-->

ಡೆಂಗ್ಯೂ ಭಯ ಬೇಡ ಇರಲಿ ಎಚ್ಚರ , Don't fear Dengue , but be aware

ಡೆಂಗ್ಯೂ ಭಯ ಬೇಡ ಇರಲಿ ಎಚ್ಚರ, ನನ್ನ ಈ ಸಣ್ಣ ಬರವಣಿಗೆ ಬಹುಶಃ ನಿಮಗೆ ದಾರಿದೀಪವಾಗಬಹುದು. ಒಮ್ಮೆ ಕಣ್ಣಾಡಿಸಿ ನನ್ನ ನಲ್ಮೆಯ ಸ್ನೇಹಿತರೆ....

ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಮತ್ತು ಸಮುದಾಯದ ಆಸಕ್ತಿ , ಸ್ಥಳೀಯ ಮತ್ತು ನಗರಾಡಳಿತ ಮತ್ತು ಆರೋಗ್ಯ ಇಲಾಖೆಯ ಸಮರೋಪಾದಿ ಜವಾಬ್ದಾರಿಯಿಂದ  ಮಾತ್ರ ರೋಗ ತಡೆ ಸಾಧ್ಯ. ಆದುದರಿಂದ ನಾವೆಲ್ಲ ಒಟ್ಟಾಗಿ ಕೈ ಜೋಡಿಸಿ ಈ ಮಹಾಮಾರಿಯನ್ನ ತಡೆಯೋಣ ಬನ್ನಿ ಸ್ನೇಹಿತರೆ.

         ಡೆಂಗ್ಯೂ ಎಂದರೆ ಏನು?

ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4  ಎಂಬ 4 ವಿಧದ ವೈರಸ್ಗಳಿಂದ ಹರಡುತ್ತದೆ.

      ಇದು ಹೇಗೆ ಹರಡುತ್ತದೆ?

ಇದು ಮನುಷ್ಯನಿಗೆ ಈಡೀಸ್ ಎಂಬ ಡೆಂಗ್ಯೂ ಪೀಡಿತ ಹೆಣ್ಣು ಸೊಳ್ಳೆ ಕಡಿಯುವುದರಿಂದ ಹರಡುತ್ತದೆ.

    ಈ ಈಡೀಸ್ ಸೊಳ್ಳೆ ಹೇಗಿರುತ್ತದೆ?

ಇದು ನೋಡಲು ಸಾದ ಸೊಳ್ಳೆಗಳಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ. ಅಂದ್ರೆ ಈ ಸೊಳ್ಳೆಯ ಮೈ ಮೇಲೆ ಕಪ್ಪು ಬಿಳಿ ಬಣ್ಣದ ಪಟ್ಟೆ/ಗೆರೆಗಳಿರುತ್ತವೆ. ಆದ ಕಾರಣ ಇವುಗಳನ್ನು ಟೈಗರ್ ಸೊಳ್ಳೆ ಗಳು ಅಂತ ಅಡ್ಡ ಹೆಸರಿಂದ ಸಹ ಕರೆಯುತ್ತೇವೆ.ಸಾಮಾನ್ಯವಾಗಿ ಇವು ಹಗಲು ಸಮಯ ಮಾತ್ರ ಕಡಿಯುತ್ತವೆ.

            ನಿಮಗಿದು ಗೊತ್ತೇ?

1. ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೊಟೀನ್ಗಾಗಿ ಮಾತ್ರ ನಮ್ಮನ್ನು ಕಚ್ಚುತ್ತವೆ.
2. ಇವುಗಳಿಗೆ ,ಸೋಂಕಿತ ವ್ಯಕ್ತಿಗೆ ಕಚ್ಚಿದಾಗ ಆತನಿಂದ ರೋಗಾಣು ಇವುಗಳಿಗೆ ಹರಡುತ್ತವೆ, ಹಾಗೂ ಇದು ಸಾಯುವವರೆಗೂ ರೋಗಾಣುಗಳನ್ನು ತನ್ನೊಂದಿಗೆ ಇಟ್ಟುಕೊಂಡಿದ್ದು , ಈ ಸೊಳ್ಳೆ ಕಚ್ಚುವ ಎಲ್ಲ ವ್ಯಕ್ತಿಗಳಿಗೂ ಸೋಂಕು ಹರಡಿಸುತ್ತವೆ.
3. ಮತ್ತೊಂದು ಭಯಾನಕ ಸತ್ಯ ಎಂದರೆ ಒಮ್ಮೆ ಸೋಂಕಿಗೊಳಗಾದ ಸೊಳ್ಳೆ, ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದಲ್ಲದೆ, ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸಿ ತನ್ಮೂಲಕ , ಆ ಮೊಟ್ಟೆ ಮರಿ ಸೊಳ್ಳೆಯಾಗಿ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ ಮತ್ತೆ ರೋಗ ಪಸರಿಸುತ್ತದೆ.
4. ಸಾಮಾನ್ಯವಾಗಿ ಈ ಸೊಳ್ಳೆ ಸೂರ್ಯ ಹುಟ್ಟುವ ಮತ್ತು ಮುಳುಗುವ 2 ಗಂಟೆ ಮುಂಚೆ ಮನುಷ್ಯನಿಗೆ ಕಡಿಯುತ್ತವೆ
5. ಈ ಸೊಳ್ಳೆಯ ಜೀವಿತಾವಧಿ 2 ವಾರಗಳು ಮಾತ್ರ.
6. ಆದರೆ ಈ ಸೊಳ್ಳೆಗಳು ತಮ್ಮ ಜೀವಿತಾವಧಿಯಲ್ಲಿ 3 ಬಾರಿ ಮೊಟ್ಟೆ ಇಡುತ್ತವೆ. ಹಾಗೂ ಒಮ್ಮೆಲೇ ಸುಮಾರು 100 ಮೊಟ್ಟೆ ಇಡುತ್ತವೆ.
7. ದುರಂತ ಏನಂದ್ರೆ ಈ ಸೊಳ್ಳೆಗಳು ಇಡುವ ಮೊಟ್ಟೆ, ಇದರಿಂದ ಹುಟ್ಟುವ ಮರಿಸೊಳ್ಳೆಗಳು ಸಹ ಸೋಂಕಿತ ಸೊಳ್ಳೆಗಳಗುತ್ತವೆ (ಮೊಟ್ಟೆ ಒಡೆದು ಮರಿಗಳಾಗಳು ಗಾಳಿ ನೀರು ಆಹಾರ ಮತ್ತು ಸೂಕ್ತ ಉಷ್ಣತೆ ಬೇಕು) ಆದರೆ ಈ ಮೊಟ್ಟೆಗಳು ಅತ್ಯಂತ ಉಷ್ಣತೆಯನ್ನು ಸಹ ಸಹಿಸಿ, ನೀರು ಇಲ್ಲದೆ ಇದ್ದರೂ ಸಹ ಹಲವಾರು ತಿಂಗಳುಗಳ ಕಾಲ ಇರುತ್ತವೆ. ಮತ್ತೆ ನೀರು ಸಿಕ್ಕಾಗ ಅಂದರೆ ಸಾಮಾನ್ಯವಾಗಿ ಮುಂಗಾರು ಮಳೆ ಅಥವಾ ಪ್ರವಾಹದ ಸಂದರ್ಭದಲ್ಲಿ ಮೊಟ್ಟೆಯೊಡೇದು ಬಂದು ಮತ್ತೆ ಡೆಂಗ್ಯೂ ಸೋಂಕಿತ ಸೊಳ್ಳೆಗಳಾಗಿ ಮನುಷ್ಯನನ್ನು ಭಾದಿಸುತ್ತವೆ.
8. ಇವು ಸಾಮಾನ್ಯವಾಗಿ ಕತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ ಅಂದ್ರೆ ನಮ್ಮ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್ ರೋಬ್ಸ್ ಹೀಗೆ ಕತ್ತಲ ಜಾಗಗಳಲ್ಲಿರುತ್ತವೆ.
9.ಆದರೆ ಇವುಗಳು ಹಾರಾಡುವ ಮತ್ತು ಪಸರಿಸುವ ದೂರ ಬಹಳ ಕಡಿಮೆ ಅಂದರೆ ಕೇವಲ 400 ಮೀಟರ್ ಮಾತ್ರ. ದುರಂತವೇನಂದ್ರೆ ಸೊಳ್ಳೆಗಳಿಗಿಂತ ಹೆಚ್ಚಾಗಿ ಪ್ರದೇಶ ಮತ್ತು ಸಮುದಾಯಗಳ ಮದ್ಯೆ ಸೋಂಕು ಹರಡಿಸುವುದು ಹೆಚ್ಚಾಗಿ ಮನುಷ್ಯನೇ ಹೊರತು ಸೊಳ್ಳೆಗಳಲ್ಲ.(ಮನುಷ್ಯ ಯಾವಾಗಲೂ ಅಲೆದಾಡುವುದರಿಂದ ಆ ಪ್ರದೇಶದ ಒಂದು ಸೊಳ್ಳೆ ಸೋಂಕಿತವಾದರೆ ಅಲ್ಲಿಗೆ ಎಲ್ಲ ಮುಗಿಯಿತು)
10.ನಮ್ಮ ಮನೆಯಲ್ಲೇ ಇವು ಹೆಚ್ಚಾಗಿ ಬೆಳೆಯುತ್ತವೆ. ಅದು ಬಿಟ್ಟು ಕೊಚ್ಚೆ ನೀರು ಚರಂಡಿ ಮತ್ತು ನದಿ ತೊರೆಗಳಲ್ಲಿ ಇವು ಮೊಟ್ಟೆ ಇಡುವುದಿಲ್ಲ, ಇವಕ್ಕೆ ಶುದ್ಧ ನೀರು ಒಳ್ಳೆ ಜಾಗಗಳೇ ಬೇಕು.

