-->

Kannada Riddles part 9 , ಕನ್ನಡ ಜನಪದ ಒಗಟುಗಳು , Kannada Ogatugalu

Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles with a brief English translation. This post is to promote kannada riddles. you may also contribute by sharing your favorite riddles in the comments section.


ಒಗಟು  - ಅಟ್ಟದ ತುಂಬಾ ಹಗ್ಗ ಹಾಸೈತೆ , ಅದರ ಮೇಲೆ ಭೂತ ಕೂತವ್ನೆ / On the roof ,  rope is spread and over it is sitting a ghost | ಉತ್ತರ  - ಕುಂಬಳ ಕಾಯಿ / Pumpkin

ಒಗಟು  -  ಅಂಗಡಿಯಲ್ಲಿ ಮಾರುವುದಿಲ್ಲ , ತಕ್ಕಡಿಯಲ್ಲಿ ತೂಗುವುದಿಲ್ಲ , ಅದಿಲ್ಲದಿದ್ದರೆ ನಮ್ಮ ಮನೆಯಲ್ಲಿ ಹಬ್ಬ ಆಗುವುದೇ ಇಲ್ಲ / It is not sold at shop , it is not weighed , without that in our home festivals are not started. | ಉತ್ತರ  - ಸಗಣಿ / Cowdung 

ಒಗಟು  - ನೆತ್ತಿಯಲ್ಲಿ ಉಣ್ಣುವುದು, ಸುತ್ತಲೂ ಸುರಿಸುವುದು , ಎತ್ತಿದರೆ ಎರಡು ಹೋಳಾಗುವುದು / It eats on top and spreads all around , on lifting it breaks into two | ಉತ್ತರ  - ರಾಗಿಕಲ್ಲು / Raagi Stones

ಒಗಟು  - ಅಜ್ಜನ್ನ ಹೊಟ್ಟೆ ಹಿಡ್ಕೊಂಡು , ಮೊಮ್ಮಗ ನೇತಾಡ್ತಾ ಅವ್ನೆ  / Holding grandfather's stomach grandson is hanging down | ಉತ್ತರ  - ಗೇರುಬೀಜ  / Cashew Nut

ಒಗಟು  - ಬಿಳಿಯ ಪೊರೆ ಬಿಡುವ ನಾಗವಲ್ಲ ! ಗುಂಡಗಿರುವೆ ಗೋಲಿಯ ಗುಂಡಲ್ಲ! ದೇಹವು ಮಡಿಕೆಗಳಿಂದ ಕೂಡಿರುವುದು , ಕುಂಬಳ ಕಾಯಲ್ಲ / I am not a snake which leaves its white scurf , I am round but not a ball , Body is like a pot , but I am not pumpkin | ಉತ್ತರ  - ಬೆಳ್ಳುಳ್ಳಿ / Garlic 

ಒಗಟು -  ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಣ್ಣ , ಬಾವಿಗೆ ಹಾಕಣ್ಣ / Anganna , Manganna remove your shirt and dive inside the well | ಉತ್ತರ  - ಬಾಳೆ ಹಣ್ಣು / Banana

ಒಗಟು - ನಾರಾಯಣ ಕಟ್ಟಿಸಿದ , ನಾಲ್ಕು ಮೂಲೆ ಬಾವಿ , ನೀರಿಲ್ಲ, ಮೀನಿಲ್ಲ  / Narayana's 4 corner well which has no water nor fishes | ಉತ್ತರ  - ಬೆಲ್ಲದ ಅಚ್ಚು / Jaggery Cube

ಒಗಟು -  ಆಡಿ ಓಡಾಡೋ ಗಾಡಿಗೆ , ಆರಡಿ ನೆಲವಷ್ಟೇ ಸ್ವಂತ / For a playful wandering vehicle , only a 6 feet is its own | ಉತ್ತರ  - ದೇಹ , ಸ್ಮಶಾನ / Human Body and crematorium 

ಒಗಟು -  ಗೋಡೆ ಮೇಲೆ ಕರೀ ರೊಟ್ಟಿ  / A black roti on wall | ಉತ್ತರ  - ಬೆರಣಿ / Cow-pat

ಒಗಟು -  ಅಪ್ಪನ ದುಡ್ಡು ಎಣಿಸೊಕ್ಕಾಗಲ್ಲ ! ಅವ್ವನ ಸೀರೆ ಮಡ್ಸೊಕಾಗಲ್ಲ !   / Father's money cannot be counted , Mother's saree cannot be folded | ಉತ್ತರ  - ನಕ್ಷತ್ರ - ಆಕಾಶ

