-->

Part 135 - Jokes , Fun , Haasya , Humor , Quotes , Greetings

ಪ್ರತಿ ಕುಡುಕನೊಳಗೆ
• ಒಬ್ಬ ಇಂಗ್ಲೀಷ್ ಟೀಚರ್ ಇರುತ್ತಾನೆ
Part 135 - Jokes , Fun , Haasya , Humor , Quotes , Greetings
• ಒಬ್ಬ ರಾಜಕೀಯ ವಿಶ್ಲೇಷಕ ಇರುತ್ತಾನೆ • ಒಬ್ಬ ಡ್ಯಾನ್ಸರ್ ಇರುತ್ತಾನೆ • ಒಬ್ಬಸಿಂಗರ್ ಇರುತ್ತಾನೆ • ಒಬ್ಬ ಲವ್ವರ್ ಬಾಯ್ ಇರುತ್ತಾನೆ •ಪ್ರಪಂಚದಲ್ಲಿ ಇನ್ನೂ ಕಂಡು ಹಿಡಿಯದ ವಸ್ತುವಿನ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ವಿಜ್ಞಾನಿ ಇರುತ್ತಾನೆ •ದಿನಕ್ಕೆ ನೂರು ರುಪಾಯಿ ಸಂಪಾದನೆ ಮಾಡಿದರೂ ಕೋಟಿಗಳ ವಿಷ್ಯ ಮಾತನಾಡೋ ಬ್ಯುಸಿನೆಸ್ ಮ್ಯಾನ್ ಇರುತ್ತಾನೆ •ಮಗುವಿನಂತೆ ಅತ್ತುಬಿಡುವ ಮೃದು ಮನಸಿನ ವ್ಯಕ್ತಿ ಇರುತ್ತಾನೆ •ತನ್ನ ಹೆಂಡತಿಯ ಜೊತೆ ಊರವರ ಹೆಂಡತಿಯರನ್ನೂ ಪ್ರೀತಿಸುವ ಒಳ್ಳೆ ಮನಸ್ಸಿನವ ಇರುತ್ತಾನೆ •ಕಣ್ಣು ಕೆಂಪು ಮಾಡಿಕೊಂಡು ವಜ್ರಮುನಿಯಂತೆ ಕಾಣುವ ವಿಲನ್ ಇರುತ್ತಾನೆ •ತಾನು ಕುಡಿದಿದ್ದೇನೆ ಎಂದು ಗೊತ್ತು ಮಾಡಲು ಓವರ್ ಆ್ಯಕ್ಟ್ ಮಾಡುವ ನಾಟಕ ಕಾರ ಇರುತ್ತಾನೆ •ತಾನು ಕುಡಿದೇ ಇಲ್ಲ ಎಂದು ಪೋಸ್ ಕೊಡುವವನೂ ಇದ್ದಾನೆ •ಜಿಪುಣ ಆಗಿದ್ರೂ ಕುಡಿದ್ಮೇಲೆ ವೈಟರ್ ಗೆ ಕೈ ತುಂಬಾ ಟಿಪ್ಸ್ ಕೊಡುವ ದಾನ ಶೂರ ಇರುತ್ತಾನೆ •ತನ್ನನ್ನು ಬಿಟ್ಟು ಹೋದ ಲವ್ವರ್ ಗಳನ್ನು ಲೆಕ್ಕ ಹಾಕುವ ಆಡಿಟರ್ ಇರುತ್ತಾನೆ •ಹಳೆ ಬಾರ್ ಬಿಲ್ಲ್ ಗೆ ಹೋಲಿಸಿದರೆ ಈ ಸಲ ಕಮ್ಮಿ ಆಗಿದೆ ಎಂದು ತನ್ನನ್ನು ತಾನು ಸಮಾಧಾನ ಮಾಡಿ ಕೊಳ್ಳುವವನಿರುತ್ತಾನೆ •ಸಿಗ್ರೇಟ್ ಉಲ್ಟಾ ಹೊತ್ತಿಸಿ ತನ್ನನ್ನು ಯಾರೂ ನೋಡಿಲ್ಲ ಅಂತ ಅಂದ್ಕೊಳ್ಳೋನು ಇದ್ದಾನೆ •ನೀರು ಹಾಕದೆ ಡ್ರೈ ಎಳೆಯೋ ಪ್ರತಿಭಾವಂತನೂ ಇರುತ್ತಾನೆ •ಬಾರ್ ಓನರ್ ಹತ್ರ ಬಿಲ್ ಜಾಸ್ತಿಯಾಗಿದೆ ಅಂತ ಗಲಾಟೆ ಮಾಡೋ ಪುಡಿ ರೌಡಿ ಇರುತ್ತಾನೆ ತಾನು ಲೋ ಕ್ವಾಲಿಟಿ ಎಣ್ಣೆ ಕುಡಿದರು ಸತ್ಯ ಹೇಳೋ ಕ್ವಾಲಿಟಿ ಇರೋ ಕುಡುಕ ಹೊರ ಬರುತ್ತಾನೆ ದೂರವಾಣಿ ಸಂಸ್ಥೆಯನ್ನು ಉದ್ದಾರ ಮಾಡೋ ಒಬ್ಬ ಪ್ರಾಮಾಣಿಕ ಕುಡುಕ ಮಾತುಗಾರ ಸಿಗುತಾನೆ. 🥃🍷🥂🍻🍺🍸🍾


