕಾಣಬಾರದೆಂದು ಕಣ್ಣು ಮುಚ್ಚಿಕೊಳ್ಳಬಹುದು ಆದರೆ ನೆನಪಾಗಬಾರದೆಂದು ಮನಸ್ಸು ಮುಚ್ಚಿ ಕೊಳ್ಳಲು ಸಾಧ್ಯವೆ.  ಮನಸ್ಸು ಕೊಟ್ಟವರು ಕನಸಲ್ಲೂ ಒಂದಾಗುತ್ತಾರೆ. ಅದರೆ ಹೃದಯ ಗೆದ್ದವರು ನೋವಲ್ಲೂ ನೆನಪಾಗುತ್ತಾರೆ.

*********

ಪ್ರಪಂಚದಲ್ಲಿ ಬಹಳ ಸುಲಭವಾದ ಕೆಲಸವೆಂದರೆ ಇನ್ನೊಬ್ಬರು ಮಾಡಿದ ಕೆಲಸವನ್ನು ಟೀಕಿಸುವುದು
ಹಾಗೆಯೇ "ಬಹಳ ಕಷ್ಟವಾದ ಕೆಲಸವೆಂದರೆ ಅದೇ ಕೆಲಸವನ್ನು  ಸ್ವತಃ ಮಾಡುವುದು...

*********

ನಮಗೆ ಕೋಪ ಬರುವುದಿಲ್ಲವೆಂದರೆ ನಾವು ಶಕ್ತಿವಂತರಲ್ಲ ಎಂದು ಕೆಲವರು ತಿಳಿದುಕೊಳ್ಳುತ್ತಾರೆ!

ಉತ್ತಮರಲ್ಲಿ ಕೋಪ ಕ್ಷಣಮಾತ್ರವಿರುತ್ತದೆ! ಮಧ್ಯಮರಲ್ಲಿ ಎರಡು ಘಳಿಗೆ ಇರುತ್ತದೆ!
ಅಧಮರಲ್ಲಿ ಅಹೋರಾತ್ರಿ ಕೋಪ ಇರುತ್ತದೆ!  ಆದರೆ...  ಪಾಪಿಷ್ಠರಲ್ಲಿ ಮಾತ್ರ ಸಾಯುವ ತನಕ ಕೋಪ ಇರುತ್ತದೆ! ನಾವ್ಯಾರು ಎಂದು ನಾವೇ ನಿರ್ಧರಿಸಿಕೊಳ್ಳೋಣ

*********

ನಮ್ಮಲ್ಲೇನಿದೆ, ಏನು ಪಡೆಯುತ್ತೇವೆ ಎನ್ನುವುದಕ್ಕಿಂತ, ಅವಶ್ಯಕತೆ ಇದ್ದವರಿಗೆ ನಾವೇನು ನೀಡಬಲ್ಲೆವು ಎಂಬುದು ನಮ್ಮ ವ್ಯಕ್ತಿತ್ವ ಎತ್ತರಿಸುವುದಕ್ಕೆ ಕಾರಣವಾಗಲಿ.....

*********

ನಿಮ್ಮ ಜೀವನದಲ್ಲಿ ನಿಮಗಾದ ನೋವನ್ನು ಶಕ್ತಿಯಾಗಿ ಪರಿವರ್ತಿಸಿಕೊಳ್ಳಿ
 ಅವಾಗ ನಿಮಗೆ ಇತರರು ನೋವನ್ನು ಉಂಟು ಮಾಡುವ    ಮುನ್ನ ನೂರು ಬಾರಿ ಯೋಚಿಸುತ್ತಾರೆ, ಇದೇ ಮನುಷ್ಯನ ಜೀವನ

*********

ನಮ್ಮ ಸ್ನೇಹಿತರ ಸಣ್ಣಪುಟ್ಟ ದೋಷಗಳಿಗಾಗಿ ಅವರ ಸ್ನೇಹವನ್ನು ಕಳೆದುಕೊಳ್ಳಬಾರದು.ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ.ಸ್ನೇಹಿತರ ಗುಣದೋಷವನ್ನು ಸ್ವೀಕರಿಸಿ ಸ್ನೇಹವನ್ನು ಕಾಪಾಡುವುದು ದೊಡ್ಡತನ.ಈ ದೊಡ್ಡತನವನ್ನು ಸದಾ ಮೆರೆಯುತ್ತಿರಬೇಕು

*********

ನಾವು ವಿನಮ್ರರಾಗಿದ್ದಾಗ ಗಟ್ಟಿಯಾಗಿ ಕಾಣುತ್ತೇವೆ, ಬೇರೆಯವರು ಹೇಳುವುದನ್ನು ಕೇಳುವಾಗ ಗೌರವಯುತ ಕಳೆ ಇರುತ್ತದೆ, ಧೈರ್ಯದಿಂದ ಇರುವಾಗ ಬುದ್ಧಿವಂತರಾಗಿ ಕಾಣುತ್ತೇವೆ, ಬೇರೆಯವರಿಗೆ ಸಹಾಯ ಮಾಡುವಾಗ ಮಹಾನ್ ವ್ಯಕ್ತಿಗಳಾಗುತ್ತೇವೆ

*********

ಹಲವಾರು ಬಾರಿ ವೈಮನಸ್ಸುಗಳನ್ನು ಕೇವಲ ಮಾತಿನಿಂದ ಪರಿಹರಿಸಿಕೊಳ್ಳಬಹುದು. ಮಾತನ್ನು ಆಡುವ ಆತುರಕ್ಕಿಂತಲೂ ಕೇಳುವ ವ್ಯವಧಾನವಿರಬೇಕು. ಮಾತು ಮನೆಯನ್ನು ಕೆಡಿಸುವುದಕ್ಕಿಂತಲೂ ಮನವನ್ನು ಕೂಡಿಸಲು ಹೆಚ್ಚು ಉಪಯೋಗವಾಗಬೇಕು.

