-->

Part 124 - Jokes , Fun , Haasya , Humor , Quotes , Greetings

ಹೆಂಡತಿ(ಸಿಟ್ಟಿನಿಂದ) : ನಿಮ್ಮನ್ನು ಮದುವೆ ಆಗೋ ಬದಲು ಒಬ್ಬ ರಾಕ್ಷಸನ ಮದುವೆ ಆಗಿದ್ರೂ ನಾನು ಎಷ್ಟೋ? ಸುಖವಾಗಿರ್ತಿದ್ದೆ.


ಗಂಡ : ಹಾಗೆಲ್ಲ ರಕ್ತಸಂಬಂಧದಲ್ಲಿ ಮದುವೆ ಆಗಬಾರದು ಕಣೇ ಒಳ್ಳೆದಲ್ಲ.!!       
Part 124 - Jokes , Fun , Haasya , Humor , Quotes , Greetings
😂😂😂😂😂😂😂

*********

A man came home from the mine field where he works, 
very sad and stressed.
His wife asked
"Babe, what's wrong",

He  said 
"All the people I'm working with are dead 😪."

Wife: "What happened??"

Hubby: "The lift cables broke and the lift lost control and 
killed all of them."

Wife: "How did U survive??"

Hubby: "Had running stomach so I went to the toilet...
when came back, they were gone, and every families will receive $10 million each."

Wife: "Daaaaamn it!!!😬
You mean I  have lost 
$10 million because of your ......Shiiiit !?!?!?

*********

ಮದುವೆಯ ಮಾತು ಕಥೆ ನೆಡೆಯುತ್ತಿತ್ತು:
ಹುಡುಗಿಯ ತಂದೆ: ನಮ್ಮ ಮಗಳು
ಓದಿನಲ್ಲಿ ವಿದ್ಯಾವಂತೆ.
ಅಂದದಲ್ಲಿ ರೂಪವಂತೆ.
ಅಡುಗೆ ಚೆನ್ನಾಗಿ ಮಾಡ್ತಾಳೆ.
ಸಂಗೀತ ಚೆನ್ನಾಗಿ ಕಲಿತಿದ್ದಾಳೆ.
ನೃತ್ಯ ಚೆನ್ನಾಗಿ ಮಾಡ್ತಾಳೆ.
 ಒಟ್ಟಾರೆ ಹೇಳಬೇಕಂದ್ರೆ 24 ವಿದ್ಯೆಗಳಲ್ಲೆಲ್ಲಾ 22 ವಿದ್ಯೆ ಬರುತ್ತಿದೆ..
ಹುಡುಗ: ಒಪ್ಪಿಗೆ ಸೂಚಿಸಿದ.

ಮದುವೆಯಾಗಿ ಆರು ತಿಂಗಳ ನಂತರ:

ಗಂಡ ಗೌರಿ ಹಬ್ಬಕ್ಕೆ ಹೆಂಡ್ತಿ ಕರೆದುಕೊಂಡು ಅವಳ ತವರು ಮನೆಗೆ ಬಂದ. 
ಗಂಡ: ಏನ್ ಮಾವ, ಮದುವೆಯಾಗಿ ಆರು ತಿಂಗಳಾಯ್ತು, ಮನೆಯಲ್ಲಿ ಇಬ್ಬರಿಗೂ ಒಂದಾಣಿಕೆ ಇಲ್ಲ, ಬರಿ ಜಗಳ, ಕಿತ್ತಾಟ, ಮನಾಸ್ತಾಪ, ಸಂಸಾರ ಸಾಕಾಗಿ ಹೋಗಿದೆ.
ಅದೇನೋ ಮದುವೆ ಮುಂಚೆ ಹೇಳಿದ್ರಲ್ಲ 24 ಗುಣದಲ್ಲಿ 22 ಇದೆ ಇನ್ನೇರಡು ಇಲ್ಲ ಅಂತ, ಅವೆರಡು ಯಾವುದು ಅಂತ ಸ್ವಲ್ಪ ಹೇಳ್ತೀರಾ ಮಾವ...?
ಮಾವ: 
"ಒಂದನೆಯದು ಸ್ವಂತ ಬುದ್ಧಿ ಇಲ್ಲ."
"ಎರಡನೆಯದು ಹೇಳಿದ ಮಾತು ಕೇಳಲ್ಲ."
🤣🤣🤣🤣🤣🤣

*********

Outstanding!! Can't even argue with this logic... 👌👌👌👌👏👏👏👏

Husband: I love you!

Wife: I love you too, infact 
I love you so much 
I will fight the whole world for you.

Husband: But you fight with me the most.

Wife: Because you are the world to me!

😂😂

*********

*ಮಗ :-* ಅಮ್ಮಾ ನಿನ್ನೆ ನನಗೊ೦ದು ಕನಸು ಬಿದ್ದಿತ್ತು. 

*ಅಮ್ಮ :-* ಏನದು ? 

*ಮಗ :-* ಕನಸಲ್ಲಿ ನನ್ನ ಒ೦ದು ಕಾಲು ಆಕಾಶದಲ್ಲಿತ್ತು , ಇನ್ನೊ೦ದು ಭೂಮಿ ಮೇಲಿತ್ತು. 

*ಅಮ್ಮ :-* ಈ ತರ ಕನಸು ಕಾಣ್ಬೇಡ ಮಗನೆ , ಇರೋ ಒ೦ದು ಚಡ್ಡೀನೂ ಹರಿದೋಗುತ್ತೆ

*********

👷ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಹೇಗೆ ಬಿದ್ದು ಹೋದವು?

🤒ರೋಗಿ: ನನ್ನ ಹೆಂಡತಿ ಮಾಡಿದ ಚಕ್ಕುಲಿ ತಿಂದು.

👷ಡಾಕ್ಟರ್: ಬೇಡ ಅನ್ನಬೇಕಿತ್ತು

🤒ರೋಗಿ: ತಿಂದಿದ್ದಕ್ಕೆ ಒಂದು ಹೋಯಿತು, ಬೇಡ ಅಂದಿದ್ದಕ್ಕೆ ಮತ್ತೆ.ಮೂರು ಹೋಯಿತು!!!!😄

*********

ಗುಂಡ :* ಈ ನಾಯಿ ರೇಟು ಎಷ್ಟು ?

*ಅಂಗಡಿಯವನು :* ಎರಡು ನೂರು ರೂಪಾಯಿ.

*ಗುಂಡ :* ಇದು ಅಷ್ಟು ನಂಬಿಗಸ್ಥ ಪ್ರಾಣಿಯೆ?

*ಅಂಗಡಿಯವನು :* ಹೌದು, ಇದನ್ನು ಹತ್ತು ಸಲ ಮಾರಿದ್ದೀನಿ.             
ಆದರೂ ಅದು ನನ್ನ ಹತ್ತಿರಾನೇ ಬರುತ್ತೆ!