*********

ಯಾರ್ಲಾ ಅದು ಪ್ಲಾಸ್ಟಿಕ್ ಅಕ್ಕಿ ತಿಂದ್ರೆ
ಬೆಳಿಗ್ಗೆ ನೈಲಾನ್ ಹಗ್ಗ ಹೊರಕ್ಕೆ ಬರುತ್ತೆ ಅಂದವನು ?😆😝😜

*********

ಹುಬ್ಬಳ್ಳಿ ಒಬ್ಬ ಹುಡುಗ ಅವನ girl friend ಗೆ call ಮಾಡಿದಾಗ ಹುಡುಗಿಯ ಅಪ್ಪಾ call receive ಮಾಡತಾನ 😳 .

ಹುಡಗಿ ಅಪ್ಪಾ:-hello ಯಾರು? ?????

ಹುಡುಗ:ನಾನು ಪುನಿತ್ ರಾಜಕುಮಾರ ಕನ್ನಡದ ಕೋಟ್ಟಾದಿಪತಿಯಿಂದ ಮಾತನಾಡುತ್ತಿದ್ದೆನೆ
ನಿಮ್ಮ ಮಗಳ ಗೆಳತಿ hot seatಲ್ಲಿ 
 ಕುಳುತ್ತಿದ್ದಾರೆ ಒಂದು ಕಠಿಣ ಪ್ರಶ್ನೆಗೆ ನಿಮ್ಮ ಮಗಳ ಸಹಾಯ ಕೇಳಲಿದ್ದಾರೆ ದಯವಿಟ್ಟು ನಿಮ್ಮ ಮಗಳಿಗೆ ಪೋನ್ ಕೊಡಿ 🎩

ಹುಡಗಿ ಅಪ್ಪಾ exited ಆಗಿ ಹುಡಗಿ ಕೈಗೆ ಪೋನ್ ಕೊಟ್ಟಾ😊🤗..

