-->

ದುರಾಸೆ - a short story

ಮನುಷ್ಯ ಆಸೆ ಪಡುವುದು ಸಹಜ ಆದರೆ ದುರಾಸೆ ಪಡಬಾರದು. ದುರಾಸೆ ಮತ್ತು ದುರ್ವಿಚಾರ ನಮ್ಮತನದ ಮೌಲ್ಯವನ್ನು ಕಳೆಯುತ್ತವೆ. ಆಸೆ ನಿರಾಸೆ ಯಾದಾಗ ಕಷ್ಟವಾಗುತ್ತದೆ. ಆಸೆ ಎಂಬ ಮೋಹದ ಕುದುರೆ ಬೆನ್ನತ್ತಿ ಹೋದಾಗ ಕೊನೆಗೆ ನಿರಾಸೆಯೇ ಗತಿಯಾಗುತ್ತದೆ. ನಿರಾಸೆಯಿಂದ ನರಳುವದಕ್ಕಿಂತ ಅತಿಯಾಸೆಯಿಂದ ದೂರವಿರುವುದೇ ನಿಜವಾದ ಬದುಕು.


 

ನಾವು ಬದುಕುವುದನ್ನು ಕಲಿತಿಲ್ಲ. ಸಂಸಾರ, ಹೆಂಡತಿ, ಮಕ್ಕಳು ಇಷ್ಟೇ ಸಂಸಾರ ಎಂದು ಕೊಂಡಿರುವ ನಮಗೆ ಮನೆಯವರನ್ನು ಸಂತೋಷಗೊಳಿಸಲಿಕ್ಕೆ ಮತ್ತೊಬ್ಬರನ್ನು ದುಃಖದ ಮಡುವಿನಲ್ಲಿ ಹಾಕುತ್ತೇವೆ. ಇದು ಒಂದು ಜೀವನವೇ. ಪರರಿಗಾಗಿ ಪ್ರಾಣವನ್ನೇ ಕಳೆದುಕೊಳ್ಳುವ ವ್ಯಕ್ತಿಗಳು ಜನಿಸಿದ ನಾಡಿನಲ್ಲಿ ನಮ್ಮ ಹಿತಕ್ಕಾಗಿ ಇನ್ನೊಬ್ಬರನ್ನು ಹಿಂಸಿಸುವುದು ನ್ಯಾಯವೇ?
ದುರಾಸೆಯಿಂದ ಒಂದೊಂದು ಸಲ ಎಂಥ ಕೆಟ್ಟ ವಿಚಾರಗಳು ಬರುತ್ತವೆ. ಹೆತ್ತ ತಂದೆ, ಮಕ್ಕಳು, ಸಹೋದರ ಪ್ರಾಣ ದಗೆದರಾದರೂ ಆಸೆ ತೀರಿಸಿಕೊಳ್ಳಬೇಕು ಎಂಬ ವಿಚಾರ ಬರತೊಡಗುತ್ತವೆ. ಒಮ್ಮೆ ಅಂಥ ವಿಚಾರ ಬಂದರೆ ಜೀವನವೇ ಹಾಳಾದಂತೆ.
ಎಷ್ಟು ಗಳಿಸಿದರೂ ಆಸೆ ಪಡುವುದು ಬಿಡುವುದಿಲ್ಲ. ಇನ್ನೂ ಗಳಿಸಬೇಕು ಎಂಬ ಹಂಬಲದಲ್ಲಿ ಪತ್ನಿಯನ್ನು ಕೆಲಸಕ್ಕೆ ಕಳಿಸುವ ಕಾಲವಿದು. ಇಬ್ಬರೂ ದುಡಿದರೂ ಯಾವ ಮಾರ್ಗದಿಂದ ಹಣ ಬಂದರೂ ಸರಿ ಎನ್ನುವ ಮನೋಭಾವ ಬೆಳೆಯುತ್ತಿದೆ. ಎಲ್ಲದಕ್ಕೂ ಮೂಲ ಕಾರಣ ಹಣ. ಅದರ ಹಿಂದೆ ಬಿದ್ದು ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುವ ಮುಂಚೆ ಸ್ವಲ್ಪ ವಿಚಾರಿಸಬೇಕು.
ಆಸೆ ಪಡಬಾರದು ಅಂತೆನಲ್ಲ. ಒಳ್ಳೆದನ್ನು ಆಸೆಟ್ಟರೆ ತಪ್ಪಲ್ಲ. ಆಸೆ ಇಲ್ಲದೆ ಜೀವನ ನಡೆಸಲೂ ಆಗದು. ಆಗಂತ ದುರಾಸೆ ಪಡಬಾರದು. ವಿಜ್ಞಾನ ಯುಗದಲ್ಲಿ ಆಸೆ ಹೆಚ್ಚಾಗುತ್ತಿದೆ. ಜ್ಞಾನ ಸಂಪಾದಿಸಬೇಕು, ಸಮಾಜ ಸೇವೆ ಮಾಡಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು, ಇನ್ನೊಬ್ಬರ ಆಸೆಗೆ ಸ್ಪಂದಿಸಬೇಕು ಎಂಬ ಆಸೆ ಪಡಬೇಕೆ ವಿನಃ ಹಣ ಸಂಪಾದಿಸಬೇಕು ಎಂಬ ಒಂದೆ ಆಸೆಪಡಬಾರದು.
