-->

SMS Jokes , funny text shares , Humour , Witty quotes , Greetings - Part 74

ಗಂಡ :ಪಕ್ಕದ ಮನೆಯಲ್ಲಿ ಹೊಸದಾಗಿ ಬಂದವರು ಕಾಂಗ್ರೆಸ್ ಅಲ್ಲ, ಆಮ್ ಆದ್ಮಿ 

ಹೆಂಡತಿ :ಅದು ಹೇಗೆ ನಿಮ್ಗೆ ಗೊತ್ತಾಯ್ತು? 

ಗಂಡ :ನಾನು ಕೈ ✋ಎತ್ತಿ ತೋರಿಸಿದಾಗ ಅವಳು ಪೊರಕೆ ಎತ್ತಿ ತೋರಿಸಿದಳು
Jokes , Fun , Haasya , Humor , Quotes , Greetings - Part 74

*********

ಗುಂಡ: ನಮ್ಮ P.W.D ಆಫೀಸ್ ಕ್ಲರ್ಕ್ ಸುಳ್ಳು ಲೆಕ್ಕ ಬರೆದು ಸಿಕ್ಕಾಕ್ಕೊಂಡು ಬಿಟ್ಟ.. 
ಗುಂಡನ ಗೆಳೆಯ: ಅದು ಹೇಗೆ...? 
ಗುಂಡ: ಆ ಕ್ಲರ್ಕ್ ರೋಡ್ ರೋಲರ್ ಪಂಚರ್ ಆಗಿದೆ ಅಂತ ಬರೆದಿದ್ದ....!!!!

***************

ಆಟೋ ಡ್ರೈವರ್ : ಸಾರಿ ಸಾರ್...... ಮೀಟರ್ ಹಾಕೋದು ಮರೆತೇ ಬಿಟ್ಟೆ...... 
ಗುಂಡ : ಪರವಾಗಿಲ್ಲ ಬಿಡಿ.... ನಾನೂ ಕೂಡ ಪರ್ಸ್ ತರೋದು ಮರೆತೇಬಿಟ್ಟೆ !!!
***************

ಟೀಚರ್ : ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ? 
ಸ್ಟೂಡೆಂಟ್ : ಯಾಕಾಗಲ್ಲ ಟೀಚರ್ ? ಚಿಕ್ಕವಯಸ್ಸಿನಲ್ಲಿ ಬಗ್ಗದ ನಮ್ಮ ಅಜ್ಜ ಈಗ ತುಂಬಾ ಬಗ್ಗಿದ್ದಾರೆ !!!

******************************

ಮೊಮ್ಮಗ : ಅಜ್ಜ, ನಿಮ್ಮ ಪೆನ್ಷನ್ನಿಂದ ನಂಗೆ 500 ರೂ. ಸಾಲ ಕೊಡಿ ಅಜ್ಜಾ...... 
ಅಜ್ಜ : ಯಾವಾಗ ವಾಪಸ್ ಕೊಡುತ್ತೀ ? 
ಮೊಮ್ಮಗ : ನಂಗೆ ಪೆನ್ಷನ್ ಬರುವಾಗ !
***************

ಗುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ? 
ಡಾಕ್ಟರ್ : ಮೂರ್ಖ.... ನಾನ್ಯಾರೂಂತ ಗೊತ್ತಿದೆಯಾ ನಿನಗೆ ? 
ಗುಂಡ : ಗೊತ್ತು ಡಾಕ್ಟ್ರೇ. ನೀವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಫೇಮಸ್ಸಲ್ವಾ ?
***************

ಮಗ : ಅಪ್ಪಾ ಇಲ್ಲಿ ಬಾ....
ಅಮ್ಮ : ಮಗೂ ಅಪ್ಪನನ್ನ ಹಾಗೆಲ್ಲಾ ಕರೆಯಬಾರದು. ಮರ್ಯಾದೆಯಿಂದ ಕರೆಯಬೇಕು ತಿಳೀತಾ ? 
ಮಗ : ಅಪ್ಪಾ..... ಮರ್ಯಾದೆಯಿಂದ ಇಲ್ಲಿ ಬಾ !!!
***************