*********

ಟೀಚರ್ :ನಿನ್ನ ತಂದೆ ವಯಸ್ಸು ಎಸ್ಟು 
ಗುಂಡ:ನನ್ನಷ್ಟೇ ವಯಸ್ಸು  ಸಾರ್
ಟೀಚರ್ :ಹೇಗೆ
ಗುಂಡ :ನಾನು ಹುಟ್ಟಿದ ಮೇಲೆ ಅವರು ತಂದೆ ಆಗಿದ್ದು ..
*********
ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ
ತಿಮ್ಮ: ಆಮೇಲೆ ಏನಾಯಿತು?
ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ.
 -
😬😬😬😬😬😬😬😬😬
*********
"ನಿನ್ನೆ ರಾತ್ರಿ ಮಲಗಿದ್ದಾಗ
ಕಾಲಿನ ಬಳಿ ತೆವಳುತ್ತಿದ್ದ ಹಾವಿನ ಬಾಲ ಹಿಡಿದು ನೆಲಕ್ಕೆ ಬಡಿದೆ" ✌

✌ಲೈಟ್ ಹಾಕಿ💡ನೋಡಿದಾಗ
ಮೊಬೈಲ್ ಚಾರ್ಜರ್ ಎರಡು ತು೦ಡು 😬😬

*********

ಗುಂಡ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂದು ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿದೆವು ಆದರೆ ಈಗ ಮಳೆ ಜಾಸ್ತಿಯಾಗಿದೆ ಅಲ್ಲ ಏನು ಮಾಡುವುದು?
ಹನುಮ: ಕಪ್ಪೆಗಳಿಗೆ ಡೈವರ್ಸ್ ಕೊಡಿಸಬೇಕು.

*********

ತಂದೆ: ಸ್ವಾಮಿ ನನ್ನ ಮಗಳು ರಸ್ತೆಯಲ್ಲಿ ಹೋಗುವಾಗ ತಲೆ ತಗ್ಗಿಸಿ ಹೋಗುವ ಹಾಗೆ ಏನಾದರೂ ಮಾರ್ಗ ಹೇಳಿ ಸ್ವಾಮಿ.

ಸ್ವಾಮಿ: ನಿನ್ನ ಮಗಳಿಗೆ ದಿನಕ್ಕೆ 500 ಎಸ್.ಎಂ.ಎಸ್. ಪ್ರೀ ಇರುವ ಸಿಮ್ ಕಾರ್ಡ್ ಕೋಡಿಸು. ತಲೆ ತಗ್ಗಿಸಿ ನಡೆಯುತ್ತಾಳೆ
 😬😬😆😬😆😬😆😆😬😆

*********

ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ 
ವಾಹ್.ವಾಹ್.
ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ .


ಸಮಿಪ ಹೊಗಿ ನೊಡಿದಾಗ ಗೊತ್ತಾಯಿತು ಅವಳು ಮುರು ಮಕ್ಕಳ ಮಮ್ಮಿ .😝😝😝

ವಾಹ್ ವ್ಹಾ . 

😁😬😂😃😄😅😆
ಸ್ವಿಟ್ ಹಾರ್ಟ...

ಹುಡುಗಿ: ಒಂದು ಕವನ ಹೇಳು ಪ್ಲೀಜ್...

ಹುಡುಗ: ನಿನ್ನ ನೋಡಿದಾಗ ನಾ ನನ್ನ ಮರತೆ...

ಹುಡುಗಿ: ವಾಹ್, ಸೂಪರ್.. ಆಮೇಲೆ?

ಹುಡುಗ: ನಿನ್ನ ತಂಗಿಯನ್ನ ನೋಡಿದ್ಮೇಲೆ ನಿನ್ನನ್ನೇ ಮರೆತೆ...

😂😃😊😐😊😃😂
*********
ಯಾವಳೋ ಗರ್ಭಿಣಿಗೆ ಅವರಮ್ಮ ಹೇಳಿದಳಂತೆ....ವಿಮಲ್ ಪಾನ್ ಮಸಾಲಾ ತಿನ್ನು..ಅದರ ಕಣಕಣದಲ್ಲೂ ಕೇಸರಿಯ ಶಕ್ತಿಯಿದೆ ಅಂತ..!!

 ಅದನ್ನ ಅವಳು Facebook ಲಿ ಹಾಕಿ ಸಲಹೆ ಕೇಳಿದ್ದಳು..ತಿನ್ ಬಹುದಾ ಅಂತ! ಅದಕ್ಕೆ ಒಬ್ಬ ಸಲಹೆ ಕೊಟ್ಡಿದ್ದ...ನಿಮ್ಮಮ್ಮಂಗೆ ಅಂಬುಜಾ ಸಿಮೆಂಟ್ ತಿನ್ನೋಕೆ ಹೇಳು strong ಆಗ್ತಾಳೆ ಅಂತ!
   
   😜

*********

ಪತ್ನಿ ಗಂಡನ ಮೇಲೆ ಸಿಟ್ಟಾಗಿ ತವರಿಗೆ ಹೋಗಿರ್ತಾಳೆ .
ಪತಿ ಪೋನ್ ಮಾಡ್ತಾನೆ ಮಾವ ರಿಸಿವ್ ಮಾಡ್ತಾನೆ.

ಮಾವ: ನಿನಗ್ ಎಷ್ಟ್ ಸಲ ಹೆಳೋದು "ಅವಳು ಬರೊಲ್ಲ " ಅಂತ , ಪದೆ ಪದೆ ಯಾಕ್ ಫೋನ್ ಮಾಡ್ತಿಯಾ.

ಪತಿ:- ಏನಿಲ್ಲಾ ಕೆಳೋದಕ್ಕೇ ಖುಷಿ ಅನ್ಸುತ್ತೆ.
😂😂😂😂😂😂😂

*********

ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ? 
ಗುಂಡ: ಬಿಜಾಪುರದಲ್ಲಿ ಇದೆ. 
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ.. 
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ? 
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ಅರ್ಥ  ಆಗೋದಿಲ್ಲ ಸಾರ್.. ಅದಕ್ಕೆ.
😝😝😂😂😂🙆😃😃😝😝😝

*********

ಶಂಕರ ಆಸ್ಪತ್ರೆಯ ಒಳ ಹೋದ..
ರಿಸೆಪ್ಷನಿಸ್ಟ್: ಏನು?
ಶಂಕರ: ಕಲ್ಲು
ರಿಸಪ್ಷನಿಸ್ಟ್: ಓಹೋ...! ಹಾಗಾದರೆ ಅಲ್ಲಿ ಹೋಗಿ ಚೀಟಿ ಮಾಡಿ, ಹೆಸರು ಅಡ್ರೆಸ್, ನೂರು ರುಪಾಯಿ ಕೊಟ್ಟು, ನಂತರ ಚೀಟಿನ, ನೋಡಿ..... ಓ ಅಲ್ಲಿ ಕೂತಿರುವ ಅಟೆಂಡರ್ನ ಕೈಯಲ್ಲಿ ಕೊಡಿ...
ಶಂಕರ ಹೋಗಿ ಚೀಟಿ ಪಡೆದು, ಅಟೆಂಡರ ಕೈಯಲ್ಲಿ ಕೊಟ್ಟ.

ಅಟೆಂಡರ್: ಏನು?
ಶಂಕರ: ಕಲ್ಲು...
ಅಟೆಂಡರ್: ಷರ್ಟ್, ಪ್ಯಾಂಟ್ ಇಲ್ಲಿ ಬಿಚ್ಚಿಡಿ.
ಶಂಕರ ಷರ್ಟ್, ಪ್ಯಾಂಟ್ ಬಿಚ್ಚಿ 
X- ray ಬಟ್ಟೆ ಹಾಕಿ  ನಿಂತ.

