ಹಳೆ ವರ್ಷ ಕಳೆದು ಹೊಸ ವರ್ಷ ಬರುವುದು ನಮ್ಮ ಜೀವನದಲ್ಲಿ ಒಂದು ಮಹತ್ವದ ಘಟ್ಟ. ಇದು ಹಿಂದಿನ ವರ್ಷದ ಸಾಧನೆಗಳು ಮತ್ತು ತಪ್ಪುಗಳಿಂದ ಕಲಿತು ಹೊಸ ಗುರಿಗಳನ್ನು ಹಾಕಿಕೊಳ್ಳುವ ಸಮಯ. ಈ ದಿನವು ಹೊಸ ಆರಂಭಗಳು ಹೊಸ ಅವಕಾಶಗಳು ಮತ್ತು ಹೊಸ ಸಂಕಲ್ಪಗಳ ಸಮಯವಾಗಿದೆ. ಹೊಸ ವರ್ಷವು ಹಿಂದಿನ ವರ್ಷದ ಸಾಧನೆಗಳು ಮತ್ತು ತಪ್ಪುಗಳನ್ನು ಪ್ರತಿಬಿಂಬಿಸುವ ಸಮಯವೂ ಆಗಿದೆ. ಇದು ನಾವುಗಳು ನಮ್ಮ ಜೀವನದಲ್ಲಿ ಏನು ಕೆಲಸ ಮಾಡಿದ್ದೇವೆ ಮತ್ತು ಏನು ಕೆಲಸ ಮಾಡಿಲ್ಲ ಎಂಬುದನ್ನು ಪರಿಗಣಿಸಲು ಮತ್ತು ಹೊಸ ವರ್ಷಕ್ಕೆ ಹೊಸ ಗುರಿಗಳನ್ನು ಹಾಕಿಕೊಳ್ಳಲು ಒಂದು ಅವಕಾಶವಾಗಿದೆ.
ಕಳೆದ ವರ್ಷವು ನಮಗೆ ಅನೇಕ ಕಹಿ ನೆನಪುಗಳನ್ನು ನೀಡಿರಬಹುದು. ನೋವು, ನಷ್ಟ, ಮತ್ತು ಸವಾಲುಗಳು ನಮ್ಮನ್ನು ಕಾಡಿರಬಹುದು. ಆದರೆ, ಹೊಸ ವರ್ಷವು ನಮಗೆ ಹೊಸ ಕನಸುಗಳನ್ನು ಕಾಣಲು, ಹೊಸ ಗುರಿಗಳನ್ನು ಹಾಕಿಕೊಳ್ಳಲು ಮತ್ತು ಹೊಸ ಆರಂಭಗಳನ್ನು ಮಾಡಲು ಅವಕಾಶ ನೀಡುತ್ತದೆ. ಇದು ನಮ್ಮ ಹಿಂದಿನ ತಪ್ಪುಗಳಿಂದ ಅನುಭವಗಳನ್ನು ಕಲಿತು, ಹೊಸ ದಾರಿಯಲ್ಲಿ ಸಾಗಲು ಮತ್ತು ಹೊಸ ಸಾಧನೆಗಳನ್ನು ಮಾಡಲು ಒಂದು ಅವಕಾಶವಾಗಿದೆ. ಹೊಸ ವರ್ಷವು ನಮಗೆ ಹೊಸ ಕನಸುಗಳನ್ನು ಕಾಣಲು ಮತ್ತು ಹೊಸ ಗುರಿಗಳನ್ನು ಹಾಕಿಕೊಳ್ಳಲು ಒಂದು ಅವಕಾಶವಾಗಿದೆ. ನಾವು ನಮ್ಮ ಕನಸುಗಳನ್ನು ನನಸಾಗಿಸಲು ಶ್ರಮಪಟ್ಟರೆ, ನಾವು ಯಶಸ್ಸನ್ನು ಸಾಧಿಸಬಹುದು.