ಇರುವೆಗೆ ಹಾಕೋ ಪೌಡರ್
ಸೇಲ್ಸ್ ಮ್ಯಾನ್ : ಸರ್ ಇದು ಇರುವೆಗೆ ಹಾಕೋ ಪೌಡರ್ ದಯವಿಟ್ಟು ತಗೋಳಿ 
ಸರ್ದಾರ್ : ಬೇಡಪ್ಪ ಇವತ್ತು ಪೌಡರ್ ಹಾಕಿದ್ರೆ ನಾಳೆಯಿಂದ ಲಿಪ್ ಸ್ಟಿಕ್ ಕೇಳ್ತವೆ
***************

ಸರ್ದಾರ್ ; ನಾನು ಒಳಗೆ ಬರಬಹುದ ಸರ್
ಆಫೀಸರ್ ; wait ಪ್ಲೀಸ್
ಸರ್ದಾರ್ ; 75 kg ಸರ್

***************

ಕೆಂಪು ಗುಲಾಬಿ ಕೊಟ್ಟು ಅವನು ಹೇಳಿದ "ನಾ ನಿನ್ನ ಪ್ರಿಯತಮ" 
ಅದಕ್ಕೆ ಅವಳು ಕೆಂಪು ರಾಖಿ ಕಟ್ಟಿ ಹೇಳಿದಳು "ನೀ ನನ್ನ ಪ್ರಿಯ ತಮ್ಮ"
***************

ಕಾಫಿ ಬಾರ್ ಮತ್ತು ವೈನ್ ಬಾರ್ಗೂ ಏನ್ ವ್ಯತ್ಯಾಸ ?
ಎಲ್ಲಾ ಪ್ರೀತಿಗಳು ಕಾಫಿ ಬಾರ್ನಲ್ಲಿ ಪ್ರಾರಂಭವಾಗಿ ವೈನ್ ಬಾರ್ನಲ್ಲಿ ಮುಕ್ತಾಯವಾಗುತ್ತದೆ !!! 
***************

ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು:
ಕುಡುಕ: ಬಾಡಿಗೆ ಎಷ್ಟಾಯ್ತು ?
ಡ್ರೈವರ್: ಇಪ್ಪತ್ತು ರೂಪಾಯಿ
ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಡ್ರೈವರಿಗೆ ಕೊಟ್ಟ.
ಡ್ರೈವರ್: ಇದು ಹತ್ತು ರೂಪಾಯಿ
ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು ? ನೀನೂ ನನ್ನ ಜೊತೆಗೆ 
ಕೂತ್ಕುಂಡಿರಲಿಲ್ವ ? ನಿನ್ನಬಾಡಿಗೆ ನಾನು ಕೊಡ್ಲ ??? 
***************

 ಸಂತಾ ಮೊತ್ತಮೊದಲ ಬಾರಿಗೆ ಕಳ್ಳತನ ಮಾಡಲು ಹೋದ
ಕನ್ನ ಹಾಕಿ ಒಳ ನುಗ್ಗಿದ್ದೇ ಮನೆಯೊಡೆಯನಿಗೆ ಎಚ್ಚರವಾಯಿತು. 'ಯಾರು ?' ಎಂದು ಕೇಳಿದ
'ಮಿಯಾಂವ್' ಎಂದ ಸಂತಾ
'ಯಾರು ?' ಎಂದು ಇನ್ನೂ ಗಟ್ಟಿಯಾಗಿ ಕೇಳಿದ ಯಜಮಾನ.
'ಮಿಯಾಂವ್ ಮಿಯಾಂವ್' ಎಂದ ಸಂತಾ. !
'ಯಾರು..... ಹೇಳಿ ? ' ಎಂದ ಯಜಮಾನ ಇನ್ನೂ ಗಟ್ಟಿಸ್ವರದಲ್ಲಿ
'ಬೆಕ್ಕು.... ಬೆಕ್ಕು' ಎಂದ ಸಂತಾ ಮೆಲುದನಿಯಲ್ಲಿ !!
***************