ಅಟೆಂಡರ್ ಶಂಕರನ ಹೈಟ್, ವೈಟ್, ಎಲ್ಲ ನೋಡಿ ಒಂದು ರಿಜಿಸ್ಟರ್‌ನಲ್ಲಿ ಬರೆದಿಟ್ರು..

ಅರ್ಧ ಗಂಟೆ ಕಳೆದು ಒಬ್ಬಾಕೆ ನರ್ಸ್ ಬಂದು ಶಂಕರನ  ಬಿ.ಪಿ ಚೆಕ್ ಮಾಡಿದ್ಳು. ನಂತರ ಟೆಸ್ಟ್ ಮಾಡಲು ಬ್ಲಡ್ ತೆಗೆದುಕೊಂಡು ಹೋದಳು....
ನಂತರ ಎಕ್ಸರೇ, ಈ.ಸಿ.ಜಿಯೂ ತೆಗೆದರು...

ಒಂದು ಗಂಟೆ ಕಳೆದು ಡಾಕ್ಟರ್ ರೂಮಿಗೆ ಕರೆದ್ರು....

ಡಾಕ್ಟರ್: ಏನು?
ಶಂಕರ: : ಕಲ್ಲು
ಡಾಕ್ಟರ್: ಎಲ್ಲಿ?
ಶಂಕರ: *ಹೊರಗೆ ಲಾರಿಯಲ್ಲಿ....* *ಅದೆಲ್ಲಿ ಇಳಿಸಬೇಕು?????*
😎🤔🤔
🙋

*********

ಬಾಸ್ : ನೆನ್ನೆ ಯಾಕ್ರಿ ಕೆಲ್ಸಕ್ಕೆ ಬರ್ಲಿಲ್ಲ?😠

ನಾನು : ಕ್ಯಾಲೆಂಡರಲ್ಲಿ ರೆಡ್ ನಂ. ತೋರಿಸ್ತಿತ್ತು ಅಂತ ರಜ ಹಾಕ್ದೆ.😞
ಸಂಜೆ ಗೊತ್ತಾಯ್ತು ಹೊಸ ಕ್ಯಾಲೆಂಡರ್ ಪೂಜೆಗೆ ನಮ್ಮಜ್ಜಿ ಕುಂಕುಮ ಹಚ್ಚಿದ್ರು ಅಂತ!😒

*********

ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ 🐓ಮೊದಲ ಬಂತೋ..? 

ರಾಮ್ಯಾ: ಸರ್‌ ತತ್ತಿ ಬಂತ್ರಿ..

ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..?

ಮಾಸ್ತರ: ಹೇಳಪಾ, ನೀನ ಹೇಳ.

ಮಂಜ್ಯಾ: ಸರ ಮೊದಲ ಬೀರ್ 🍾ಬಂತರಿ,
ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ,
ಆಮೇಲೆ ಕೋಳಿ ಬಂತರಿ
ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ..
😀😄😜😜😂😂😂
*********
ಜಡ್ಜ್ - ಈ ಗುಂಡನ ಎರಡೂ ಕಿವಿ ಕಟ್ ಮಾಡಿ🤕

ಗುಂಡ - ಬ್ಯಾಡಾ ಸ್ವಾಮಿ ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ..

ಜಡ್ಜ್ - ಲೇ ಹುಚ್ಚಾ ಕಿವಿ ಕತ್ತuರಿಸಿದ್ರ ಕುರುಡ ಹೆಂಗ ಆಗ್ತೀ ಲೇ..⁉

ಗುಂಡ - ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ..❓
😭😵
*********
ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ
ಹುಡುಗಿ: ಥ್ಯಾಂಕ್ಸ್
ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ
ಹುಡುಗಿ: ಥ್ಯಾಂಕ್ಸ್
ಹುಡುಗ: ಮೇಕಪ್ ಅಂತು ಖತರನಾಕ
ಹುಡುಗಿ: ಥ್ಯಾಂಕ್ಸ್ *ಅಣ್ಣಾ*
ಹುಡುಗ: ಆದರೂ ಎ‌ನ್ ಬಿಡವಾ ಚಂದ ಕಾಣವಲ್ಲಿ.

😂😂😂😂😂😂

*********

ಗೌಡ ಹೆಂಡತಿಗೆ ಮೆಸೇಜ್ ಮಾಡ್ತಾನೆ: Thanks for making my life,
wonderful and being a
part of my life.
What ever I am is only because of
u,
u r my angel thanks for coming in my life
and
making it worth living.
You're Great. 


ಹೆಂಡತಿಯ ರಿಪ್ಲೈ :

ಕುಡದೀರ ಹೌದಲ್ಲ ? 🍺🍺
ಈಗ ಮುಚ್ಚಿಕೊಂಡ ಮನೀಗೆ ಬರ್ರಿ.. 
ಹೆದರಬ್ಯಾಡ್ರಿ, ನಾ ಏನೂ ಅನ್ನಾಂಗಿಲ್ಲಾ..!!!

ಗೌಡ: Thank you so much. ನಾ ಹೊರಗ ನಿಂತೇನಿ...
ಬಾಗಲಾ ತಗಿ ಸಾಕ!! 😝😝😝

*********

*_📚 ಒಂದೊಳ್ಳೆ ಮಾತುಗಳು 📚_*

*📖 ತಪ್ಪು ನಿಮ್ಮ ಅನುಭವಗಳನ್ನು ಹೆಚ್ಚಿಸುತ್ತದೆ, ಅನುಭವ ನಿಮ್ಮ ತಪ್ಪುಗಳನ್ನು ಕಡಿಮೆ ಮಾಡುತ್ತದೆ ನೀವು ತಪ್ಪಿನಿಂದ ಪಾಠ ಕಲಿತರೆ ಜನ ನಿಮ್ಮ ಯಶಸ್ಸು ನೋಡಿ ಪಾಠ ಕಲೀತಾರೆ*.

*📖 ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸುತ್ತೆ*.

*📖 ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಯಾವತ್ತೂ ಕಣ್ಣೀರು ಹಾಕಬೇಡಿ, ಕಣ್ಣೀರು ನಿಮ್ಮ ಮುಂದಿರುವ ಅವಕಾಶವನ್ನು ಮರೆಮಾಚುತ್ತದೆ*.

*📖 ನೋವು ಬಂದಾಗ ಜೀವನ ಇಷ್ಟ ಆಗುವುದಿಲ್ಲ ನಿಜ, ಆದರೆ – ಇಷ್ಟ ಆದವರು ಜೊತೆಯಾಗಿರುವಾಗ ನೋವಲ್ಲೂ ಕೂಡಾ ಏನೋ ಒಂಥರಾ ಖುಷಿ ಇರುತ್ತದೆ*.

*📖 ತಪ್ಪಾಯಿತು ಎನ್ನಲು ಎಂದೂ ನಾಚಿಕೆ ಪಡಬೇಡ. ಯಾಕೆಂದರೆ ಹಾಗೆನ್ನುವುದರ ಅರ್ಥ ನಿನ್ನೆಗಿಂತ ಇಂದು ಬುದ್ಧಿ ಹೆಚ್ಚಾಗಿದೆ ಎಂದು*.

*📖 ಸಂತೋಷದ ಸಮಯದಲ್ಲಿ ಚಪ್ಪಾಳೆ ಹೊಡೆಯುವ ಹತ್ತು ಬೆರಳಿಗಿಂತ, ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಎಷ್ಟು ಪವಿತ್ರ ಅಲ್ವಾ*.