ಒಗಟು - ಆಕಡೆ ಈಕಡೆ ಬೆಟ್ಟ , ಮಧ್ಯದಲ್ಲಿ ಹುಲಿ ಕೂಗುತ್ತೆ / There are hills on either sides , in the middle the tiger roars | ಉತ್ತರ  - ಹೂಸು / Fart

ಒಗಟು -  ತಲೆ ಮೇಲೆ ಹರಳು , ಬಾಯಲ್ಲಿ ಬೆರಳು / On top it has a pearl , inside mouth it has a finger | ಉತ್ತರ  -  ಉಂಗುರ / Ring

ಒಗಟು -  ಊರಿಗೆಲ್ಲ ಒಂದೇ ಕಂಬ್ಳಿ /  Single blanket for the whole village | ಉತ್ತರ  -  ಆಕಾಶ / Sky

ಒಗಟು - ಮಳೆ ಹುಯ್ಲಿ , ಹುಯ್ದೆ ಇರ್ಲಿ ಬಾಯಲ್ಲಾ ಕೆಂಪು , ಮೈಯೆಲ್ಲಾ ಹಸಿರು / Whether it rains or doesn't rain , mouth is full of red and body is full of green | ಉತ್ತರ  -  ಗಿಳಿ / Parrot

ಒಗಟು - ಬಿಳಿ ಹುಡುಗನಿಗೆ ಕರಿಟೋಪಿ / A black hat for a white boy | ಉತ್ತರ  -  ಬೆಂಕಿ ಕಡ್ಡಿ / Match box stick

ಒಗಟು - ಚಿಕ್ಕವನು ಒಬ್ಬನಿಗೆ ಬಡಿಸುವಷ್ಟರಲ್ಲಿ ದೊಡ್ಡವನು ಹನ್ನೆರಡು ಮಂದಿಗೆ ಬಡಿಸಿರ್ತಾನೆ / Before the small brother serves one , the big brother serves twelve | ಉತ್ತರ  - ಗಡಿಯಾರ / Clock

ಒಗಟು -  ಮಣ್ಣಿನಲ್ಲಿ ಹುಟ್ಟಿ , ಮಣ್ಣಿನಲ್ಲಿ ಬೆಳೆದು , ಮಣ್ಣಿನಲ್ಲಿ ಸಾಯುವುದು / Its born in mud , Its grown in Mud , It dies in Mud | ಉತ್ತರ  - ಮಡಿಕೆ / Mud pot

ಒಗಟು -  ನೀರಿನಲ್ಲಿ ಹಾಕಿದರೆ ಮುಳುಗುವುದಿಲ್ಲ ! ಬೆಂಕಿಯಲ್ಲಿ ಸುಡುವುದಿಲ್ಲ , ಕಲ್ಲಲ್ಲ ! ಇದು ಇಲ್ಲದವರಿಲ್ಲ / It does not drown in water, it does not get burnt in fire , Its not a stone , There is no one without it  | ಉತ್ತರ  - ನೆರಳು / Shadow

ಒಗಟು  - ಅರಳುತ್ತೆ , ಹೂವಲ್ಲ ! ಬಿಸಿಲಿಗೆ ಬಾಡುವುದಿಲ್ಲ / It blossoms but not a flower , it never gets faded from sunrays | ಉತ್ತರ  - ಛತ್ರಿ / Umbrella

Kannada riddles Janapada ogatugalu


ಒಗಟು  - ಅವ್ವ ಮುಳ್ಳಿ , ಮಗಳು ಕೆಂಪ್ಗೆ ಚಂದಾಗವಳೆ / Mother is thorny , Daughter is red and beautiful | ಉತ್ತರ  - ಹಲಸು / Jackfruit

ಒಗಟು  -  ಚಂದ್ರನಂತೆ ಗುಂಡಾಗಿ ಎಲೆಗಿಂತಲೂ ತೆಳುವಾಗಿ, ತಿಂದರೆ ಬಲು ರುಚಿ /  Round like a moon , thin like a leaf , very tasty to eat. ಉತ್ತರ  - ಹಪ್ಪಳ / Pappad

ಒಗಟು  - ಕಪ್ಪುಂಟು ಕಸ್ತೂರಿಯಲ್ಲ , ಬಿಳ್ಪುಂಟು ಸುಣ್ಣವಲ್ಲ , ನೀರುಂಟು ಬಾವಿಯಲ್ಲ , ರೆಕ್ಕೆಯುಂಟು ಪಕ್ಷಿಯಲ್ಲ. / It has Black , but it is not musk , It has white but its not Lime , It has water but it is not a well , It has feathers but it is not a bird | ಉತ್ತರ  - ಕಣ್ಣು / Eyes

