ಮನುಷ್ಯ ಸುಖಮಯ ಜೀವನ ಸಾಗಿಸಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಇನ್ನೊಬ್ಬರಿಗೆ ಕೆಡಕು ಮಾಡಿ ತಾನು ಸುಖವಾಗಿ ಜೀವಿಸಬೇಕು ಎಂಬುವುದು ತಪ್ಪು.
ಜೀವನದಲ್ಲಿ ಸದಾ ಸದ್ವಿಚಾರ ಮಾಡಬೇಕು. ಸಂತರ, ಗುರುಗಳ ಸಂಪರ್ಕದಿಂದ ಉತ್ತಮ ವಿಚಾರ ಮಾಡಲು ಕಲಿಯಬಹುದು.
ದುರ್ವಿಚಾರದಿಂದ ಲಾಭಕ್ಕಿಂತ ಹಾನಿ ಹೆಚ್ಚು. ಇನ್ನ್ನೊಬ್ಬರ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುತ್ತ ನಮ್ಮ ಆರೋಗ್ಯ ನಾವೇಕೆ ಹಾಳು ಮಾಡಿಕೊಳ್ಳಬೇಕು ಎಂಬ ಪರಿಜ್ಞಾನ ನಮಗಿಲ್ಲದಿರುವುದು ವಿಪರ್ಯಾಸ. ಸದಾ ಕೆಟ್ಟ ವಿಚಾರ ಮಾಡುತ್ತಿದ್ದರೆ ನಮ್ಮ ದೇಹದಲ್ಲಿನ ರಕ್ತ ಸುಡುತ್ತದೆ. ಮನಸ್ಸು ವಿಕಾರವಾಗುತ್ತದೆ. ವಿಕಾರಗೊಂಡ ಮನಸ್ಸಿನಿಂದ ಅಪರಾಧದಂತ ಕೃತ್ಯಗಳು ನಡೆಯುತ್ತವೆ. ಕೆಟ್ಟ ವಿಚಾರದಿಂದ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೆ. ಸಮಾಜದಲ್ಲಿ ಕೆಟ್ಟ ಹೆಸರು ಪಡೆಯುವಂತಾಗುತ್ತದೆ. ಇನ್ನೊಬ್ಬರಿಗೆ ಕೆಡಕು ಬಯಸುವುದು ಯಾಕೆ. ಎಲ್ಲರಿಗೂ ಒಳಿತನ್ನೆ ಬಯಸಬೇಕು. ಮನಸ್ಸು ಪ್ರಸನ್ನತೆಯಿಂದ ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಮನಸ್ಸೆ ಸರಿಯಿಲ್ಲವಾದರೆ ಕಾರ್ಯದಲ್ಲಿ ಸಿದ್ಧಿಸುವುದಿಲ್ಲ. ನಾವು ಮಾಡುವ ಕಾರ್ಯ ಮನಸಾಪೂರ್ವಕ ಮಾಡಬೇಕು. ಮನಸ್ಸು ಸರಿಯಾಗಿಟ್ಟುಕೊಳ್ಳಬೇಕಾದರೆ ಮನಸ್ಸಿಗೂ ಆಹಾರ ಕೊಡಬೇಕು. ಆಹಾರ ಅಂದರೆ ಊಟವಲ್ಲ.
ಸತ್ಸಂಗ, ಸದ್ವಿಚಾರಗಳೆ ಮನಸಿನ ಊಟ. ನಾವು ಪ್ರತಿ ದಿನ ಊಟ ಮಾಡುವಂತೆ ಮನಸ್ಸಿಗೂ ಆಗಾಗಾ ಊಟ ಮಾಡಿಸಬೇಕಾಗುತ್ತದೆ. ನಾವು ಮೊದಲು ಮನಸ್ಸಿಗೆ ಸಂಸ್ಕಾರ ಕೊಡಬೇಕು. ಕೆಟ್ಟದನ್ನು ವಿಚಾರ ಮಾಡುವುದಕ್ಕೆ ಅವಕಾಶ ನೀಡಬಾರದು. ಪ್ರತಿಯೊಬ್ಬ ಮನುಷ್ಯ ಪ್ರತಿ ದಿನ ಸಹಸ್ರಾರು ಯೋಚನೆ ಮಮಾಡುತ್ತಾನೆ. ಅದರಲ್ಲಿ ಯಾವುದು ಒಳ್ಳೆಯದೋ ಅದನ್ನು ಸ್ವೀಕರಿಸಬೇಕು. ಕೆಟ್ಟ ಯೋಚನೆಗಳು ಮನಸ್ಸಿನ ಮೇಲೆ ಹಾದು ಹೊಗುತ್ತವೆ. ಅವುಗಳನ್ನು ಸ್ವೀಕರಿಸಬಾರದು. ಸದಾ ದುರ್ವಿಚಾರ ಮಾಡುವುದರಿಂದ ತಲೆಯಲ್ಲಿ ಕೆಟ್ಟ ಯೋಚನೆಗಳೆ ಸುಳಿಯುತ್ತವೆ. ಒಳ್ಳೆ ಕಾರ್ಯ ಮಾಡುವುದಕ್ಕೆ ಬಿಡುವುದಿಲ್ಲ.
ಇನ್ನೊಬ್ಬರಿಗೆ ಕೆಡಕು ಮಾಡುವುದರಲ್ಲೆ ಖುಷಿ ಇದೆ ಎಂದೆನಿಸುತ್ತದೆ. ಆದರೆ ಮುಂದೊಂದು ದಿನ ಅರ್ಥವಾಗುತ್ತದೆ ತಾನು ಬಗೆದ ಕೆಡುಕಿನ ದುಷ್ಪರಿಣಾಮ. ತಿದ್ದಕೊಳ್ಳಬೇಕು ಎನ್ನುವಷ್ಟರಲ್ಲಿ ಆಯುಷ್ಯ ಮುಗಿದು ಹೋಗುತ್ತದೆ.
ದುರ್ವಿಚಾರ ಮಾಡಿ ನಮ್ಮತನ ಹಾಳು ಮಾಡಿಕೊಳ್ಳುವ ಬದಲು ಸದ್ವಿಚಾರ ಮಾಡುವ ಮೂಲಕ ನಾವೆಲ್ಲರೂ ಉತ್ತಮ ಸಮಾಜ ಕಟ್ಟೋಣ.
Subscribe , Follow on
Facebook Instagram YouTube Twitter WhatsApp