ಒಬ್ಬ ವ್ಯಕ್ತಿ ಊರಿಗೆ ಹೋರಟಿದ್ದ, ಮಧ್ಯ ಕಾಡಿತ್ತು. ಕಾಡು ಬರುತ್ತಿದ್ದಂತೆ ಕತ್ತಲೆ ಆಯಿತು. ಅಲ್ಲೊಬ್ಬ ಸಂತ ವಾಸವಾಗಿದ್ದ. ರಾತ್ರಿಯಲ್ಲಿ ಕಾಡಿನಲ್ಲಿ ಹೋಗಬೇಡ ಎಂದು ಹೇಳಿದರೂ ಹೋಗಲೇಬೇಕು ಎಂದ ಆ ವ್ಯಕ್ತಿ. ಆಗಾದರೆ ಎರಡು ವಸ್ತು ಕೊಡುವೆ ಅವು ನಿನ್ನನ್ನು ರಕ್ಷಿಸುತ್ತವೆ ಎಂದು ದಿವಟಿಗಿ ಮತ್ತು ಎಣ್ಣೆ ತುಂಬಿದ ಪಾತ್ರೆ ಕೊಟ್ಟ. ದೀಪ ನಂದುವದರೊಳಗಾಗಿ ನೀನು ಕಾಡು ತಾಟಬೇಕು. ಇಲ್ಲವಾದರೆ ಪ್ರಾಣಿಗಳಿಗೆ ಬಿಲಿಯಾಗುವಿ. ಸಮುಯ ಹಾಳು ಮಾಡಬೇಡ ಎಂದು ಸಂತ ಎಚ್ಚರಿಸಿದ. ಹಾಗೆ ಕಾಡು ಪ್ರವೇಶಿದ ವ್ಯಕ್ತ್ತಿ ದಿವಟಿಗಿ ಬೆಳಕಿನಲ್ಲಿ ಸಾಗುತ್ತಿದ್ದ. ದೂರದಲ್ಲಿ ಏನೋ ಮಿಂಚಿನ ಬೆಳಕು ಗೋಚರಿಸಿತು. ಏನಿರಬಹುದು ಎಂದು ಅತ್ತ ಹೋದ. ಸಂತನ ಮಾತು ಮರೆತ. ದೊಡ್ಡ ಪಾತ್ರೆಯಲ್ಲಿ ಚಿನ್ನದ ನಾಣ್ಯಗಳು ಕಂಡ. ನಾಣ್ಯಗಳನ್ನು ಎಣಿಸತೊಡಗಿದ 999 ನಾಣ್ಯಗಳು ಲೆಕ್ಕಕ್ಕೆ ಸಿಕ್ಕವು. ಇನ್ನು ಒಂದು ಎಲ್ಲಿಗೆ ಹೋಯಿತು ಎಂದು ಮತ್ತೊಮ್ಮೆ ಎಣಿಸಿದ ಆಗ ಮತ್ತೆ ಒಂದು ನಾಣ್ಯ ಕಡಿಮೆ ಆಯಿತು. ಮತ್ತೆ ಮತ್ತೆ ಎಣಿಸಿದಾಗ ಸರಿ ಲೆಕ್ಕ ಸಿಕ್ಕಿತು. ಅಷ್ಟರಲ್ಲಿ ಪಾತ್ರೆಯಲ್ಲಿ ಎಣ್ಣೆ ಮುಗಿಯಿತು ದೀಪ ನಂದಿತು. ಪ್ರಾಣಿಗಳು ಆಕ್ರಮಣ ಮಾಡಿದವು. 
ನಮ್ಮ ಜೀವನವು ಹಾಗೆ ಲೌಖಿಕ ಸಂಪತ್ತಿನ ಲೆಕ್ಕಾಚಾರದಲ್ಲಿ ಚಿನ್ನದ ಆಕರ್ಷಣೆಗೊಳಗಗುತ್ತವೆ. ಜ್ಞಾನದ ಬೆಳಕಿನ ನೆರವಿನಿಂದ ಸಂಸಕಾರ ಎಂಬ ಕಾಡು ಡಾಟಿ ಭಗವಂತನ ಸನ್ನಿಧಾನ ಎಂಬ ಊರು ಸೇರಬೇಕು. ಜ್ಞಾನ ಎಂಬ ದೀಪ ಮತ್ತು ಆಯುಷ್ಯ ಎಂಬ ಎಣ್ಣೆ ಇರುವರೆಗೆ ಸಾಧನೆ ಮಾಡಬೇಕು. ಆಯುಷ್ಯ ಎಂಬ ಎಣ್ಣೆ ಖಾಲಿ ಆದರೆ ಜೀವನ ಎಂಬ ದೀಪ ನಂದಿ ಬಿಡುತ್ತದೆ. ಆಗ ಕಾಮ, ಕ್ರೋದಾದಿಗಳೆಂಬ ಕ್ರೂರ ಪ್ರಾಣಿಗಳನ್ನು ನಮ್ಮ ನೇಲೆ ಅಕ್ರಮಣ ಮಾಡಿ ಬಿಡುತ್ತವೆ.

- ಶಾಮಸುಂದರ ಕುಲಕರ್ಣಿ, ಕಲಬುರಗಿ



–>