ಒಗಟು  -  ಕತ್ತಲೆ ಮನೆಯಲ್ಲಿ ಕಂಬ ಬಿದ್ದರೆ , ನಿಮ್ಮಪ್ಪನೂ ಎತ್ತಲಾರ , ನಮ್ಮಪ್ಪನೂ ಎತ್ತಲಾರ / In a dark house if a pillar falls your father also cannot lift , my father also cannot lift it | ಉತ್ತರ  - ಸೂಜಿ / Needle

ಒಗಟು  -  ಒಂದು ಸುಣ್ಣದ ಗೋಡೆಗೆ , ಒಂದೂ ಬಾಗಿಲಿಲ್ಲ  / For one white wall , there are no doors | ಉತ್ತರ  - ಕೋಳಿ ಮೊಟ್ಟೆ / Egg 

ಒಗಟು  - ಅಪ್ಪಾಂದ್ರೆ ಹೊಡಿತದೆ , ಅವ್ವಾಂದ್ರೆ ಹೊಡಿದಿಲ್ಲ - In kannada if u say Appa it claps , if u say Amma it doesnt clap. Its reverse in English if u say Father and Mother | ಉತ್ತರ  - ತುಟಿಗಳು / Lips

ಒಗಟು - ಒಂದು ಕಂಬ , ಅದಕ್ಕೆ ನಾಲ್ಕು ಕಿವಿಗಳು , ಅದರ ಮೆಲೊಂದು ಗುಂಡು / One pillar , it has 4 ears and over it one ball | ಉತ್ತರ  - ಲವಂಗ / Clove

ಒಗಟು -  ಕುತ್ತಿಗೆಗೆ ಹಾಕಿದರೆ ಬರುತ್ತೆ , ಇಲ್ಲದಿದ್ದರೆ ಇಲ್ಲ / If you pull on its neck , it comes , else it does'nt | ಉತ್ತರ  - ಬಿಂದಿಗೆ / Water-pot

ಒಗಟು -  ತಂದವರೊಬ್ಬರು ! ಹಿಡಿದವರೊಬ್ಬರು ! ಹೊತ್ತವರೊಬ್ಬರು  / Brought by someone , Caught by someone , Taken by someone | ಉತ್ತರ  - ಬಳೆ / Bangles

ಒಗಟು - ಊರಿಗೆಲ್ಲಾ ಒಂದೇ ಕಂಬ್ಳಿ /  One blanket for the whole village | ಉತ್ತರ  - ಆಕಾಶ

ಒಗಟು - ಹಗಲು ನಿದ್ರಿಸುವೆನು , ರಾತ್ರಿ ಕಣ್ಣು ತೆರೆಯುವೆನು , ಯಾರು ನಾನು ? / I sleep in morning and wake up by night , who am I ? | ಉತ್ತರ  - ರಸ್ತೆ ದೀಪ / Street light

ಒಗಟು - ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ ! ಬೆನ್ನು ತೋಳುಂಟು ಮನುಷ್ಯನಲ್ಲ  / It has 4 legs , but its not a animal . It has chest and Back , but its not human | ಉತ್ತರ  - ಕುರ್ಚಿ / Chair

ಒಗಟು -  ನೀರಲ್ಲೆ ಹುಟ್ಟುತ್ತೆ ! ನೀರಲ್ಲೆ ಬೆಳೆಯುತ್ತೆ ! ನೀರು ಕಂಡ ಕೂಡಲೆ ಕರಗಿ ಹೋಗುತ್ತೆ ! / It was born in water , brought up in water , but when sees water disappears !! | ಉತ್ತರ  -   ಉಪ್ಪು / Salt

ಒಗಟು -  ಒಂದೇ ಕುಪ್ಪಿಲಿ , ಎರಡು ತರಾ ತುಪ್ಪ ! / In the same vial , there are two types of ghee | ಉತ್ತರ  -  ಮೊಟ್ಟೆ / Egg

ಒಗಟು - ಆರು ಗೆರೆವುಂಟು , ಈರೆಕಾಯಲ್ಲ ! ಹುಳಿವುಂಟು , ಹುಣಸೆ ಅಲ್ಲ ! ಹಳದಿವುಂಟು , ನಿಂಬೆ ಹಣ್ಣಲ್ಲ ! / It has 6 lines , but its not ridge gourd ! It is sour but its not tamarind ! It is little yellowish , but its not lemon | ಉತ್ತರ  - ನೆಲ್ಲಿಕಾಯಿ / Amla (Gooseberry)

ಒಗಟು - ಕಾಲುಂಟು ಕೈಯಿಲ್ಲ ! ನಡುವುಂಟು ತಲೆಯಿಲ್ಲ ! ರಂಧ್ರಗಳ್ಳುಂಟು / It has legs , but no hands , it has waist but no head , it has many holes | ಉತ್ತರ  - ಪ್ಯಾಂಟು / Pant  