ಸಂತಾ: ನಾನು ಒಂದು ಹುಡುಗಿಯನ್ನು ಲವ್ ಮಾಡ್ತಾ ಇದ್ದೇನೆ.
ನಾನು ಅವಳಿಗೆ I LOVE U ಅಂತ ಹೇಳಿದ್ರೆ, 
ಅವಳು ಹೇಳಿದಳು ...I LOVE U 2 ಅಂತ.
ಆದ್ರೆ ಇನ್ನೊಬ್ಬ ಯಾರು ಅಂತ ಗೊತ್ತಾಗ್ಲಿಲ್ಲ.....!!!!
***************

ನಾರದ ಹೇಳಿದ : ನಿಮ್ಮ ಪ್ರೇಯಸಿ ನಿಮಗೆ ರೋಮ್ಯಾಂಟಿಕ್ ಮೆಸೇಜ್ ಕಳಿಸಿದ್ರೆ ಖುಷಿಪಡಿ. 
ಆದರೆ,
.
.
ಒಮ್ಮೆ ಯೋಚಿಸಿ ಆ ಮೆಸೇಜ್‍ನ್ನು ನಿಮ್ಮ ಪ್ರೇಯಸಿಗೆ ಯಾರು ಕಳಿಸಿದ್ದು ಎಂದು ???
ನನ್ನ ಕೆಲಸ ಮುಗಿಯಿತು.... ನಾರಾಯಣ...... ನಾರಾಯಣ !!!
***************

ಸರದಾರ್ ಜೂಸ್ ಬಾಟಲನ್ನೆ ಬಹಳ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಇದ್ದದ್ದನ್ನು ಕಂಡು ಮತ್ತೊಬ್ಬ ಯಾಕೆಂದು ಕೇಳಿದ.ಅದಕ್ಕೆ ಸರ್ದಾರ್ ಹೇಳಿದ `ಅದರಮೇಲೆ CONCENTRATE ಅಂತ ಬರೆದಿದೆ?`
***************

ನ್ಯಾಯಾಧೀಶ: ಹೋಗೀ ಹೋಗೀ ದೇವಸ್ಥಾನಕ್ಕೇ ಕನ್ನ ಹಾಕಿದ್ಯಲ್ಲಯ್ಯಾ? 
ಕಳ್ಳ: ಅಂಗಲ್ಲ ಸಾಮೀ, ಯಾವ್ದಾದ್ರೂ ಕೆಲ್ಸ ಸುರು ಮಾಡೋವಾಗ ದೇವ್ರಿಂದಾ ತಾನೇ ಸುರುಅಚ್ಕೋಬೇಕೂ?

*********

Speaking Lips can Reduce
Many Problems..

Closed Lips can Avoid 
Some Problems..
      But,
Smiling Lips can Solve 
Almost All Problems..!!
So keep Smiling..! 

*********

Darkest time of day is a minute before Sunrise..
 
So when u feel u r at Darkest 
moment in life.. 
Remember that.. 
Sunrise is just a Minute Away!!

*********

!⚡! Outside an Electricity Board Office, One 🍌Banana vendor was selling Bananas.
  
EB officer: What's the price of Banana?

Vendor - Let me know where you will use it?

Manager - What do you mean?

Vendor- If you are taking it to temple then it's Rs 10 per kg.

For School children Rs 20 per kg
     
If you are taking home Rs 25 per kg 

And for Restaurant Rs 30 per kg.....

EB officer- How can this be? All bananas are same then why difference in price?
 