ಹುಡುಗ: ಇದು ನಿನಗಿರುವ ಪ್ರಶ್ನೆ , "ನಾವು ಇವತ್ತು ಎಲ್ಲೇ ಬೆಟ್ಟಿ ಆಗೋಣ "😜

(Option A): ನೃಪತುಂಗ ಬೆಟ್ಟ 

(Option B): Glass House
   
(Option C): ಉಣಕಲ್ ಕೆರಿ

(Option D): ಸಂಜೀವಿನಿ Park

ಹುಡುಗಿ: "Option ☺D"

ಹುಡುಗ: ದನ್ಯವಾದಗಳು
ನಿಮ್ಮ ಸಮಯ ಸಮಾಪ್ತಿಯಾಗಿದೆ
,,,,,,,,,,, 
ಹುಡಗಿ ಅಪ್ಪಾ ಆ ಖುಷಿಯಿಂದ ಇನ್ನೂ ಹೊರಗಡೆ ಬಂದಿಲ್ಲ 🤣😎😁😘😜😍


ನಮ್ಮ ಹುಬ್ಬಳ್ಳಿ 👊 ಹುಡಗೋರು ಮನಸ್ಸು ಮಾಡಿದ್ರ ಏನಬೇಕಾದ್ರೂ ಮಾಡತರ .💪💪💪💪💪😎
*********
ಮನೆಯಲ್ಲಿ ಮದುವೆಯ ವಿಚಾರ ಮಾತಾಡ್ದಾಗ *"ಎಲೆಕ್ಷನ್ ಟಿಕೆಟ್"* ಸಿಕ್ಕಿದಷ್ಟ್ ಖುಷಿ ಆಗ್ತದೆ....
    ಯಾವ್ದಾದರು ಹುಡುಗಿ ಒಪ್ಪಿಗೆ ಕೊಟ್ಟಮೇಲೆ ನಾವೆ *"ಶಾಸಕ"*ರಾದಷ್ಟು ಸಂತೋಷವಾಗ್ತದೆ....
    ಮದುವೆ ದಿನ ಹತ್ತಿರ ಬಂದಾಗ ನಾವೆ *"ಸಿಎಂ"* ಆದ ಅನುಭವ ಆಗ್ತದೆ....
    ಮದುವೆಯಾಗಿ ಒಂದ್ ವರ್ಷ ಆದ್ಮೇಲೆ ಯಾವುದೋ *"ಹಗರಣ"*ದಲ್ಲಿ ಸಿಕ್ಕಿಹಾಕ್ಕೊಂಡ ಹಾಗನಿಸುತ್ತದೆ....
.
.
ಲೈ಼ಪ಼ು‌‌‍ ಇ಼ಷ್ಟೆ಼ನೆ಼😀😀😊😆

*********

ಗುಂಡ ಮತ್ತು ಅವನ ಹೆಂಡತಿ ಡೈವೋರ್ಸ್ ಪಡೆದರು. ಅವನ ಸಂಬಳದ ಅರ್ಧ ಭಾಗವನ್ನು ಆಕೆಗೆ ಪ್ರತಿ ತಿಂಗಳೂ ಕೊಡಬೇಕೆಂದು ಕೋರ್ಟ್ ಆದೇಶಿಸಿತು. ಗುಂಡ ಇದನ್ನು ಕೇಳಿ ಕುಣಿದು ಕುಪ್ಪಳಿಸಿದ. 
ಸ್ನೇಹಿತ: 🤔ಯಾಕೋ ಖುಷಿ?
ಗುಂಡ: ಇನ್ಮೇಲೆ ನನ್ನ ಸಂಬಳದ ಅರ್ಧ ಭಾಗ ನನಗೂ ಸಿಗುತ್ತೆ ಕಣೋ😋😋

*********

ಪಟ್ಟಣಕ್ಕೆ ಪ್ರಸಿದ್ಧ ಜ್ಯೋತಿಷಿ ಬಂದಿದ್ದಾರೆ ಎಂದು ಕೇಳಿದ ರಾಯರು ಅವರನ್ನು ಕಾಣಲು ಹೋದರು. 

ತಮ್ಮ ಜಾತಕದ ಜೊತೆ 501/= ಕಾಣಿಕೆ ಇಟ್ಟು ಕೇಳಿದರು...!

ಗುರುಗಳೇ,
ನಾನು ಯಾವಾಗ,
ಯಾವ ಸ್ಥಳದಲ್ಲಿ, 
ಯಾವ ಪರಿಸ್ಥಿತಿಯಲ್ಲಿ ಸಾಯುತ್ತೇನೆ ಎಂದು ಕೇಳಿದರು. 