     ಹಾಗಾದ್ರೆ ಇದರ ಸೋಂಕನ್ನು ನಾವು ಹೇಗೆ ತಡೆಗಟ್ಟಿಕೊಳ್ಳಬಹುದು?

1. ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ದ ಸಮಯದಲ್ಲಿ , ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.
2. ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ
2.ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು

        ಡೆಂಗ್ಯೂನ ಲಕ್ಷಣಗಳು  

ಜ್ವರ ಕಾಣಿಸಿಕೊಂಡ 2 ರಿಂದ 7 ದಿನಗಳಲ್ಲಿ ಈ ಕೆಳಕಂಡ ಯಾವುದಾದರೂ 2 ಲಕ್ಷಣಗಳು ಕಂಡು ಬಂದರೆ ಹೆಚ್ಚು ಜಾಗರೂಕತೆಯಿಂದ ಇರಬೇಕು.
1.ತೀವ್ರ ತಲೆನೋವು
2.ಕಣ್ಣಿನ ಹಿಂಭಾಗ ನೋವು ಅಂದ್ರೆ ಕಣ್ಣು ಗುಡ್ಡೆಯಲ್ಲಿ
3. ಸ್ನಾಯು ಸೆಳೆತ(ಮೈ ಕೈ ನೋವು)
4.ಕೀಲು ನೋವು
5.ಚರ್ಮ ಕೆಂಪಾಗುವುದು
6. ಮೂಗು ಅಥವಾ ಒಸಡುಗಳಲ್ಲಿ ರಕ್ತಸ್ರಾವ

    ಈ ಲಕ್ಷಣಗಳು ತಮ್ಮಲ್ಲಿ ಕಂಡುಬಂದರೆ ಏನು ಮಾಡುವುದು?

1. ವಿಶ್ರಾಂತಿ ಬಹಳ ಮುಖ್ಯ
2.ಅತಿ ಮುಖ್ಯವಾಗಿ ಆಸ್ಪಿರಿನ್ ಮತ್ತು ಬ್ರುಫೆನ್ ನಂತಹ ಮಾತ್ರೆಗಳನ್ನು ತೆಗೆದುಕೊಳ್ಳುಬಾರದು. ಅವಶ್ಯಕತೆ ಇದ್ದರೆ ವೈದ್ಯರ ಸಲಹೆ ಪಡೆಯಬೇಕು (ಇವುಗಳು ಗ್ಯಾಸ್ಟ್ರಿಕ್, ವಾಂತಿ, ಮತ್ತು ರಕ್ತ ಸ್ರಾವಕ್ಕೆ ಕಾರಣವಾಗುತ್ತವೆ)
3.paracetamol ಮಾತ್ರೆಗಳು ಉಪಯೋಗಿಸಬಹುದು.(ಅವಶ್ಯಕತೆ ಇದ್ರೆ ವೈದ್ಯರ ಸಲಹೆಯಂತೆ)
4. ಯಥೇಚ್ಛ ನೀರು , ಎಳನೀರು ಮತ್ತು ಓ ಆರ್ ಎಸ್ ದ್ರಾವಣ ಕುಡಿಯಬೇಕು. ರೋಗಕ್ಕಿಂತ ಜಾಸ್ತಿ ಸಾವು ನಿರ್ಜಲೀಕರಣ ಉಂಟಾಗುತ್ತದೆ. ಕಾರಣ ಅತಿ ಹೆಚ್ಚು ಜ್ವರ, ಬೆವರು, ಆದುದರಿಂದ ತಮ್ಮ ರಕ್ತದೊತ್ತಡ ಕಡಿಮೆಯಾಗಿ ಸಾವು ಸಂಭವಿಸುತ್ತದೆ. ದಯವಿಟ್ಟು ಹೆಚ್ಚು ದ್ರವಾಹಾರ ಸೇವಿಸಿರಿ.
5. ಸೊಳ್ಳೆಗಳಿಂದ ದೂರವಿರಿ
6. ವೈದ್ಯರ ಭೇಟಿ ಮಾಡಿ
ಸಾಮಾನ್ಯವಾಗಿ ಡೆಂಗ್ಯೂ ಇಂದ ಬಳಲುವ ರೋಗಿಗಳು 1 ರಿಂದ 2 ವಾರಗಳಲ್ಲಿ ಪುನಃ ಆರೋಗ್ಯವಂತರಾಗುತ್ತಾರೆ.