Vendor - This is my tariff plan. 
கொய்யாலே.....You people give electricity to home, shop, factory etc from the same pole. But you charge different tariffs with slab..😳
   
Banana vendor rocked and 
EB officer shocked. 😉

*********

Decisions not acted upon
within 48 hours
never get executed.
Progress = Decisions followed
by immediate Action.
P = D + A

*********

A disciple asked his Guru- "Is there a 'Soul' in our body,? Will it not 'perish' like the body.?"

The Guru explained..

"Milk" is useful but if left as it is.. it gets spoiled..

In case u add a drop a "Buttermilk".. it becomes "Curd".. and the Milk that turns to Curd, remains for one more day without getting spoiled..

If left as it is.. the Curd gets spoiled..

Yet, if u churn the "Curd" it becomes "Butter" which doesn't get spoiled..

But, even Butter also does not remain fresh for many days.. It becomes rancid or spoiled after a few days..

But if u melt Butter in a proper manner.. It becomes pure "Ghee", which never gets spoiled..

Now, do u see that the "Milk" which gets spoiled contains "Ghee" that never gets spoiled.?

Likewise, inside the "perishable" Body, there is an "imperishable" Soul..

Sankirtan, (niskaam) Seva & Sadhana..
makes the "perishable Body"..
to be one with "imperishable Soul"..

Human Body is the milk..
Sankirtan is the buttermilk..
(Niskaam) Seva is the churning..
& then by Sadhana we melt the 'reformed body' to be one with the 'soul'..

*********

ಚಕ್ರಿಣೋ ದಶಮೀಸ್ಥಸ್ಯ ರೋಗಿಣೋ ಭಾರಿಣಃ ಸ್ತ್ರಿಯಾಃ | 
ಸ್ನಾತಕಸ್ಯ ಚ ರಾಜ್ಞಶ್ಚ ಪಂಥಾ ದೇಯೋ ವರಸ್ಯ ಚ ||

ರಸ್ತೆಯಲ್ಲಿ ಒಂದು ಅಂಬುಲೆನ್ಸ್ ಬರುತ್ತಿದ್ದರೆ ಅದಕ್ಕೆ ದಾರಿ ಮಾಡಿಕೊಡಬೇಕು; ಒಂದೋ ವೇಗ ತಗ್ಗಿಸಿ, ಇಲ್ಲವೇ ಗಾಡಿಯನ್ನು ತುಸು ಹೊತ್ತು ನಿಲ್ಲಿಸಿ ಅಂಬುಲೆನ್ಸ್ ಗಾಡಿ ಹೋಗಲು ಅನುವು ಮಾಡಬೇಕು - ಇದು ನಾಗರಿಕ ಪ್ರಜ್ಞೆ. ಕೆಲವರಿಗೆ ಇದು ಹುಟ್ಟಿನಿಂದಲೇ ಬರುತ್ತದೆ. ಇನ್ನು ಕೆಲವರಿಗೆ ಕಾಯ್ದೆ, ಕಾನೂನು ಮಾಡಿ, ದಂಡ ವಸೂಲು ಮಾಡಿ, ಕೆಲವೊಮ್ಮೆ ಶಿಕ್ಷೆಯನ್ನೂ ಕೊಟ್ಟು ಹೇಳಿಕೊಡಬೇಕಾಗುತ್ತದೆ. 