ಜ್ಯೋತಿಷಿಗಳು
ರಾಯರ ಜಾತಕ ನೋಡಿದರು, 
ಅವರ ಮುಖವನ್ನು
 ದಿಟ್ಟಿಸಿ ನೋಡಿದರು.
ನಂತರ ಒಂದು ಹಾಳೆಯಲ್ಲಿ ಸಂಖ್ಯೆಗಳನ್ನು ಬರೆದು
ಕೂಡಿ,
ಕಳೆದು,
ಗುಣಿಸಿ,
ಭಾಗಿಸಿ,
ಮತ್ತೆ ರಾಯರ ಮುಖ ದಿಟ್ಟಿಸಿ
ಗಂಭೀರವಾಗಿ ಹೇಳಿದರು.....

ನೋಡಿ ರಾಯರೇ,
ನಿಮ್ಮ ಜಾತಕ ಅದ್ಭುತವಾಗಿದೆ.
ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ,
ನಿಮ್ಮ ತಂದೆಯಷ್ಟೇ
ವರ್ಷ ಬದುಕುತ್ತೀರಿ,
ಅವರು ಸಾಯುವ ಸ್ಥಳದಲ್ಲೇ 
ಸಾಯುತ್ತೀರಿ, ಅವರು ಸಾಯುವ ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ....!

ರಾಯರು ಇದನ್ನು 
ಕೇಳಿ ಗುರುಗಳಿಗೆ ವಂದಿಸಿ ಅವಸರದಲ್ಲಿ ತಲೆ ಕೆಟ್ಟವರಂತೆ ಓಡಿದರು

ಅರ್ಧ ಘಂಟೆಯೊಳಗೆ ಅಪ್ಪನನ್ನು ವೃದ್ಧಾಶ್ರಮದಿಂದ
ಮನೆಗೆ ಕರೆತಂದರು.

*********

*ಹಾಲು* ಕುಡಿಯುವುದರಿಂದ ಶರೀರ ಲವಲವಿಕೆಯಿಂದ ಇರುತ್ತದೆ ಎಂದಾದರೆ ಸೋಂಬೇರಿ *ಬೆಕ್ಕು* ಏಕೆ ಹೆಚ್ಚು ಹೊತ್ತು ಮಲಗಿರುತ್ತದೆ.?
🐈🐈🐈.
*ವಾಕಿಂಗ್* ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ ಎಂದಾದರೆ *ಆನೆಯ* ತೂಕ ಏಕೆ ಕಡಿಮೆ ಆಗಿಲ್ಲ.? 🐘.
*ಈಜುವುದರಿಂದ* ಶರೀರ ತೆಳ್ಳಗಾಗುತ್ತದೆ ಎಂದಾದರೆ *ತಿಮಿಂಗಿಲ* ಇನ್ನೂ ಏಕೆ ತೆಳ್ಳಗಾಗಿಲ್ಲ.?🦈🐋.
*ಬೆಳಿಗ್ಗೆ*ಬೇಗ ಏಳುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ ಎಂದಾದರೆ *ಪೇಪರ್* ಹಂಚುವ *ಹುಡುಗರು* BMW ಕಾರಿನಲ್ಲಿ ಬರಬೇಕಾಗಿತ್ತು ಏಕಿಲ್ಲ.?🚘.
🤔🤔🤔🤔🤔🤔🤔

*ಯೋಚನೆ* *ಬಿಡಿ* *ನೀವು* *ಹೇಗಿದ್ದೀರೋ* *ಹಾಗೆಯೇ* *ಇರಿ* *ಸಾಕು*.