*📖 ಜೀವನದಲ್ಲಿ ನೀನು ಗೆದ್ದರೆ ನೀನು ಯಾರೆಂದು ಎಲ್ಲರಿಗೂ ಗೊತ್ತಾಗುತ್ತದೆ. ಒಂದು ವೇಳೆ ಸೋತರೆ ನಿನ್ನವರು ಯಾರೆಂದು ನಿನಗೆ ಗೊತ್ತಾಗುತ್ತದೆ*.

*📖 ಬದುಕಿನಲ್ಲಿ ಯಾರನ್ನೂ ನಂಬಬೇಡಿ. ನಿಮ್ಮ ನೆರಳನ್ನೂ ಕೂಡಾ ಯಾಕೆಂದರೆ ಸಂಜೆಯಾಗುತ್ತಲೆ ನೆರಳು ಕೂಡಾ ನಿಮ್ಮನ್ನು ಬಿಟ್ಟು ಹೋಗುತ್ತದೆ*.

*📖 ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿ ಆದರೆ ಯಾವ ಮನಸ್ಸೂ ಮುರಿಯಲ್ಲ*.

*📖 ನಾನು ನನ್ನ ಬಲಗೈಯಲ್ಲಿ ಏನು ಬೇಕಾದರೂ ಸಾಧಿಸಬಲ್ಲೆ, ಆದರೆ ನನ್ನ ಎಡಗೈಯನ್ನು ಅಮ್ಮ ಹಿಡಿದುಕೊಂಡು ಪ್ರೋತ್ಸಾಹಿಸಿದಾಗ ಮಾತ್ರ*.

*📖 ವಿಶಾಲ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು. ಆದರೆ ಒಂದು ಒಳ್ಳೆ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು*.

*📖 ಜೀವನ ಒಂದು ಸುಂದರವಾದ ರಂಗೋಲಿ. ಒಂದು ಚುಕ್ಕಿ ತಪ್ಪಿದರೂ ಹಾಳಾಗುತ್ತದೆ. ಅದಕ್ಕಾಗಿ ಜೀವನದ ಪ್ರತಿ ಹೆಜ್ಜೆಯಲ್ಲೂ ಗಮನ ಇರಲಿ*.

*📖 ಬದುಕು ಟೀಚರ್‌ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ*.♐

*********

ಸುಬ್ಬಿ :- ಏನ್  ಅಕ್ಕಮ್ಮ, ಹುಡ್ಗಿಗೆ  ಗಂಡು  ನೋಡಿದ್ದಿರಂತೆ.

ಅಕ್ಕಮ್ಮ :- ಹವ್ದು ಕಣೆ.

ಸುಬ್ಬಿ :- ಹುಡುಗ ಏನು ಕೆಲಸ ಮಾಡುತ್ತಾನೆ?

ಅಕ್ಕಮ್ಮ :- ಹುಡುಗಾ  ವಾಟ್ಸಅಪ್ ಅಂತ ದೊಡ್ಡ ಕOಪನಿಯಲ್ಲಿ ಗ್ರೂಪ್ ಅಡ್ಮಿನ್ ಆಗಿದ್ದಾನೆ ಅಂತೆ. ಮೊದಲು 6 ಜನ ಇದ್ರಂತೆ. ಈಗ 108 ಜನ ಅವನ ಕೈಕೆಳಗಿದ್ದಾರಂತೆ. ಇದಕ್ಕಿಂತ ಒಳ್ಳೆ ಹುಡ್ಗ ಎಲ್ಲಿ ಸಿಕ್ತಾನೆ ಹೇಳ್ ಸುಬ್ಬಿ...

😄😄😄😄😄😄

*********

*ಎಲ್ಲಾ ತಿಳಿದವ ಎಂಬ ಜ್ಞಾನಿಗಿಂತ *ಏನೂ ತಿಳಿದಿಲ್ಲ ಎಂದೆನ್ನುವ ಅಜ್ಞಾನಿಯೇ ಶ್ರೇಷ್ಠ..*
*ತಿಳಿದವ ಎಂಬ ಜ್ಞಾನಿಗೆ ಅಹಂಕಾರವೆಂಬ ಪೊರೆ ಕಣ್ಣಿಗೆ ಆವರಿಸಿ ಎದುರಿರುವ ಎಲ್ಲವನ್ನೂ ಮರೆಮಾಚಿಸುತ್ತೆ..*
*ತಿಳಿದಿಲ್ಲವೆಂಬ ಪ್ರಾಮಾಣಿಕ ಅಜ್ಞಾನಿಗೆ ಸೂರ್ಯನ ಬೆಳಕಷ್ಟೇ ಅಲ್ಲ ಮಿಂಚುಹುಳದ ಬೆಳಕು ಕೂಡ ದಾರಿ ದೀಪ ಆಗಿ ತೋರುತ್ತೆ.💥*

*********

ಮನಸೆಳೆದ ಮಾತು. 
🏡
ಒಬ್ಬ ಸಿವಿಲ್ ಇಂಜಿನಿಯರ್ ಮನೆಗಳನ್ನು ಹೇಗೆ ಕಟ್ಟಬೇಕು ಎಂಬುದನ್ನು ತಿಳಿಸಿಕೊಡುತ್ತಾನೆ. ಆದರೆ ಮನೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡಲಾರ.
🏘
ಇಟ್ಟಿಗೆ ಕಲ್ಲುಗಳನ್ನು ಒಟ್ಟಿಗೆ ಸೇರಿಸಿ ಮನೆ ಕಟ್ಟಬಹುದು. ಆದರೆ ಮನೆ ನಡೆಸಲು ಮನಗಳು ಒಟ್ಟುಸೇರಬೇಕು.
💵💶💰
ಹಣವಂತನಾಗುವುದು ಹೇಗೆಂಬುದನ್ನು ಸಂತೆಯ ವ್ಯವಹಾರಗಳು ಕಲಿಸಿಕೊಡಬಹುದು. ಗುಣವಂತನಾಗುವುದು ಹೇಗೆಂಬುದನ್ನು ಯಾರೂ ಕಲಿಸಿಕೊಡಲಾರರು.
⚰🛌
ಗುಣವಿಲ್ಲದ ಹಣ ಹೊರಲಾರದ ಹೆಣ.
👸🏻🤴🏻
ಮದುವೆಯ ಸಂದರ್ಭದಲ್ಲಿ ಪುರೋಹಿತರು ವಧು-ವರರಿಗೆ ತಾಳಿ ಕಟ್ಟಿಸಿ ಪತಿ-ಪತ್ನಿಯರೆಂದು ಘೋಷಿಸುತ್ತಾರೆ. ಆದರೆ ನಂತರ ಅವರಿಬ್ಬರೂ ಬಾಳ ಸಂಗಾತಿಗಳಾಗಿ ಹೇಗೆ ಬಾಳಬೇಕೆಂಬುದನ್ನು ಯಾವ ಪುರೋಹಿತರು ಕೂಡಾ ಹೇಳಿಕೊಡಲಾರರು.
💑🙌🏻
ಕೈ ಹಿಡಿಯುವುದು ಬೇರೆ, ಕೈ ಬಿಡದಿರುವುದು ಬೇರೆ.
🤝🤜🤛🏻