ಒಗಟು -  ನಾಲಿಗೆಯುಂಟು , ಮಾತಾಡುವುದಿಲ್ಲ ! ಮುಳ್ಳುಂಟು , ಪೊದೆಯಲ್ಲ ! / It has tongue but does not speak , It has a thorn but no bushes | ಉತ್ತರ  - ಪೆನ್ನು / Pen

ಒಗಟು - ಒಳ್ಳೆ ಕೋಳಿ ಮುಳ್ಳಲಿ ಮೊಟ್ಟೆ ಇಕ್ಕದೆ / Good Hen, has layed eggs in torns | ಉತ್ತರ  -  ನಿಂಬೆಹಣ್ಣು / Lemon

ಒಗಟು -  ಹೊಕ್ಕುವಾಗ ಒಂದು ಹೊರಟಾಗ ನೂರು / While taking its one , while sending its many | ಉತ್ತರ  -  ಶ್ಯಾವಿಗೆ / Noodles

ಒಗಟು - ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ !  /  If kept within palms it fills the palm , if left fills the whole room | ಉತ್ತರ  - ದೀಪ / Lamp light

ಒಗಟು - ಬಿಳಿ ಲಂಗದ ಹುಡುಗಿ ! ಎಳೆದರೆ ಬರ್ತಾಳೆ ! ಬಿಟ್ಟರೆ ಓಡ್ತಾಳೆ  / While skirt Girl ! If pulled comes in ! If pushed rushes out | ಉತ್ತರ  - ಸಿಗರೇಟ್ ಹೊಗೆ / Cigarette smoke

ಒಗಟು - ಗರಿಕೆ ಆಸೆ ದೇವರು ! ವರ್ಶಕ್ಕೊಮ್ಮೆ ಬರ್ತಾನೆ /  Grass loving god who comes once in a year | ಉತ್ತರ  - ಗಣಪತಿ / Ganapathi

Kannada Riddles part 8 , ಕನ್ನಡ ಜನಪದ ಒಗಟುಗಳು , Kannada Ogatugalu

Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles with a brief English translation. This post is to promote kannada riddles. you may also contribute by sharing your favorite riddles in the comments section.


ಒಗಟು  - ಕರಿ ಮಂಚದ ಮೇಲೆ , ಹಾಕುವ ಹಾಸಿಗೆ , ತೆಗೆಯುವ ಹಾಸಿಗೆ / On a black bed , a mattress is put and removed | ಉತ್ತರ  - ಕಾವಲಿ ದೋಸೆ / Dosa

ಒಗಟು  - ಅಪ್ಪ ಅಪ್ಪ ಮರ ನೋಡು , ಮರದೊಳಗೆ ಎಲೆ ನೋಡು , ಎಳೆಯೊಳಗೆ ತೂತು ನೋಡು , ತೂತೊಳಗೆ ಮಾತು ನೋಡು /  See the tree , leaves inside the tree , holes inside the leaves , words inside the holes | ಉತ್ತರ  - ಪುಸ್ತಕ   / Book

ಒಗಟು  - ತೂತಿಲ್ಲದ ಒಡವೆ / Ornament without hole | ಉತ್ತರ  - ಕುಂಕುಮ   / Vermeil 

ಒಗಟು  -  ನಿಂಗಕ್ಕ ನೀರಕ್ಕ , ಹಾಕುವವರುಂಟು ತೆಗೆಯುವವರಿಲ್ಲ , ಅದೇನಕ್ಕ ? / Ningakka , Neerakka , they are there to put nut none to remove , what is it ? | ಉತ್ತರ  -  ಹಚ್ಚೆ / Tattoo

ಒಗಟು  - ಬಂಡೆಯ ಮೇಲೆ ಮಲಗುತ್ತೆ , ತಂತಿ ಮೇಲೆ ಕುಣಿಯತ್ತೆ  / It sleeps on rock and dances on wire | ಉತ್ತರ  - ಒಣಗಲು ಹಾಕಿದ ಬಟ್ಟೆ / Wet clothes

ಒಗಟು  - ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ / On a green plant , curd is thrown | ಉತ್ತರ  - ಮಲ್ಲಿಗೆ / Jasmine

ಒಗಟು  -  ಬಿಳೀ ಕಲ್ಮೇಲೆ ಕರಿಕಲ್ಲು , ಕರೀ ಕಲ್ಮೇಲೆ ರಂಗೋಲೆ / Over a white stone is a black stone and over that black stone is a drawing | ಉತ್ತರ  - ಕಣ್ಣು / Eyes

ಒಗಟು  - ಗಿರಿರಾಜನ ಮಗಳ ಗಂಡನ ಹಿರಿ ಮಗನ ತಮ್ಮನ ವಾಹನದ ವೈರಿ  / GiriRaaja's daughter's husband's elder son's brother's vehicle's enemy | ಉತ್ತರ  - ನಾಯಿ / Dog