ಹಿಂದಿನ ಕಾಲದಲ್ಲೂ ಈ ನೀತಿಸಂಹಿತೆ ಬೇರೆ ವಿಧಗಳಲ್ಲಿ ಜಾರಿಯಲ್ಲಿತ್ತು. ನೀವು ರಸ್ತೆಯಲ್ಲಿ ಕುದುರೆ ಬಂಡಿಯೋ, ಎತ್ತಿನ ಗಾಡಿಯೋ ಹೊಡೆದುಕೊಂಡು ಹೋಗುತ್ತಿದ್ದೀರಿ. ಎದುರಿಂದ ಯಾರು ಬಂದರೆ ಅವರಿಗೆ ಜಾಗ ಕೊಡಬೇಕು? ಯಾರು ನಿಮ್ಮ ಪ್ರಯಾರಿಟಿ? ಇಂಥ ಸಂಶಯದ ಪರಿಹಾರಕ್ಕೆ ಇಲ್ಲೊಂದು ಪಟ್ಟಿ ಇದೆ ನೋಡಿ: ವೃದ್ಧ, ರೋಗಿ, ಬೆನ್ನ ಮೇಲೆಯೋ ತಲೆ ಮೇಲೋ ಮಣಭಾರದ ಹೊರೆ ಹೊತ್ತಿರುವವನು, ಮದುವೆಗಾಗಿ ಹೊರಟಿರುವ ದಿಬ್ಬಣ, ರಾಜ,
ವಿದ್ಯಾರ್ಥಿ ಮತ್ತು ಸ್ತ್ರೀ - ಈ ಏಳು ಮಂದಿಗೆ ಯಾರೇ ಆಗಲಿ ದಾರಿ ಬಿಟ್ಟುಕೊಟ್ಟು ಸಹಕರಿಸಬೇಕು. 

ವೃದ್ಧ - ಕಾರಣ ಬೇಕಿಲ್ಲ. ಆತನಿಗೆ ನಡೆದಾಡುವುದೂ ಕಷ್ಟವಾಗಿರುವಾಗ ಮಾನವೀಯತೆ ತೋರಿಸುವುದು ನಿಮ್ಮ ಧರ್ಮ. ಅವನನ್ನು ಓವರ್ ಟೇಕ್ ಮಾಡಿ ನಿಮಗೇನೂ ಸಾಧಿಸಬೇಕಾಗಿಲ್ಲ. ತಾತಾ, ನೀವು ಮುಂದೆ ಹೋಗಿ ಎಂದು ಅವರಿಗೆ ದಾರಿ ಬಿಟ್ಟು ಕೊಡಿ. 

ಎರಡನೆಯದಾಗಿ, ರೋಗಿ. ಇವನಿಗೆ ದಾರಿ ಬಿಟ್ಟುಕೊಡದವರು ಯಾರು? ಇಲ್ಲಿ, ರೋಗಿ ಎಂದಾಗ, ಅಪಘಾತ ಅಥವಾ ಯಾವುದಾದರೂ ಅನಾಹುತವಾಗಿ ಜೀವನ್ಮರಣ ಸ್ಥಿತಿಯಲ್ಲಿರುವವನು ಎಂದೂ ಅರ್ಥ ಮಾಡಿಕೊಳ್ಳಬೇಕು. ತುರ್ತಾದ ನೆರವು ಬೇಕಿರುವುದರಿಂದ, ಅವನಿಗೆ ದಾರಿ ಬಿಟ್ಟು ಕೊಡಲೇಬೇಕಾದ್ದು ನಿಮ್ಮ ಧರ್ಮ. 

ಮೂರನೆಯದಾಗಿ, ಹೊರೆ ಹೊತ್ತವನು. ಪಾಪ, ಅವನ ಕಷ್ಟ ಅವನಿಗೇ ಗೊತ್ತು. ಅಂಥವನು ಎದುರಾದಾಗ, ವಿನಯದಿಂದ ಬದಿಗೆ ನಿಂತು ದಾರಿ ಮಾಡಿಕೊಡಬೇಕೇ ಹೊರತು ಅಡ್ಡ ನಿಂತು ದರ್ಪ ತೋರಿಸಲು ಹೋಗಬೇಡಿ.

ಮದುವೆಗಾಗಿ ಹೊರಟಿರುವ ದಿಬ್ಬಣ, ವರ, ವಧು: ಹೌದು, ಹಳೆಯ ಕಾಲದಲ್ಲಿ ಇಂಥ ದಿಬ್ಬಣಗಳು ರಸ್ತೆಯಲ್ಲೇ ನಡೆದು ಹೋಗುತ್ತಿದ್ದವು. ಹೊಸ ಬದುಕಿಗೆ ಕಾಲಿಡುವವರ ಸಂಭ್ರಮಕ್ಕೆ ಚ್ಯುತಿ ತರದಂತೆ ವರ್ತಿಸುವುದು ಸಾತ್ವಿಕ ಲಕ್ಷಣ. ಅವರಿಗೆ ದಾರಿ ಬಿಟ್ಟರೆ ನೀವು ಕಳೆದುಕೊಳ್ಳುವುದು ಏನೂ ಇಲ್ಲ.