*********

ಹರಿಕಥಾ ದಾಸರೊಬ್ಬರು ನೆರೆದ ಭಕ್ತರನ್ನು ಕೇಳಿದರು, ನಿಮ್ಮಲ್ಲಿ ಯಾರೆಲ್ಲಾ ಸ್ವರ್ಗಕ್ಕೆ ಹೋಗಲು ಬಯಸುತ್ತೀರಿ?
😇🏃🏻‍♀🏃🏿
ಎಲ್ಲರೂ ಪಟಪಟನೆ ಕೈ ಎತ್ತಿದರು.
🙅🏻
ಮೂಲೆಯಲ್ಲಿ ಒಬ್ಬ ಮುದುಕಿ ಮಾತ್ರ ಸುಮ್ಮನೆ ಕೈಕಟ್ಟಿ ಕುಳಿತಿದ್ದಳು.
😳
ದಾಸರು ಕುತೂಹಲದಿಂದ ಕೇಳಿದರು, "ಯೇನಜ್ಜೀ, ಸ್ವರ್ಗ ಸುಖ ಬೇಡ್ವಾ?" 
😟
"ಸ್ವರ್ಗ ಸುಖ ಯಾರಿಗೆ ತಾನೇ ಬೇಡ ಗುರುಗಳೇ"?
😊
"ಮತ್ತೆ ನೀನು ಕೈ ಎತ್ತಲೇ ಇಲ್ಲ? "
ತುಸು ನಗುತ್ತಾ ಅಜ್ಜಿ ಹೇಳಿತು... 
😉
"ಈ ಕೈ ಎತ್ತಿದ ಎಲ್ಲಾ ಮಹಾನುಭಾವರ ಕತೆ ನನಗೆ ಚೆನ್ನಾಗಿ ಗೊತ್ತು ಗುರುಗಳೇ.
ವರ್ಷ ವರ್ಷಗಳಿಂದ ಇವರು ಮಾಡುವ ಅನಾಚಾರಗಳನ್ನು, ಅಧರ್ಮಗಳನ್ನು ನೋಡುತ್ತಲೇ ಮುದುಕಾದೆ. ಇಂಥಹ ಈ ಫಟಿಂಗರೆಲ್ಲರೂ ಸ್ವರ್ಗಕ್ಕೆ ಹೋಗುತ್ತಲೇ ಸ್ವರ್ಗ ನರಕವಾಗಿ ಈ ಊರೇ ನಿಜವಾದ ಸ್ವರ್ಗವಾಗುತ್ತದೆ. ಅವರೆಲ್ಲಾ ಮೇಲಕ್ಕೆ ಹೋಗಲಿ, ನಾನಿಲ್ಲೇ ಸುಖವಾಗಿ ಇರುತ್ತೇನೆ "