ಒಗಟು  - ಅಪ್ಪನ ದುಡ್ಡು ಎಣಿಸೊಕಾಗಲ್ಲ , ಅವ್ವನ ಸೀರೆ ಮಡಿಸೊಕ್ಕಾಗಲ್ಲ / Father's money cannot be counted , Mother's saree cannot be folded | ಉತ್ತರ  -  ನಕ್ಷತ್ರ ಆಕಾಶ / Stars & Sky

ಒಗಟು  - ಹತ್ತು ತಲೆಯುಂಟು ರಾವಣನಲ್ಲ , ಬಾಲವುಂಟು ಹನುಮಂತನಲ್ಲ , ಕಿರೀಟವುಂಟು ರಾಜನಲ್ಲ , ನಾನು ಯಾರು ? / I have 10 heads but I am not Raavana , I have a tail but not Hanuman , I have a crown but i am not a King , Who am I ! | ಉತ್ತರ  - ಹೀರೇಕಾಯಿ / Ridge Gourd

ಒಗಟು  - ಮೂವತ್ತೆರಡು ಜನ ಅಗಿತ್ತಾರೆ , ಒಬ್ಬ ರುಚಿ ನೋಡ್ತಾನೆ  / Thirty two people chew it , while one person tastes it | ಉತ್ತರ  - ಹಲ್ಲು ನಾಲಿಗೆ / Teeth and Tongue

ಒಗಟು  - ಮರದೊಳಗೆ ಮರ ಹುಟ್ಟಿ , ಭೂ ಚಕ್ರದ ಹಣ್ಣಾಗಿ , ತಿನ್ನಬಾರದ ಹಣ್ಣು ಬಲು ಚಂದ / A tree growing inside a tree in the form of a wheel has a beautiful fruit which cannot be eaten | ಉತ್ತರ  - ಎಳೇ ಕೂಸು / New born Child

ಒಗಟು  -  ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ / This black man climbs a tree which no one may climb + ಉತ್ತರ  - ಇರುವೆ  / Ant

Kannada riddles Janapada ogatugalu


ಒಗಟು  - ನೋಡಿದರೆ ಮಲ್ಲಿಗೆ ಹೂ , ಕೈಲಿ ತಕ್ಕಂಡು ಮುಟ್ಟೋಕ್ಕೆ  ಆಗೋದಿಲ್ಲ / Looks like Jasmine flower , but cannot touch and hold it in hand | ಉತ್ತರ  - ಚುಕ್ಕಿ / Star

ಒಗಟು  -  ನಾಲ್ಕು ಕಾಲುಂಟ್ಟು ಮೃಗವಲ್ಲ , ಹಾರೋದುಂಟು ಪಕ್ಷಿಯಲ್ಲ, ನಾನು ಕೂಸುಗಳನ್ನು ಪ್ರೀತಿಸುವ ಹಾಗೆ ಬೇರೆ ಯಾರು ಇಲ್ಲ ! / I have 4 legs but not an animal , I fly but I am not a bird , no one loves babies like me  | ಉತ್ತರ  - ತೊಟ್ಟಿಲು / Cradle

ಒಗಟು  -  ಬೆನ್ನಿನಿಂದ ತಿನ್ನುವುದು , ಬಾಯಿಂದ ಉಗುಳುವುದು , ಎದುರಾದವರನ್ನು ಕೊಲ್ಲುವುದು, ಹಾಗಾದರೆ ನಾನು ಯಾರು  / I eat from back , spit from mouth , kill who is in front of me , who am I | ಉತ್ತರ  - ಬಂದೂಕ / Gun

ಒಗಟು  -  ಕೆಂಪು ಹೆಣ್ಣಿನ ತುಟಿ ಕರೀಗಿದೆ  / A red woman's lips are black | ಉತ್ತರ  - ಗುಲಗಂಜಿ / Indian Licorice

ಒಗಟು  -  ಕಿರಿ ಮನೆಗೆ ಚಿನ್ನದ ಬೀಗ / A golden lock for a small home | ಉತ್ತರ  -   ಮೂಗುತಿ / Nose stud

ಒಗಟು  -  ಎಷ್ಟೇ ಮಳೆ ಬಂದರೂ ನೆನೆಯುವುದಿಲ್ಲ / It does not soak even with heavy rains | ಉತ್ತರ  -  ಎಮ್ಮೆ ಕೆಚ್ಚಲು  / Buffalo Udder

ಒಗಟು  -  ಊರಿನಲ್ಲಿ ಕುರಿ ಕೂಗಿದರೆ ಮೈಯೆಲ್ಲಾ ತೂತು / When sheep screams , this has holes all around its body | ಉತ್ತರ  -  ಒಂದರಿ / Sieve