ರಾಜ... ಇವನಿಗೆ ದಾರಿ ಬಿಟ್ಟುಕೊಡದವರು ಯಾರು! ಹಿಂದಿನ ಕಾಲದಲ್ಲಿ, ಈಗಿನಂತೆ ಬೇಕೆಂದಾಗೆಲ್ಲ ಗೂಟದ ಕಾರಿನಲ್ಲಿ ಊರು ತುಂಬ ಓಡಾಡಿಕೊಂಡು ಪುರಜನರ ಓಡಾಟಕ್ಕೆ ತೊಂದರೆ ಮಾಡುವ ಕ್ರಮ ಇರಲಿಲ್ಲ. ರಾಜ ಅತ್ಯಗತ್ಯವಿದ್ದರೆ ಮಾತ್ರ ರಸ್ತೆಯಲ್ಲಿ ಓಡಾಡುತ್ತಿದ್ದ. ಹಾಗಾಗಿ, ಅವನ ಓಡಾಟಕ್ಕೆ ಅನುಕೂಲ ಮಾಡಿಕೊಡುವುದು ಪ್ರಜೆಗಳ ಕರ್ತವ್ಯವಾಗಿತ್ತು.

ಹಾಗೆಯೇ, ವಿದ್ಯಾರ್ಥಿಗೂ ದಾರಿ ಬಿಟ್ಟುಕೊಡಿ. ಅವನು ವಿದ್ಯಾವಂತ; ಓದಿಕೊಂಡವನು; ಪ್ರಾಜ್ಞ ಎಂಬುದು ಒಂದು ಕಾರಣ. ಈಗಿನ ಕಾಲವಾದರೆ, ಪಾಪ ಯಾವ ಎಕ್ಸಾಮಿಗೆ ಹೋಗುತ್ತಿದ್ದಾನೋ, ತರಗತಿಗಳಿಗೆ ಹೊರಟಿದ್ದಾನೋ ಏನೋ ಎನ್ನಬಹುದು. ಹಾಗಾಗಿ, ಅವನಿಗೆ ತೊಂದರೆ ಮಾಡಬಾರದೆಂಬ ಭೂತದಯೆ ನಿಮ್ಮಲ್ಲಿರಲಿ. 

ಯಾರಿಗೆಲ್ಲ ದಾರಿ ಬಿಡಬೇಕೆಂಬ ಪಟ್ಟಿಯಲ್ಲಿ ಇನ್ನೊಂದು ಹೆಸರು : ಸ್ತ್ರೀ. ಈಕೆ ಯಾವ ವಯಸ್ಸಿನವಳಾದರೂ, ಯಾವ ಕೆಲಸಕ್ಕೆ ಹೊರಟಿದ್ದರೂ, ಯಾವ ಕುಲಗೋತ್ರಗಳಿಗೆ ಸೇರಿದವಳಾಗಿದ್ದರೂ ಮೊದಲು ದಾರಿ ಬಿಟ್ಟುಕೊಡುವುದು ಉಳಿದವರ ಕರ್ತವ್ಯ. ಬಹುಶಃ ಇಲ್ಲಿಂದಲೇ ಲೇಡೀಸ್ ಫಸ್ಟ್ ಎಂಬ ಮಾತು ಬಂದಿರಬೇಕು, ಯಾರಿಗೆ ಗೊತ್ತು!

