ಅದು ಬರೇ ದೇವರ ಹತ್ತು ಅವತಾರ ಕಥೆ ಮಾತ್ರವಲ್ಲ. ಜೀವ ಜಗತ್ತಿನ ವಿಕಾಸದ ಕಥೆಯೂ ಹೌದು. ಹಿಂದೂ ಮಾನ್ಯತೆಯ ಪ್ರಕಾರ ಸೃಷ್ಟಿಯ ಆದಿಯಲ್ಲಿ ಪ್ರಪಂಚವೆಲ್ಲಾ ಜಲಮಯವಾಗಿತ್ತು.
1. ಮತ್ಸ್ಯಾವತಾರ: ವೇದಗಳನ್ನು ಅಪಹರಿಸಿದ ತಮಾಸುರನನ್ನು ಕೊಲ್ಲಲು ಶ್ರೀಹರಿ ಮೀನಿನ ಅವತಾರವನ್ನು ತಾಳಿದನು. ಪ್ರಪಂಚದಲ್ಲಿ ಮೊದಲು ಸೃಷ್ಟಿಯಾದುವು ಜಲಚರಗಳು ಅಂತ ವಿಜ್ಙಾನಿಗಳೂ ಒಪ್ಪಿದ ಸತ್ಯ.
2. ಕೂರ್ಮಾವತಾರ: ಜೀವ ವಿಕಾಸದ ಮುಂದಿನ ಮೈಲುಗಲ್ಲು. ಇದು ನೆಲದಲ್ಲೂ ನೀರಿನಲ್ಲೂ ಜೀವಿಸಬಲ್ಲ ಉಭಯಚರ ಪ್ರಾಣಿ. ಸತ್ಯಯುಗದಲ್ಲಿ ಭೂಮಿಯು ಕುಸಿಯುತ್ತಾ ಹೋಗುವಾಗ ಶ್ರೀಹರಿಯು ಕೂರ್ಮನಾಗಿ ತನ್ನ ಚಿಪ್ಪಿನಿಂದ ಭೂಮಿಯನ್ನು ಎತ್ತಿ ಹಿಡಿಯಲು ಈ ಅವತಾರ. (ಸಮುದ್ರಮಥನದ ಸಮಯದಲ್ಲಿ ಮಂದರ ಪರ್ವತ ಮುಳುಗದಂತೆ ರಕ್ಷಿಸಲು ಎತ್ತಿದ ಕೂರ್ಮಾವತಾರವೇ ನಿಜ ಕೂರ್ಮಾವತಾರ ಎಂಬ ತಪ್ಪು ಕಲ್ಪನೆಯಿದೆ)
3.ವರಾಹಾವತಾರ: ಇದು ಆಮೆಯ ನಂತರ ಸೃಷ್ಡಿಸಲ್ಪಟ್ಟ ಜೀವ ಪ್ರಭೇಧ. ಜಲಚರಗಳ ನಂತರ ಸೃಷ್ಟಿಯಾದವುಗಳು ಭೂಮಿಯ ಮೇಲಿನ ಪ್ರಾಣಿಗಳು. ಹಿರಣ್ಯಾಕ್ಷನನ್ನು ಕೊಲ್ಲಲು ಈ ಅವತಾರ.
4.ನರಸಿಂಹಾವತಾರ: ಇದು ಅತ್ತ ಪ್ರಾಣಿಯೂ ಅಲ್ಲದ ಇತ್ತ ಮನುಷ್ಯನೂ ಅಲ್ಲದ ಒಂದು ಜೀವಿ. ಜೀವ ವಿಕಾಸದ ಹಾದಿಯಲ್ಲಿ ಇದು ಮುಂದಿನ ಜೀವಿ. ಹಿರಣ್ಯ ಕಶಿಪುವಿನ ವಧೆಗೆ ಈ ಅವತಾರ.