ಹೊಸ ವರ್ಷದಲ್ಲಿ ನಾವು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳೋಣ ನಾವು ನಮ್ಮ ಗುರಿಗಳನ್ನು ಮರುಪರಿಶೀಲಿಸಿಕೊಳ್ಳೋಣ ನಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳೋಣ ಮತ್ತು ನಮ್ಮ ಸಂಬಂಧಗಳನ್ನು ಬಲಪಡಿಸಿಕೊಳ್ಳೋಣ. ಈ ದಿನದಂದು ಹೊಸ ಸಂಕಲ್ಪಗಳನ್ನು ಮಾಡೋಣ. ಆರೋಗ್ಯಕರ ಜೀವನ, ಉತ್ತಮ ಅಭ್ಯಾಸಗಳು, ಮತ್ತು ವೈಯಕ್ತಿಕ ಬೆಳವಣಿಗೆಯ ಕಡೆ ಗಮನ ಹರಿಸೋಣ. ಇದು ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಒಂದು ಉತ್ತಮ ಸಮಯವಾಗಿದೆ.
ಪ್ರತಿಯೊಂದು ವರ್ಷದ ಕೊನೆ ಮತ್ತು ಇನ್ನೊಂದು ವರ್ಷದ ಆರಂಭವು ನಮಗೆಲ್ಲರಿಗೂ ಒಂದು ವಿಶೇಷ ಭಾವನೆ ತರುತ್ತದೆ. ಇದು ಕೇವಲ ಕ್ಯಾಲೆಂಡರ್ ಬದಲಾವಣೆಯಲ್ಲ, ಇದು ನಮ್ಮ ಜೀವನದ ಪುಟಗಳನ್ನು ತಿರುಗಿಸಿ, ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಅವಕಾಶ. ಹೋದ ವರ್ಷದ ಕಹಿ ನೆನಪುಗಳನ್ನು ಬಿಟ್ಟು, ಹೊಸ ವರ್ಷದ ಸಂತೋಷ ಮತ್ತು ಭರವಸೆಯನ್ನು ಸ್ವಾಗತಿಸುವುದೇ ಇದರ ಮುಖ್ಯ ಉದ್ದೇಶ. ಕಳೆದ ವರ್ಷದ ತಪ್ಪುಗಳಿಂದ ಪಾಠ ಕಲಿಯಬೇಕು. ನಾವು ಎಲ್ಲಿ ತಪ್ಪು ಮಾಡಿದೆವು ಯಾವುದನ್ನು ಸುಧಾರಿಸಿಕೊಳ್ಳಬೇಕು ಎಂದು ಯೋಚಿಸಬೇಕು. ಹೋದ ವರ್ಷದ ನಿರಾಸೆ, ನೋವು, ಮತ್ತು ವೈಫಲ್ಯಗಳು ಕೇವಲ ಅನುಭವಗಳಾಗಿವೆ, ಅವುಗಳನ್ನು ಹೊತ್ತುಕೊಂಡು ಹೋಗುವ ಬದಲು, ಅವುಗಳಿಂದ ಹೊರಬರಬೇಕು. ಹೊಸ ವರ್ಷದ ಸಂಭ್ರಮ ಕೇವಲ ಒಂದು ದಿನದ ಆಚರಣೆಯಲ್ಲ. ಅದು ನಮ್ಮನ್ನು ನಾವು ಪುನರ್ನಿರ್ಮಿಸಿಕೊಳ್ಳುವ ಉತ್ತಮ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವ ಒಂದು ಸುವರ್ಣಾವಕಾಶ. ಹೋದ ವರ್ಷದ ಯಾತನೆಗಳನ್ನು ಮರೆತು, ಹೊಸ ವರ್ಷದ ಆಶಾದೀಪದೊಂದಿಗೆ, ಸಂತೋಷ, ನೆಮ್ಮದಿ, ಮತ್ತು ಯಶಸ್ಸಿನ ಕಡೆಗೆ ಸಾಗೋಣ.