*********

ಗುರುಗಳು ಮನೆಗೆ ಬಂದಿದ್ದರು.
ಮನೆಯಲ್ಲಿ ಸಿರಿಧಾನ್ಯದ ಉಪ್ಪಿಟ್ಟು ಮಾಡಿದ್ದೆವು. ಎರಡನೇ ತುತ್ತು ಬಾಯಿಗಿಡುತ್ತಿದ್ದಂತೆ ಗುರುಗಳು ‘ಇದಾವ ಧಾನ್ಯ’ ಎಂದು ಕೇಳಿದರು. ಮಿಲ್ಲೆಟ್ಸ್. ಇದು ಸಾಮೆ ಅಂದೆ. ಇದನ್ನೇಕೆ ತಿನ್ನುತ್ತಿದ್ದೀಯ ಎಂದು ಕೇಳಿದರು. ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ ಕಡಿಮೆ ಆಗುತ್ತದಂತೆ ಅಂದೆ.
ಗುರುಗಳು ನಕ್ಕರು.
ನಿಮ್ಮ ಮನೆಯ ಹಿರೀಕರ ಫೋಟೋ ಇದೆಯಾ ಕೇಳಿದರು. ನಮ್ಮ ಕುಟುಂಬದ ಮಂದಿಯ ಫೋಟೋ ಕೊಟ್ಟೆ. ಇದಕ್ಕೂ ಹಳೆಯ ತಲೆಮಾರಿನ ಫೋಟೋ ಇದ್ದರೆ ಕೊಡು ಅಂದರು. ನಮ್ಮಪ್ಪ, ದೊಡ್ಡಪ್ಪ, ಚಿಕ್ಕಪ್ಪಂದಿರ ಫೋಟೋ ಕೊಟ್ಟೆ. ಅದನ್ನೇ ದಿಟ್ಟಿಸುತ್ತಾ ಗುರುಗಳು ಹೇಳಿದರು.
`ಇವರೆಲ್ಲ ತೆಳ್ಳಗೇ ಇದ್ದಾರಲ್ಲ! ಇವರು ಸಾಮೆ ತಿನ್ನುತ್ತಿದ್ದರೇ? ಇವರಿಗಿಂತ ಹಿರಿಯರೂ ತೆಳ್ಳಗೇ ಇದ್ದಿರಬೇಕು. ಅವರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ ಅಲ್ಲವೇ? ಈ ಜಗತ್ತಿನಲ್ಲಿ ಕೇವಲ ಐದು ವರ್ಷಗಳ ಹಿಂದೆ ಯಾರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ಎಲ್ಲರೂ ತೆಳ್ಳಗೇ ಇದ್ದರು. ಆರೋಗ್ಯವಂತರಾಗಿಯೂ ಇದ್ದರು. ಅಲ್ಲವೇ’
ತಲೆಯಾಡಿಸಿದೆ.
ಗುರುಗಳು ನಗುತ್ತಾ ಹೇಳಿದರು:
`ಅಂದರೆ ನಿನ್ನ ಅತಿತೂಕದ ಸಮಸ್ಯೆಗೆ ಕಾರಣ ಅನ್ನ ಅಲ್ಲ. ನಿನ್ನ ಜೀವನ ವಿಧಾನ. ನಿಮ್ಮಪ್ಪ ದುಡೀತಿದ್ದರು. ನಿನ್ನ ತಾತ ನಡೀತಿದ್ದರು. ಓಡಾಡುತ್ತಿದ್ದರು. ಬೆವರುತ್ತಿದ್ದರು. ದೇಹವನ್ನು ದಂಡಿಸುತ್ತಿದ್ದರು. ಶ್ರಮ ಪಡುತ್ತಿದ್ದರು. ನಿಮ್ಮ ಮನೆಯಿಂದ ಮತ್ತೊಂದು ಮನೆಗೆ ಹೋಗುವುದಕ್ಕೆ ಬೈಕು ಹತ್ತುತ್ತಿರಲಿಲ್ಲ. ಯಾವತ್ತೂ ಇಡೀ ದಿನ ಕೂತುಕೊಂಡೇ ಕಾಲ ಕಳೆಯುತ್ತಿರಲಿಲ್ಲ. ತಲೆ ಬಗ್ಗಿಸಿ ಮೊಬೈಲ್ ನೋಡುತ್ತಾ ಬದುಕು ಸವೆಸುತ್ತಿರಲಿಲ್ಲ. ಚಿಪ್ಸು ತಿನ್ನುತ್ತಾ ಕ್ರಿಕೆಟ್ ನೋಡುತ್ತಿರಲಿಲ್ಲ. ಆಟ ಆಡುತ್ತಿದ್ದರು. ಮೂಟೆ ಹೊರುತ್ತಿದ್ದರು. ನೀರು ಸೇದುತ್ತಿದ್ದರು. ಹೌದಾ!’
ತಲೆಯಾಡಿಸಿದೆ.
‘ಅಂದರೆ ನೀನು ಬದಲಾಯಿಸಬೇಕಾದದ್ದು ನಿನ್ನ ಆಹಾರವನ್ನಲ್ಲ. ಜೀವನ ಶೈಲಿಯನ್ನು. ನಾನು ಪಂಜಾಬಿನುದ್ದಗಲ ಓಡಾಡಿದ್ದೇನೆ. ಅಲ್ಲಿ ನೂರು ನೂರೈವತ್ತು ಕೇಜಿ ತೂಗುವ ಮಂದಿ ಸಾಕಷ್ಟು ಮಂದಿ ಇದ್ದಾರೆ. ಅವರು ಗೋಧಿ ತಿನ್ನುವವರು. ಆದರೂ ಬೊಜ್ಜು ಬೆಳೆಸಿಕೊಂಡಿದ್ದಾರೆ. ಅಂದರೆ ಬೊಜ್ಜು ಇಳಿಸುವುದಕ್ಕೆ ಗೋಧಿ ತಿಂದು ಪ್ರಯೋಜನ ಇಲ್ಲ. ಸಣ್ಣಗಾಗುವುದಕ್ಕೆ ಸಿರಿಧಾನ್ಯ ತಿಂದು ಪ್ರಯೋಜನ ಇಲ್ಲ. ಸಿರಿಧಾನ್ಯವನ್ನು ಒಂದು ಗಂಟೆ ನೀರಲ್ಲಿ ನೆನೆಸಿಟ್ಟು ನೋಡು. ಅದು ನೆನೆಯುವುದಿಲ್ಲ. ನೀರನ್ನು ಹೀರುವುದಿಲ್ಲ. ಒಂದು ಪಾವು ಅಕ್ಕಿ ಅನ್ನ ಆಗಬೇಕಿದ್ದರೆ ಎರಡೂವರೆ ಪಾವು ನೀರು ಬೇಕು. ಸಿರಿಧಾನ್ಯ ಅದರ ಅರ್ಧದಷ್ಟು ನೀರಲ್ಲಿ ಬೇಯುತ್ತದೆ. ನೀರು ಹೀರಿಕೊಳ್ಳದ ಧಾನ್ಯ ಒಳ್ಳೆಯದಲ್ಲ. ಒಂದು ವರ್ಷ ಸಿರಿಧಾನ್ಯವನ್ನೇ ತಿಂದು ನೋಡು. ಥೈರಾಯ್ಡ್ ಗ್ರಂಥಿ ಇನ್ನಿಲ್ಲದಂತೆ ಏನೇನನ್ನೋ ಸ್ರವಿಸಲು ಶುರುಮಾಡುತ್ತದೆ. ಹೋಗಲಿ, ಸಿರಿಧಾನ್ಯ ನೀರಿಲ್ಲದ ಪ್ರದೇಶದಲ್ಲೂ ಬೆಳೆಯಬಲ್ಲ, ಅತಿ ಕಡಿಮೆ ಖರ್ಚಲ್ಲಿ ಬೆಳೆಯುವಂಥ ಧಾನ್ಯ. ಅದಕ್ಕೆ ಅಕ್ಕಿಯ ಮೂರು ಪಟ್ಟು ಬೆಲೆ ಯಾಕಿದೆ ಹಾಗಿದ್ದರೆ? ಅಕ್ಕಿಯೊಳಗನ್ನವನು ಮೊದಲು ಕಂಡ ಜ್ಞಾನಿ, ಸಿರಿಧಾನ್ಯವನ್ನೇಕೆ ನಮ್ಮ ಮೇಜರ್ ಸ್ಟೇಪಲ್ ಫುಡ್ ಅಂತ ನಿರ್ಧರಿಸಲಿಲ್ಲ. ಯಾಕೆಂದರೆ ಅದು ಆರೋಗ್ಯವಂತ ಆಹಾರ ಅಲ್ಲವೇ ಅಲ್ಲ. ಅದನ್ನು ಈಗ ಮಾರ್ಕೆಟಿಂಗ್ ಸಂಸ್ಥೆಗಳೂ ವೈದ್ಯರೂ ಸೇರಿ ಪ್ರಮೋಟ್ ಮಾಡುತ್ತಿದ್ದಾರೆ. ನಾವು ನಮ್ಮ ಸುತ್ತಮುತ್ತ ಏನು ಬೆಳೆಯುತ್ತೇವೋ ಅದೇ ನಮಗೆ ಶ್ರೇಷ್ಠವಾದ ಆಹಾರ. ಆಹಾರ ಪದ್ದತಿ ಬದಲಾಯಿಸಬೇಡ, ಜೀವನ ಶೈಲಿ ಬದಲಾಯಿಸು. ಎಲ್ಲವೂ ಬದಲಾಗುತ್ತದೆ. ಕುಂತಲ್ಲೇ ಕೂತು, ಕೈ ಕಾಲುಗಳನ್ನು ಮೈಯನ್ನು ಹೇಗೆ ಬಳಸಬೇಕೋ ಹಾಗೆ ಬಳಸದೇ, ಆ ಕೊರತೆ ನೀಗಿಕೊಳ್ಳಲು ಸಿರಿಧಾನ್ಯ ತಿನ್ನುತ್ತೇನೆ ಅನ್ನೋದು ಪರಮ ದಡ್ಡತನ’ ಅಂದರು.
ಆವತ್ತೇ ರಾತ್ರಿ ಬಿಸಿಬಿಸಿ ಅನ್ನಕ್ಕೆ ಘಮಘಮಿಸುವ ಸಾರು, ಒಂದು ಮಿಳ್ಳೆ ತುಪ್ಪ ಹಾಕಿಕೊಂಡು ಹೊಟ್ಟೆ ತುಂಬ ತಿಂದೆ. ದೇವರು ದೊಡ್ಡವನು. ಸಿರಿಧಾನ್ಯಕ್ಕೆ ಬಲಿಯಾಗುತ್ತಿದ್ದವನನ್ನು ಗುರುವಿನ ರೂಪದಲ್ಲಿ ಬಂದು ಕಾಪಾಡಿದ.
ಹತ್ತು ವರ್ಷ ಮೊದಲೇ ಸಾಯೋಣ, ಅದಕ್ಕೇನಂತೆ, ಅನ್ನ ಸಾರು ತಿಂದೇ ಸಾಯೋಣ! 🙂

*********

A King had 10 wild dogs. He used them to torture & kill any minister that misguided him.

A Minister once gave an opinion which was wrong which the king didn’t like at all… 
So he ordered that the Minister be thrown to the dogs.

The Minister said, "I served you loyally for 10 years & you do this..?"

The King was unrelenting.

Minister pleaded, "Please give me 10 days before you throw me to the dogs".

The King agreed. 

In those 10 days, the Minister went to the keeper of the dogs & told him he wanted to serve the dogs for the next 10 days… 

The Guard was baffled… But he agreed.

So the minister started feeding the dogs, caring for them, washing them, providing all sorts of comfort for them.

So when the 10 days were up… 

The King ordered that the minister be thrown to the dogs as sentenced. 