5.ವಾಮಾನಾವತಾರ: ಇದು ಒಬ್ಬ ಕುಬ್ಜ ಮಾನವನಂತಹ ಅವತಾರ. ಬಲಿಗೆ ಮೋಕ್ಷಕರುಣಿಸಿದ ಅವತಾರ. ಆತ ಧರಿಸಿದ್ದು ಬರೇ ಕೌಪೀನ. ಬಹುಷಃ ಪ್ರಪಂಚದಲ್ಲಿ ಹುಟ್ಟಿದ, ಬಟ್ಟೆಯ ಉಪಯೋಗ ವ್ಯಾಪಕವಾಗಿಲ್ಲದ ಕಾಲದ ಮೊದಲ ಮಾನವ ಹೀಗೆಯೇ ಇದ್ದಿರಬೇಕು.
6.ಪರಶುರಾಮಾವತಾರ: ಇದು ಪೂರ್ಣ ಪ್ರಮಾಣದ ಮಾನವನಂತಹ ಅವತಾರ. ಆತನ ಆಯುಧ ಕೊಡಲಿ. ಬಹುಷಃ ಲೋಹಯುಗದ ಮನುಷ್ಯ ಈ ರೀತಿಯಲ್ಲೇ ಇದ್ದಿರಬೇಕು. ಆ ಕಾಲದಲ್ಲಿ ಲೋಹಗಳ ಬಳಕೆ, ಕಾಡನ್ನು ಕಡಿದು ನಾಡಾಗಿಸುವ ವಿಚಾರ ಮಾನವನಿಗೆ ತಿಳಿದಿತ್ತು. ಕೊಡಲಿಯಂತಹ ಆಯುಧಗಳ ಬಳಕೆ ಪ್ರಾರಂಭವಾಗಿತ್ತು.
7.ರಾಮಾವತಾರ: ಇದು ಪೂರ್ಣ ರೂಪದ ಸುಸಂಸ್ಕೃತ ಮಾನವನ ರೂಪ. ಜೀವ ವಿಕಾಸದ ಕೊನೆಯ ಹಂತ.
8.ಕೃಷ್ಣಾವತಾರ: ಇದು ಇಂದಿನ ಬುದ್ಧಿವಂತ, ಮುತ್ಸದ್ಧಿ ಮಾನವನ ರೂಪ. ಈ ರೂಪದಲ್ಲಿ ಅನ್ಯಾಯವನ್ನು, ಅಧರ್ಮವನ್ನು ತಡೆಯಲು ಕೆಲವೊಮ್ಮೆ ಅನ್ಯಾಯ, ಮೋಸಗಳ ಹಾದಿ ಹಿಡಿದುದೂ ಇದೆ.
ಆಧುನಿಕ ವಿಜ್ಙಾನದ ಪ್ರಕಾರ ಯಾವುದೇ ಧಾತುವಿನ ಅತೀ ಸಣ್ಣ ರೂಪವೇ ಅಣು. ಇದರ ಕೇಂದ್ರದ ಸುತ್ತ ನ್ಯೂಟ್ರಾನ್, ಪ್ರೊಟಾನ್ ಹಾಗೂ ಇಲೆಕ್ಟ್ರಾನ್ ಗಳೆಂಬ ಅಣುಗಳು ಸುತ್ತುತ್ತಿರುತ್ತವೆ. ಇವುಗಳಲ್ಲಿ ಅಪರಿಮಿತ ಶಕ್ತಿ ಅಡಗಿದೆ. ಇದರಿಂದಲೇ atom bomb ತಯಾರಾಗುತ್ತದೆ.
ನಮ್ಮ ಪುರಾಣಗಳ ಪ್ರಕಾರ ಆದಿಶಕ್ತಿಯಿಂದ ಮೂರುಮೂರ್ತಿಗಳು ಸೃಜಿಸಲ್ಪಟ್ಟರು. ಇದಕ್ಕೂ ಇಂದಿನ ಅಣು ವಿಜ್ಙಾನಕ್ಕೂ ಇರುವ ಹೋಲಿಕೆ ಕಾಕತಾಳೀಯವೇ? ಅಂದರೆ ನಮ್ಮ ಋಷಿ ಮುನಿ ಗಳಿಗೂ ಅಣು ವಿಜ್ಞಾನದ ಬಗ್ಗೆ ಜ್ಞಾನ ಇದ್ದಿರಬೇಕು.
- ದಾಮೋದರ ಶೆಟ್ಟಿ, ಇರುವೈಲು
Subscribe , Follow on
Facebook Instagram YouTube Twitter WhatsApp