ವರ್ಷದ ಕೊನೆ ಬಂತು ಎಂದರೆ ನಾವು ನಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತೇವೆ. ಇನ್ನೊಂದು ವಾರ ಕಳೆದರೆ ಹೊಸ ವರ್ಷ. ಎಲ್ಲರಿಗೂ ಹೊಸ ಹರ್ಷ ತರಲಿ ಎನ್ನುವುದು ನಮ್ಮ ಆಶಯ. ಜೀವನದ ಪಯಣದಲ್ಲಿ ಹೊಸ ವರ್ಷ ಹರುಷ ತರಲಿ ನವ ಬಾಳು ಬೆಳಗಲಿ ನವಚೈತನ್ಯ ಚಿಮ್ಮಲಿ ಕಹಿ ನೋವುಗಳು ತೊಲಗಲಿ ಸಿಹಿ ನಲಿವುಗಳು ಬರಲಿ ಹೊಸವರ್ಷದಂದು ಹೊಸ ಆಲೋಚನೆಯ ಹೊಳೆಯಲ್ಲಿ ಬಾಳಿನ ಸುಖ ಸಾಗಲಿ. ಅದೇ ರೀತಿ ಈಗ ಹಳೆಯ ನೋವು, ನೆನಪುಗಳನ್ನೆಲ್ಲಾ ಬದಿಗೆ ಸರಿಸಿ ಹೊಸ ನಿರೀಕ್ಷೆ ಹಾಗೂ ಕನಸುಗಳೊಂದಿಗೆ ಮತ್ತೊಂದು ಹೊಸ ವರ್ಷವನ್ನು ನಾವು ಬರಮಾಡಿಕೊಳ್ಳುತ್ತಿದೇವೆ. ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ಹಲವು ಹೊಸತನಗಳೊಂದಿಗೆ ಹೊಸ ಹರ್ಷ ತರಲಿ ಹರ್ಷ ಎಂದು ಹಾರೈಸುವೆವು.
ಕ್ಯಾಲೆಂಡರ್ ಬದಲಾಯಿಸುವುದರ ಜೊತೆಗೆ ಕೆಟ್ಟ ಕ್ಯಾರೆಕ್ಟರ್ ಗಳನ್ನು ಬದಲಾಯಿಸಿ.ಸಾವಿರ ದುಃಖಗಳು ದೂರವಾಗಲಿ ಸಾವಿರ ಸುಖಗಳು ಸುಳಿಯಲಿ ನೀವು ಅಂದುಕೊಂಡ ಕಾರ್ಯಗಳು ಯಶಸ್ವಿಯಾಗಲಿ ಆ ಭಗವಂತ ಅಂತಸ್ತು,ಆರೋಗ್ಯ,ಆಯುಷ್ಯ ಕೊಟ್ಟು ಕಾಪಾಡಲಿ. ಬದಲಾಗುತ್ತಿರುವುದು ಕ್ಯಾಲೆಂಡರ್ ಮಾತ್ರ ಆದರೆ ನೆನಪುಗಳು ಎಂದೆಂದಿಗೂ ಶಾಶ್ವತ.ಕಷ್ಟ ಕಾರ್ಪಣ್ಯಗಳು ತೊಲಗಲಿ ಸುಖ ನೆಮ್ಮದಿ ಬರಲಿ ಈ ಹೊಸವರ್ಷ ಎಲ್ಲರ ಬಾಳಲ್ಲಿ ಹೊಸತನದಿಂದ ಕೂಡಿರಲಿ. ಇಷ್ಟು ವರ್ಷಗಳಲ್ಲಿ ಆಗದೇ ಇರುವ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಈ ವರ್ಷ ಭಗವಂತನ ಆಶೀರ್ವಾದದಿಂದ ಯಶಸ್ವಿಯಾಗಲಿ. 365 ದಿನಗಳ ಪುಸ್ತಕದಲ್ಲಿ ಇವತ್ತಿನ ದಿನ ಮೊದಲ ಪುಟ ಸಂತೋಷದಿಂದ ಕೂಡಿರಲಿ. ನೀವು ನಿಮ್ಮ ಕುಟುಂಬ ಸದಾ ಸುಖ ಶಾಂತಿಯಿಂದ ನೆಮ್ಮದಿಯಿಂದ ಬಾಳಿರಿ.
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಪ್ರೀತಿಯ ಶುಭಾಶಯಗಳು
ಲೇಖಕರು - ಶ್ರೀ ಮುತ್ತು ಯ.ವಡ್ಡರ , ಶಿಕ್ಷಕರು , ಬಾಗಲಕೋಟ , 9845568484

Instagram
Subscribe , Follow on