*********

ಸಮಯ ಮತ್ತು ನಗು ಎಂಬುದು ಜೀವನದ ವಿಚಿತ್ರಗಳು.  ಕೆಲವೊಮ್ಮೆ ಸಮಯವೂ ನಮಗೆ ನಗುವುದನ್ನೇ ಮರೆಸಿಬಿಡುತ್ತದೆ.  ಮತ್ತೆ ಕೆಲವೊಮ್ಮೆ ನಗುವು  ನಮಗೆ ಸಮಯವನ್ನೇ ಮರೆಸಿಬಿಡುತ್ತದೆ.

*********

Economics is not that difficult if we have the right examples.
Interviewer: What is Recession? 
Candidate: When "Wine & Women" get replaced by "Water & Wife", that critical phase of life is called Recession!!😜

Accountancy fact:
What is the difference between Liability & Asset?
A drunk friend is liability.
But,
A drunk Girlfriend is an Asset.
😜😜😜😜😜

An Economist beautifully explained two reasons for having 2 wives.
A- Monopoly should be broken.
B- Competition improves the quality of service.
If u have 1 wife, She fights with u!
If u have 2 wives, They will fight for you!!

----------------------------
When you are in love,
Wonders happen.
But once you get married,
You wonder, what happened.
----------------------------
Philosophy of marriage :
At the beginning,
every wife treats her husband as GOD..
Later, somehow don't know why..
alphabets get reversed..
----------------------------
Secret formula for married couples...
"Love One Another"
And if it doesn't work, bring the last word in the middle.!!!!
----------------------------

*********

*ಲಗ್ನ ಪತ್ರಿಕೆ*ಯಲ್ಲಿ ಹುಡುಗನಿಗೆ *||ಚಿ||* ಎಂದೂ,
ಹುಡುಗಿಗೆ *||ಚಿ|| ||ಸೌ||* ಎಂದು ಹಾಕುವ ಹಿಂದಿನ ಮರ್ಮವೇನು ಗೊತ್ತೇ? 🤔

*"ಚಿಂತೆಯಿಲ್ಲದವನಿಗೆ ಚಿಂತೆಯ ಸೌಭಾಗ್ಯ ನೀಡುವವಳು"* ಎಂದು ಅರ್ಥ! 😝

*********

ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೆ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ,ಹಾಗೂ ಯಾವ ಸತ್ಯವೂ ಕಾಣಿಸುವುದಿಲ್ಲ,ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು.

*********

ಬೇಸಿಗೆ ಕಾಲದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಕೀಳಲು ಆಗದ ಬಂಡೆಗಲ್ಲು
  ಮಳೆಗಾಲದಲ್ಲಿ ತನ್ನಿಂದ ತಾನೇ ಉರುಳಿ ಹೋಗುತ್ತದೆ. 
  ಜೀವನದಲ್ಲಿ ತಾಳ್ಮೆಯಿಂದ ಇದ್ದರೆ ಎಲ್ಲವನ್ನೂ ಸಾಧಿಸಬಹುದು. 
      *ತಾಳ್ಮೆ ಎಂದರೆ...* *ನಮ್ಮ ಗಟ್ಟಿತನ, ದೌರ್ಬಲ್ಯ ಅಲ್ಲ.*
*********

*ನಿನ್ನ ಬೆಲೆ ಎಷ್ಟು....?* 

ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " *ನನ್ನ ಜೀವನದ ಬೆಲೆ ಏನು* ? "
ಎಂದು. 

ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು *ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ* 

*ಆದರೆ ಅದನ್ನು ನೀನು ಮಾರಬಾರದು* ಎಂದು ಹೇಳಿದನಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು ? ' ಎಂದು ಕೇಳಿದನಂತೆ. 

ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.

ಮಾರುತ್ತೀಯಾ?" ಎಂದು ಕೇಳಿದನಂತೆ. 

ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ. 

ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.

ಇದಾದ ಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. 

ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ "ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ. 

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ. 

ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು. 

ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, 'ಇದನ್ನು ಮಾರುವುದಿಲ್ಲ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. 

ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ. 

ನಾನು ನನ್ನ ಆಸ್ತಿಯನ್ನೆಲ್ಲಾ 
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. ......... 

ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ. 

ಆಗ ದೇವರು "ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.

ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆ ಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು. 

ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ. 

*ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ*. 

ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ. 

*ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ*.

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು. 

ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " *ಮಾನವ ಜನ್ಮ ಬಹು ಶ್ರೇಷ್ಠವಾದದ್ದು*" ಎಂದು. 

ಹಾಗಾಗಿ *ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.🌼🌹

*********

*"ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ- ಕೆಲವೇ ನಿಮಿಷಗಳ ಕೆಲಸ....

   *"ಒಬ್ಬರನ್ನು ಸಂತೋಷ ಪಡಿಸುವುದೆಂದರೆ ಗಿಡವನ್ನು ನೆಟ್ಟು,ಮರವಾಗಿ ಬೆಳೆಸಿದಂತೆ- ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ.... 
*********
ನಮ್ಮನೋವು ನಮಗೆ ಗೊತ್ತಾದರೆ
ನಾವು ಬದುಕಿದ್ದೀವಿ ಎಂದು ಅರ್ಥ. ಪರರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದು ಅರ್ಥ...

*********

A beggar urges a shop keeper for some money to eat.
Initially the shop keeper was a bit hesitant, upon examining the scene, he dragged the beggar bowl forcefully from the beggar and started scratching the bowl with a sand paper. Panicked beggar started to plead. 

Beggar: Even if you don't offer anything, it's fine. This bowl is all I have, give it to me. 

Shop keeper: since when you are carrying this bowl? 

Beggar: From the day I remember

Shop keeper: How did you get this? 

Beggar: My father gave it to me. My grandfather gave it to him. A business man presented it to my grandfather and inferred to make a living with this bowl. 

Shop keeper: Did the businessman told to beg with this bowl while offering? 

Beggar: I donno

In the meanwhile the shopkeeper completely scratched the outer layer of the bowl, as he expected.. It's gold ! 

In a state of shock, beggar was thinking that 3 generations were begging without realizing the value of what we actually had. 

Moral:
Know your Strengths, use them well in time, every human comes to this world as a clean slate. Inhibitions, ego, brought up, experiences, desires, betrayals, greed, ignorance gets deposited over this purity and slowly transforms the true nature and purpose of life.

Deep down every one is pure and gold !

*********

💐💐💐💐💐💐💐💐💐💐

There are only two ways to live a life,

As though nothing is a miracle,

Or as though everything is a miracle.

If you can understand, life is osm.

U decide, choice is yours........
💐💐💐💐💐💐💐💐💐

*********

ಅತ್ತೆ ತನ್ನ ಹೊಸದಾಗಿ ಬಂದ ಸೊಸೆಗೆ ಮನೆಯ ಬಗ್ಗೆ ವಿವರಿಸುತ್ತಾ ಹೇಳುತ್ತಾರೆ. 

ನಾನು ಈ ಮನೆಯ ಗೃಹ ಸಚಿವೆ

ನಿಮ್ಮ ಮಾವ ಹಣಕಾಸು ಸಚಿವರು.
ನನ್ನ ಮಗ ಮನೆಯ ಅಗತ್ಯ ಮತ್ತು ಪೂರೈಕೆ ಸಚಿವ.

ನನ್ನ ಮಗಳು ಅಭಿವೃದ್ಧಿ ಸಚಿವೆ.

ಈಗ ನೀನು ಹೇಳು ಯಾವ ಖಾತೆ ನಿಭಾಯಿಸಲು ಅಣಿಯಾಗಿದ್ದೀಯಾ....?

ಸೊಸೆ ಮಂದಹಾಸದಿಂದ ಉತ್ತರಿಸುತ್ತಾಳೆ...