ಅಂದಹಾಗೆ, ಈ ಶ್ಲೋಕ ನಿಮಗೆ ಸಿಗುವುದು #ಮನುಸ್ಮೃತಿ ಯಲ್ಲಿ

*********

Fantastic lesson in English grammer

Teacher:
1) he washed utensils
2) he was made to wash utensils

What's the difference between these two sentences?
Student:
In 1st sentence the subject is unmarried and in second subject is married.

Teacher gave 100% marks to student😂😂😂😂

*********

This is one of the sweet and best message I received so like to share with you   
1. No matter how beautiful and handsome you are, just remember Baboon and Gorillas also attract tourists.
***Stop Boasting.

2. No matter how big and strong you are, you will not carry yourself to your Grave.
***Be Humble! 

3. No matter how tall you are, you can never see tomorrow.
***Be Patient! 

4. No matter how Light Skinned you are, you will always need light in Darkness.
***Take Caution! 

5. No matter how Rich and many Cars you have, you will always walk to Bed.
***Be Contented! 

Take Life Easy 
 Life is "Exp. + Exp. + Exp."
Yesterday was Experience.
Today is Experiment.
Tomorrow is Expectation.
So, use your Experience in your Experiment to achieve your Expectations.

*********

A man was sitting reading his papers when his wife hit him round the Head with a frying pan.

'What was that for?' the man asked.

The wife replied 'That was for the piece of paper with the name Jenny on it that I found in your pants pocket'.

The man then said 'When I was at the races last week Jenny was the name of the horse I bet on'

The wife apologized and went on with the housework.

Three days later the man is watching TV when his wife bashes him on the head with an even bigger frying pan, knocking him unconscious.

Upon re-gaining consciousness the man asked why she had hit again.

Wife replied. 'Your horse phoned'

*********

"ಪಕ್ಷಿ ಜೀವಂತವಾಗಿದ್ದಾಗ ಅದು ಇರುವೆಗಳನ್ನು ತಿನ್ನುತ್ತದೆ.., 
ಪಕ್ಷಿ ಸತ್ತಾಗ ಇರುವೆಗಳು ಪಕ್ಷಿಯನ್ನು ತಿನ್ನುತ್ತವೆ..!!! 
ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುತ್ತವೆ..

 ಹಾಗಾಗಿ ಜೀವನದಲ್ಲಿ ಯಾರನ್ನೂ, ಅಥವಾ ಯಾರ ಭಾವನೆಗಳನ್ನು ಹೀಯಾಳಿಸಿ ಅಪಮೌಲ್ಯಗೊಳಿಸಬೇಡಿ.. ಜರಿದು ಮನನೋಯಿಸಬೇಡಿ..

 ಇಂದು ನೀವು ಶಕ್ತಿಯುತವಾಗಿರಬಹುದು ನೆನಪಿಡಿ "ಕಾಲ" ನಿಮಗಿಂತಲೂ ಹೆಚ್ಚು ಶಕ್ತಿಶಾಲಿ..!! ಒಂದು ಮರ ಕೋಟ್ಯಂತರ. ಬೆಂಕಿಕಡ್ಡಿಗಳನ್ನು ತಯಾರುಮಾಡಬಹುದು..,

  ಆದರೆ ಒಂದು ಬೆಂಕಿಕಡ್ಡಿ ಕೋಟ್ಯಂತರ ಮರಗಳನ್ನೇ ಸುಟ್ಟುಹಾಕುತ್ತದೆ. !!!! 

ಆದ್ದರಿಂದ
" ಒಳ್ಳೆಯವರಾಗಿರಿ
   ಒಳ್ಳೆಯದನ್ನೇ ಚಿಂತಿಸಿ
    ಒಳ್ಳೆಯ ಕಾರ್ಯಗಳನ್ನೆ   
    ಮಾಡಿ...
     ಮೌಲ್ಯಯುತವಾಗಿ 
      ಜೀವಿಸೋಣ "

*********

ಒಂದು ಊರಿನಲ್ಲಿ 3 ಮಹಿಳೆಯರು ನೀರು ತುಂಬಿಸುತ್ತಿದ್ದರು.