When he was thrown in, everyone was amazed at what they saw...
The dogs were wagging their tails playing with the condemned minister... licking his feet.

The King was baffled at what he saw, "What happened to the dogs?” He growled.

The Minister then said, "I served the dogs for only 10 days & they didn’t forget my service... I served you for 10 years & you forgot all at the first mistake”… 

The King realised his mistake 

and 

Replaced the dogs with crocodiles 🐊!!

Moral : When Management has decided ki tumhaari bajani hai to bajani hi hai... That's Final... ...😀😂😂

*********

एक बुजुर्ग आदमी के सिर पर 8 बाल थे 

वो नाई की दुकान गया 

नाई ने गुस्से से पूछा 
                          गिनू की काटू? 

बूढ़े ने हँस कर कहा -
                             रंग दो!! 

जीवन आनंद के लिए है चाहे जो हो बस मुस्कुराते रहो !! 

यदि आप चिंतित हो 

तो खुद को थोड़ा आराम दो, 

कुछ 

आइसक्रीम 
चाकलेट 
केक  लो 

क्यों ?? 

क्योंकि 

STRESSED (चिंता)  का उल्टा होता है 
DESSERTS!!!  (मीठा)

अंग्रेजी वर्ण हमें सिखाते हैं... 

A B C

Avoid Boring Company 
मायूस संगत से दूरी 

D E F

Don't Entertain Fools 
मूर्खों पर समय व्यर्थ मत करो 

G H I

Go For High Ideas 
उँचे विचार रखो 

J K L M

Just Keep a friend like Me..
मेरे जैसा मित्र रखो 

N O P

Never Overlook the Poor n Suffering 
गरीब व पीडित को कभी अनदेखा मत करो 

Q R S

Quit Reacting to Silly tales.. 
मूर्खों को प्रतिक्रिया मत दो 

T U V 

Tune Urself for ur Victory 
खुद की जीत सुनिश्चित करो 

W X Y Z 

We Xpect You to Zoom ahead in life 
हम आपसे जीवन मे आगे देखने की आशा करते हैं 

यदि आपने चाँद को देखा तो आपने ईश्वर की सुन्दरता देखी... 
यदि आपने सूर्य को देखा तो आपने ईश्वर का बल देखा 

और 

यदि आपने आइना देखा तो आपने ईश्वर की सबसे सुंदर रचना देखी। 

इसलिए स्वयं पर विश्वास रखो 

जीवन में हमारा उद्देश्य होना चाहिए 
9 8 7 6 5 4 3 2 1 0 

9 - गिलास पानी 
8- घंटे नींद 
7- यात्रायें परिवार के साथ 
6- अंकों की आय 
5- दिन हफ्ते में काम 
4- चका वाहन 
3- बेडरूम वाला फ्लेट 
2- अच्छे बच्चे 
1- दिलबर 
0- चिंता..!!



 
पढ़  कर  भूलना मत.... ये सिर्फ MSG नहीँ  एक सीख है !!  THANQ
😊😊😊😊😊😊😊😊😊

*********

ಕೆಲಸಕ್ಕೆ ಹೋಗಿ ಮರಳಿ ಬಂದ ಅಮ್ಮನಲ್ಲಿ ಮಗು ಕೇಳಿತು....

"ನಮ್ಮ ಮನೆಯ ಕಪಾಟಿನ ಚಾವಿಯನ್ನು ಯಾಕೆ ಕೆಲಸದವರ ಕೈಯಲ್ಲಿ ಕೊಡ್ತಿಲ್ಲ"?

ಅಮ್ಮ:" ಅದನ್ನಲ್ಲಾ ಅವರ ಕೈಯಲ್ಲಿ ಹೇಗೆ ಕೊಡೋದು"?

ಮಗು:"ಹಣ, ಒಡವೆಗಳನ್ನು ಯಾಕೆ ಕೊಡುತಿಲ್ಲ"?

ಅಮ್ಮ:" ಅದನ್ನೆಲ್ಲ ಅವರ ಕೈಯಲ್ಲಿ ಕೊಡಬಾರದು"

ಮಗು:" ATM ಕಾರ್ಡ್ ಯಾಕೆ ಕೊಡುತಿಲ್ಲ"?

ಅಮ್ಮ:" ಅದೆಲ್ಲಾ  ನಮಗೆ ಅತ್ಯಗತ್ಯವಾಗಿ ಬೇಕಾದ ಬೆಲೆ ಬಾಳುವ ವಸ್ತುಗಳು ಇದನ್ನೆಲ್ಲಾ ಕೆಲಸದವರ ಕೈಯಲ್ಲಿ ಕೊಡಬಾರದು"

ಮಗು:" ಹಾಗಾದರೆ ಯಾಕೆ ಅಮ್ಮಾ ನನ್ನನ್ನು ಮಾತ್ರ ಅವರ ಕೈಯಲ್ಲಿ ಕೊಟ್ಟು ಹೋಗ್ತೀಯಾ.. ನನಗೆ ಬೆಲೆ ಇಲ್ಲವೇ? .. ನಾನು ನಿಮಗೆ ಬೇಡದ ವಸ್ತುವೇ.."?

ಅಮ್ಮನಿಂದ ಉತ್ತರವಿಲ್ಲ....

ಕಣ್ಣೀರು ಮಾತ್ರ... !

ಒಂದು ಕ್ಷಣ ಎಲ್ಲರು ಚಿಂತಿಸಬೇಕಾದ ಪೋಸ್ಟ್.
 
ನನ್ನ ಮನವನ್ನು ಕಲಕಿತು... 

ನಿಮಗೇ.....

*********

ಅಪ್ಪ - ನಾಳೆ ನಿನ್ನ ರಿಸಲ್ಟ ಅಲ್ವಾ
ಮಗ - ಹೌದು
ಅಪ್ಪ - ನಿ ಎಲ್ಲರೆ ಪೆಲ್ ಆದ್ರ ನಂಗ ನಿಂಗ ಸಂಬಂಧ ಇಲ್ಲ ನೋಡ ಪಾ

(ಮರುದಿನ)

ಅಪ್ಪ - ರಿಸಲ್ಟ ಏನಾತೋ 😡
ಮಗ - ಅದನ ಕೆಳಾಕ ನಿ ಯಾವನಲೆ 
😜😜😜😜😜😜

*********

*ನಮ್ಮನ್ನೇ ನಾವು ದಾನವಾಗು ಕೊಡಬೇಕು*

"ಲಾಭದ ಆಶೆಯಿಲ್ಲದೇ ಎಷ್ಟು ಹೆಚ್ಚು ನಮ್ಮನ್ನು ನಾವು ಕೊಡುತ್ತೇವೆ, ಅನಿರಿಕ್ಷಿತ ಮೂಲಗಳಿಂದ ಅದಕ್ಕೂ ಹೆಚ್ಚು ನಮಗೆ ತಿರುಗಿ ಬಂದಿರುತ್ತದೆ" ಈ ನಿಯಮ ಪ್ರತಿಯೊಂದು  ಹಂತದಲ್ಲಿಯೂ ಅನ್ವಯಿಸುತ್ತದೆ. 
ಅನೇಕ
ಯಾವ ಕ್ಷಣದಲ್ಲಿ ಪ್ರತಿಫಲದ ಅಪೇಕ್ಷೆ ಬಂತೋ ಆ ಕ್ಷಣದಿಂದ ವ್ಯವಹಾರ ಆರಂಭವಾಗಿ ಬಿಡುತ್ತದೆ. ಪ್ರತಿಫಲವಿಲ್ಲ, ವ್ಯವಹಾರವಿಲ್ಲ. ವ್ಯವಹಾರವಿಲ್ಲ ಎಂದಾದರೆ ಕೇವಲ ನಮ್ಮನ್ನುನಾವು ಸಮರ್ಪಿಸಿಕೊಂಡಿದ್ದು, ದಾನ ಮಾಡಿಕೊಂಡಿದ್ದು ಎಂದೇ ಅರ್ಥ.