ಅತ್ತೆ ನಾನು ವಿರೋಧ ಪಕ್ಷದ ನಾಯಕಿಯಾಗಿ ಅಧಿಕಾರ ಸ್ವೀಕರಿಸುತ್ತೇನೆ

*********

*ಸಾವಿರ ಕಾಗೆಗಳು ಕೂಗಾಡಿದರೇನು*
*ಒಂದು ಕೋಗಿಲೆಯ ಧ್ವನಿಯನ್ನು ಸರಿದೂಗಿಸಲಾಗದು....!!*

*ಸಾವಿರ ಜನ ಕೊಂಕು ಮಾತಾಡಿದರೇನು ಒಬ್ಬ ಒಳ್ಳೆಯ ವಕ್ತಿಯ ವಕ್ತಿತ್ವವನ್ನು ವಿರೂಪಗೊಳಿಸಲಾಗದು...!!*
*********
Bell has no sound 
till someone rings it..
Song has no tune 
till someone sings it..

*Express you feelings*
bcoz, it has no value 
till someone feels it..
*********
💕🌟💕🌟💕🌟💕🌟💕

*#ಜಗತ್ತು ಎಷ್ಟೇ ಬದಲಾಗಲಿ,*
*ನಮ್ಮಭಾಂಧವ್ಯ ಚಿರಾಯುವಾಗಿರಲಿ,*
*ಬದುಕು ಎಷ್ಟೇ ಗೊಂದಲವಾಗಿರಲಿ,* 
*ನಮ್ಮ #ನ೦ಬಿಕೆ ಬಲಾಢ್ಯವಾಗಿರಲಿ,*
*#ಕುಟುಂಬ ಎಷ್ಟೇ ದೊಡ್ಡದಾಗಲಿ,*
*ನಮ್ಮ ಗೆಳತನಕ್ಕೆಂದೂ ಧಕ್ಕೆಬಾರದಿರಲಿ,*
*ವಿಧಿಯಾಟ ಎಷ್ಟೇ ಜಠಿಲವಾಗಿರಲಿ,*
*ನಮ್ಮ ತನ ನಮ್ಮಲ್ಲಿರಲಿ.*

🌟💕🌟💕🌟💕🌟💕🌟

*********

ವಿಜಯದಶಮಿಯಂದು, ರಾಮಲೀಲಾ ಮೈದಾನದಲ್ಲಿ ರಾವಣನ ಪ್ರತಿಮೆಗೆ ಬೆಂಕಿ ಹಚ್ಚಿ, ಉರಿಯುತ್ತಿರುವ ಅ ದನ್ನು ನೋಡುತ್ತಾ ನಿಂತ ಜನರನ್ನು ರಾವಣ ಕೇಳಿದನಂತೆ......

"ದುಷ್ಟರೇ, ನೀವೆಲ್ಲಾ ಸೇರಿ ನನಗೆ ಯಾಕೆ ಬೆಂಕಿ ಹಚ್ಚಿದೀರಾ? ನಾನೇನು ನಿಮ್ಮ ಹೆಂಡತೀನ ಎತ್ತುಕೊಂಡು ಹೋಗಿದೀನಾ!?

ಆಗ ಒಬ್ಬ ಆಕ್ರೋಶದಿಂದ ಜೋರಾಗಿ ಕಿರುಚಿ ಹೇಳಿದನಂತೆ.......