ಮೊದಲನೆಯವಳ ಮಗ ಶಾಲೆಯಿಂದ ಅದೇ ದಾರಿಯಲ್ಲಿ ಹೋಗುತ್ತಿರುವಾಗ ತಾಯಿಯ ಕಡರ ನೋಡಿದ . ಆವಾಗ ತಾಯಿ" ಅವನೆ ನನ್ನ ಮಗ,ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಾನೆ" 

ಸ್ವಲ್ಪ ಸಮಯದ ನಂತರ ಎರಡನೆಯವಳ ಮಗ ಅದೇ ದಾರಿಯಿಂದ ಶಾಲೆಯಿಂದ ಹಿಂತಿರುಗುವುದನ್ನು ತೋರಿಸಿ "ಅವನೆ ನನ್ನ ಮಗ, ಸಿಬಿಎಸ್ಇನಲ್ಲಿ ಒದುತ್ತಿದ್ದಾನೆ"

ಅವನ ಹಿಂದಿನಿಂದ ಮೂರನೆಯವಳ ಮಗ ಕೂಡಾ ಶಾಲೆಯಿಂದ ಮನೆಯ ಕಡೆ ಹೋಗುತ್ತಿದ್ದ.ತಾಯಿಯನ್ನು ನೋಡಿ ಅವಳ ಹತ್ತಿರ ಬಂದು ನೀರಿನಿಂದ ತುಂಬಿದ ಕೊಡವನ್ನು ಹೆಗಲ ಮೇಲೆ ಮತ್ತು ಬ್ಯಾಗನ್ನು ಇನ್ನೊಂದು ಕೈಯಲ್ಲಿ ಹಿಡಿದು ತಾಯಿಯ ಕಡೆ ನೋಡಿ" ಅಮ್ಮ ಬನ್ನಿ ಮನೆಗೆ ಹೋಗುವ" ಅಂದ.

ತಾಯಿ ಅವನ ಕಡೆ ಕೈ ತೋರಿಸಿ, ಸಂತೋಷದಿಂದ " ಇವನೇ ನನ್ನ ಮಗ, ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾನೆ" ಅಂದಳು. ಇದನ್ನು ಕೇಳಿ ಮತ್ತಿಬ್ಬರು ನಾಚಿಕೆಯಿಂದ ತಲೆ ಬಾಗಿಸಿದರು.

ಮೇಲಿನ ಕತೆಯ ತಾತ್ಪರ್ಯ ಇಷ್ಟೆ, "ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಸಂಸ್ಕಾರ ಖರೀದಿ ಮಾಡಲು ಸಾಧ್ಯವಿಲ್ಲ.........!!
ಮಕ್ಕಳು ಎಲ್ಲಾದರು ಓದಲಿ ಮೊದಲು ನೆಲ, ಜಲ, ಧರ್ಮ ,ತಂದೆ ತಾಯಿ ಯಾರಲ್ಲಿ ಗೌರವ,ಮತ್ತು ರಾಷ್ಟ್ರಾಭಿಮಾನವನ್ನು ನಾವು ಮಕ್ಕಳಿಗೆ ಮೊದಲು ಕಲಿಸಬೇಕು. ತಾಯಿಯೇ ಮೊದಲ ಪಾಠ ಶಾಲೆಯದ್ದರಿಂದ ಇವೆಲ್ಲವೂ ಅವಳ ಜವಾಬ್ದಾರಿ. ಕಲಿಯುವುದು ಮಕ್ಕಳ ಜವಾಬ್ದಾರಿ.

ಸರಿ ಅನಿಸಿದರೆ ಬೇರೆ ಗ್ರೂಪ್ ಗಳಿಗೆ ಕಳಿಸಿ.

*********

Money Says Earn Me
Calendar Says Turn Me
Time Says Plan Me
Future Says Win Me
Beauty Says Love Me
But God Simply Says..
Work Hard And Trust Me...! 

*********


–>