ಗೆಲುವು ಪಡೆಯಲು, ಶಾಂತತೆ ಅನುಭವಿಸಲು, ಅಪೇಕ್ಷಿತವಾದದ್ದನ್ನು ಈಡೇರಿಸಿಕೊಳ್ಳಲು ಬೇಕು ನಿರಪೇಕ್ಷ  ಸಮರ್ಪಣಾಭಾವ.

ಇದು ದೇವರ, ದೇವತೆಗಳ, ಗುರುಗಳ ಅಥವಾ ಸಂಬಂಧಿಗಳ ಇತ್ಯಾದಿ ಯಾರದೇ ವಿಷಯಕ್ಕೂ ಬೇಕು. ಯಾರಿಂದ ಏನೇ ಪಡೆಯಬೇಕು ಎಂದರೂ ಸಮರ್ಪಣಾಭಾವ ಅವಷ್ಯವಾಗಿ ಬೇಕು.

ಪಾಂಡವರು ...
ತಮ್ಮನ್ನು ತಾವು ಏನನ್ನೂ ಅಪೇಕ್ಷಿಸದೆ ಎಲ್ಲವನ್ನೂ ಸಮರ್ಪಣೆ ಮಾಡಿಕೊಂಡದ್ದಕ್ಕೆ, ತಮ್ಮನ್ನೇ ತಾವು ದಾನವನ್ನಾಗಿ ಕೊಟ್ಟದ್ದಕ್ಕೆ ಅವರ ಶಾಂತಿ ಕದಡಲಿಲ್ಲ. ಅಪೇಕ್ಷಿತ ಸಿಗಲಿಲ್ಲ ಎಂದಾಗಲಿಲ್ಲ. ಆಪತ್ತು ಬಂದಾಗಲೆಲ್ಲ ದೇವರು ಓಡಿಬಂದ. ಹೀಗೆ ಒಂದು ಲಾಭವಾದರೆ...

ಎದುರಿನ ವ್ಯಕ್ತಿಯನ್ನು ಬಗ್ಗಿಸಲು ನಮ್ಮ ಸಮರ್ಪಣೆ ತುಂಬ ಮುಖ್ಯ. ಸಮರ್ಪಣೆ ಎದುರಿನ ವ್ಯಕ್ತಿಯನ್ನು ಹದ ಮಾಡುತ್ತದೆ, ಮೆತ್ತಗೆ ಮಾಡುತ್ತದೆ. ಒಂದುಬಾರಿ ಮೆತ್ತಗೆ ಹದನಾದನೋ ಅವನನ್ನು ನಾವು ಸರಳವಾಗಿ ಬಗ್ಗಿಸಬಹುದು.  ದಾನ ಸಮರ್ಪಣೆ *ನೀ ಬಾಗು, ಅವರನ್ನು ಬಗ್ಗಿಸು* ಇದು ಮತ್ತೊಂದು. 

ಮೂರನೆಯದು..
ದೇಹ, ಇಂದ್ರಿಯ, ಮನಸ್ಸು ಇವುಗಳ ಸಮರ್ಪಣೆ ಅಗಾಧವಾದ ವಿಶ್ವಾಸ, ದೃಢವಾದ ಸಂಬಧವನ್ನು ಏರ್ಒಡಿಸುತ್ತದೆ. ಸಮರ್ಪಣಾ ಭಾವ ಕಡಿಮೆ ಆದರೆ ವಿಶ್ವಾಸ ಹಾಗೂ ಸಂಬಂಧಗಳು ಸಡಿಲವಾಗುತ್ತದೆ. ಆಗ  ಅಂತರ ಹೆಚ್ಚಾಗುತ್ತೆ. ಇದು ಮಾನವರಿಂದ ದೇವರವರೆಗೆ  ಸಹಜ. 

ಜಗತ್ತಿಗೆ ನಮ್ಮನ್ನು ನಾವು ಸಮರಗಪಿಸಿಕೊಳ್ಳದಿದ್ದರೂ ನಮ್ಮವರಾದ ಸ್ನೇಹಿತರಿಗೆ, ತಂದೆ ತಾಯಿಗಳಿಗೆ,  ಗುರುಗಳಿಗೆ , ದೇವತೆಗಳಿಗೆ, ಕೊನೆಗೆ ದೇವರಿಗೆ ಆದರೂ ಸಮರ್ಪಿಸಿಕೊಳ್ಳುವಂತಾಗಬೇಕು. ಹಾಗಾದಾಗಲೇ *ದೇಹ ಇಂದ್ರಿಯ ಮನಸ್ಸುಗಳ ದಾನ ಸರ್ವಶ್ರೇಷ್ಠ ದಾನ* ಎಂದಾಗುತ್ತದೆ. ಆಗ ಶಾಂತಿ ಸಮೃದ್ಧಿ ರಕ್ಷಣೆ ಇತ್ಯಾದಿ  ಎಲ್ಲವನ್ನೂ ಪಡೆಯಬಹುದು.
*********
*ಜೀವನವೆಂಬುದು ಬೆಕ್ಕು ಮತ್ತು ಇಲಿಯ ನಡುವಿನ ಓಟದ ಸ್ಪರ್ಧೆಯ ರೀತಿ,* 
*ಈ ಓಟದಲ್ಲಿ ಹೆಚ್ಚಾಗಿ ಇಲಿಯೇ ಗೆಲ್ಲುವುದು, ಯಾಕೆಂದರೆ ಬೆಕ್ಕು ಆಹಾರಕ್ಕಾಗಿ ಓಡಿದರೆ ಇಲಿ ತನ್ನ ಜೀವ(ನ)ಕ್ಕಾಗಿ ಓಡುತ್ತದೆ.*

*ನೆನಪಿಡಿ:   "ಅವಶ್ಯಕತೆಗಿಂತಲೂ ಗುರಿ ಬಹು ಮುಖ್ಯ*

*ಗೆಲ್ಲಲೇಬೇಕು ಎಂದು ನಿರ್ಧರಿಸಿದ ಮೇಲೆ ಸಾವಿರ ಸಲ ಸೋತರು ಕೂಡಾ ಎದೆಗುಂದಬಾರದು  ನಮ್ಮ ಪ್ರಯತ್ನವನ್ನು ಮಾತ್ರ ನಿರಂತರವಾಗಿ ಮಾಡುತ್ತಲೇ  ಇರಬೇಕು ಗೆಲುವು ಸಿಕ್ಕೆ ಸಿಗುತ್ತದೆ, ಆಗ ಆ ಗೆಲುವು  ಹೆಚ್ಚು ಅವಿಸ್ಮರಣೀಯವಾಗಿರುತ್ತದೆ.!!*

*********


–>