ಒಗಟು  - ಆರು ಕಾಲು ಅಪ್ಪಣ್ಣ ಕೆರೆ ಬೋರಣ್ಣ ಕೂತುತಾವು ಮೀಸೆ ತಿರುವಣ್ಣ / Six legs Appanna , Sitting at lake Boranna twists its mustache | ಉತ್ತರ  - ಜಿರಲೆ / Cockroach 

ಒಗಟು  - ಬೇಲಿ ನುಗ್ಗೋ ನಾಯಿಗೆ ತಿಕದಲ್ಲಿ ಜನಿವಾರ / A thread is attached to bush entering dog's bums  | ಉತ್ತರ  - ಸೂಜಿ / Thread needle

ಒಗಟು  -  ನೀರುಂಟ್ಟು ಬಾವಿಯಲ್ಲ , ಜುಟ್ಟುಂಟು ಪೂಜಾರಿಯಲ್ಲ , ಮೂರು ಕಣ್ಣುಂಟು ಶಿವನಲ್ಲ / It has water but not a well, it has a crest but its not a priest , it has 3 eyes but it is not lord shiva | ಉತ್ತರ  -  ತೆಂಗಿನಕಾಯಿ / Coconut

ಒಗಟು  -  ಅಕ್ಕಣ್ಣನಿಗೆ ಆರು ಕಣ್ಣು , ಮುಕ್ಕಣ್ಣಂಗೆ ಮೂರು ಕಣ್ಣು , ಲಿಂಗಪ್ಪನಿಗೆ ಒಂದೇ ಕಣ್ಣು / akkanna has 6 eyes , Mukkanna has 3 eyes , Lingappa has only 1 eye. | ಉತ್ತರ  -  ಕೊಳಲು , ತೆಂಗಿನಕಾಯಿ , ಸೂಜಿ / Flute , Coconut , Thread Needle

ಒಗಟು  - ಒಬ್ಬಣ್ಣ ಇಳಿತಾನೆ ಒಬ್ಬಣ್ಣ ಹತ್ತುತ್ತಾನೆ  / One brother comes down while other goes up | ಉತ್ತರ  -  ರೊಟ್ಟಿ / Roti

ಒಗಟು  - ಅಂಕು ಡೊಂಕಿನ ಮರ, ಕಚ್ಚಿದವರ ಬಾಯಿಗೆ , ಉಚ್ಚಿ ಹುಯ್ಯುವ ಮರ / Curvy tree , if you bite it , it spills its urine !! | ಉತ್ತರ  - ಕಬ್ಬು / Sugarcane

ಒಗಟು  - ಅವ್ವ ನೋಡುದ್ರೆ ಕುಳ್ಳಿ , ಮಗಳ ನೋಡುದ್ರೆ ಮಾರುದ್ದ ಅವ್ಳೆ / Mother looks short , but daughter is very long | ಉತ್ತರ  - ಸೂಜಿ ದಾರ / Needle and Thread

ಒಗಟು  - ಕಪ್ಪೆ ಮುಟ್ಟದ ಕೈಲಾಸದ ನೀರು / Heaven's water which a frog cannot touch | ಉತ್ತರ  - ಎಳೆ ನೀರು  / Coconut water , Tender coconut

ಒಗಟು  - ಒಂದು ಹಸ್ತಕ್ಕೆ ನೂರೆಂಟು ಬೆರಳು / One hand has hundreds of fingers | ಉತ್ತರ  - ಬಾಳೆ ಗೊನೆ / Banana fruit branch

ಒಗಟು  - ಹರಯದಲ್ಲಿ ಹಸಿರು , ದುರದಲ್ಲಿ ಕೆಂಪು , ಮುಪ್ಪಿನಲ್ಲಿ ಕಪ್ಪು  /  It is green during teen , red during maturity and Black during old age | ಉತ್ತರ  - ನೆರಳೆ ಹಣ್ಣು / Jamun fruit

ಒಗಟು  - ಅಕ್ಕನ ಕೈಗೆ ಇಕ್ಕೊರುಂಟು , ಅಳಿಸೋರಿಲ್ಲ /  There are to put on sister's hand , but none to remove it | ಉತ್ತರ  - ಹಚ್ಚೆ / Tattoo

Kannada Riddles part 7 , ಕನ್ನಡ ಜನಪದ ಒಗಟುಗಳು , Kannada Ogatugalu

Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles . This post is to promote kannada riddles. you may also contribute by sharing your favorite riddles in the comments section.

