-->

ಧಾನದ ಮಹಿಮೆ - ಮಹಾಭಾರತಸಾರ by S.Kulkarni


 ಭೀಷ್ಮಾಚಾರ್ಯ ರ ಮತ್ತು ಧರ್ಮ ರಾಜನ ನಡುವೆ ಸಂವಾದ ನಡೆಯುತ್ತಿತ್ತು.‌ ತನ್ನಲ್ಲಿ ಉಂಟಾಗಿದ್ದ ಅನೇಕ ಸಂದೇಹಗಳಿಗೆ ಭಿಷ್ಮರಿಂದ ಉತ್ತರವನ್ನು ಧರ್ಮ ರಾಜ ಪಡೆದುಕೊಳ್ಳುತ್ತಾನೆ.


ಎಳ್ಖು, ಗೋವು, ಭೂಮಿ ಮತ್ತು ಅನ್ನ ಇವುಗಳನ್ನು ದಾನಮಾಡುವುದರಿಂದ ಯಾವ ಫಲಗಳು‌ ಲಭಿಸುತ್ತವೆ ಎಂದು ಯುಧಿಷ್ಠಿರನು ಕೇಳುತ್ತಾನೆ.
ಆಗ ಭೀಷ್ಮರು ಹೇಳುತ್ತಾರೆ, ಬ್ರಹ್ಮನು ಸೃಷ್ಟಿಸಿದ ಎಳ್ಳು ಪತೃಗಳಿಗೆ ಪರಮ‌ ಪವಿತ್ರವಾದ ಭೋಜನ ಪದಾರ್ಥವಾಗಿದೆ. ಎಳ್ಳನ್ನು ದಾನ ಮಾಡುವುದರಿಂದ ಪತೃಗಣವು ಸಂತೋಷಗೊಳ್ಳುತ್ತದೆ. ಮಾಘಮಾಸದಲ್ಲಿ ಬ್ರಾಹ್ಮಣನಿಗೆ ಎಳ್ಳನ್ನು ದಾನ‌ ಮಾಡುವುದರಿಂದ  ಸಕಲ‌ ಪ್ರಾಣಿಗಳಿಂದಲೂ ತುಂಬಿ ಹೋಗಿರುವ ನರಕಕ್ಕೆ ಹೋಗುವುದಿಲ್ಲ. ಎಳ್ಳಿನ‌ಮೂಲಕ ಪತೃದೇವತೆಗಳನ್ನು ಪೂಜಿಸುವವರು ಸಕಲ ಸತ್ರಗಳನ್ನು ಮಾಡಿದ ಫಲಕ್ಕೆ ಭಾಗಿಯಾಗುತ್ತಾರೆ. 


ಕಶ್ಯಪ ಮಹರ್ಷಿಯ ಶರೀರದಿಂದ ಎಳ್ಳಿನ ಕಾಳುಗಳು ಹೊರಹೊಮ್ಮಿ ಬಂದವು. ಆದ್ದರಿಂದಲೇ‌ ಅವು ದಾನಗಳಲ್ಲಿ ದಿವ್ಯ ಭಾವವನ್ನು ಹೊಂದಿದವು.
ಎಳ್ಳು ಪುಷ್ಠಿಯನ್ನುಂಟು ಮಾಡುವ ಪದಾರ್ಥ ವಾಗಿದೆ. ಸುಂದರವಾದ ರೂಪವನ್ನು ಕೊಡುತ್ತದೆ. ದಾನ ಮಾಡಿದವರ ಪಾಪವನ್ನು ವಿನಾಶಗೊಳಿಸುತ್ತದೆ.
ಮೇಧಾವಿಗಳಾದ ಆಪಸ್ತಂಭರು, ಶಂಖ- ಲಿಖಿತರು,ಗೌತಮ ಮಹರ್ಷಿ ಗಳು ತಿಲದಾನ ಮಾಡಿಯೇ ಸ್ವರ್ಗಕ್ಕೆ ಹೋಗಿರುವರು ಎಂದು ಬೀಷ್ಮರು ತಿಲದಾನದ ಕುರಿತು ಹೇಳಿದರು.



 - ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ 9886465925

–>