"ನಮ್ಮ ಹೆಂಡತಿನ ಎತ್ತಿಕೊಂಡು ಹೋಗಿಲ್ಲ ಅಂತಾನೇ ನಾವು ನಿನಗೆ ಬೆಂಕಿ ಹಚ್ಚಿದ್ದು!!!😜😜😜

*********

ಬದುಕಿನಲ್ಲಿ ಮೂರಕ್ಷರದ ಮಹತ್ವ*


ಮಗು *"ಜನನ"* ಎ೦ಬ ಮೂರಕ್ಷರದಿ೦ದ ಬಾಹ್ಯ *"ಪ್ರಪ೦ಚ"* ಎ೦ಬ ಮೂರಕ್ಷರಕ್ಕೆ ಕಾಲಿಡುತ್ತಾನೆ. ಅಲ್ಲಿ ತಾಯಿಯ *"ಅರೈಕೆ"* ಎ೦ಬ ಮೂರಕ್ಷರದಿ೦ದ ಆರು ವರ್ಷಗಳನ್ನು ಕಳೆದು *"ಕಲಿಕೆ"* ಎ೦ಬ ಮೂರಕ್ಷರ ಕಲಿಯಲು ಶಾಲೆಯ ಮೆಟ್ಟಿಲೇರುತ್ತಾನೆ. ಅಲ್ಲಿ *"ಶಿಕ್ಷಕ"* ಮೂರಕ್ಷರದವ *"ಬೋಧನೆ"* ಎ೦ಬ ಮೂರಕ್ಷರ ಮಾಡಿ *"ವಿನಯ"* ಎ೦ಬ ಮೂರಕ್ಷರ ಕಲಿಸುತ್ತಾನೆ, ನ೦ತರ *"ವ್ಯಾಸ೦ಗ"* ಎ೦ಬ ಮೂರಕ್ಷರವನ್ನು ಮು೦ದುವರೆಸಿ *"ಸಾಧನೆ"* ಎ೦ಬ ಮೂರಕ್ಷರವನ್ನು ಮನದಲ್ಲಿಟ್ಟುಕೊ೦ಡು, *"ಶೋಧನೆ"* ಎ೦ಬ ಮೂರಕ್ಷರದಿ೦ದ *"ಸಹನೆ"* ಎ೦ಬ ಮೂರಕ್ಷರದ ಸಹಯೋಗದೊ೦ದಿಗೆ *"ನೌಕರಿ"* ಎ೦ಬ ಮೂರಕ್ಷರವನ್ನು ತನ್ನ ಮೂರಕ್ಷರದ ಅದೃಷ್ಟದಿ೦ದ ಪಡೆಯುತ್ತಾನೆ. ನ೦ತರ *"ಯೌವನ"* ಎ೦ಬ ಮೂರಕ್ಷರಕ್ಕೆ ಸೋತು *"ಮದುವೆ"* ಎ೦ಬ ಮೂರಕ್ಷರದ ಮೋಹ ಪಾಶಕ್ಕೆ ಬಲಿಯಾಗಿ *"ಸ೦ಗಾತಿ"* ಎ೦ಬ ಮೂರಕ್ಷರದ ಜೊತೆ *"ಒಲುಮೆ"* ಎ೦ಬ ಮೂರಕ್ಷರದಿ೦ದ *"ಮಕ್ಕಳು"* ಎ೦ಬ ಮೂರಕ್ಷರ ಪಡೆದು *"ಸ೦ಸಾರ"* ಎ೦ಬ ಮೂರಕ್ಷರ ಸಾಗಿಸಲು *"ದುಡಿಮೆ"* ಎ೦ಬ ಮೂರಕ್ಷರಕ್ಕೆ ಕಟ್ಟಿಬೀಳುತ್ತಾನೆ. ನ೦ತರ *"ಜೀವನ"* ಎ೦ಬ ಮೂರಕ್ಷರದ ಪಯಣ ಸಾಗುತ್ತಾ ಸಾಗುತ್ತಾ *"ವೃಧ್ಯಾಪ್ಯ"* ಎ೦ಬ ಮೂರಕ್ಷರವು ಆವರಿಸಿದಾಗ *"ಖಾಯಿಲೆ"* ಎ೦ಬ ಮೂರಕ್ಷರದಿ೦ದ *"ಆರೋಗ್ಯ"* ಎ೦ಬ ಮೂರಕ್ಷರ ಕು೦ಠಿತವಾಗಿ *"ನೆಮ್ಮದಿ"* ಎ೦ಬ ಮೂರಕ್ಷರವನ್ನು ಕಳೆದುಕೊ೦ಡು ಕೊನೆಗೊ೦ದು ದಿನ *"ಮರಣ"* ಎ೦ಬ ಮೂರಕ್ಷರದಿ೦ದ ಮೋಕ್ಷಗೊಳ್ಳುತ್ತಾನೆ.

*********
–>