* ನಮ್ಮಮ್ಮನ ಗಂಡ , ನಿಮ್ಮಮ್ಮನ ಮಿಂಡ , ನಮ್ಮಲ್ಲಿ ಉಂಡ , ನಿಮ್ಮಲ್ಲಿ ಒರಗಿದ
ಉತ್ತರ / Answer
* ನಿನ್ನ ತಲೆ ಮೇಲೆ ತಾಮರದ ಕೊಡ , ನಿನ್ನ ನಡ ಹಿಡಕೊಂಡು ನಾ ಆಡ
ಉತ್ತರ / Answer
* ನಮ್ಮ ಹತ್ತಿರಾನೆ ಇದೆ , ನಮಗೆ ಹೊಡೆಯತ್ತೆ
ಉತ್ತರ / Answer
* ನಿನ್ನ ಕತ್ತಿಗೆ ನನ್ನ ಕಾಲು , ನಿನ್ನ ಬಾಯಿಗೆ ನನ್ನ ಕೋಲು
ಉತ್ತರ / Answer
Kannada riddles Janapada ogatugalu
* ನಿಮ್ಮ ಸಮದವರು ಬಂದು ಕೈ ಹಿಡಕೊಂಡ್ರೆ ಏನಂತ ಬಿಡಿಸಿ ಕೊಳ್ತೀರಿ
ಉತ್ತರ / Answer
* ನಾನು ದುಂಡಾಗಿರುವೆ , ಕೈ ಕಾಲುಗಳಿಲ್ಲ , ಬಾಯಿ ಮಾತ್ರ ಇದೆ , ಸುಟ್ಟರೆ ಸಾಯಲಾರೆ , ಬಡಿದರೆ ಬದುಕಲಾರೆ , ನಾನು ಯಾರು
ಉತ್ತರ / Answer
* ನಿಮ್ಮ ಕೊಟ್ಟಾರಕ್ಕೆ ಬಂದು ನನ್ನ ಕಠಾರಿ ಮುರಿದು ಹೋಯಿತು , ಎಷ್ಟು ಬೆಸಕೆ ಹಾಕಿದರೂ ಸೇರೋಲ್ಲ
ಉತ್ತರ / Answer
* ನಾರಾಯಣ ಕಟ್ಟಿದ ಕೊಳ , ನಾಲ್ಕು ಮೂಲೆ ಚೌಕ , ನುಗ್ಗಬಹುದು ಬರೋಕ್ಕಾಗಲ್ಲ
ಉತ್ತರ / Answer
* ನೀವು ಕೇಳಿದೆಲ್ಲ ಕೊಡುತ್ತೇನೆ , ನಿಮ್ಮ ಕೆಳಗಿರೋದ್ನ ಕೊಡ್ರಿ ಮತ್ತೆ
ಉತ್ತರ / Answer
* ನಾಲ್ಕು ವಸ್ತು , ನಾಲ್ಕು ಬಣ್ಣ , ಪಿಂಜರೆ ಸೇರಿದರೆ ಒಂದೇ ಬಣ್ಣ
ಉತ್ತರ / Answer

Kannada Riddles part 6 , ಕನ್ನಡ ಜನಪದ ಒಗಟುಗಳು , Kannada Ogatugalu

Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles . This post is to promote kannada riddles. you may also contribute by sharing your favorite riddles in the comments section.

* ತಲೆ ಮೇಲೆ ಹರಳು , ಬಾಯಲ್ಲಿ ಬೆರಳು
ಉತ್ತರ / Answer
* ದಬ್ಬೆ ಹಂಗೆ ಕಾಯಿ , ಹಿಂದಗಡೆ ತೊಟ್ಟು , ಮುಂಡಗಡೆ ಮೂರು ನಾರು , ಎಡೆದ್ರ ಒಂದಂಗುಲ ದಪ್ಪಕಾಳು
ಉತ್ತರ / Answer
* ತಲೆಯಲ್ಲಾಡಿಸಿ , ತನುವನ್ನೇ ತೂಗಿಸಿ , ಕುಣಿಸುವುದೇನದು ಹೃದಯನವನ್ನ
ಉತ್ತರ / Answer
* ದಾನಗುಂಬಳ , ಪಾನ ಗುಂಬಳ , ಊರಿಗೆಲ್ಲ ಒಂದೇ ಕುಂಬಳ
ಉತ್ತರ / Answer
Kannada riddles Janapada ogatugalu
* ತಿಕ್ಕಕೆ ತಲೆ , ಬಾಯಿಗೆ ಬೆರಳು , ಅಂಗಾಲಲ್ಲಿ ತಾಳ ಒಡೆಯುವ ಹೆಣ್ಣೆ ಅದು ಒಂದು ಅಂದದ ಗಿಡ
ಉತ್ತರ / Answer
* ದಾರಿಯಲ್ಲಿ ಮುದುಕಿ ತಲೆ ಕೆದರಿಕೊಂಡು ಕೂತವಳೇ
ಉತ್ತರ / Answer
* ತುಂಬಿದ ಹಾಂಗಾಯಿತು , ತೂಗದ ಹಾಂಗಾಯಿತು
ಉತ್ತರ / Answer
* ದೇವ್ನ ಕೇರೀಲಿ ಮಗ್ಗರಾಟ್ಟಕ್ಕೆ ಹಾಕೋದು ಹಗ್ಗ ಮುಗುಲಿಗೆ ಹಾಕ್ಕೊಂಡು ನರಕ
ಉತ್ತರ / Answer
* ತೂತು ಮಡಿಕೆಗೆ ದೊಣ್ಣೆ ಸಿಗಾಗಕ್ಕೊಂದು , ಊರ ಗೌಡನ ಮನೆಗೆ ನ್ಯಾಯಕ್ಕೆ ಹೋಗ್ತಾನೆ
ಉತ್ತರ / Answer
* ನನ್ನ ಬಣ್ಣ ಕಪ್ಪು , ನಾನಿದಲ್ಲಿ ನಮಪ್ಪ ಮಳೆರಾಯ , ಅವನು ಬಂದರೆ ನನ್ನ ತಲೆ ದಪ್ಪ , ನನ್ನ ಎತ್ತಿಕೊಂಡು ಹೊರಟವ ತಲೆ ಸಣ್ಣ
ಉತ್ತರ / Answer

