ಮುಗ್ದ ಮನದ ಮಗುವಾಗುವ ಆಸೆ
ಮೋಸ ವಂಚನೆಯ ಬಿಟ್ಟು ನಿಸ್ವಾರ್ಥಿಯಾಗುವ ಆಸೆ
ಬಾಲ್ಯದ ಗೆಳೆಯರೊಂದಿಗೆ ಖುಷಿಯಲಿ ಆಡುವ ಆಸೆ
ತಾಯಿಯ ಮಡಿಲಲಿ ಲಾಲಿ ಕೇಳುವ ಆಸೆ
ಬಾಲ್ಯಕ್ಕೆ ತಿರುಗಿ ಮತ್ತೊಮ್ಮೆ ಮಗುವಾಗುವ ಆಸೆ
ತಂದೆಯ ಹೆಗಲೇರಿ ಜಾತ್ರೆಯ ತೇರು ನೋಡುವ ಆಸೆ
ಕಡ್ಲೆ ಮಿಠಾಯಿ ಕದ್ದು ತಿನ್ನುವ ಆಸೆ
ಅಕ್ಕನ ಜಡೆ ಹಿಡಿದು ಜಗಳವಾಡುವ ಆಸೆ
ಸಾಕಾಗಿದೆ ಈ ಪ್ರಪಂಚ ಬೇಕಾಗಿದೆ ಬಾಲ್ಯವಿನ್ನು
ಮಗುವಾಗಿದ್ದರೆ ಕಾಣುವುದು ಪ್ರಪಂಚ ನಮ್ಮಲ್ಲಿ ದೇವರನ್ನು
ಜಾತಿ ಮರೆತು ಒಟ್ಟಿಗೆ ಬಾಳುವ ಬದುಕನ್ನು
ಪಡೆಯಬೇಕಾಗಿದೆ ಮತ್ತೊಮ್ಮೆ ಆ ಬಾಲ್ಯದ ಕನಸನ್ನು
ಆಗ ಗೆಳೆಯರಿದ್ದರೂ ದುಡ್ಡು ಇರಲಿಲ್ಲ
ಈಗ ದುಡ್ಡಿದೆ ಬಾಲ್ಯದ ಗೆಳೆಯರಿಲ್ಲ
ಆಗ ಸಮಯವಿತ್ತು ಮನರಂಜನೆಯೂ ಇತ್ತು
ಈಗ ಸಮಯವಿಲ್ಲ ಮನರಂಜನೆಯೇ ಆಗಿದೆ ಕುತ್ತು
ಮತ್ತೊಮ್ಮೆ ಪಂಚಮಿಯ ಜೋಕಾಲಿಯ ಆಡುವ ಆಸೆ
ಹೊಸ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್ ನೀಡುವ ಆಸೆ
ಚಿನ್ನಿ ದಾಂಡು ಬುಗುರಿ ಗೋಲಿ ಆಡುವ ಆಸೆ
ದೇವರಲ್ಲಿ ಬಾಲ್ಯ ಜೀವನ ಕೊಡೆಂದು ಬೇಡುವ ಆಸೆ
ಲೇಖಕರು - ಶ್ರೀ ಮುತ್ತು ಯ.ವಡ್ಡರ , ಶಿಕ್ಷಕರು , ಬಾಗಲಕೋಟ , 9845568484

Instagram
Subscribe , Follow on