*********

Keep pushing yourself forward. Do whatever it takes. You'll soon leap over the final hurdle and land right where you want to be.🌹

Pushing yourself a bit more every day for many years. That’s it. That’s growth.🌹

Many people succeed when others do not believe in them. But rarely does a person succeed when he does not believe in himself

*********

ಸಾಧನೆಗೆ ಮಹಾ ಬುದ್ಧಿವಂತಿಕೆ ಏನು ಬೇಕಾಗಿಲ್ಲ. ಹಿಡಿದ ಕೆಲಸ ಕೈಬಿಡದಿರುವ ಹಠವೊಂದಿದ್ದರೆ ಸಾಕು

*********

ಸಂಬಂಧಗಳು ಚೆನ್ನಾಗಿದ್ದಾಗ ನಾವು ಮಾಡಿದ್ದು ಮಾತಾಡಿದ್ದು ತಪ್ಪಾಗಿದ್ದರೂ ಸರಿಯಾಗಿ ಕಾಣುತ್ತದೆ,
 ಅದೇ ಆ ಸಂಬಂಧ ಹಳಸಿ ಹೋದಾಗ ನಾವು ಮಾಡ್ತಾ ಇರೋದು ಮಾತಾಡ್ತಾ ಇರೋದು ಸರಿಯಾಗಿದ್ದರೂ ಕೂಡ ತಪ್ಪಾಗಿ ಕಾಣುತ್ತದೆ,  ಈ ಜೀವನವೇ ಹೀಗೆ ಅವರವರಿಗೆ ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ

*********

When you start to believe in yourself there is no one that can stop you from achieving the goal

*********

ಯಾವುದೇ ಸಮಸ್ಯೆ ಇರಬಹುದು,ಅದು ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಆದರೆ,ಅದು ಬಂದಾಗ ಆಕಾಶ ಕಳಚಿ ಬಿದ್ದವರಂತೆ ಬಹುತೇಕರು ವರ್ತಿಸುತ್ತಾರೆ.ಅದು ಬಂದಾಗ ಹೇಗೆ ಕಳಿಸಿಕೊಡಬೇಕು ಎಂಬುದು ಗೊತ್ತಿರಬೇಕು. ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಹೆಚ್ಚು ಕಾಲ ಉಳಿಯಬಹುದಷ್ಟೇ

*********

ಸದಾ ನಮ್ಮ ಸಮಸ್ಯೆ, ಚಿಂತೆಗಳ ಬಗ್ಗೆಯೇ ಮಾತನಾಡುತ್ತಿದ್ದರೆ ಕೇಳುವವರಿಗೆ ಕಿರಿಕಿರಿಯಾಗಬಹುದು. ಅವರು ನಿಮ್ಮಿಂದ ದೂರವಾಗಬಹುದು. ಯಾವತ್ತೂ ಹೊಸವಿಚಾರ, ಆನಂದ, ಖುಷಿ ನೀಡುತ್ತದೆ. ಅಂತಹ ಸಂಗತಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ

*********

ಸೂರ್ಯನು ಮರೆಯಾದನೆಂದು ಕೊರಗುತ್ತಾ ಕೂರಬೇಡಿ.

ಈಗ ನಕ್ಷತ್ರಗಳನ್ನು ನೋಡುವ ಭಾಗ್ಯ ನಮ್ಮದೆಂದು ತಿಳಿಯಿರಿ.

ಒಳ್ಳೆಯ ಸಮಯ ಕಳೆದುಹೋಯಿತು ಎಂದು ಕೊರಗುತ್ತಾ ಕೂರಬೇಡಿ.

ಈಗ ಒಳ್ಳೆಯ ವಿಚಾರಗಳನ್ನು ಹುಡುಕುವ ಸರದಿ ನಮ್ಮದೆಂದು ತಿಳಿಯಿರಿ

*********

ಹುಳಿಯನ್ನು ಯಾವ ಅಡುಗೆಗೆ ಬಳಸಬೇಕು ಎಂದು ಗೊತ್ತಿರಲಿ... ಹಾಗೆಯೇ ಹುಳಿ ಹಿಂಡುವವರನ್ನು ಎಲ್ಲಿ ಇಡಬೇಕು ಎಂದು ಸಹ ಗೊತ್ತಿರಲಿ... ಏಕೆಂದರೆ ಹುಳಿಯ ಗುಣವೇ ಒಡೆಯುವುದು .. 

*********


 



Terms | Privacy | 2024 🇮🇳
–>