      ಡೆಂಗ್ಯೂವಿನಿಂದ ನಾವು ಸಾಯುತ್ತೇವೆಯೇ?

1.ಸಾಮಾನ್ಯವಾಗಿ ಈ ರೋಗದಿಂದ ಸಾವು ಸಂಭವಿಸುವದು ಅತಿ ವಿರಳ ಆದರೆ ಕೆಲವೊಬ್ಬರಿಗೆ DHF(dengue hemorrhagic fever) ಅಥವಾ DSS (dengue shocking syndrome) ಆಗಿ ಸಾವನ್ನಪ್ಪಬಹುದು.
2. ಇಂತಹ ರೋಗಿಗಳಿಗೆ ಮಾತ್ರ ಒಳ ರೋಗಿಯಾಗಿ ಚಿಕಿತ್ಸಿಸುವ ಅವಶ್ಯಕತೆ ಇದೆ. ಆದುದರಿಂದ ತಡಮಾಡದೆ ಆಸ್ಪತ್ರೆಗೆ ದಾಖಲಿಸಿ.
3. ಸರಿಯಾದ ಮತ್ತು ಸಮಯೋಚಿತ ಚಿಕಿತ್ಸೆಯಿಂದ ಉತ್ತಮವಾಗಿ ಇಂತಹ ರೋಗಿಗಳನ್ನು ಗುಣಪಡಿಸಬಹುದು.

          ಅತಿ ಜರೂರು *Immediate medical attention*

1. ತುಂಬಾ ಹೊಟ್ಟೆನೋವು
2.ಚರ್ಮದ ಮೇಲಿನ ಕೆಂಪು ಗುಳ್ಳೆ ಅಥವಾ ಮಚ್ಚೆ
3.ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವ
4.ರಕ್ತ ಮಿಶ್ರಿತ ವಾಂತಿ
5.ಕಪ್ಪು ಬಣ್ಣದ ಮಲ ವಿಸರ್ಜನೆ
6.ತುಂಬಾ ಸಪ್ಪೆಯಾಗಿ ವರ್ತಿಸುವುದು
7. ತಣ್ಣಗಾದ ಅಥವಾ ಒಣ ಚರ್ಮ
8.ಉಸಿರಾಟಕ್ಕೆ ತೊಂದರೆ.

      ಇಂತಹ ಸಂದರ್ಭದಲ್ಲಿ ಮಾಡಬೇಕಾದ್ದು.  

1.ಪ್ರತಿ ಗಂಟೆಗೊಮ್ಮೆ ರೋಗಿಯ ತಪಾಸಣೆ.
2. ಪ್ಲೇಟ್ಲೇಟ್ ಚೆಕ್ ಮಾಡುವುದು.
3. ವೈದ್ಯರು ಅವಶ್ಯಕತೆ ಇದ್ರೆ ಇ. ವಿ. ಫ್ಲುಯಡ್ಸ್ ಅಥವಾ ಪ್ಲೇಟ್ಲೆಟ್ ಮರು ಪೂರಣ ಮಾಡಬೇಕಾಗಬಹುದು
(ಎಲ್ಲ ರೋಗಿಗಳಿಗೂ ಪ್ಲೇಟ್ಲೆಟ್ ಮರುಪೂರಣದ ಅವಶ್ಯಕತೆ ಇಲ್ಲ)

   ಇಂತಹ ರೋಗಿಗಳನ್ನು ಮನೆಯಲ್ಲೆ ಚಿಕಿತ್ಸಿಸಬಹುದೇ?

ಹೌದು , ಅವರಿಗೆ ಗೃಹಾದಾರಿತ ಚಿಕಿತ್ಸೆ ಸಾಕು, ಆದರೆ ದ್ರವಾಹರ ಹೆಚ್ಚಾಗಿ ನೀಡಬೇಕು ಮತ್ತು ಮೇಲ್ಕಂಡ ತೀವ್ರ ತರದ ಲಕ್ಷಣಗಳು ಕಂಡು ಬಂದಾಗ ಮಾತ್ರ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.

An article shared in public interest  - Mr.Anand Jr Health inspector
–>