Kannada Riddles part 5 , ಕನ್ನಡ ಜನಪದ ಒಗಟುಗಳು , Kannada Ogatugalu

Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles . This post is to promote kannada riddles. you may also contribute by sharing your favorite riddles in the comments section.

* ಚೋಟ್ಟುದ್ದ ರಾಜ ಮೋಟುದ್ದ ಟೋಪಿ ಜಟ್ ಪಟ್ ಅಂತ ಓಡಾಡಿದರೆ , ಒಂದು ನಿಮಿಷದಲ್ಲಿ ಬೂದಿ
ಉತ್ತರ / Answer
* ತೊಲೆಗಂಬಗಳ ಅಗತ್ಯವಿಲ್ಲ , ಕಣ್ಣು ಮಣ್ಣು ಹಾಕಿಲ್ಲ , ಕೆಳಗೆ ಬಾಗಿಲಿರುವ , ತೂಗು ಮಂಚದಂತಿರುವ ನನ್ನರ , ಮನೆ ಯಾವುದು
ಉತ್ತರ / Answer
* ಚೊಟ್ಟುದ್ದ ಮನುಷ್ಯನಿಗೆ ಮಾರುದ್ದ ಗಡ್ಡ
ಉತ್ತರ / Answer
* ತೊಳ ಕೊಂಡ , ಬೆಳಕೊಂಡ , ಒಳಕ್ಕೆಳೆದು ಕೊಂಡ , ಬಾಗಿಲು ಇಕ್ಕಿ ಕೊಂಡ , ತನ್ನ ಕೆಲಸ ತಾ ಮಾಡಿಕೊಂಡ
ಉತ್ತರ / Answer
Kannada riddles Janapada ogatugalu
* ಜನರಿಲ್ಲದ ನಾಡು , ಮರವಿಲ್ಲದ ಕಾಡು , ನೀರಿಲ್ಲದ ತೋಡು , ಮೀನಿರದ ಕಡಲು
ಉತ್ತರ / Answer
* ತೌಂಟಿಗೆಯವರಪ್ಪ ಹಾರೋದ
ಉತ್ತರ / Answer
* ಜಾಡ್ಸ್ ಕಂಬ್ಳಿ , ಜಡಾಸ್ ಕಂಬ್ಳಿ , ದೇಶಕೆಲ್ಲ ಒಂದೇ ಕಂಬ್ಳಿ
ಉತ್ತರ / Answer
* ದಡ ಮಂಡೆಗೆ ಅಡೀಲಿ ತೂತು
ಉತ್ತರ / Answer
* ತಲೆ ಇಲ್ಲದ ಅಜ್ಜ , ಊರಿಂದ ಊರಿಗೆ ಪ್ರಯಾಣ ಮಾಡು ತ್ತಾನೆ
ಉತ್ತರ / Answer
* ದನಕರು ಕಟ್ಟಲಿಲ್ಲ , ಬರೋದು ಉಣ್ಣಲಿಲ್ಲ , ಹಾಸಿಗೆ ಹಾಸಲಿಲ್ಲ , ನೆಲದ ಮೇಲೆ ಮಲಗಲಿಲ್ಲ
ಉತ್ತರ / Answer
Terms | Privacy | 2024 🇮🇳
–>